Asianet Suvarna News Asianet Suvarna News

ಮಳೆಯಿಂದ ಬೆಳೆ ನಾಶ, ರೈತ ಆತ್ಮಹತ್ಯೆ

ರಾಜ್ಯದ ಹಲವು ಕಡೆ ಭಾರೀ ಮಳೆಯಾಗುತ್ತಿದ್ದು, ಹಾವೇರಿ ಜಿಲ್ಲೆಯಲ್ಲಿ ಬೆಳೆ ಕಳೆದುಕೊಂಡ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೈಗೆ ಬರಬೇಕಿದ್ದ ಬೆಳೆ ಭಾರೀ ಮಳೆಯಿಂದಾಗಿ ನಾಶವಾಗಿದ್ದು, ರಾಜ್ಯಾದ್ಯಂತ ರೈತರು ಕಂಗಾಲಾಗಿದ್ದಾರೆ.

crops loss due to heavy rain farmer commits suicide
Author
Bangalore, First Published Oct 24, 2019, 10:11 AM IST
  • Facebook
  • Twitter
  • Whatsapp

ಹಾವೇರಿ(ಅ.24): ರಾಜ್ಯದ ಹಲವು ಕಡೆ ಭಾರೀ ಮಳೆಯಾಗುತ್ತಿದ್ದು, ಹಾವೇರಿ ಜಿಲ್ಲೆಯಲ್ಲಿ ಬೆಳೆ ಕಳೆದುಕೊಂಡ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೈಗೆ ಬರಬೇಕಿದ್ದ ಬೆಳೆ ಭಾರೀ ಮಳೆಯಿಂದಾಗಿ ನಾಶವಾಗಿದ್ದು, ರಾಜ್ಯಾದ್ಯಂತ ರೈತರು ಕಂಗಾಲಾಗಿದ್ದಾರೆ.

ಮಳೆಯಿಂದ ಬೆಳೆ ನಾಶವಾದ ಹಿನ್ನೆಲೆಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾನಗಲ್ಲತಾಲೂಕಿನ ಇನಾಂಯಲ್ಲಾಪುರ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

ಸಿಗದ ಪರಿಹಾರ : ಪ್ರವಾಹ ಸಂತ್ರಸ್ತ ರೈತ ಆತ್ಮಹತ್ಯೆ

ಪರಶುರಾಮ ತಿಪ್ಪಿಗುಂಡಿ(45) ಆತ್ಮಹತ್ಯೆ ಮಾಡಿಕೊಂಡ ರೈತ. ಆಗಸ್ಟ್‌ ತಿಂಗಳ ಪ್ರವಾಹದ ಬಳಿಕ ಬತ್ತ ಹಾಗೂ ಮೆಕ್ಕೆ ಜೋಳ ಬಿತ್ತನೆ ಮಾಡಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗಿ ಬೆಳೆ ಸಂಪೂರ್ಣ ನಾಶವಾಗಿದೆ.

ಅಲ್ಲದೇ ಕೆವಿಜಿಬಿ ಮತ್ತು ಕೆನರಾ ಬ್ಯಾಂಕ್‌ಗಳಲ್ಲಿ ಸುಮಾರು 8 ಲಕ್ಷ ಸಾಲ ಮಾಡಿದ್ದರು. ಬೆಳೆಯೂ ಇಲ್ಲದ್ದರಿಂದ ಸಾಲ ತೀರಿಸುವುದು ಹೇಗೆಂದು ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಹಾನಗಲ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತ್ತ ಮಳೆಗೆ ಕೊಚ್ಚಿ ಹೋದ ಈರುಳ್ಳಿ ಬೆಳೆ: ಇತ್ತ ರೈತ ನೇಣಿಗೆ ಶರಣು.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

Follow Us:
Download App:
  • android
  • ios