ಜಾತಿ ಆಧಾರಿತ ಸಮಾವೇಶಗಳು ನಿಂತಲ್ಲಿ ಮಾತ್ರ ಜಾತ್ಯಾತೀತ ರಾಷ್ಟ್ರ ನಿರ್ಮಾಣ ಸಾಧ್ಯ

  • ಜಾತಿ ಆಧಾರಿತ ಸಮಾವೇಶಗಳು ನಿಂತಲ್ಲಿ ಜಾತ್ಯಾತೀತ ರಾಷ್ಟ್ರ ನಿರ್ಮಾಣ
  • ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ ಪ್ರತಿಪಾದನೆ
     
Belur Pushpagiri mutt swamini told IF Castewise conferences stopped in nation after that Secular nation will created akb

ಬೇಲೂರು(ಏ.10): ರಾಜಕೀಯ ಪಕ್ಷಗಳು ಜಾತಿ ಆಧಾರದ ಮೇಲೆ ಟಿಕೆಟ್‌ ಕೊಡುವುದನ್ನು ನಿಲ್ಲಿಸುವುದರ ಜೊತೆಗೆ ಜಾತಿ ಆಧಾರಿತ ಸಮಾವೇಶ ನಡೆಸುವುದನ್ನು ಕೈಬಿಟ್ಟಾಗ ಮಾತ್ರ ಜಾತ್ಯಾತೀತ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಬನದಹಳ್ಳಿಯಲ್ಲಿ ಶ್ರೀಲಕ್ಷ್ಮೇದೇವಿ ದೇಗುಲ ರಥೋತ್ಸವ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಜಾತಿ ಜಾತಿಗಳ ನಡುವೆ ವೈಮನಸ್ಸು ಬಿಡಬೇಕು ಎಂದು ಭಾಷಣ ಮಾಡುವುದು ಈ ದೇಶದಲ್ಲಿ ಮಾಮೂಲಾಗಿದೆ. ರಾಜಕೀಯ ಪಕ್ಷಗಳ ವರಿಷ್ಠರು ಜಾತಿ ಆಧಾರದ ಮೇಲೆ ಟಿಕೆಟ್‌ ನೀಡುವುದನ್ನು ನಿಲ್ಲಿಸಬೇಕು. ಜಾತಿ ಹೆಸರಿನಲ್ಲಿ ಸಭೆ ಸಮಾರಂಭ ಮಾಡುವುದನ್ನು ಕೈಬಿಡಬೇಕು. ಒಂದು ಜಾತಿಗೆ ಮಾತ್ರ ಜನಪ್ರತಿನಿ​ಧಿಯಾಗದೆ ಎಲ್ಲ ಜನರಿಗೂ ತಾನು ನಾಯಕ ಎಂಬ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಜಾತಿ ವೈಷಮ್ಯ ನಾಶವಾಗಿ ಶಾಂತಿ ವಾತಾವರಣ ನಿರ್ಮಾಣವಾಗುತ್ತದೆ ಎಂದರು.

Hassan: ಅಂಗಡಿ ಖಾಲಿ ಮಾಡುವಂತೆ ಬೇಲೂರು ಚನ್ನಕೇಶವ ದೇಗುಲದಿಂದ ಮುಸ್ಲಿಂ ವ್ಯಾಪಾರಿಗೆ ನೊಟೀಸ್

ನಮ್ಮ ದೇಶದಲ್ಲಿ ನಡೆಯುವ ಚುನಾವಣಾ ಸ್ವರೂಪವನ್ನು ಸಂಪೂರ್ಣ ಬದಲಾಯಿಸಬೇಕು. ಹೊರದೇಶದಲ್ಲಿ ನಡೆಯುವಂತೆ ಅಧ್ಯಕ್ಷ ಮಾದರಿಯ ಚುನಾವಣೆ ನಡೆಸಬೇಕು. ರಸ್ತೆಗೆ ಬಂದು ಬೊಬ್ಬೆ ಹೊಡೆದು ಇಲ್ಲಸಲ್ಲದ ಆಮಿಷ ಭಾಷಣ ಮಾಡಿ ಮತ ಕೇಳುವುದನ್ನು ಬಿಡಬೇಕು. ಚುನಾವಣೆ ಒಂದೆರಡು ದಿನ ಬಾಕಿಯಿರುವಂತೆ ಮಾಧ್ಯಮಗಳಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಬೇಕು. ಇದರಿಂದ ಚುನಾವಣೆ ದುಂದುವೆಚ್ಚ ಕಡಿಮೆಯಾಗುವುದರ ಜತೆಗೆ ರಾಜಕೀಯ ವ್ಯವಸ್ಥೆ ಅಡ್ಡದಾರಿ ಹಿಡಿಯುವುದನ್ನು ತಪ್ಪಿಸದಂತಾಗುತ್ತದೆ ಎಂದು ಹೇಳಿದರು.

ಶಾಸಕ ಕೆ ಎಸ್‌ ಲಿಂಗೇಶ್‌ (Lingesh) ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಜಾತಿ ಸಂಕೋಲೆಯಿಂದ ಹೊರಬಂದು ಅನುಭವ ಮಂಟಪವನ್ನು ಕಟ್ಟಿಸಮಾಜದಲ್ಲಿ ಶೋಷಣೆಗೊಳಗಾದ ಲಿಂಗಧಾರಣೆ ಮಾಡಿ ವೀರಶೈವ ಧರ್ಮ ಸ್ಥಾಪನೆಗೆ ಮುಂದಾದರು. ಅಂದಿನಿಂದ ಬಸವತತ್ವ ಒಪ್ಪಿ ಪಾಲನೆ ಮಾಡುತ್ತ ಬಂದಿದ್ದರೂ ಈಗಲೂ ಒಳಪಂಗಡಗಳ ಕಿತ್ತಾಟದಿಂದ ಮತ್ತೆ ಬೀದಿಗೆ ಬೀಳುವ ಸನ್ನಿವೇಶ ನಿರ್ಮಾಣವಾಗಿದೆ. ನಮ್ಮವರು ವಿಭೂತಿ ಧರಿಸುತ್ತಿಲ್ಲ, ಲಿಂಗಪೂಜೆ ಕೈಬಿಟ್ಟಿದ್ದಾರೆ. ಸಕಲ ಜೀವಿಗಳ ಲೇಸನ್ನು ಬಯಸುವುದು ವೀರಶೈವ ಧರ್ಮವಾಗಿದ್ದು , ನಮ್ಮ ಸಂಪ್ರದಾಯವನ್ನು ನಾವು ಕೈಬಿಡಬಾರದು ಎಂದು ತಿಳಿಸಿದರು.

UNESCO World Heritage List: ವಿಶ್ವ ಪರಂಪರೆ ಪಟ್ಟಿಯಲ್ಲಿ ಕರ್ನಾಟಕದ ಬೇಲೂರು, ಹಳೇಬೀಡು, ಸೋಮನಾಥಪುರ

ಕಾರ್ಯಕ್ರಮದಲ್ಲಿ ಶಿವಗಂಗಾ ಗ್ರಾನೈಟ್‌ ಮಾಲೀಕ ರಾಜಶೇಖರ (Rajashekhara), ಎಂ.ಎಸ್‌.ನಾಗೇಂದ್ರ ಪ್ರತಿಷ್ಠಾನ ಅಧ್ಯಕ್ಷ ಸಿದ್ದೇಶನಾಗೇಂದ್ರ (Siddeshanagendra), ಬಿಜೆಪಿ ಮುಖಂಡರಾದ ಕೊರಟಿಕೆರೆ ಪ್ರಕಾಶ್‌ (Koratikere Prakash), ಸಂತೋಷ ಕೆಂಚಾಂಬ (Santhosh Kenchamba), ಸುರಭಿ ರಘು (Surabhi Raghu), ವಕೀಲರಾದ ಬಿ.ಎಸ್‌.ರಾಜಶೇಖರ (Rajasekhara) , ಎಂಜಿನಿಯರ್‌ ಮಲ್ಲೇಶಣ್ಣ (Malleshanna) ,ವೀರಶೈವ ತಾಲೂಕು ಅಧ್ಯಕ್ಷ ರವಿಕುಮಾರ್‌, ಪ್ರಧಾನ ಕಾರ್ಯದರ್ಶಿ ಕನಾಯ್ಕನಹಳ್ಳಿ ಮಹಾದೇವ್‌, ಭದ್ರಕಾಳಿ ಬನದ ಅಧ್ಯಕ್ಷ ಸಿದ್ದುರಾಜು, ಕೃಷಿ ಇಲಾಖೆ ಪ್ರಕಾಶ್‌ (Prakash), ಎಂಜಿನಿಯರ್‌ ಹರೀಶ್‌(Harish), ಹಳೇಬೀಡು ಕಾಂತರಾಜು (Kantaraju), ದಯಾನಂದ ಕರಗಡ (Dayananda Karagada), ವಿದ್ಯುತ್‌ ಗುತ್ತಿಗೆದಾರರ ಚಂದ್ರಯ್ಯ, ಶಕುಂತಲಾ (Shakuntala) ಇನ್ನೂ ಮುಂತಾದವರು ಹಾಜರಿದ್ದರು.

ಬೇಲೂರು ಚನ್ನಕೇಶವ ದೇಗುಲದ(Belur Chennakeshava Temple) ಮುಂಭಾಗದಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಗೆ(Muslim Trader) ನೋಟೀಸ್ ನೀಡಲಾಗಿದೆ. ವಾಣಿಜ್ಯ ಮಳಿಗೆಯನ್ನು ಶೀಘ್ರ ಖಾಲಿ ಮಾಡುಂತೆ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ನೊಟೀಸ್ ನೀಡಿದ್ದಾರೆ. ಬೇಲೂರು ಶ್ರೀಚನ್ನಕೇಶವ ದೇವಾಲಯದ ಆವರಣದಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ(Business) ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್(Viswa Hindu Parishad) ಕಾರ್ಯಕರ್ತರಿಂದ‌ ಮನವಿ ಹಿನ್ನೆಲೆ ಮುಸ್ಲಿಂ ವ್ಯಾಪಾರಿ ರೆಹಮಾನ್ ಷರೀಫ್ ಗೆ ನೊಟೀಸ್ ನೀಡಿದ್ದಾರೆ.

Latest Videos
Follow Us:
Download App:
  • android
  • ios