ಹಾಸನ[ಅ.18]: ರಾಜ್ಯ ರಾಜಕೀಯದಲ್ಲಿ ಬಾರೀ ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ರಾಜ್ಯ ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆಶಿ ಇಡಿ ಸುಳಿಯಲ್ಲಿ ಸಿಲುಕಿ ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಕಚ್ಚಾಟ. ಹೀಗಿರುವಾಗ ಹಾಸನಾಂಬೆ ದರ್ಶನದ ಬಳಿಕ ಗುರೂಜಿಯೊಬ್ಬರು ಅಚ್ಚರಿಯ ಭವಿಷ್ಯ ನುಡಿದಿದ್ದು, ನವೆಂಬರ್ ಮೋದಿಗೆ ಗಂಡಾಂತರ ಹಾಗೂ ಡಿಕೆಶಿ ಸಿಎಂ‌ ಆಗೋದು ನಿಶ್ಚಿತ ಎಂದಿದ್ದಾರೆ.

ಹೌದು ಹಾಸನಾಂಬೆ ದರ್ಶನದ ಬಳಿಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವ ಭವಿಷ್ಯ ನುಡಿದಿರುವ ಬ್ರಹ್ಮಾಂಡ ಗುರೂಜಿ, 'ನವೆಂಬರ್ 4 ರಿಂದ ಮೋದಿಗೆ ಗಂಡಾಂತರ ಇದೆ. ಈ ಅವಧಿಯಲ್ಲಿ ಅಪಮೃತ್ಯು ಗಂಡಾಂತರದಿಂದ ಪಾರಾದರೆ ಇನ್ನೂ ಎರಡು ಮುಕ್ಕಾಲು ವರ್ಷ ಪ್ರಧಾನಿಯಾಗಿರ್ತಾರೆ' ಎಂದಿದ್ದಾರೆ.

ಡಿಕೆಶಿ, ಕುಟುಂಬದ ಬ್ಯಾಂಕ್‌ ಖಾತೆಗಳಲ್ಲಿ 180 ಕೋಟಿ ರೂ: ಎಲ್ಲಿಂದ? ಹೇಗೆ ಬಂತು ಈ ಹಣ?

ಇದೇ ಸಂದರ್ಭದಲ್ಲಿ ರಾಜ್ಯ ರಾಜಕೀಯ ಭವಿಷ್ಯ ಏನಾಗಬಹುದೆಂಬ ಕುರಿತು ಮಾತನಾಡಿರುವ ಬ್ರಹ್ಮಾಂಡ ಗುರೂಜಿ, 'ರಾಜ್ಯದಲ್ಲಿ ಈ ಹಿಂದೆ ಇದ್ದವರು ಮತ್ತೆ ಯಾರೂ ಸಿಎಂ ಆಗಲ್ಲ. ಯಡಿಯೂರಪ್ಪ ಗೆ ಪೂರ್ಣ ಅವಕಾಶ ಇಲ್ಲವೇ ಇಲ್ಲ. ಮತ್ತೆ ಹೊಸ ಸರ್ಕಾರ ಬಂದರೆ ಹೊಸಬರೇ ಸಿಎಂ ಆಗ್ತಾರೆ. ಆದರೆ ಯಾವುದೇ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ' ಎಂದಿದ್ದಾರೆ.

ಇನ್ನು ಇಡಿ ಪ್ರಕರಣದಲ್ಲಿ ಸಿಲುಕಿರುವ ಡಿ ಕೆ ಶಿವಕುಮಾರ್ ರಾಜಕೀಯ ಭವಿಷ್ಯ ನುಡಿದಿದ್ದು 'ಮುಂದಿನ ಹತ್ತು ವರ್ಷದಲ್ಲಿ ಒಮ್ಮೆ ಡಿಕೆಶಿ ಸಿಎಂ‌ ಆಗೋದು ನಿಶ್ಚಿತ. ಕೋಟಿ ಕೋಟಿ ಹಣ ಮಾಡಿದವರು ಕೃಷ್ಣ ಜನ್ಮಸ್ಥಳಕ್ಕೆ ಸೇರಲೇ‌ಬೇಕು. ಮುಂದಿನ ಹತ್ತು ವರ್ಷದಲ್ಲಿ ಒಮ್ಮೆ ಡಿಕೆಶಿ ಸಿಎಂ‌ ಆಗೋದು ನಿಶ್ಚಿತ. ಹತ್ತು ವರ್ಷಗಳ ನಡುವೆ ಒಮ್ಮೆ‌ ಐದು ವರ್ಷ ಸಿಎಂ ಆಗುತ್ತಾರೆ' ಎಂದಿದ್ದಾರೆ. ಅಲ್ಲದೇ 'ಮುಂದೆ ಇನ್ನೂ ಪ್ರಕೃತಿ  ವಿಕೋಪಗಳು ಆಗಲಿವೆ. ಜನರು ಎಚ್ಚರಿಕೆಯಿಂದ ಇರಲಿ' ಎಂದಿದ್ದಾರೆ.

ಕೊನೆಗೂ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಅಂತ್ಯ: ಆದ್ರೆ ಇವತ್ತೂ ರಿಲೀಫ್ ಸಿಗ್ಲಿಲ್ಲ