ಹಾಸನ, [ಅ.13]: ಮನೆಯವರ ವಿರೋಧಕ್ಕೆ ಹೆದರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾಸನ: KSRTC ಬಸ್‌ನಲ್ಲಿ ಸ್ಟೂಡೆಂಟ್ಸ್ ಫುಲ್ ರೋಮ್ಯಾನ್ಸ್.. ಎಲ್ಲಿಗೆ ಬಂತು ಕಾಲ!

ಮೂಡಿಗೆರೆ ತಾಲೂಕಿನ ಕಟ್ಟೇಬೈಲು ಗ್ರಾಮದ ಪವಿತ್ರಾ (20) ತಾಲೂಕಿನ ಹಾರ್ಲೆ ಕೂಡಿಗೆ ಗ್ರಾಮದ ಪ್ರವೀಣ್ (25) ಮೃತರು. ಇವರಿಬ್ಬರು ಕಳೆದ 2 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. 

ಹೊಳೆನರಸೀಪುರ: ಪ್ರೀತಿ ನಿರಾಕರಿಸಿದವಳಿಗೆ ಚಾಕು ಇರಿದ ಪಾಗಲ್ ಪ್ರೇಮಿ

ಆದ್ರೆ ಇದಕ್ಕೆ ಮನೆಯವರು ವಿರೋಧಿಸಿದ್ದಾರೆ. ಇದ್ರಿಂದ  ಅವರು ಎರಡು ದಿನಗಳ ಹಿಂದೆ ಮನೆಬಿಟ್ಟಿದ್ದ, ಶನಿವಾರ ರಾತ್ರಿ ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಕೆರೆಯಲ್ಲಿ ‌ಮೃತ ದೇಹಗಳು ತೇಲುತ್ತಿದ್ದುದ್ದನ್ನು ಗಮನಿಸಿದ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದು, ಕೆರೆಯಿಂದ ಮೃತದೇಹ ಮೇಲೆತ್ತಲಾಗಿದೆ.

ಹಾಸನ: ಮ್ಯಾಟ್ರಿಮೊನಿ ಸೈಟ್‌ನಲ್ಲಿ ಮೂಕ ಮನಸುಗಳ ಹೊಸ ಜೀವನರಾಗ

ಕುಟುಂಬಗಳ ವಿರೋಧವೇ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಪ್ರಮುಖ ಕಾರಣ  ಎನ್ನಲಾಗಿದೆ.‌ ಈ ಬಗ್ಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.