88844 ಔಷಧಗಳ ಪರೀಕ್ಷೆ: 2500 ಔಷಧ ಗುಣಮಟ್ಟ ಕಳಪೆ 379 ವಿಷಪೂರಿತ: ಕೇಂದ್ರ

2021ರ ಏಪ್ರಿಲ್‌ನಿಂದ 2022ರ ಮಾರ್ಚ್ ನಡುವೆ ನಡೆಸಲಾದ 88,844 ಔಷಧಗಳ ಪರೀಕ್ಷೆಯಲ್ಲಿ 2,500 ಔಷಧಗಳು ಕಳಪೆ ಗುಣಮಟ್ಟ ಹಾಗೂ 379 ಔಷಧಗಳು ವಿಷಪೂರಿತವಾಗಿದ್ದು ಕಂಡು ಬಂದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

88844 medicines Tested 2500 medicines Quality Poor 379 Poisoned Center govt Information to Lok Sabha akb

ನವದೆಹಲಿ: 2021ರ ಏಪ್ರಿಲ್‌ನಿಂದ 2022ರ ಮಾರ್ಚ್ ನಡುವೆ ನಡೆಸಲಾದ 88,844 ಔಷಧಗಳ ಪರೀಕ್ಷೆಯಲ್ಲಿ 2,500 ಔಷಧಗಳು ಕಳಪೆ ಗುಣಮಟ್ಟ ಹಾಗೂ 379 ಔಷಧಗಳು ವಿಷಪೂರಿತವಾಗಿದ್ದು ಕಂಡು ಬಂದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮಂಗಳವಾರ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್‌ ಪವಾರ್‌ 2021ರ ಏಪ್ರಿಲ್‌ನಿಂದ 2022ರ ಮಾರ್ಚ್‌ವರೆಗೆ ಕಲಬೆರಕೆ ಔಷಧ ತಯಾರಿಕೆ ಅವುಗಳ ಮಾರಾಟ ಮತ್ತು ನಕಲಿ ಔಷಧಿಗಳಿಗೆ ಸಂಬಂಧಿಸಿದಂತೆ ಒಟ್ಟು 592 ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇದೇ ಅವಧಿಯಲ್ಲಿ ಒಟ್ಟು 84,874 ಔಷಧಗಳ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 2,652 ಔಷಧಗಳನ್ನು ಕಳಪೆ ಮಟ್ಟದ ಔಷಧಗಳು ಎಂದು ಘೋಷಿಸಲಾಗಿದೆ. 263 ಔಷಧಗಳು ವಿಷಪೂರಿತ ಅಥವಾ ನಕಲಿ ಎಂಬುದು ಪತ್ತೆಯಾಗಿದೆ ಎಂದಿದ್ದಾರೆ.

Health Tips : ವೈದ್ಯರ ಸಲಹೆ ಇಲ್ಲದೆ ಗರ್ಭಪಾತದ ಮಾತ್ರೆ ಸೇವಿಸ್ಬೇಡಿ

ಪ್ಯಾರಸಿಟಮಾಲ್ ಡಿಸ್ಪರ್ಸಿಬಲ್ ಸೇರಿದಂತೆ 14 ಎಫ್ ಡಿಸಿ ಔಷಧಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

ಪ್ಯಾರಸಿಟಮಾಲ್ ಸೇರಿದಂತೆ ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಿರುವ 14 ಸ್ಥಿರ ಡೋಸ್ ಸಂಯೋಜನೆಯ (ಎಫ್ ಡಿಸಿ) ಔಷಧಗಳ ಮೇಲೆ ಕೇಂದ್ರ ಸರ್ಕಾರ ಇತ್ತೀಚೆಗೆ ನಿರ್ಬಂಧ ವಿಧಿಸಿದೆ. ಈ ಔಷಧಗಳು ಯಾವುದೇ 'ಚಿಕಿತ್ಸಕ ಸಮರ್ಥನೆ' ಹೊಂದಿಲ್ಲ ಹಾಗೂ ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಲ್ಲವು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸ್ಥಿರ ಡೋಸ್ ಸಂಯೋಜನೆಯೆಂದ್ರೆ (ಎಫ್ ಡಿಸಿ) ಎರಡು ಅಥವಾ ಅದಕ್ಕಿಂತ ಹೆಚ್ಚಿನ ಔಷಧಗಳ ನಿರ್ದಿಷ್ಟ ಡೋಸೇಜ್ ಸಂಯೋಜನೆ. ಇನ್ನು ಈ ಡ್ರಗ್ಸ್ ಗಳನ್ನು ಮೊದಲ ಬಾರಿಗೆ ಸಂಯೋಜನೆಗೊಳಿಸಿದರೆ ಅದನ್ನು ಹೊಸ ಡ್ರಗ್ ಎಂದೇ ಪರಿಗಣಿಸಲಾಗುತ್ತದೆ. ನಿಷೇಧಿತ ಔಷಧಗಳ ಪಟ್ಟಿಯಲ್ಲಿ ಕೆಮ್ಮು ಮತ್ತು ಜ್ವರದಂತಹ ಸಾಮಾನ್ಯ ಸೋಂಕುಗಳ ಚಿಕಿತ್ಸೆಗೆ ಬಳಸುವ ನಿಮೆಸುಲೈಡ್ + ಪ್ಯಾರಸಿಟಮಾಲ್ ಡಿಸ್ಪರ್ಸಿಬಲ್ ಮಾತ್ರೆಗಳು, ಕ್ಲೋರ್ಫೆನಿರಮೈನ್ ಮಲೇಟ್ + ಕೊಡೈನ್ ಸಿರಪ್, ಫೋಲ್ಕೊಡೈನ್ + ಪ್ರೊಮೆಥಾಜಿನ್, ಅಮೋಕ್ಸಿಸಿಲಿನ್ + ಬ್ರೋಮ್ಹೆಕ್ಸಿನ್ ಮತ್ತು ಬ್ರೋಮ್ಹೆಕ್ಸಿನ್ + ಡೆಕ್ಸ್ಟ್ರೊಮೆಥೋರ್ಫಾನ್ + ಅಮೋನಿಯಮ್ + ಪ್ಯಾರಾಸೆಟಾ + ಪ್ಯಾರಾಸೆಟಾ + ಕ್ಲೋರೈಡ್ ಫೆನೈಲ್ಫ್ರಿನ್ + ಕ್ಲೋರ್ಫೆನಿರಮೈನ್ + ಗ್ವೈಫೆನೆಸಿನ್ ಮತ್ತು ಸಾಲ್ಬುಟಮಾಲ್ + ಬ್ರೋಮ್ಹೆಕ್ಸಿನ್ ಸಂಯೋಜನೆಗಳು ಸೇರಿವೆ. 

Ayurvedic Treatment : ಅತಿಯಾದರೆ ಆಯುರ್ವೇದ ಔಷಧವೂ ಮಾರಕ!

ನಿಷೇಧಕ್ಕೆ ತಜ್ಞರ ಸಮಿತಿ ಶಿಫಾರಸು
ತಜ್ಞರ ಸಮಿತಿ ಈ ಸಂಬಂಧ ಸರ್ಕಾರಕ್ಕೆ ನೀಡಿರುವ ಶಿಫಾರಸುಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಸಂಸತ್ ಸ್ಥಾಯಿ ಸಮಿತಿ ಸಿಡಿಎಸ್ ಸಿಒ (ಸೆಂಟ್ರಲ್  ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್)  ಕಾರ್ಯನಿರ್ವಹಣೆ ಬಗ್ಗೆ ತನ್ನ 59ನೇ ವರದಿಯಲ್ಲಿ ಉಲ್ಲೇಖಿಸಿದ್ದು, ಕೆಲವು ರಾಜ್ಯ ಪರವಾನಗಿ ಪ್ರಾಧಿಕಾರಿಗಳು ಸಿಡಿಎಸ್ ಸಿಒನಿಂದ (CDSCO) ಮುಂಚಿತವಾಗಿ ಒಪ್ಪಿಗೆ ಪಡೆಯದೆ ದೊಡ್ಡ ಸಂಖ್ಯೆಯ ಎಫ್ ಡಿಸಿಗಳ ( FDCs) ಉತ್ಪಾದನೆಗೆ ಪರವಾನಗಿ ನೀಡಿವೆ ಎಂಬ ವಿಚಾರವನ್ನು ಪ್ರಸ್ತಾಪಿಸಿತ್ತು. ಈ ರೀತಿ ಎಫ್ ಡಿಸಿಗಳ ಉತ್ಪಾದನೆಗೆ ಪರವಾನಗಿ ನೀಡಿರುವ ಕಾರಣ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಎಫ್ ಡಿಸಿ ಔಷಧಗಳು ದೊರೆಯುತ್ತಿವೆ. ಈ ಔಷಧಗಳ ಸಾಮರ್ಥ್ಯ ಹಾಗೂ ಸುರಕ್ಷತೆಯನ್ನು ಪರೀಕ್ಷಿಸದ ಕಾರಣ ಇವು ರೋಗಿಗಳನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 


 

Latest Videos
Follow Us:
Download App:
  • android
  • ios