ಹಾಸನ(ಅ. 10) ಪ್ರೀತಿ ನಿರಾಕರಿಸಿದ ಯುವತಿಗೆ ಪಾಗಲ್ ಪ್ರೇಮಿ  ಚಾಕು ಇರಿದಿದ್ದಾನೆ. ಹೊಳೆನರಸೀಪುರದ ಸರ್ಕಾರಿ ಮಹಿಳಾ‌ ಕಾಲೇಜು ವಿದ್ಯಾರ್ಥಿನಿ ಆಘಾತಕ್ಕೆ ಒಳಗಾಗಿದ್ದಾರೆ.

ಪಟ್ಟಣದ ರೈಲು ನಿಲ್ದಾಣ ಬಳಿ ಘಟನೆ ನಡೆದಿದೆ. ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು  ಹೊಳೆನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಕು ಇರಿದ ಆರೋಪಿ ಮಣಿಕಂಠ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೇಮಿಗೆ ಇರಿದು ತಾನೂ ಇರಿದುಕೊಂಡ ಮಂಗಳೂರಿನ ಪಾಗಲ್

ಇದು ಮೊದಲನೇ ಪ್ರಕರಣವನೇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪಾಗಲ್ ಪ್ರೇಮಿಯೊಬ್ಬ ಇಂಥದ್ದೆ ಕೆಲಸ ಮಾಡಿದ್ದ. ಕಾಲೇಜಿ ವಿದ್ಯಾರ್ಥಿಗಳಲ್ಲೇ ಇಂಥ ಪ್ರಕರಣ ನಡೆಯುತ್ತಿರುವುದು ಆತಂಕದ ಸಂಗತಿಯಾಗಿದೆ.