ಕೊನೆಗೂ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಅಂತ್ಯ: ಆದ್ರೆ ಇವತ್ತೂ ರಿಲೀಫ್ ಸಿಗ್ಲಿಲ್ಲ
ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಅಂತ್ಯವಾಗಿದೆ. ಆದ್ರೆ ದೆಹಲಿ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ನವದೆಹಲಿ, [ಅ.17]: ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಅಂತ್ಯವಾಗಿದೆ. ಆದ್ರೆ ದೆಹಲಿ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಈಗಾಗಲೇ ಡಿಕೆಶಿ ಪರ ವಕೀಲರ ವಾದ ಮುಗಿದಿದ್ದು, ಇಂದು [ಗುರುವಾರ] ಇ.ಡಿ. ಪರ ವಕೀಲರ ವಾದ ಮಂಡನೆಗೆ ಮಧ್ಯಾಹ್ನ 3.30ಕ್ಕೆ ಸಮಯ ನಿಗದಿ ಮಾಡಲಾಗಿತ್ತು. ನಿಗದಿಯಂತೆ ಇಡಿ ಪರ ವಕೀಲ ನಟರಾಜನ್ ಸುದೀರ್ಘವಾಗಿ ವಾದ ಮಂಡಿಸಿದರು.
ED ಕಂಟಕದಿಂದ ಡಿಕೆಶಿ ತಾಯಿ, ಪತ್ನಿಗೆ ರಿಲೀಫ್: ಅದು ತಾತ್ಕಾಲಿಕ ಮಾತ್ರ
ಸುಮಾರು 3 ಗಂಟೆಗೂ ಹೆಚ್ಚೂ ಕಾಲ ನಡೆದ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಅವರು ಅರ್ಜಿ ವಿಚಾರಣೆಯ ತೀರ್ಪನ್ನು ಕಾಯ್ದಿರಿಸಿ ಆದೇಶ ಹೊರಡಿಸಿದರು. ಶನಿವಾರ ಜಾಮೀನು ತೀರ್ಪು ಪ್ರಕಟಿಸುವ ಎಲ್ಲಾ ಸಾಧ್ಯತೆಗಳಿವೆ. ಆದ್ರೆ ಶನಿವಾರ ತೀರ್ಪು ಪ್ರಕಟಿಸುವ ಬಗ್ಗೆ ಕೋರ್ಟ್ ಖಚಿತಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಜಾಮೀನು ನಿರೀಕ್ಷೆಯಲ್ಲಿದ್ದ ಡಿಕೆಶಿ ಹಾಗೂ ಅವರ ಬೆಂಬಲಿಗರಿಗೆ ಇಂದೂ ಸಹ ನಿರಾಸೆಯಾಗಿದೆ.
ಡಿಕೆಶಿ ಮತ್ತೆ ನ್ಯಾಯಾಂಗ ಬಂಧನಕ್ಕೆ: ಜೈಲಿನಿಂದ ಆಚೆ ಬರಲು ಒಂದೇ ಹಾದಿ
ಇಡಿ ಪರ ವಕೀಲ ನಟರಾಜನ್ ವಾದ
ಕೋರ್ಟ್ ಗೆ ತಡವಾಗಿ ಆಗಮಿಸಿದ ಇಡಿ ಪರ ವಕೀಲ ನಟರಾಜ್ ಅವರು ನ್ಯಾಯಾಲಯ ಮತ್ತು ಪ್ರತಿವಾದಿಯ ಕ್ಷಮೆ ಕೇಳಿ, ವಾದ ಮಂಡನೆ ಆರಂಭಿಸಿದರು. ಐಟಿ ನೀಡಿದ ಆಧಾರದ ಮೇಲೆ ED ವಿಚಾರಣೆ ಮಾಡುತ್ತಿದೆ. ಇನ್ನು ಡಿಕೆಶಿಗೆ ಸೇರಿದ 8.59 ಕೋಟಿ ರೂ. ಸಿಕ್ಕಿದೆ. ದೆಹಲಿಯ 3 ಜಾಗದಲ್ಲಿ 8.59 ಕೋ. ಸಿಕ್ಕಿದೆ. ಈ ಹಣದ ಬಗ್ಗೆ ಡಿಕೆಶಿ ಬಳಿ ಮಾಹಿತಿ ಇಲ್ಲ. ಐಟಿ ದೂರಿನ ಮೇಲೆ ಇಡಿ ತನಿಖೆ ಮಾಡುತ್ತಿದೆ ಎಂದರು.
ಹಾಗೆಯೇ ಹಣ ಸಿಕ್ಕ ಬಗ್ಗೆ ತನಿಖಾಧಿಕಾರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಡಿಕೆಶಿ ಈ ಬಗ್ಗೆ ಸಮರ್ಪಕ ಉತ್ತರ ನೀಡಿಲ್ಲ. ಈ ಹಣ ಫ್ಲಾಟ್ ಮಾಲೀಕ ಶರ್ಮಾರದ್ದಾ? ಡಿಕೆಶಿ ಅವರಿಗೆ ಸೇರಿದ್ದಾ? ಎಂಬುದು ತಿಳಿಯಬೇಕಿದೆ.
ಸಾವರ್ಕರ್ ಭಾರತ ರತ್ನಕ್ಕೆ ಜಿದ್ದಾಜಿದ್ದಿ: ಓದಿ ಇಂದಿನ ಟಾಪ್ 10 ಸುದ್ದಿ!
ಇದು ತೆರಿಗೆ ವಂಚನೆ ಪ್ರಕರಣ ಮಾತ್ರವಲ್ಲ. ಸಚಿವರಾಗಿದ್ದರಿಂದ ಬೇರೇನೋ ನಡೆದಿರಬೇಕು. 1989ರಿಂದಲೇ ಶಾಸಕರಾಗಿರುವ ಡಿಕೆಶಿ ಏನಾದರೂ ವ್ಯವಹಾರ ಮಾಡಿರಬೇಕು ಎಂದು .ನಟರಾಜ್ ವಾದ ಮಂಡಿಸಿದರು.