Asianet Suvarna News Asianet Suvarna News

'ಗಂಡ ನಾ ಹೇಳಿದಂತೆ ಕೇಳೋ ಹಾಗೆ ಮಾಡು', ಹಾಸನಾಂಬೆಗೆ ಭಕ್ತೆಯ ಪತ್ರ

ಹಾಸನಾಂಬೆ ದೇವಾಲಯದ ಬಾಗಿಲು ಮಂಗಳವಾರ ಮುಚ್ಚಲಾಗಿದ್ದು, ಹುಂಡಿ ಎಣಿಕೆ ಕಾರ್ಯ ಇಂದು ನಡೆಯುತ್ತಿದೆ. ಹುಂಡಿ ಎಣಿಕೆ ಸಂದರ್ಭ ವಿಶೇಷ ಪತ್ರಗಳು ಲಭ್ಯವಾಗಿದೆ. ಮೆಡಿಕಲ್ ಸೀಟ್. ಸೈಟ್, ಮನೆ ಸೇರಿ ಹಲವು ವಿಶಿಷ್ಟ ಬೇಡಿಕೆಗಳುಳ್ಳ ಪತ್ರಗಳನ್ನು ಭಕ್ತರು ಹಾಸನಾಂಬೆಗೆ ಬರೆದಿದ್ದಾರೆ. ಪತ್ರಗಳಲ್ಲಿ ಏನೇನಿತ್ತು..? ಹಾಸನಾಂಬೆಯಲ್ಲಿ ಭಕ್ತರ ಬೇಡಿಕೆ..? ಇಲ್ಲಿದೆ ಹೆಚ್ಚಿನ ಮಾಹಿತಿ

Different letters to hasanambe from devotees in hassan
Author
Bangalore, First Published Oct 30, 2019, 12:14 PM IST

ಹಾಸನ(ಅ.30): ಹಾಸನಾಂಬೆಯ ದೇವಾಲಯ ಬಾಗಿಲು ಬುಧವಾರ ಮುಚ್ಚಲಾಗಿದ್ದು, 13 ದಿನಗಳ ದರ್ಶನ ನಂತರ ನಿನ್ನೆ ಮಧ್ಯಾಹ್ನ 1.20 ಕ್ಕೆ  ದೇವಾಲಯದ ಬಾಗಿಲು ಮುಚ್ಚಲಾಗಿದೆ. ಇಂದು ಹುಂಡಿ ಎಣಿಕೆ ಕಾರ್ಯ ನಡೆಯಲಿದೆ. ಹಾಸನಾಂಬೆಗೆ ಭಕ್ತರಿಂದ ವಿಶಿಷ್ಟ ಮನವಿ ಪತ್ರಗಳು ಬಂದಿದ್ದು, ಹಲವು ಬೇಡಿಕೆಗಳನ್ನು ಭಕ್ತರು ಪತ್ರದಲ್ಲಿ ನಮೂದಿಸಿದ್ದಾರೆ.

"

ಹಣದ ಹುಂಡಿಯಲ್ಲಿ ಭಕ್ತರ ಅರಿಕೆ ಪತ್ರಗಳು ಲಭ್ಯವಾಗಿದ್ದು, ತೇಜಸ್ವಿನಿ ಎಂಬ ವಿದ್ಯಾರ್ಥಿನಿಯೊಬ್ಬಳು ತನ್ನನ್ನು ಸೆಲೆಬ್ರಿಟಿ ಮಾಡು ಎಂದು ಕೇಳಿಕೊಂಡಿದ್ದಾರೆ. ಮಹಿಳೆಯೊಬ್ಬರು ಮಗಳಿಗೆ ಮೆಡಿಕಲ್ ಸೀಟ್ ಕೊಡಿಸಿ ಕಾಪಾಡವ್ವ ಎಂದು ಪತ್ರ ಬರೆದಿದ್ದಾರೆ. ಎದುರಾಳಿಗಳು ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಮಾಡು, ರಾಜು ರೆಡ್ಡಿ ನನ್ನಿಂದ ಪಡೆದಿರುವ 8.50 ಲಕ್ಷ ಹಣ ವಾಪಸ್ ಕೊಡಲು ಹೇಳು ಎಂದು ಹಾಸನಾಂಬೆಗೆ ಭಕ್ತನೊಬ್ಬನ ಪತ್ರ ಬರೆದು ಕೇಳಿಕೊಂಡಿದ್ದಾನೆ.

ಇನ್ನೊಬ್ಬ ಮಹಿಳೆ ತನಗೆ ಸೈಟ್ ಸಿಗುವಂತೆ ಮಾಡಿ, ನಾನು ಹೇಳಿದ ಹಾಗೆ ನನ್ನ ಗಂಡ ಕೇಳುವಂತೆ ಮಾಡು ಎಂದು ಪತ್ರ ಬರೆದಿದ್ದಾರೆ. ನಮ್ಮ ಮನವಿ ಆಲಿಸಿ ಹಾರೈಸಿದರೆ 101, 1001 ಈಡುಗಾಯಿ ಒಡೆಯುತ್ತೀವೆಂದು ಭಕ್ತರ ಹರಕೆ ಹೇಳೀಕೊಂಡಿದ್ದಾರೆ.

ಹಾಸನಾಂಬಾ ದೇವಾಲಯ ದರ್ಶನಕ್ಕೆ ತೆರೆ, 3 ಲಕ್ಷ ಭಕ್ತರ ಭೇಟಿ

ವರ್ಷದಲ್ಲಿ 13 ದಿನ ಮಾತ್ರ ಬಾಗಿಲು ತೆರೆಯಲಾಗುವ ಹಾಸನಾಂಬ ದೇವಾಲಯದಲ್ಲಿ ಅಕ್ಟೋಬರ್ 17 ರಂದು ಬಾಗಿಲು ತೆರೆಯಲಾಗಿತ್ತು. 13 ದಿನಗಳ ಕಾಲ ದರ್ಶನದ ನಂತರ ಅಕ್ಟೋಬರ್ 29 ರಂದು ಮಧ್ಯಾಹ್ನ 1.20 ಕ್ಕೆ  ದೇವಾಲಯದ ಬಾಗಿಲು ಮುಚ್ಚಲಾಗಿದೆ. ಕೊನೆಯ ಕ್ಷಣದಲ್ಲಿಯೂ ದೇವಸ್ಥಾನದ ಬಳಿ ಇದ್ದಂತಹ ಭಕ್ತಾಧಿಗಳಿಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

3 ಲಕ್ಷ ಭಕ್ತರ ಭೇಟಿ

ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಪತ್ನಿ ಮತ್ತು ಪುತ್ರಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕರು ಹಾಸನಾಂಬಾ ದೇವಾಲಯಕ್ಕೆ ತೆರಳಿ ದರ್ಶನ ಪಡೆದಿದ್ದರು. ಹಿರಿಯ ಕಲಾವಿದ ದೊಡ್ಡಣ್ಣ , ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ದೇವಿಯ ದರ್ಶನ ಪಡೆದಿದ್ದಾರೆ. ಅಂಕಿ ಅಂಶಗಳ ಪ್ರಕಾರ 2.8 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದರ್ಶನ ಪಡೆದಿದಿದ್ದಾರೆ ಎನ್ನಲಾಗುತ್ತಿದೆ.

ಹಾಸನಾಂಬೆ ಉತ್ಸವದ ಆರಂಭದ ದಿನಗಳಲ್ಲಿ ಭಕ್ತರ ಸಂಖ್ಯೆಯಲ್ಲಿ ಇಳಿಮುಖ ಕಂಡಿತ್ತಾದರೂ ಈಗ ರಜೆಗಳು ಪ್ರಾರಂಭವಾದ ನಂತರ ದೇವಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿತ್ತು. 300 ರೂ ಹಾಗೂ 1000 ರೂ ಹಾಗೂ ಲಾಡು ಮಾರಾಟಗಳಿಂದ ಸಂಗ್ರಹವಾಗಿರುವ ಹಣ ಕೋಟಿಗಳ ಗಡಿ ದಾಟಿದ್ದು,  2 ಕೋಟಿ ರೂ. ಆದಾಯ ಸಂಗ್ರಹವಾಗಿರುವ ಸಾಧ್ಯತೆ ಇದೆ.

ಇಂದಿನಿಂದ 13 ದಿನ ಹಾಸನಾಂಬೆ ದರ್ಶನ

ಹಾಸನಾಂಬ ದೇವಿ ದರ್ಶನ ಹಾಗೂ ಸಿದ್ದೇಶ್ವರ ಜಾಥ್ರಾ ಮಹೋತ್ಸವವು ಸಚಿವರ ಮಾರ್ಗದರ್ಶನದಂತೆ ಅತ್ಯಂತ ಯಶಸ್ವಿಯಾಗಿ ಜರುಗಿದೆ ಎಂದು ಜಿಲ್ಲಾಧಿಕಾರಿ ಆರ್‌ ಗಿರೀಶ್‌ ಹೇಳಿದರು. 300 ಹಾಗೂ 1000 ರುಪಾಯಿಯ ಟಿಕೆಟ್‌ ದರ್ಶನದಿಂದ ಸುಮಾರು .1.6 ಕೋಟಿ ಹಣ ಸಂಗ್ರಹವಾಗಿದೆ. ದೇವಸ್ಥಾನದ ಕಾಣಿಕೆ ಹಣ ಅ.30ರಂದು ಎಣಿಕೆ ನಡೆಯುವುದು ಎಂದರು. ಪ್ರಾರಂಭದಿಂದ ಕೊನೆಯವರೆಗೂ ಪ್ರತಿಯೊಬ್ಬರು ಸಹಕಾರ ನೀಡಿದ್ದಾರೆ. ವಿಶೇಷವಾಗಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳಿಂದ ಉತ್ತಮ ಸಹಕಾರ ದೊರಕಿದೆ ಎಂದು ಅಭಿನಂದನೆ ತಿಳಿಸಿದ್ದಾರೆ.

Follow Us:
Download App:
  • android
  • ios