ಜಗತ್ತಿನ ಅತೀ ಎತ್ತರದ ಶ್ವಾನ ಕ್ಯಾನ್ಸರ್‌ಗೆ ಬಲಿ: ಇಲ್ಲಿವೆ ಜೀಯಸ್ ಸುಂದರ ಫೋಟೋಗಳು
ಜಗತ್ತಿ ಅತೀ ಎತ್ತರದ ಶ್ವಾನ ಎಂದು ಖ್ಯಾತಿ ಗಳಿಸಿದ ಶ್ವಾನ ಜೀಯಸ್ ಕ್ಯಾನ್ಸರ್‌ಗೆ ಬಲಿಯಾಗಿದೆ. ಅತೀ ಎತ್ತರದ ಕಾರಣಕ್ಕೆ ಈ ಶ್ವಾನ ಜೀಯಸ್ ಗಿನ್ನೆಸ್ ವಿಶ್ವ ದಾಖಲೆ ಪುಟ್ಟ ಸೇರಿತ್ತು.
Dog, Zeus
ಜಗತ್ತಿ ಅತೀ ಎತ್ತರದ ಶ್ವಾನ ಎಂದು ಖ್ಯಾತಿ ಗಳಿಸಿದ ಶ್ವಾನ ಜೀಯಸ್ ಕ್ಯಾನ್ಸರ್‌ಗೆ ಬಲಿಯಾಗಿದೆ. ಅತೀ ಎತ್ತರದ ಕಾರಣಕ್ಕೆ ಈ ಶ್ವಾನ ಜೀಯಸ್ ಗಿನ್ನೆಸ್ ವಿಶ್ವ ದಾಖಲೆ ಪುಟ್ಟ ಸೇರಿತ್ತು.
Dog, Zeus
2022ರಲ್ಲಿ ಈ ಶ್ವಾನ ಜೀಯಸ್‌ನನ್ನು ಅಳತೆ ಮಾಡಿದಾಗ ಅದು 1.46 ಮೀಟರ್ ಎಂದರೆ 3 ಅಡಿ 5.18 ಇಂಚು ಉದ್ದ ಇತ್ತು. ಆದರೆ ನಂತರದಲ್ಲಿ ಈ ಶ್ವಾನಕ್ಕೆ ಮಾರಕ ಕ್ಸಾನ್ಸರ್ ಇರುವುದು ಗೊತ್ತಾಗಿದ್ದು, ಕ್ಯಾನ್ಸರ್‌ನಿಂದ ಶ್ವಾನವನ್ನು ಪಾರು ಮಾಡಲು ಅದರ ಮುಂಭಾಗದ ಬಲಗಾಲನ್ನು ಕತ್ತರಿಸಬೇಕಾಗಿ ಬಂತು.
Dog, Zeus
ಆದರೆ ಶಸ್ತ್ರಚಿಕಿತ್ಸೆಯ ನಂತರ ಶ್ವಾನಕ್ಕೆ ಎದುರಾದ ನ್ಯುಮೋನಿಯಾ ಕಾಯಿಲೆಯ ಪರಿಣಾಮ ಮೂರು ವರ್ಷ ಪ್ರಾಯದ ಈ ಶ್ವಾನ ಜೀಯಸ್ ನಿನ್ನೆ ಸಾವನ್ನಪ್ಪಿದೆ ಎಂದು ಅದರ ಮಾಲೀಕರು ತಿಳಿಸಿದ್ದಾರೆ.
Dog, Zeus
ಜೀಯಸ್ ತನ್ನ ತಾಯಿಯ ಮಡಿಲಲ್ಲೇ ಮಲಗಿ ಪ್ರಾಣ ಬಿಟ್ಟಿತು ಎಂದು ಜೀಯಸ್ ಮಾಲೀಕ ಡೊನ್ನಿ ಡೇವಿಸ್ ಹೇಳಿದ್ದಾರೆ. ಪಶು ವೈದ್ಯರು ಈ ಶ್ವಾನದ ರಕ್ಷಣೆಗೆ ಇನ್ನಿಲ್ಲದ ಪ್ರಯತ್ನ ಮಾಡಿದರು ಉಳಿಸಿಕೊಳ್ಳಲಾಗಲಿಲ್ಲ ಎಂದು ಅವರು ಹೇಳಿದ್ದಾರೆ.
Dog, Zeus
ಬರೀ 3 ವರ್ಷ ಜೀವಿಸಿ ಪ್ರಾಣಬಿಟ್ಟ ಈ ಶ್ವಾನ ಜೀಯಸ್ ಅಮೆರಿಕಾದ ಟೆಕ್ಸಾಸ್‌ನ ಬೆಡ್‌ಪೋರ್ಡ್‌ನಲ್ಲಿ ನೆಲೆಸಿತ್ತು. ಮೂರು ವರ್ಷಕ್ಕೆಲ್ಲಾ 3 ಅಡಿ ಎತ್ತರ ಬೆಳೆದ ಇದು ತನ್ನ ಅತ್ಯಲ್ಪ ಜೀವಿತಾವಧಿಯಲ್ಲಿ ಗಿನ್ನೆಸ್ ಪುಟವನ್ನು ಸೇರಿತ್ತು.
Dog, Zeus
ಜೀಯಸ್ ನಿಧನಕ್ಕೆ ಅದರ ಮಾಲೀಕರು ಶೋಕ ವ್ಯಕ್ತಪಡಿಸಿದ್ದಾರೆ. ಬದುಕಿರುವ ಅತ್ಯಂತ ಎತ್ತರದ ಗಂಡು ಶ್ವಾನ ಎಂಬ ಹೆಗ್ಗಳಿಕೆ ಗಳಿಸಿದ ಜೀಯಸ್ ನಮ್ಮನ್ನಗಲಿದೆ ಎಂದು ತಿಳಿಸುವುದಕ್ಕೆ ಬೇಸರವಾಗುತ್ತಿದೆ. ಕ್ಯಾನ್ಸರ್ ನಂತರ ಕಾಣಿಸಿಕೊಂಡು ನ್ಯುಮೋನಿಯಾದಿಂದ ಜೀಯಸ್ ಪ್ರಾಣ ಬಿಟ್ಟಿದೆ. ಸಾಯುವಾಗ ಅದಕ್ಕೆ ಮೂರುವರೆ ವರ್ಷವಷ್ಟೇ ವಯಸ್ಸಾಗಿತ್ತು ಎಂದು ಶ್ವಾನದ ಮಾಲೀಕರು ಹೇಳಿದ್ದಾರೆ.
Dog, Zeus
ಕೇವಲ 3 ವರ್ಷವಷ್ಟೇ ಬದುಕಿದ್ದರೂ ಜೀಯಸ್ ತುಂಬಾ ಚಟುವಟಿಕೆಯಿಂದ ಇತ್ತು. ಅದನ್ನು ನೋಡುವುದಕ್ಕಾಗಿಯೇ ಜೀಯಸ್ ವಾಸವಿದ್ದ ಮನೆಗೆ ನೆರೆಹೊರೆಯ ಜನ ಸಂಬಂಧಿಗಳು ಬರುತ್ತಿದ್ದರು. ಸೌಮ್ಯ ಸ್ವಭಾವದ ಶ್ವಾನ ಎಲ್ಲರೊಂದಿಗೆ ಬೆರೆಯುತ್ತಿತ್ತು ಎಂದು ಕುಟುಂಬ ಹೇಳಿದೆ.
Dog, Zeus
ಜೀಯಸ್‌ನ್ನೊಂದಿಗೆ ಕಳೆದ ಕ್ಷಣಗಳಿಗಾಗಿ ನಾವು ಕೃತಜ್ಞರಾಗಿದ್ದೇವೆ. ಆತ ನಮಗೆ ತುಂಬಾ ಸಂತೋಷವನ್ನು ತಂದು ಕೊಟ್ಟ, ಆತನ ನಿಧನಕ್ಕೆ ಸಂತಾಪ ಸೂಚಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದು ಶ್ವಾನದ ಮಾಲೀಕರು ಹೇಳಿದ್ದಾರೆ. ಹುಟ್ಟಿ 8 ವಾರಗಳಾಗಿದ್ದ ನಂತರ ಜೀಯಸ್‌ನ್ನು ಈ ಕುಟುಂಬ ದತ್ತು ಪಡೆದಿತ್ತು. ವೇಗವಾಗಿ ಬೆಳೆಯುತ್ತಿದ್ದ ಜೀಯಸ್ ಈ ಕುಟುಂಬದ ಓರ್ವ ಸದಸ್ಯನಂತಿತ್ತು.