Asianet Suvarna News Asianet Suvarna News

ಬಂಗಾರಕ್ಕಿಂತ ದುಬಾರಿ ಈ ಹಿಮಾಲಯನ್ ವಯಾಗ್ರ, ವಿಶೇಷತೆ ಏನು?

ವಯಾಗ್ರ ಬಗ್ಗೆ ಜನರಿಗೆ ತಿಳಿದಿದೆ. ಆದ್ರೆ ಹಿಮಾಲಯನ್ ವಯಾಗ್ರ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಅದರ ಪ್ರಮಾಣ ಕಡಿಮೆ ಹಾಗೂ ದುಬಾರಿ ಬೆಲೆಯೇ ಇದಕ್ಕೆ ಕಾರಣ. ಅಪರೂಪದ ಈ ಮೂಲಿಕೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಹೆಸರೇ ಹೇಳುವಂತೆ ಹಿಮಾಲಯದಲ್ಲಿ ಬೆಳೆಯುವ ಇದು ಸೆಕ್ಸ್ ಸಮಸ್ಯೆ ದೂರ ಮಾಡುತ್ತದೆ. 
 

10 Amazing Health Benefits Of Himalayan Viagra
Author
Bangalore, First Published Jun 23, 2022, 3:58 PM IST

ಹಿಮಾಲಯನ್ ವಯಾಗ್ರ (Himalayan Viagra). ಆಗಾಗ ಸುದ್ದಿಯಾಗುವ ವಿಷ್ಯ. ಸಾಮಾನ್ಯವಾಗಿ ಜನರು ಲೈಂಗಿಕ (Sex) ವಿಷ್ಯದ ಬಗ್ಗೆ ಹೆಚ್ಚು ಆಸಕ್ತಿ ತೋರಿಸ್ತಾರೆ. ಹಾಗೆಯೇ ಲೈಂಗಿಕ ಆರೋಗ್ಯದ ಬಗ್ಗೆ ಕಾಳಜಿವಹಿಸ್ತಾರೆ. ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಈ ಹಿಮಾಲಯನ್ ವಯಾಗ್ರಕ್ಕಿದೆ. ಇದೇ ಕಾರಣಕ್ಕೆ ಇದು ಆಗಾಗ ಸುದ್ದಿಯಾಗ್ತಿರುತ್ತದೆ. ಈ ನಿರ್ದಿಷ್ಟ ರೀತಿಯ ಗಿಡ ಮೂಲಿಕೆಯು ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಸುದ್ದಿಯಲ್ಲಿದೆ.  ಚರ್ಚೆಗೆ ಕಾರಣವೆಂದರೆ ಅದರ ವಿಶೇಷ ಪ್ರಯೋಜನಗಳು ಮತ್ತು ಬೆಲೆ. ಮಾರುಕಟ್ಟೆಯಲ್ಲಿ 'ಕಿಡಾ ಜಡಿ' ಎಂದೇ ಜನಪ್ರಿಯವಾಗಿರುವ ಈ ಮೂಲಿಕೆಯನ್ನು ಮೊದಲೇ ಹೇಳಿದಂತೆ ಲೈಂಗಿಕ ಸಮಸ್ಯೆಗಳ ಚಿಕಿತ್ಸೆ (Treatment) ಗೆ ಬಳಸಲಾಗುತ್ತದೆ.  ಮಾರುಕಟ್ಟೆಯಲ್ಲಿ ಇದರ ಬೆಲೆ ಕೆಜಿಗೆ ಸುಮಾರು 20 ಲಕ್ಷ ರೂಪಾಯಿ. 

ಕೀಡಾ ಜಡಿ ಅಂದ್ರೇನು? :  ಈ ಅಮೂಲ್ಯವಾದ ಗಿಡ ಮೂಲಿಕೆಯನ್ನು ಕ್ಯಾಟರ್ಪಿಲ್ಲರ್ ಫಂಗಸ್ ಮತ್ತು ಹಿಮಾಲಯನ್ ವಯಾಗ್ರ ಎಂದು ಕರೆಯುತ್ತಾರೆ. ಇದು ಚಿನ್ನಕ್ಕಿಂತ ಹೆಚ್ಚು ಬೆಲೆ ಬಾಳುವಂತಹದ್ದು. ಇದ್ರ ಸೇವನೆಯಿಂದ ಅನೇಕ ಆರೋಗ್ಯ  ಪ್ರಯೋಜನಗಳನ್ನು ಪಡೆಯಬಹುದು. ಈ ಮೂಲಿಕೆ ಹಳದಿ ಕ್ಯಾಟರ್ಪಿಲ್ಲರ್ ಮತ್ತು ಮಶ್ರೂಮ್ ಒಳಗೊಂಡಿದೆ.  

ಹಿಮಾಲಯನ್ ವಯಾಗ್ರ ಎಲ್ಲಿ ಕಂಡುಬರುತ್ತದೆ ? : ತಾಪಮಾನ ಹೆಚ್ಚಾದಾಗ ಈ ಮೂಲಿಕೆ ಬೆಳೆಯುತ್ತದೆ.  ಭೂತಾನ್, ಚೀನಾ, ಭಾರತ ಮತ್ತು ನೇಪಾಳದಲ್ಲಿ ಹಿಮ ಕರಗುವ ಪರ್ವತ ಪ್ರದೇಶಗಳಲ್ಲಿ 3300 ಮೀಟರ್ ನಿಂದ 4,500 ಮೀಟರ್ ನಡುವೆ ಇದು ಕಂಡುಬರುತ್ತದೆ. ಹಿಮಾಲಯದ ವಯಾಗ್ರ ಹಿಮಾಲಯದ ಎತ್ತರದ ಹುಲ್ಲುಗಾವಲುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.  

WOMEN HEALTH: ಮಹಿಳೆಯರು ಪಪ್ಪಾಯ ಕಾಯಿ ತಿಂದ್ನೋಡಿ

ಹಿಮಾಲಯನ್ ವಯಾಗ್ರ ಸೇವನೆ ವಿಧಾನ : ಇದನ್ನು ನೀರಿನಲ್ಲಿ ಕುದಿಸಿ, ಚಹಾ, ಸೂಪ್ ಮತ್ತು ಸ್ಟ್ಯೂ ಮಾಡಿ ಕುಡಿಯಲಾಗುತ್ತದೆ. ಇದು ಲೈಂಗಿಕ ದುರ್ಬಲತೆ ಮತ್ತು ಯಕೃತ್ತಿನ ಕಾಯಿಲೆಗಳಿಗೆ ಹಾಗೂ ಕ್ಯಾನ್ಸರ್ ಚಿಕಿತ್ಸೆಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಅದನ್ನು ಯಾವಾಗ ಬೆಳೆಯಲಾಗುತ್ತದೆ ? :  ಕ್ಯಾಟರ್ಪಿಲ್ಲರ್ ನಿರ್ದಿಷ್ಟ ರೀತಿಯ ಹುಲ್ಲನ್ನು ತಿನ್ನುತ್ತದೆ. ನಂತ್ರ ಕ್ಯಾಟರ್ಪಿಲ್ಲರ್ ಸಾಯುತ್ತದೆ. ಈ ಸಾವಿನ ವೇಳೆ ಅದ್ರ ದೇಹದಲ್ಲಿ ಈ ಮೂಲಿಕೆ ಬೆಳೆಯುತ್ತದೆ. ಈ ಮೂಲಿಕೆ ಅರ್ಧ ಹುಳು ಮತ್ತು ಅರ್ಥ ಮೂಲಿಕೆಯಾಗಿರುವುದ್ರಿಂದ ಇದನ್ನು ಕೀಡಾ ಜಡಿ ಎಂದು ಕರೆಯಲಾಗುತ್ತದೆ.  

Fitness Tips : 20 ನಿಮಿಷ ಸ್ಕಿಪ್ಪಿಂಗ್ ಮಾಡಿ ಬೊಜ್ಜಿಗೆ ಬೈ ಬೈ ಹೇಳಿ

ಹಿಮಾಲಯನ್ ವಯಾಗ್ರದಲ್ಲಿ ಏನೇನಿದೆ ? : ಇಂಟರ್ನ್ಯಾಷನಲ್ ಜರ್ನಲ್ ಆಫ್ ಹರ್ಬಲ್ ಮೆಡಿಸಿನ್ ಪ್ರಕಾರ, ಇದು ಕಾರ್ಡಿಸೆಪಿನ್ ಆಸಿಡ್, ಕಾರ್ಡಿಸೆಪಿನ್, ಡಿ-ಮ್ಯಾನಿಟಾಲ್, ಪಾಲಿಸ್ಯಾಕರೈಡ್, ವಿಟಮಿನ್ ಎ, ವಿಟಮಿನ್ ಬಿ 1, ಬಿ 2, ಬಿ 6, ಬಿ 12, ಸಿರಿಯನ್, ಸತು, ಎಸ್ಒಡಿ, ಫ್ಯಾಟಿ ಆಸಿಡ್, ನ್ಯೂಕ್ಲಿಯೊಸೈಡ್ ಪ್ರೋಟೀನ್, ತಾಮ್ರ, ಕಾರ್ಬೋಹೈಡ್ರೇಟ್ ಇತ್ಯಾದಿ ಪೋಷಕಾಂಶಗಳು ಮತ್ತು ಖನಿಜಗಳಿಂದ ಕೂಡಿದೆ. 

ಹಿಮಾಲಯನ್ ವಯಾಗ್ರದ ಪ್ರಯೋಜನವೇನು ? : ಹಿಮಾಲಯನ್ ವಯಾಗ್ರವನ್ನು ಕಾಮೋತ್ತೇಜಕವಾಗಿ ಅನೇಕ ವರ್ಷಗಳಿಂದ ಬಳಕೆ ಮಾಡಲಾಗ್ತಿದೆ. ಸುಮಾರು 1000 ವರ್ಷಗಳಿಂದ ಹೈಪೋಸೆಕ್ಸುವಾಲಿಟಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತಿದೆ ಎಂದು ವರದಿಗಳು ಹೇಳಿವೆ. ಇದು ರಾತ್ರಿ ಬೆವರುವಿಕೆ, ಹೈಪರ್ಗ್ಲೈಸೀಮಿಯಾ, ಹೈಪರ್ಲಿಪಿಡೆಮಿಯಾ, ಅಸ್ತೇನಿಯಾ, ಹೆಚ್ಚಿದ ಹೃದಯ ಬಡಿತಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆ, ಹೃದಯದ ಆರೋಗ್ಯ, ಉಸಿರಾಟದ ಆರೋಗ್ಯ, ಮೂತ್ರಪಿಂಡದ ಆರೋಗ್ಯ, ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳಲ್ಲಿ ಈ ಮೂಲಿಕೆ ಪ್ರಯೋಜನಕಾರಿಯಾಗಿದೆ.  

ಇದಕ್ಕೆ ಅತಿ ಹೆಚ್ಚು ಬೇಡಿಕೆ ಇದೆ ಆದ್ರೆ ಪೂರೈಕೆ ಕಡಿಮೆಯಿದೆ. ಇದೇ ಕಾರಣಕ್ಕೆ ಬೆಲೆ ಗಗನಕ್ಕೇರಿದೆ. ಕೆಲ ವರ್ಷದ ಹಿಂದೆ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಇದನ್ನು ಕೆಂಪು ಪಟ್ಟಿಗೆ ಸೇರಿಸಿದೆ.
 

Follow Us:
Download App:
  • android
  • ios