30 ವರ್ಷ ಮೇಲ್ಪಟ್ಟವರು ನಡಿಗೆಯನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಇದು ಕ್ಯಾಲೊರಿ ದಹಿಸಲು, ಹೃದಯದ ಆರೋಗ್ಯ ಕಾಪಾಡಲು, ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ. ಸಾಮಾನ್ಯ ನಡಿಗೆ, ಚುರುಕಾದ ನಡಿಗೆ, ಕಾಲ್ನಡಿಗೆ, ಪಥದ ನಡಿಗೆ, ಬೆಟ್ಟ ಹತ್ತುವುದು, ಪವರ್ ವಾಕಿಂಗ್, ನಾರ್ಡಿಕ್ ನಡಿಗೆ ಮತ್ತು ರೇಸ್ ವಾಕಿಂಗ್ ಎಂಬ ಎಂಟು ವಿಧಗಳಿವೆ. ಪ್ರತಿಯೊಂದು ವಿಧವು ವಿಭಿನ್ನ ಪ್ರಯೋಜನಗಳನ್ನು ನೀಡುತ್ತದೆ.

ನಡಿಗೆ ಎಂಬುದು 30 ವರ್ಷ ದಾಟಿದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ವ್ಯಾಯಾಮ. ವಿಶೇಷವಾಗಿ ನೀವು ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವವರಾಗಿದ್ದರೆ, ನಡಿಗೆ ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ.

ಪ್ರತಿದಿನ ಕನಿಷ್ಠ 15 ನಿಮಿಷದಿಂದ 30 ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ, ಇದು ಕ್ಯಾಲೊರಿಗಳನ್ನು ಬರ್ನ್ ಮಾಡಲು, ಹೃದಯ ಮತ್ತು ಶ್ವಾಸಕೋಶದ ಕಾರ್ಯವನ್ನು ಸುಧಾರಿಸಲು, ರಕ್ತದೊತ್ತಡವನ್ನು ಕಡಿಮೆ ಮಾಡಲು, ಮನಸ್ಥಿತಿ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಇದರಲ್ಲಿರುವ ಕೆಲವು ವಿಧದ ನಡಿಗೆಗಳು ನಿಮಗೆ ವಿಭಿನ್ನ ಅನುಭವವನ್ನು ನೀಡುತ್ತವೆ, ಜೊತೆಗೆ ನಿಮ್ಮ ದೇಹಕ್ಕೆ ಇತರ ಕೆಲವು ಪ್ರಯೋಜನಗಳನ್ನು ನೀಡಬಲ್ಲವು. ಪ್ರಸ್ತುತ ವಾಕಿಂಗ್‌ನಲ್ಲಿರುವ 8 ವಿಧಗಳ ಬಗ್ಗೆ ತಿಳಿದುಕೊಳ್ಳೋಣ.

ಅಬ್ಬಬ್ಬಾ... ರಾತ್ರಿ 10 ನಿಮಿಷ ವಾಕಿಂಗ್‌ ಮಾಡೋದ್ರಿಂದ ಇಷ್ಟೆಲ್ಲಾ ರೋಗ ಓಡಿಸಬಹುದಾ?

1. ಸಾಮಾನ್ಯ ನಡಿಗೆ:
ಬೆಳಗ್ಗೆ ಸಮಯದಲ್ಲಿ, ಅನೇಕ ಮಹಿಳೆಯರು ಮತ್ತು ಪುರುಷರು ಪಾರ್ಕ್ ಮತ್ತು ಮನೆಯ ಟೆರೇಸ್‌ನಲ್ಲಿ ನಡೆಯುವುದನ್ನು ನೋಡಿರುತ್ತೇವೆ. ಇದನ್ನು ಸಾಮಾನ್ಯ ನಡಿಗೆ ಎಂದು ಪರಿಗಣಿಸಲಾಗುತ್ತದೆ. ಇದನ್ನು 'ಆಂಬಲ್' ಎಂದು ಕರೆಯುತ್ತಾರೆ. ಈ ಸಾಮಾನ್ಯ ನಡಿಗೆಯನ್ನು ಒಬ್ಬಂಟಿಯಾಗಿ ಮಾಡುವ ಬದಲು ಸ್ನೇಹಿತರು, ಕುಟುಂಬದವರೊಂದಿಗೆ ಮಾತನಾಡುತ್ತಾ ಹೊರಗೆ ಪ್ರಕೃತಿಯೊಂದಿಗೆ ನಡೆದರೆ ನಿಮ್ಮನ್ನು ಹೆಚ್ಚು ರಿಫ್ರೆಶ್ ಆಗಿರಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದರೆ ಈ ರೀತಿಯ ವಾಕಿಂಗ್‌ನಲ್ಲಿ ಕಡಿಮೆ ಕ್ಯಾಲೊರಿಗಳು ಮಾತ್ರ ಬರ್ನ್ ಆಗುತ್ತವೆ. 70 ವರ್ಷ ದಾಟಿದವರು, ಕಾಲು ನೋವು ಇರುವವರಿಗೆ ಈ ರೀತಿಯ ಸಾಮಾನ್ಯ ನಡಿಗೆ ಉತ್ತಮ ಆಯ್ಕೆಯಾಗಿರುತ್ತದೆ.

2. ಚುರುಕಾದ ನಡಿಗೆ:
ಈ ರೀತಿಯ ನಡಿಗೆ ನಿಮ್ಮ ಸರಾಸರಿ ನಡಿಗೆ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ನಡೆಯುವುದು. ಎಲ್ಲಾ ವಯಸ್ಸಿನವರಿಗೂ ಈ ಚುರುಕಾದ ನಡಿಗೆ ಸೂಕ್ತವಾಗಿದೆ. ಇದರಲ್ಲಿ ಸಾಮಾನ್ಯ ನಡಿಗೆಗಿಂತ 2 ಪಟ್ಟು ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು, ನಿಮ್ಮ ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸಬಹುದು, ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸಬಹುದು, ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುಂಬಾ ಸವಾಲಿನ ನಡಿಗೆಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಬಯಸುವ ಯುವ ಅಭಿಮಾನಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ.

ದೇಹದ ತೂಕ ತಗ್ಗಿಸಲು ವಾಕಿಂಗ್: ಬೆಳಿಗ್ಗೆ ಅಥವಾ ಸಂಜೆ ಯಾವ ಸಮಯ ಬೆಸ್ಟ್?

3. ಕಾಲ್ನಡಿಗೆ:
ಕಾಲ್ನಡಿಗೆಯನ್ನು ಇತ್ತೀಚಿನ ದಿನಗಳಲ್ಲಿ ಅನೇಕರು ಇಷ್ಟಪಡುವುದಿಲ್ಲ. ಏಕೆಂದರೆ, ಕಾರ್ - ಬೈಕ್‌ನಂತಹ ಆಧುನಿಕ ವಾಹನಗಳು ಬಂದಿರುವುದರಿಂದ, 1 ಕಿಲೋ ಮೀಟರ್ ಕೂಡ ಯಾರೂ ನಡೆಯಲು ಇಷ್ಟಪಡುವುದಿಲ್ಲ. ನಿಮ್ಮ ಕಚೇರಿ ಅಥವಾ ಸಂಬಂಧಿಕರ ಮನೆಗಳು ಕೆಲವು ಕಿಲೋ ಮೀಟರ್ ದೂರದಲ್ಲಿದ್ದರೆ, ಅವರ ಮನೆಗೆ ಕಾಲ್ನಡಿಗೆಯಲ್ಲಿ ಹೋಗಿ ಬನ್ನಿ. ಕೆಲವರು ನಡೆದುಕೊಂಡು ಹೋಗುವುದನ್ನು ಕಡಿಮೆ ಎಂದು ಪರಿಗಣಿಸಿದರೂ... ನಿಜಕ್ಕೂ ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಹೌದು, ವಾರಕ್ಕೆ 2 ಬಾರಿಯಾದರೂ ಕೆಲವು ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಹೋಗುವುದು, ನಿಮ್ಮಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ನಿಮ್ಮ ಪಾದಗಳು ಬಲಗೊಳ್ಳುತ್ತವೆ. ಹೃದಯದ ಆರೋಗ್ಯ ಸುಧಾರಿಸುವುದರ ಜೊತೆಗೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅದೇ ರೀತಿ ತೂಕ ಇಳಿಸಿಕೊಳ್ಳಲು ಬಯಸುವವರಿಗೂ ಕಾಲ್ನಡಿಗೆ ಉತ್ತಮ ಆಯ್ಕೆಯಾಗಿರುತ್ತದೆ.

4. ಪಥದ ನಡಿಗೆ:
ಪಥದ ನಡಿಗೆ, ಸ್ನೇಹಿತರೊಂದಿಗೆ ಹೋಗಲು ಉತ್ತಮ ಆಯ್ಕೆಯಾಗಿರುತ್ತದೆ. ಕಾಡು ಪ್ರದೇಶ, ಬೆಟ್ಟದ ಗ್ರಾಮ, ಕಡಲತೀರದ ಪ್ರದೇಶಗಳಲ್ಲಿ ಇದನ್ನು ಅನೇಕರು ಮಾಡುತ್ತಾರೆ. ಪ್ರಕೃತಿಯಿಂದ ಆವೃತವಾದ ಸ್ಥಳದಲ್ಲಿ ನಡೆಯುವುದು, ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಅದೇ ರೀತಿ ಇದು ನಿಮ್ಮ ಸ್ನಾಯುಗಳನ್ನು ಬಲವಾಗಿ ಮಾಡುವ ಗುಣವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಈ ನಡಿಗೆ ವಿಧಾನವನ್ನು ವೀಕೆಂಡ್ ಡೇಸ್‌ನಲ್ಲಿ ಹೆಚ್ಚಾಗಿ ಇಷ್ಟಪಡುತ್ತಾರೆ.

5. ಬೆಟ್ಟ ಹತ್ತುವುದು:
ಪಥದ ಬೆಟ್ಟ ಹತ್ತುವಂತೆ, ಅನೇಕ ಯುವಕರು ಪ್ರಸ್ತುತ ಬೆಟ್ಟ ಏರುವುದರಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಬೆಟ್ಟವನ್ನು ಏರುವುದು ಸ್ವಲ್ಪ ಕಷ್ಟಕರವಾದುದರಿಂದ, ಸರಿಯಾಗಿ ಟ್ರೆಕ್ಕಿಂಗ್ ತರಬೇತಿ ಪಡೆದವರೊಂದಿಗೆ ಬೆಟ್ಟದ ಹಾದಿಯಲ್ಲಿ ಏರಲು ಅನುಮತಿಸಲಾಗುತ್ತದೆ. ಈ ವಿಧಾನದಲ್ಲಿ ಹೆಚ್ಚು ಕ್ಯಾಲೊರಿಗಳು ಬರ್ನ್ ಆಗುವುದರ ಜೊತೆಗೆ, ಮಾನಸಿಕ ಆರೋಗ್ಯ, ಹೃದಯದ ಆರೋಗ್ಯ ಮತ್ತು ಸಹಿಷ್ಣುತೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

6. ಪವರ್ ವಾಕಿಂಗ್:
ಈ ರೀತಿಯ ವಾಕಿಂಗ್‌ನಲ್ಲಿ ನೀವು ಓಡದೆ ಸಾಧ್ಯವಾದಷ್ಟು ವೇಗವಾಗಿ ನಡೆಯುವುದು. ಅದೇ ಸಮಯದಲ್ಲಿ ನಿಮ್ಮ ಕೈಗಳನ್ನು ಬಳಸಿ ನಿಮ್ಮನ್ನು ಮುಂದಕ್ಕೆ ಸಾಗಿಸುವುದು, ನಿಮ್ಮ ದೇಹವನ್ನು ತೊಡಗಿಸಿಕೊಂಡಿರುವುದು. ಪವರ್ ವಾಕಿಂಗ್ ಮಾಡುವುದರಿಂದ, ನಿಮ್ಮ ಕ್ಯಾಲೊರಿಗಳು ಬೇಗನೆ ಕಡಿಮೆಯಾಗುತ್ತವೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

7. ನಾರ್ಡಿಕ್ ನಡಿಗೆ:
ನಾರ್ಡಿಕ್ ನಡಿಗೆ ಒಂದು ವಿಭಿನ್ನವಾದ ವಾಕಿಂಗ್ ವಿಧಾನವಾಗಿ ನೋಡಲ್ಪಡುತ್ತದೆ. ಇದು ನಿಮ್ಮ ಕಾಲುಗಳನ್ನು ಮಾತ್ರವಲ್ಲದೆ ಕೈಗಳನ್ನು ಸಹ ತುಂಬಾ ಆಕ್ಟಿವ್ ಆಗಿ ಇಟ್ಟುಕೊಳ್ಳುವುದು. ಎರಡೂ ಕೈಗಳಲ್ಲಿ ಕೋಲನ್ನು ಹಿಡಿದುಕೊಂಡು, ಅದನ್ನು ಮುಂದಕ್ಕೆ ಇಟ್ಟುಕೊಂಡೇ ಹಿಂದಕ್ಕೆ ಹೋಗುವುದು. ಈ ವ್ಯಾಯಾಮ ವಿಧಾನ ಭಾರತಕ್ಕಿಂತ ವಿದೇಶಗಳಲ್ಲಿ ತುಂಬಾ ಪ್ರಸಿದ್ಧವಾಗಿದೆ. ಕೋಲಿಗೆ ಒತ್ತಡ ಕೊಟ್ಟು ನಡೆಯುವುದರಿಂದ, ಮಂಡಿ ನೋವು ಇರುವವರೊಂದಿಗೆ ಈ ನಡಿಗೆಯನ್ನು ಮಾಡುವುದು ಸುಲಭ.

8. ರೇಸ್ ವಾಕಿಂಗ್:
ಈ ನಡಿಗೆ ಆರಂಭಿಕ ಹಂತದ ನಡಿಗೆ ಮಾಡುವವರಿಗೂ, ವಯಸ್ಸಾದವರಿಗೂ ಖಂಡಿತವಾಗಿಯೂ ಸೂಕ್ತವಲ್ಲ. ರೇಸ್ ವಾಕಿಂಗ್ ಅಂದರೆ ತುಂಬಾ ವೇಗವಾಗಿ ನಡೆಯುವುದು. ಎಲ್ಲಾ ಸಮಯದಲ್ಲೂ ಒಂದು ಕಾಲು ನೆಲದ ಮೇಲೆ ಊರಿ ನಿಲ್ಲುವಂತಹ ಕಠಿಣ ನಿಯಮಗಳು ಈ ನಡಿಗೆ ವಿಧಾನದಲ್ಲಿ ಇವೆ. ಈ ರೀತಿಯ ನಡಿಗೆ, ಆರೋಗ್ಯವಾಗಿರುವ ದೇಹಸ್ಥಿತಿಯಲ್ಲಿ ಇರುವವರಿಗೂ, ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಇಷ್ಟಪಡುವವರಿಗೆ ಸೂಕ್ತವಾಗಿದೆ. ಇದು ಸರಿಸುಮಾರು ಓಟಕ್ಕೆ ಸಮಾನವಾದುದರಿಂದ, ಇದು ಹೆಚ್ಚಿನ ಕ್ಯಾಲೊರಿಗಳನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ ಎಂಬುದು ಗಮನಾರ್ಹ.