Asianet Suvarna News Asianet Suvarna News

ಹಾಸನ: ಮ್ಯಾಟ್ರಿಮೊನಿ ಸೈಟ್‌ನಲ್ಲಿ ಮೂಕ ಮನಸುಗಳ ಹೊಸ ಜೀವನರಾಗ

ಹೊಳೆನರಸೀಪುರದ ಪಿ.ಆರ್‌.ಕಲ್ಯಾಣ ಮಂದಿರದಲ್ಲಿ ಮದುವೆಯೊಂದು ನಡೆಯಿತು. ಇದು ಎರಡು ಮೂಕ ಮತ್ತು ಕಿವುಡು ಮನಸುಗಳ ಮಧುರ ಬಾಂಧವ್ಯಕ್ಕೆ ಮುನ್ನುಡಿ ಬರೆದ ವಿವಾಹ. ನೆರೆದಿದ್ದ ಅಷ್ಟೂ ಜನರ ಮನ ಮೂಕ ಮನಸುಗಳ ಸುಮಧುರ ಸಂಬಂಧಕ್ಕೆ ಸಾಕ್ಷಿಯದರು.

deaf couple marriage in Hassan
Author
Bangalore, First Published Oct 10, 2019, 1:09 PM IST

ಹಾಸನ(ಅ.10): ಇದು ಮೂಕ ಮನಸುಗಳ ಮೌನರಾಗವಲ್ಲ, ಬದಲಿಗೆ ಇದು ಎರಡು ಮೂಕ ಮತ್ತು ಕಿವುಡು ಮನಸುಗಳ ಮಧುರ ಬಾಂಧವ್ಯಕ್ಕೆ ಮುನ್ನುಡಿ ಬರೆದ ಜೀವನರಾಗ ಎಂದರೂ ತಪ್ಪಿಲ್ಲ.!

ಹೌದು... ಇದೊಂದು ರೀತಿ ಆದರ್ಶದ ಬಾಂಧವ್ಯಕ್ಕೆ ಅಡಿಯಿಟ್ಟ ಘಳಿಗೆ. ಹೊಳೆನರಸೀಪುರದ ಹೌಸಿಂಗ್‌ ಬೋರ್ಡ್‌ ಬಡಾವಣೆಯಲ್ಲಿನ ಪಿ.ಆರ್‌.ಕಲ್ಯಾಣ ಮಂದಿರ ಹಾಗೂ ಅಲ್ಲಿ ನೆರೆದಿದ್ದ ನೂರಾರು ಜನರು ಒಂದು ಅಪರೂಪದ ಘಳಿಗೆಗೆ ಸಾಕ್ಷಿಯಾದದ್ದಷ್ಟೇ ಅಲ್ಲ, ಎಲ್ಲರ ಮನಸ್ಸಿನಲ್ಲಿಯೂ ಒಂದು ಸಾರ್ಥಕ ಬಾವ ಉಂಟಾದ ಕ್ಷಣ ಎಂದರೆ ಸುಳ್ಳಲ್ಲ.

ಆಲೂರಿನ ಯಗಚಿ ಡ್ಯಾಂನಲ್ಲಿ ಈಜಲು ಹೋದ ಮೂವರು ನೀರು ಪಾಲು

ಹೊಳೆನರಸೀಪುರ ತಾಲೂಕಿನ ಚೋಳೇನಹಳ್ಳಿಯ ಶುಂಠಿ ವ್ಯಾಪಾರಿ ಕೃಷ್ಣೇಗೌಡ ಮತ್ತು ಪಾರ್ವತಮ್ಮ ಅವರ ಹಿರಿಯ ಮಗಳು ಸಿ.ಕೆ.ಸುಪ್ರಿಯಾಗೆ ವಯಸ್ಸು 23, ಓದು ಡಿಪ್ಲೋಮಾ ಇನ್‌ ಕಮರ್ಷಿಯಲ್‌ ಪ್ರಾಕ್ಟೀಸ್‌ ಮತ್ತು ಬಿ.ಕಾಂ (ಶೇ.66) ಉತ್ತೀರ್ಣ. ಚಾಮರಾಜನಗರ ಜಿಲ್ಲೆಯ ಕೋಳ್ಳೇಗಾಲ ತಾಲೂಕಿನ ರಾಮಾಪುರ ಗ್ರಾಮದ ಪ್ರಸಾದ್‌ ಮತ್ತು ತ್ರಿಪುರಾಂಬ ಅವರ ಪುತ್ರ ಪಿ.ಪ್ರಜ್ವಲ್‌, ವಯಸ್ಸು 28, ವಿದ್ಯಾರ್ಹತೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಬಿಇ, ಬಿಟೆಕ್‌ ಪದವೀಧರ ಇವರಿಬ್ಬರಿಗೂ ಬುಧವಾರ ನಿಶ್ಚಿತಾರ್ಥ ನಡೆಯಿತು.

ಗ್ರಾಮದೊಳಗೆ ಕಾಡಾನೆಯ ಗಂಭೀರ ನಡಿಗೆ..! ಹೋಗಪ್ಪಾ ಹೋಗು ಎಂದ್ರು ಜನ

ವಿಶೇಷತೆ ಇವರ ವಿದ್ಯಾರ್ಹತೆ ಅಲ್ಲ, ಬದಲಿಗೆ ಇಬ್ಬರೂ ಹುಟ್ಟಿನಿಂದಲೇ ಮೂಕ ಮತ್ತು ಕಿವುಡರು ಎಂಬುದೇ ವಿಶೇಷ. ಆದರೆ, ದೇವರು ಇಂತಹ ಇಬ್ಬರನ್ನೂ ಒಂದು ಮಾಡಿದ ಘಳಿಗೆ ಮತ್ತು ಯುವಕ ಮತ್ತು ಯುವತಿ ಇಬ್ಬರೂ ಪೋಷಕರ ಮುಖದಲ್ಲಿ ಮಾತ್ರ ಆ ಘಳಿಗೆ ಸಾರ್ಥಕ ಘಳಿಗೆ ಎನಿಸಿತ್ತು. ಶುಂಠಿ ವ್ಯಾಪಾರಿ ಕೃಷ್ಣೇಗೌಡರಿಗೆ ಮೂವರು ಮಕ್ಕಳ ಪೈಕಿ ಇಬ್ಬರು ಹೆಣ್ಣು, ಒಬ್ಬ ಗಂಡು. ಇವರಲ್ಲಿ ಹಿರಿಯ ಮಗಳು ಮತ್ತು ಕಿರಿಯ ಮಗ ಇಬ್ಬರೂ ಹುಟ್ಟಿನಿಂದಲೇ ಕಿವುಡ ಮತ್ತು ಮೂಗರಾದರೆ, ಇನ್ನೊಬ್ಬಳು ಮಗಳಿಗೆ ಯಾವುದೇ ನ್ಯೂನತೆ ಇಲ್ಲ.

ದಾವಣಗೆರೆ: ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಒತ್ತಾಯ

ಅಲ್ಲದೇ, ಯುವಕ ಪಿ.ಪ್ರಜ್ವಲ್‌ ಅವರಂತೆಯೇ ಅವರ ಅಕ್ಕ ಮತ್ತು ಭಾವ ಕೂಡ ಹುಟ್ಟಿನಿಂದಲೇ ಕಿವುಡು ಮತ್ತು ಮೂಕರು. ಸುಪ್ರಿಯಾ ಬೆಂಗಳೂರಿನ ಕಾಲೇಜಿನಲ್ಲಿ ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿಯೇ ಬಿಕಾಂ ಪದವಿ ಪಡೆದಿದ್ದು, ಹಿಂದೂ ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಸ್ನೇಹ ಕೊನೆಗೆ ಈ ಎರಡೂ ಮೂಕ ಮತ್ತು ಕಿವುಡು ಮನಸುಗಳನ್ನು ಒಂದು ಮಾಡುವುದು ತಡವಾಗಲಿಲ್ಲ.

ಚಿಕ್ಕಬಳ್ಳಾಪುರದಲ್ಲಿ ಮುಂದುವರಿದ ಮಳೆ: ತಪ್ಪದ ಕಿರಿಕಿರಿ

ಮೂಕ ಹಕ್ಕಿಗಳ ಭವಿಷ್ಯದ ಕನಸುಗಳಿಗೆ ಸಹಕಾರ ನೀಡಿದ್ದಲ್ಲದೇ, ಸಂತೋಷದಿಂದ ಎರಡೂ ಮನೆಯವರು ತಮ್ಮ ಮನೆ-ಮನ ತುಂಬಿಸಿಕೊಳ್ಳಲು ಒಪ್ಪಿಗೆ ನೀಡಿದ ನಂತರ ಅ.9ರಂದು ಪಟ್ಟಣದಲ್ಲಿ ಸುಪ್ರಿಯಾ ಮತ್ತು ಪ್ರಜ್ವಲ್‌ ಅವರ ವಿವಾಹ ನಿಶ್ಚಿತಾರ್ಥ ಸಮಾರಂಭ ನಡೆಯಿತು.

-ಎಚ್‌.ಡಿ.ಗುರುಪ್ರಸಾದ್‌

Follow Us:
Download App:
  • android
  • ios