ಆಧುನಿಕ ಮಹಿಳೆ ಎದುರಿಸಬೇಕಾದ ಸವಾಲುಗಳಲ್ಲಿ ಥೈರಾಯ್ಡ್ ಸಹ ಒಂದು. ಥೈರಾಯ್ಡ್ ಗ್ರಂಥಿಯ ಕಾರ್ಯ ನಿರ್ವಹಣೆ ಏರುಪೇರಾದರೆ ಕಾಣಿಸಿಕೊಳ್ಳುವ ಸಮಸ್ಯೆಗಳು ನೂರಾರು. ಇದನ್ನು ಹತೋಟಿಗೆ ತರಲೇನು ಮಾಡಬೇಕು?
ದೇಹದ ಮೆಟಬಾಲಿಸಂ ನಿಯಂತ್ರಿಸುವ ಕಾರ್ಯ ನಿರ್ವಹಿಸುವ ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸದೇ ಹೋದಲ್ಲಿ, ತಂದೊಡ್ಡುವ ಸಮಸ್ಯೆಗಳು ಒಂದೆರಡಲ್ಲ. ಕೆಲವರ ತೂಕ ಕಡಿಮೆಯಾದರೆ, ಮತ್ತೆ ಕೆಲವರದ್ದು ವಿಪರೀತ ಏರುತ್ತದೆ. ಒಟ್ಟಿನಲ್ಲಿ ಆರೋಗ್ಯದಲ್ಲಿ ಏರುಪೇರಾಗುವುದು ಗ್ಯಾರಂಟಿ. ಇದಕ್ಕೇನು ಪರಿಹಾರ...?
ಆಹಾರ ಹವ್ಯಾಸ ಬದಲಾಗಲಿ: ಥೈರಾಯ್ಡ್ ಸಮಸ್ಯೆಯುಳ್ಳವರು ತಮ್ಮ ಆಹಾರದ ಮೇಲೆ ಗಮನ ಹರಿಸಬೇಕು. ನಿಯಮಿತವಾಗಿ ಯೋಗ, ಕಸರತ್ತು ಮಾಡುವುದರೊಂದಿಗೆ ಆಹಾರ ಕ್ರಮ ಸರಿಯಾಗಿರಬೇಕು. ಊಟದೊಂದಿಗೆ ಸಲಾಡ್ ಅಥವಾ ಬೇಯಿಸಿದ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.
ಗ್ರೀನ್ ಟೀಗೆ ಹೇಳಿ ಗುಡ್ ಬೈ: ಬಹುತೇಕರು ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ಸೇವಿಸುತ್ತಾರೆ. ಕೊಲೆಸ್ಟ್ರಾಲ್ ಲೆವೆಲ್ ಕಡಿಮೆ ಮಾಡುವ ಈ ಟೀ ಸೇವನೆಯಿಂದ ತೂಕ ಇಳಿಯುತ್ತದೆ. ಆದರೆ ಥೈರಾಯ್ಡ್ ಇದ್ದೋರು ಗ್ರೀನ್ ಟೀ ಸೇವಿಸಬಾರದು.
ಯಾವಾಗ ಥೈರಾಯ್ಡ್ ಚೆಕ್ ಮಾಡಿಕೊಳ್ಳಬೇಕು?
ಮಾತ್ರೆ ತಪ್ಪಿಸಬೇಡಿ: ಥೈರಾಯ್ಡ್ ಸಮಸ್ಯೆಯಿದ್ದವರು ತೂಕ ಹೆಚ್ಚಾಗಲು ಸೂಕ್ತ ಔಷಧಿ ತೆಗೆದುಕೊಳ್ಳದೇ ಹೋದಲ್ಲಿ, ತೂಕ ಹೆಚ್ಚುತ್ತದೆ. ಔಷಧಿ ಸೇವನೆಗೆ ನಿರ್ದಿಷ್ಟ ಸಮಯ ಮೀಸಲಿಡಿ. ಪ್ರತಿದಿನ ಅದೇ ಸಮಯಕ್ಕೆ ಔಷಧಿ ಸೇವಿಸಿದರೆ ತೂಕದಲ್ಲಿ ಏರುಪೇರಾಗುವುದಿಲ್ಲ.
ಇವನ್ನು ವರ್ಜಿಸಿ: ಥೈರಾಯ್ಡ್ ಸಮಸ್ಯೆ ಉಳ್ಳವರು ಬೇಯಿಸಿದ ಆಲೂಗಡ್ಡೆ, ಗೆಣಸು ಸೇವಿಸಬೇಕು. ಶರೀರದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಇವು ಥೈರಾಯ್ಡ್ ಸಮಸ್ಯೆಯನ್ನು ನಿಯಂತ್ರಣದಲ್ಲಿಡುತ್ತದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 6, 2019, 1:48 PM IST