ಚಿಕ್ಕಬಳ್ಳಾಪುರ(ಅ.10): ಕಳೆದ ಒಂದು ವಾರದಿಂದ ತರಾಟೆಗೆ ತೆಗೆದುಕೊಂಡಿರುವ ವರುಣನ ಆಕ್ರೋಶಕ್ಕೆ ಜನರು ತೀವ್ರ ಸಂಕಷ್ಟು ಎದುರಿಸುವಂತಾಗಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಕಳೆದ ಒಂದು ವಾರದಿಂದ ರಾತ್ರಿ ವೇಳೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಹಲವು ಕೆರೆಗಳಿಗೆ ಅಲ್ಪ ಸ್ವಲ್ಪ ನೀರು ಶೇಖರಣೆಯಾಗಿದ್ದರೆ, ಮಂಚೇನಹಳ್ಳಿ ಹೋಬಳಿಯ ದಂಡಿಗಾನಹಳ್ಳಿ ಕೆರೆ ಕೋಡಿ ಹರಿದಿದೆ. ಇನ್ನು ಚಿಕ್ಕಬಳ್ಳಾಪುರ ನಗರಕ್ಕೆ ನೀರೊದಗಿಸುವ ಜಕ್ಕಲಮಡಗು ಜಲಾಶಯಕ್ಕೆ ಒಂದು ವರ್ಷಕ್ಕಾಗುವಷ್ಟುನೀರು ಬಂದಿದೆ.

ಹೆಜ್ಜೆ ಇಡಲಾಗದ ಎಂಜಿ ರಸ್ತೆ

ನಗರದ ಪ್ರಮುಖ ರಸ್ತೆ ಎಂಬ ಹಣೆಪಟ್ಟಹೊಂದಿರುವ ಎಂಜಿ ರಸ್ತೆ ಜನಸಂಚಾರಕ್ಕೆ ಅಯೋಗ್ಯವಾದ ಸ್ಥಿತಿ ತಲುಪಿದೆ. ಕಳೆದ ಒಂದೂವರೆ ವರ್ಷದ ಹಿಂದೆಯೇ ಈ ರಸ್ತೆ ಕಾಮಗಾರಿ ಆರಂಭವಾಗಿದ್ದು, ಈ ನಡುವೆ ಎಚಟ್‌ಎನ್‌ ವ್ಯಾಲಿ ಪೈಪ್‌ ಲೈನ್‌ ಸೇರಿದಂತೆ ಇಥರೆ ಕಾಮಗಾರಿಗಳಿಗಾಗಿ ಇಢೀ ರಸ್ತೆ ಅಗೆದು ಹಾಳು ಮಡಾಇರುವ ಪರಿಣಾಮ ರಸ್ತೆ ಕೆಸರುಗದ್ದೆಯಂತಾಗಿದೆ.

ಕೋಲಾರ: ನೀರಿಲ್ಲದ ಕೊಳವೆ ಬಾವಿಗೂ ವಿದ್ಯುತ್‌ ಬಿಲ್‌!

ಇದೇ ರಸ್ತೆಯಲ್ಲಿ ಎಪಿಎಂಸಿ ಮಾರುಕಟ್ಟೆಇದ್ದು, ಪ್ರತಿನಿತ್ಯ ರೈತರು ನಾನಾ ವಸ್ತುಗಳನ್ನು ಮಾರುಕಟ್ಟೆಗೆ ತರುತ್ತಿದ್ದು, ರಸ್ತೆ ಹದಗೆಟ್ಟಿರುವ ಪರಿಣಾಮ ಪ್ರತಿ ದಿನ ಬಿದ್ದು ಗಾಯಗೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಇನ್ನು ಚರಂಡಿ ಕಾಮಗಾರಿ ನೆಪದಲ್ಲಿ ಸಂಪರ್ಕ ರಸ್ತೆಗಳನ್ನು ಬಂದ್‌ ಮಾಡಲಾಗಿದ್ದು. ಚರಂಡಿ ಕಾಮಗಾರಿಗಾಗಿ ಅಗೆದಿರುವ ಮಣ್ಣು ರಸ್ತೆಗೆ ಸುರಿದಿರುವ ಪರಿಣಾಮ ಸಂಪೂರ್ಣ ಕೆಸರುಮಯವಾಗಿದೆ.

ಕೆಸರುಮಯವಾದ ಎಂಜಿ ರಸ್ತೆ

ಹಬ್ಬದ ವಿಶೇಷವಾಗಿ ನೂತನ ಬಟ್ಟೆತೊಟ್ಟವರು ಬೈಕ್‌ ಅಥವಾ ಕಾಲ್ನಡಿಗೆಯಲ್ಲಿ ಎಂಜಿ ರಸ್ತೆಗೆ ಹೆಜ್ಜೆ ಇಟ್ಟರೆ ಸಂಪೂರ್ಣ ಕೆಸರಿನಿಂದ ಮನೆ ಸೇರುವ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಯುಜಿಡಿ ಕಟ್ಟಿಕೊಂಡು, ತ್ಯಾಜ್ಯ ನೀರು ರಸ್ತೆಗೆ ಹರಿಯುತ್ತಿರುವ ಪರಿಣಾಮ ಜನರು ಮುಗಿನ ಜೊತೆಗೆ ಮೈ ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಾಗೇಪಲ್ಲಿಯಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತ

ಎಂಜಿ ರಸ್ತೆಯಲ್ಲಿ ಸಂಚರಿಸುವವರು ಯುಜಿಡಿ ತ್ಯಾಜ್ಯದ ಜೊತೆಗೆ ಕೆಸರಿನ ಸಿಂಚನವಿಲ್ಲದೆ ಸಂಚರಿಸುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ರಸ್ತೆ ಕಾಮಗಾರಿ ವಿಳಂಬ ಮಾಡಿರುವ ಗುತ್ತಿಗೆದಾರರು, ಚರಂಡಿ ಕಾಮಗಾರಿ ಹೆಸರಿನಲ್ಲಿ ಕೆಸರು ಮಾಡಿದ ಗುತ್ತಿಗೆದಾರರು ಮತ್ತು ವರ್ಷಗಳೇ ಕಳೆದರೂ ಇತ್ತ ಗಮನ ನೀಡದ ಅಧಿಕಾರಿಗಳಿಗೆ ಪ್ರತಿನಿತ್ಯ ನಾಗರಿಕರು ಶಾಪ ಹಾಕುವುದು ಸಾಮಾನ್ಯವಾಗಿದೆ.

ತುಂಬಿಕೊಂಡ ಅಗಲಗುರ್ಕಿ ಸೇತುವೆ

ಇನ್ನು ನಗರ ಹೊರವಲಯದ ಅಗಲಗುರ್ಕಿ ಗ್ರಾಮಕ್ಕೆ ಸಂಪರ್ಕ Üಲ್ಪಿಸುವ ರೈಲ್ವೇ ಕೆಳ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ಈ ಮಾರ್ಗದಲ್ಲಿ ಯಾವುದೇ ವಾಹನವಾಗಲೀ, ಪಾದಚಾರಿಗಳಾಗಲೀ ಹೆಜ್ಜೆ ಇಢಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ಈ ಸೇತುವೆ ನಿರ್ಮಿಸಲಾಗಿದ್ದು, ಅವೈಜ್ಞಾನಿಕವಾಗಿ ಸೇತುವೆ ನಿರ್ಮಿಸಿದ ಪರಿಣಾಮ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸೇತುವೆ ಕೆಳಗೆ 10 ಅಡಿ ನೀರು

ಈ ರೈಲ್ವೇ ಕೆಳ ಸೇತುವೆಯಲ್ಲಿ ಸುಮಾರು 10 ಅಡಿಗೂ ಹೆಚ್ಚು ನೀರು ನಿಂತಿರುವ ಪರಿಣಾಮ ಯಾವುದೇ ವಾಹನ ಇಳಿಯಲು ಸಾಧ್ಯವಾಗದ ಸ್ಥಿತಿ ಇದೆ. ಇನ್ನು ಇದೇ ರೀತಿಯಲ್ಲಿ ಮಂಚನಬಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆಳಸೇತುವೆಯಲ್ಲಿಯೂ ನೀರು ತುಂಬಿಕೊಂಡಿದ್ದು, ಜನರು ಸಂಚರಿಸಲು ತೀವ್ರ ಸಂಕಷ್ಟಎದುರಾಗಿದೆ.

ತೂಕ ಹೆಚ್ಚಿಸಿಕೊಂಡ ದಸರಾ ಆನೆಗಳು!

ಈ ಮಾರ್ಗದಲ್ಲಿ ಮಂಚನಬಲೆ ಸೇರಿದಂತೆ ದಿಬ್ಬೂರು, ಗಂಗರೇಕಾಲುವೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಪ್ರತಿನಿತ್ಯ ನಾನಾ ಕೆಲಸಗಳಿಗಾಗಿ ಈ ಮಾರ್ಗದಲ್ಲಿ ನೂರಾರು ಜನ ಸಂಚರಿಸುತ್ತಾರೆ. ಆದರೆ ನೀರು ತುಂಬಿಕೊಂಡಿರುವ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗದೆ ಪರ್ಯಾಯ ಮಾರ್ಗದಲ್ಲಿ 10ಕ್ಕೂ ಹೆಚ್ಚು ಕಿಲೋಮೀಟರ್‌ ಸುತ್ತಿ ನಗರಕ್ಕೆ ಬರುವ ಸ್ಥಿತಿ ನಿರ್ಮಾಣವಾಗಿದೆ.

ಕೊಚ್ಚಿಹೋದ ಚೆಕ್‌ ಡ್ಯಾಂಗಳು!

ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದ ಬಳಿ ನಿರ್ಮಾಣಗೊಂಡಿದ್ದ ಎರಡು ಚೆಕ್‌ ಡ್ಯಾಂಗಳು ಕೊಚ್ಚಿಹೋಗಿವೆ. ಈ ಚೆಕ್‌ ಡ್ಯಾಂಗಳು ನಿರ್ಮಾಣವಾಗಿದ್ದ ಸ್ಥಳದಿಂದ ಮೇಲೆ ಮೀಸಲು ಅರಣ್ಯ ಪ್ರದೇಶವಿದ್ದು, ಈ ಅರಣ್ಯದಲ್ಲಿರುವ ವನ್ಯಜೀವಿಗಳು ಮತ್ತು ಗ್ರಾಮದ ಜಾನುವಾರುಗಳಿಗೆ ಕುಡಿಯಲು ಸಮೃದ್ಧ ನೀರೊದಗಿಸುತ್ತಿದ್ದ ಚೆಕ್‌ ಡ್ಯಾಂಗಳು ಕೊಚ್ಚಿಹೋದ ಪರಿಣಾಮ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

'ಉಡುಪಿಗೆ ಕೋಟ ಉಸ್ತುವಾರಿಯಾಗಿದ್ದರೆ ಚೆನ್ನಾಗಿತ್ತು'..!