Asianet Suvarna News Asianet Suvarna News

ಹಾಸನಾಂಬೆ ಜಾತ್ರೆ : 13 ದಿನ ಮಾತ್ರ ದೇವಿ ದರ್ಶನ

ಹಾಸನ ನಗರದ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲು ತೆರೆದು ದೇವಿಯ ದರ್ಶನ ದೊರೆಯಲು ಇನ್ನೆರಡು ದಿನಗಳು ಮಾತ್ರ ಬಾಕಿ ಇದೆ.

Preparations underway For Historical Hasanamba Fest
Author
Bengaluru, First Published Oct 15, 2019, 3:59 PM IST

 ಹಾಸನ [ಅ.15] :  ನಗರದ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲು ತೆರೆದು ದೇವಿಯ ದರ್ಶನ ದೊರೆಯಲು ಇನ್ನೆರಡು ದಿನಗಳು ಮಾತ್ರ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಹಾಸನಾಂಬೆ ದೇವಾಲಯದ ಇತಿಹಾಸ ಮತ್ತು ಹಾಸನಾಂಬೆ ಉತ್ಸವದ ಬಗ್ಗೆ ಮಾಹಿತಿಯುಳ್ಳ ವೈಬ್‌ಸೈಟ್‌ಗೆ ಸೋಮವಾರ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಚಾಲನೆ ನೀಡಿದರು.

ಏತನ್ಮಧ್ಯೆ, ಜಿಲ್ಲಾ ಖಜಾನೆಯಿಂದ ಹಾಸನಾಂಬೆ ದೇವಿಗೆ ಸಂಬಂಧಿಸಿದ ಒಡವೆಗಳನ್ನು ಪೊಲೀಸ್‌ ಬಿಗಿ ಬಂದೋಬಸ್‌್ತನಲ್ಲಿ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವೈಬ್‌ಸೈಟ್‌ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಅ.17ರಂದು ದೇವಾಲಯದ ಬಾಗಿಲು ತೆರೆದು, ಅಂದಿನಿಂದ 13 ದಿನಗಳ ಕಾಲ ಹಾಸನಾಂಬೆ ಬಾಗಿಲು ತೆಗೆಯಲಾಗುವುದು. ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಶ್ರೀ ಹಾಸನಾಂಬ ಡಾಟ್‌ ಕಮ್‌ ಹೆಸರಿನ ವೆಬ್‌ಸೈಟ್‌ ಆರಂಭಿಸಿದ್ದು, ಇಲ್ಲಿ ಹಾಸನಾಂಬೆ ಉತ್ಸವದ ಮಾಹಿತಿಯನ್ನು ನೀಡಲಾಗಿದೆ. ಇಲ್ಲಿಗೆ ಬರುವ ಜನರಿಗೆ ಉಪಯೋಗವಾಗಬೇಕು ಎಂಬ ಆಶಯದಿಂದ ವೈಬ್‌ ಆರಂಭಿಸಲಾಗಿದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಅಂತರ್‌ಜಾಲ ತಾಣದಲ್ಲಿ ಹಾಸನದಲ್ಲಿರುವ ಕುದುರಗುಂಡಿ ಶಾಸನ ಇದ್ದು, ಈ ಬಗ್ಗೆಯೂ ಮಾಹಿತಿಯನ್ನು ಅಳವಡಿಸಲಾಗಿದೆ. ಶ್ರೀ ಹಾಸನಾಂಬೆ ದೇವಾಲಯದ ಇತಿಹಾಸವನ್ನು ಕನ್ನಡ ಮತ್ತು ಇಂಗ್ಲಿಷ್‌ ಎರಡು ಭಾಷೆಯಲ್ಲಿ ತಿಳಿಸಲಾಗಿದೆ. ಹಾಸನಾಂಬೆ ದೇವಾಲಯದ ಬಾಗಿಲನ್ನು ಅ.17ರ ಗುರುವಾರ ಮಧ್ಯಾಹ್ನ ತೆರೆದು 13 ದಿವಸಗಳ ಕಾಲ ಸಾರ್ವಜನಿಕರ ದರ್ಶನದ ವೇಳ ಪಟ್ಟಿಇತ್ಯಾದಿಗಳನ್ನು ತಿಳಿಸಲಾಗಿದೆ.

ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಸೌಲಭ್ಯಗಳು ದೊರಕುತ್ತಿದೆ. ವಿಶೇಷ ದರ್ಶನ ಪಡೆಯಲು ಟಿಕೆಟ್‌ ವ್ಯವಸ್ಥೆ, ಪ್ರಸಾದದ ವ್ಯವಸ್ಥೆ ಬಗ್ಗೆ ಮಾಹಿತಿ, ಹೊರಗಿನಿಂದ ಬರುವ ಭಕ್ತಾಧಿಗಳಿಗೆ ಹಾಸನ ಸುತ್ತಮುತ್ತ ಯಾವಯಾವ ಪ್ರೇಕ್ಷಣಿಯ ಸ್ಥಳಗಳಿವೆ ಎಂಬ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯ.

ಒಟ್ಟಾರೆ ಹಾಸನಾಂಬೆ ದೇವಾಲಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ನೀಡುವ ಅಂತರ್‌ಜಾಲ ತಾಣವಾಗಿದ್ದು, ಸಾರ್ವಜನಿಕರು ಇದರ ಉಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.

ಶ್ರೀ ಹಾಸನಾಂಬೆ ದೇವಾಲಯದ ಬಾಗಿಲು ತೆಗೆದಾಗ ಭಕ್ತಾಧಿಗಳಿಗೆ ಯಾವ ಗೊಂದಲವಾಗದಂತೆ ಸುಗಮವಾಗಿ ದೇವರ ದರ್ಶನ ಮಾಡಲು ಯಶಸ್ವಿಗಾಗಿ ಈಗಾಗಲೇ ಜಿಲ್ಲಾಡಳಿತ ಸಂಬಂಧಪಟ್ಟಅಧಿಕಾರಿಗಳನ್ನು ಕರೆದು ಅನೇಕ ಸಭೆಗಳನ್ನು ನಡೆಸಿ ತಯಾರಿ ನಡೆಸಿದೆ. ಅಭಿವೃದ್ಧಿ ಕೆಲಸಗಳು ಈಗಾಗಲೇ ನಡೆಯುತ್ತಿದೆ. ಮಳೆ ಹೆಚ್ಚು ಬರುತ್ತಿರುವುದರಿಂದ ಭಕ್ತಾಧಿಗಳು ಸರದಿ ಸಾಲಿನಲ್ಲಿ ಬರುವಾಗ ಯಾವುದೆ ಅಡಚಣೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಸಾಲಿನಲ್ಲಿ ಬರುವ ಭಕ್ತಾಧಿಗಳು ಆರರಿಂದ ಎಂಟು ಗಂಟೆಗಳ ಕಾಲ ನಿಲ್ಲ ಬೇಕಾಗಿರುವುದರಿಂದ ಅಲ್ಲಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. 70 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಮಾತ್ರ ವಿಶೇಷ ದರ್ಶನ ಸೌಲಭ್ಯ ಕಲ್ಪಿಸಲಾಗಿದೆ. ಗಣ್ಯ ವ್ಯಕ್ತಿಗಳಿಗೆ ಆಹ್ವಾನ ಪತ್ರಿಕೆಯನ್ನು ನೀಡಲಾಗಿದೆ. ಮುಖ್ಯಮಂತ್ರಿ, ಮಾಜಿ ಪ್ರಧಾನಮಂತ್ರಿಯನಗನು ಆಹ್ವಾನಿಸಲಾಗಿದೆ.

ವಿಐಪಿಗಳು ಬಂದಾಗ ಅದಕ್ಕೆ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಮೊದಲ ದಿವಸ ದೇವಸ್ಥಾನ ಮಧ್ಯಾಹ್ನ 12ಕ್ಕೆ ದರ್ಶನ ಪ್ರಾರಂಭವಾಗುತ್ತದೆ. ನಂತರ ಶ್ರೀ ಹಾಸನಾಂಬ ದೇವಾಲಯದಿಂದ ದೇವಾಲಯ ಇತಿಹಾಸ ಉಳ್ಳ ಸ್ತಬ್ಧ ಚಿತ್ರಗಳ ಜೊತೆಗೆ 30ರಿಂದ 40 ಕಲಾ ತಂಡಗಳ ಮೆರವಣಿಗೆಯು ಪ್ರಾರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀ ಹಾಸನಾಂಬ ಕಲಾ ಕ್ಷೇತ್ರದ ಆವರಣದಲ್ಲಿ ಕೊನೆಗೊಳ್ಳಲಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಇತರ ಅಧಿಕಾರಿಗಳು ಇದ್ದರು.

ದೇವಿಯ ಒಡವೆ ಖಜಾನೆಯಿಂದ ದೇವಾಲಯಕ್ಕೆ:

ಏತನ್ಮಧ್ಯೆ ಸೋಮವಾರ ಶ್ರೀ ಹಾಸನಾಂಬೆ ದೇವಿಯ ಒಡವೆಗಳನ್ನು ನಗರದ ಜಿಲ್ಲಾ ಖಜಾನೆಯಿಂದ ಅಡ್ಡ ಪಲ್ಲಕ್ಕಿ ಮೂಲಕ ಪೊಲೀಸ್‌ ಬಿಗಿ ಬಂದೋಬಸ್‌್ತನಲ್ಲಿ ವಾದ್ಯದೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು.

ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಎಡಿಸಿ ಎಚ್‌.ಎಲ್‌.ನಾಗರಾಜು ಹಾಗೂ ತಹಸೀಲ್ದಾರ್‌ ಮೇಘನಾ ಎದುರು ಮೊದಲು ಖಜಾನೆಯಿಂದ ಒಡವೆ ಪೆಟ್ಟಿಗೆಯನ್ನು ತಂದು ರಸ್ತೆ ಮಧ್ಯೆ ಹೂವಿನಿಂದ ಅಲಂಕೃತಗೊಂಡಿದ್ದ ಅಡ್ಡ ಪಲ್ಲಕ್ಕಿ ಮೇಲೆ ಇಟ್ಟು ಪೂಜೆ ಸಲ್ಲಿಸಿದರು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಹಾಸನಾಂಬೆ ದೇವಸ್ಥಾನಕ್ಕೆ ತರಲಾಯಿತು. ಅಡ್ಡ ಪಲ್ಲಕ್ಕಿಯನ್ನು ಮೊದಲು ಉಪವಿಭಾಗಧಿಕಾರಿ ನಾಗರಾಜು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಕೆಲ ದೂರ ನಡೆದರು.

Follow Us:
Download App:
  • android
  • ios