Asianet Suvarna News Asianet Suvarna News

ಮನಸ್ಸಿನ ಕ್ಯಾಶೆಗಳನ್ನು ಕ್ಲಿಯರ್‌ ಮಾಡೋ 5 ಟೆಕ್ನಿಕ್‌!

‘ಮೊದಲು ನಿಮ್ಮ ಬ್ರೌಸರ್‌ನ ಕ್ಯಾಶೆ ಕ್ಲಿಯರ್‌ ಮಾಡಿ’ ಕಂಪ್ಯೂಟರ್‌ ನಲ್ಲಿ ಸಮಸ್ಯೆಯಾದಾಗ ತಕ್ಷಣ ಬರುವ ಸಲಹೆ. ಕಂಪ್ಯೂಟರ್‌ ಸ್ಲೋ ಆದಾಗ, ಸಮಸ್ಯೆ ಆದಾಗ ಕ್ಯಾಶೆ ಕ್ಲಿಯರ್‌ ಮಾಡಬಹುದು. ಆದರೆ ಮನಸ್ಸಿನ ತುಂಬ ಅನಗತ್ಯ ಯೋಚನೆಗಳೇ ತುಂಬಿ ತುಳುಕಿದರೆ ಕ್ಲಿಯರ್‌ ಮಾಡೋದು ಹೇಗೆ? ಇಲ್ಲಿ ಮಾನಸಿಕ ಕ್ಯಾಶೆಗಳನ್ನು ಕ್ಲಿಯರ್‌ ಮಾಡೋ 5 ಸ್ಟೆಪ್‌ಗಳಿವೆ.

5 tips to strengthen your heartstrings
Author
Bangalore, First Published Aug 20, 2020, 9:21 AM IST

1. ಗೋಲ್‌ ಇಲ್ಲಾಂದ್ರೇ ಮನಸ್ಸು ಅಸ್ತವ್ಯಸ್ತವಾಗಿರೋದು

ಗುರಿ, ಆ್ಯಂಬಿಷನ್‌ ಅನ್ನೋದೆಲ್ಲ ಔಟ್‌ಡೇಟೆಡ್‌ ಅನಿಸಬಹುದು. ಆದರೆ ಗೋಲ್‌ ಅನ್ನೋದು ಇರದಿದ್ದರೆ ಯಾವ ಕೆಲಸವೂ ಆಗೋದಿಲ್ಲ. ಇದು ಕೇವಲ ಉದ್ಯೋಗದ ಲೆವೆಲ್‌ನಲ್ಲೇ ಆಗ್ಬೇಕಾಗಿಲ್ಲ. ಈ ವರ್ಷ ಇಷ್ಟುದುಡ್ಡುಳಿಸಿ ಒಂದು ಫ್ಲಾಟ್‌ ತಗೊಳ್ತೀನಿ ಅಂತಲೂ ಇರಬಹುದು. ಈ ವರ್ಷ ಈ ಟೆಕ್ನಿಕ್‌ ಕಲೀತೀನಿ ಅಂತಿರಬಹುದು. ಆದರೆ ಆ ಬಗ್ಗೆ ನಿಮಗೆ ಸ್ಪಷ್ಟತೆ, ನಿಖರತೆಗಳೆರಡೂ ಇರಬೇಕು. ಇವು ನಿಮ್ಮ ಮಾನಸಿಕ ಅಸ್ತವ್ಯಸ್ತತೆಗೆ ಬ್ರೇಕ್‌ ಹಾಕುತ್ತವೆ.

ಖಿನ್ನತೆಯಲ್ಲಿರುವವರ ಬಳಿ ಈ ಮಾತುಗಳನ್ನಾಡಿ, ನಿಮ್ಮ ಬೆಂಬಲವೇ ಅವರ ಚಿಕಿತ್ಸೆ

2. ನಿಮ್ಮ ಆದ್ಯತೆಗಳೂ ಮುಖ್ಯವಾಗುತ್ತವೆ

ಸದ್ಯಕ್ಕೆ ಪರಿಸ್ಥಿತಿ ನಮ್ಮ ಫೇವರ್‌ ಆಗಿ ಅಂತೂ ಇಲ್ಲ. ಸವಾಲುಗಳೇ ಹೆಚ್ಚು. ಸವಾಲಿನ ಇನ್ನೊಂದು ಮುಖ ಅವಕಾಶ. ನಮ್ಮೆದುರು ಬರುವ ಹಲವು ಅವಕಾಶಗಳಲ್ಲಿ ನಮ್ಮ ಗುರಿಗೆ ಪೂರಕವಾದದ್ದನ್ನು ಆಯ್ಕೆ ಮಾಡೋದು ತುಂಬ ಮುಖ್ಯವಾದದ್ದು. ಹಾಗಂತ ನಾವು ಬಿಟ್ಟು ಹಾಕಿದ ಅವಕಾಶ ಇನ್ನೊಮ್ಮೆ ಸಿಗಲ್ಲ ಅನ್ನೋದೂ ತಲೆಯಲ್ಲಿರಬೇಕು. ನಮ್ಮ ಪ್ರಯಾರಿಟಿ ಬಗ್ಗೆ ಖಚಿತತೆ ಇದ್ರೆ ನಾವಿದನ್ನು ಕರೆಕ್ಟಾಗಿ ಫೇಸ್‌ ಮಾಡಬಹುದು.

5 tips to strengthen your heartstrings

3. ಮುಂದಿನ ಪ್ಲಾನಿಂಗ್‌ ಬಗ್ಗೆ ಚೆಕ್‌ ಲಿಸ್ಟ್‌ ಹಾಕಿಕೊಳ್ಳಿ

ಈ ಗೋಲ್‌ ಅನ್ನು ತಲುಪೋದಕ್ಕೆ ಯಾವ ರೀತಿ ಮುಂದಿನ ನಡೆ ಇರ್ಬೇಕು ಅನ್ನೋದನ್ನು ಕರೆಕ್ಟಾಗಿ ಪ್ಲಾನ್‌ ಮಾಡ್ಕೊಳ್ಳಿ. ಅದಕ್ಕೆ ತೊಡಕುಗಳು ಬಂದೇ ಬರುತ್ತವೆ. ಅವನ್ನು ನಿವಾರಿಸೋದು ಹೇಗೆ ಅನ್ನೋದರ ಬಗ್ಗೆಯೂ ಯೋಚಿಸಿ. ಆ ಬಗ್ಗೆಯೂ ಲೆಕ್ಕಾಚಾರ ಹಾಕ್ಕೊಂಡು ಪರಿಹಾರದ ಬಗ್ಗೆ ಚಿಂತಿಸಿ. ಜೊತೆಗೆ ಪ್ಲಾನ್‌ ಬಿ ರೆಡಿ ಇಟ್ಕೊಳ್ಳಿ. ಆಗ ಗೊಂದಲಗಳು ಆಗೋದಿಲ್ಲ. ಲೈಫು ಹಗುರಾಗಿರುತ್ತೆ.

4. ಐಡಿಯಾಗಳಿಗೆ ಹುಡುಕಾಟ

ಮನಸ್ಸು ರಿಲ್ಯಾಕ್ಸ್‌ ಆಗಿದ್ದಾಗ ಫ್ರೆಶ್‌ ಐಡಿಯಾಗಳು, ಕ್ರಿಯೇಟಿವ್‌ ಪ್ಲಾನ್‌ ಗಳು ಬರುತ್ತವೆ, ಆ ಐಡಿಯಾಗಳನ್ನು ನೋಟ್‌ ಮಾಡಿಕೊಳ್ಳಿ. ಇವತ್ತಲ್ಲಾ ನಾಳೆ ಅವು ಪ್ರಯೋಜನಕ್ಕೆ ಬರುತ್ತವೆ. ಮನಸ್ಸು ಟೆನ್ಶನ್‌ ಫ್ರೀ ಆಗಿರಬೇಕು ಅಂದರೆ ಬೆಳಗ್ಗೆ ಬೇಗ ಏಳ್ಬೇಕು, ಒಂದೊಂದೇ ಕೆಲಸ ಮಾಡ್ತಾ ಬರಬೇಕು. ಕೆಲಸದಲ್ಲಿ ತನ್ಮಯತೆ ಬರಬೇಕು. ಹೀಗೆ ಮೈಂಡ್‌ ಹಗುರಾಗಿದ್ದಾಗ ಐಡಿಯಾಗಳಿಗೆ ಹುಡುಕಿ.

ಮನಸ್ಸನ್ನು ನಿಗ್ರಹಿಸಿಕೊಳ್ಳುವುದು ಹೇಗೆ? ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತುಗಳಲ್ಲಿ ಕೇಳಿ 

5. ಸ್ಮಾರ್ಟ್‌ಫೋನ್‌ಗಳು ಕಣ್ಣಿಂದ ದೂರ ಇರಲಿ

ಮೈಂಡ್‌ ಕ್ಯಾಶೆ ತುಂಬಿಸೋದ್ರಲ್ಲಿ ನಂ.1 ಈ ಸ್ಮಾರ್ಟ್‌ಫೋನ್‌. ಇದರ ಬಳಕೆ ಹೆಚ್ಚಾದಷ್ಟುಮನಸ್ಸಲ್ಲಿ ಅನಗತ್ಯ ವಿಚಾರಗಳ ಹೇರಿಕೆ ಹೆಚ್ಚಾಗುತ್ತಾ ಹೋಗುತ್ತವೆ. ಮಿದುಳು ಹೇಳದೇ ಕೈ ಯಾಂತ್ರಿಕವಾಗಿ ಸ್ಕೊ್ರೕಲ್‌ ಮಾಡುತ್ತಲೇ ಇರುತ್ತದೆ. ಸ್ಮಾರ್ಟ್‌ಫೋನ್‌ಗಳನ್ನು ಸಾಧ್ಯವಾದಷ್ಟುಕಣ್ಣಿಂದ ದೂರ ಇಡಿ. ಅವುಗಳ ಮಿನಿಮಮ್‌ ಬಳಕೆ ಕಡ್ಡಾಯ ಮಾಡಿ. ಕ್ಯಾಶೆ ಕಡಿಮೆಯಾಗಿ ಮನಸ್ಸು ಹೆಚ್ಚೆಚ್ಚು ಕ್ರಿಯೇಟಿವ್‌ ಆಗುತ್ತಾ ಹೋಗಲಿ.

Follow Us:
Download App:
  • android
  • ios