74ರ ಹರೆಯದಲ್ಲಿಯೂ ಮೊಟ್ಟೆ ಇಟ್ಟ ಜಗತ್ತಿನ ಅತೀ ಹಿರಿಯ ಕಡಲಕೋಳಿ
ಜಗತ್ತಿನ ಅತೀ ಹಿರಿಯ ಹಕ್ಕಿ ಎಂದು ಖ್ಯಾತಿ ಗಳಿಸಿದ 74 ವರ್ಷದ ವಿಶ್ಡಮ್ ಎಂಬ ಹಕ್ಕಿಯೊಂದು ನಾಲ್ಕು ವರ್ಷಗಳ ನಂತರ ಮೊಟ್ಟೆಗಳನ್ನಿಟ್ಟು ಇತಿಹಾಸ ನಿರ್ಮಿಸಿದೆ. ಅಮೆರಿಕಾದ ಮೀನು ಹಾಗೂ ವನ್ಯಜೀವಿ ಸೇವೆ (USFWS) ಈ ಹಕ್ಕಿ ಹಾಗೂ ಅದು ಇಟ್ಟ ಮೊಟ್ಟೆಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಜಗತ್ತಿನ ಅತೀ ಹಿರಿಯ ಹಕ್ಕಿ ಎಂದು ಖ್ಯಾತಿ ಗಳಿಸಿದ 74 ವರ್ಷದ ವಿಶ್ಡಮ್ ಎಂಬ ಹಕ್ಕಿಯೊಂದು ನಾಲ್ಕು ವರ್ಷಗಳ ನಂತರ ಮೊಟ್ಟೆಗಳನ್ನಿಟ್ಟು ಇತಿಹಾಸ ನಿರ್ಮಿಸಿದೆ. ಅಮೆರಿಕಾದ ಮೀನು ಹಾಗೂ ವನ್ಯಜೀವಿ ಸೇವೆ (USFWS) ಈ ಹಕ್ಕಿ ಹಾಗೂ ಅದು ಇಟ್ಟ ಮೊಟ್ಟೆಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಲೇಸನ್ ಕಡಲುಕೋಳಿ (Laysan albatross)ಪ್ರಬೇಧದ ವಿಶ್ಡಮ್ ಹೆಸರಿನ ಈ ಹಕ್ಕಿ ಮಿಡ್ವೇ ಅಟಾಲ್ ರಾಷ್ಟ್ರೀಯ ವನ್ಯಜೀವಿ ಆಶ್ರಯ (Midway Atoll National Wildlife Refuge)ದಲ್ಲಿ ಮೊಟ್ಟೆಗಳನ್ನು ಇಟ್ಟಿದೆ. ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿ ಇದು ಮೊಟ್ಟೆ ಇಟ್ಟಿದ್ದು, ಇದು ಅದರ 60ನೇ ಬಾರಿಯ ಮೊಟ್ಟೆ ಇಡುವಿಕೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ, ಯುನೈಟೆಡ್ ಸ್ಟೇಟ್ಸ್ ಫಿಶ್ ಮತ್ತು ವೈಲ್ಡ್‌ಲೈಫ್ ಸರ್ವಿಸ್ (USFWS) ಈ ಅತೀ ಹಿರಿಯ ಹಕ್ಕಿ ಎನಿಸಿಕೊಂಡಿರುವ ವಿಶ್ಡಮ್‌ನ ಫೋಟೋಗಳನ್ನು ಹಂಚಿಕೊಂಡಿದ್ದು, ವಿಶ್ವದ ಅತ್ಯಂತ ಹಳೆಯ ಕಾಡು ಪಕ್ಷಿ (wild bird) ಬುದ್ಧಿವಂತಿಕೆಯು ಹೊಸ ಸಂಗಾತಿಯೊಂದಿಗೆ ಮರಳಿದೆ ಮತ್ತು ಮತ್ತೊಂದು ಮೊಟ್ಟೆಯನ್ನು ಹಾಕಿದೆ ಎಂದು ಬರೆದುಕೊಂಡಿದ್ದಾರೆ.
2006 ರಿಂದ ತನ್ನ ಸಂಗಾತಿ ಅಕೆಕಮೈಯೊಂದಿಗೆ (Akeakamai) ಈ ಮಿಡ್ವೇ ಅಟಾಲ್ ರಾಷ್ಟ್ರೀಯ ವನ್ಯಜೀವಿ ಆಶ್ರಯ ಬಳಿಗೆ ಆಗಾಗ ಬರುತ್ತಿದ್ದ ವಿಸ್ಡಮ್, ಈ ಋತುವಿನಲ್ಲಿ ಸಂಪೂರ್ಣಾಗಿ ಹಿಂದಿರುಗುವ ಮೂಲಕ ವನ್ಯಜೀವಿ ಅಧಿಕಾರಿಗಳನ್ನು ಬೆರಗುಗೊಳಿಸಿದ್ದಾಳೆ. ಈ ವಿಶ್ಡಮ್‌ನ ಸಂಗಾತಿ ಅಕೆಕಮೈ ಹಲವಾರು ವರ್ಷಗಳಿಂದ ಕಾಣಿಸದೇ ಇದ್ದ ಸಂದರ್ಭದಲ್ಲಿ, ವಿಸ್ಡಮ್ ಮೊಟ್ಟೆಯನ್ನು ಇಡುವ ಮೊದಲು ಮತ್ತೊಂದು ಸಂಗಾತಿ ಪಕ್ಷಿಯೊಂದಿಗೆ ಸಾಂಗತ್ಯವನ್ನು ಹೊಂದಿತ್ತು.
ಲೇಸನ್ ಕಡಲುಕೋಳಿಗಳು ಸಾಮಾನ್ಯವಾಗಿ ಜೀವಿತಾವಧಿಯಲ್ಲಿ ಏಕೈಕ ಸಂಗಾತಿಯನ್ನು ಹೊಂದಿರುತ್ತವೆ ಹಾಗೂ ವರ್ಷಕ್ಕೆ ಒಂದು ಮೊಟ್ಟೆಯನ್ನು ಮಾತ್ರ ಉತ್ಪಾದಿಸುತ್ತವೆ. ಈ ಮೊಟ್ಟೆ ಒಡೆದು ಮರಿ ಹೊರಬರುತ್ತದೆ ಎಂದು ನಾವು ಆಶಾವಾದಿಗಳಾಗಿದ್ದೇವೆ ಎಂದು ಮಿಡ್ವೇ ಅಟಾಲ್ ರಾಷ್ಟ್ರೀಯ ವನ್ಯಜೀವಿ ಆಶ್ರಯದಲ್ಲಿರುವ ಮೇಲ್ವಿಚಾರಣಾ ವನ್ಯಜೀವಿ ಜೀವಶಾಸ್ತ್ರಜ್ಞ ಜೋನಾಥನ್ ಪ್ಲಿಸ್ನರ್ ಹೇಳಿದ್ದಾರೆ. ಲಕ್ಷಾಂತರ ಕಡಲ ಹಕ್ಕಿಗಳು ವಾರ್ಷಿಕವಾಗಿ ಮಿಡ್‌ವೇ ಅಟಾಲ್‌ಗೆ ಗೂಡುಕಟ್ಟಲು ಮತ್ತು ತಮ್ಮ ಮರಿಗಳನ್ನು ಬೆಳೆಸಲು ಬರುತ್ತವೆ ಎಂದು ಅವರು ಹೇಳಿದರು.
ಈ ಲೇಸನ್ ಕಡಲುಕೋಳಿಗಳಲ್ಲಿ ಪೋಷಕರು ಮೊಟ್ಟೆ ಮರಿಯಾಗುವುದಕ್ಕೆ ಕಾವು ಕೊಡುವ ಕೆಲಸವನ್ನು ಹಂಚಿಕೊಂಡು ಮಾಡುತ್ತವೆ. ಮರಿಗಳು ಹೊರಬರುವವರೆಗೆ ಸರಿಸುಮಾರು ಎರಡು ತಿಂಗಳ ಕಾಲ ಒಬ್ಬರಾದ ಮೇಲೊಬ್ಬರು ಕಾವು ಕೂರುತ್ತಾರೆ. ಒಮ್ಮೆ ಮರಿ ಜನಿಸಿದ ನಂತರ, ಮರಿಗಳು ಸಾಮಾನ್ಯವಾಗಿ ಐದರಿಂದ ಆರು ತಿಂಗಳ ನಂತರ ಹಾರಲು ಸಿದ್ಧವಾಗುವವರೆಗೆ ಪೋಷಕರ ಆರೈಕೆಯಲ್ಲಿ ಇರುತ್ತವೆ. ಈ ಕಡಲ ಹಕ್ಕಿಗಳು ತಮ್ಮ ಜೀವನದ ಬಹುಪಾಲು ಸಮುದ್ರದ ಮೇಲೆ ಹಾರಾಡುತ್ತಲೇ ಜೀವನ ಕಳೆಯುತ್ತವೆ. ಸ್ಕ್ವಿಡ್ ಮತ್ತು ಮೀನಿನ ಮೊಟ್ಟೆಗಳನ್ನು ಆಹಾರವಾಗಿ ಸೇವಿಸುತ್ತವೆ. 1956 ರಲ್ಲಿ ಮೊದಲ ಬಾರಿಗೆ ಮರಿ ಮಾಡಿದ ವಿಸ್ಡಮ್ ತನ್ನ ಜೀವಿತಾವಧಿಯಲ್ಲಿ ಸುಮಾರು 30 ಮರಿಗಳನ್ನು ಬೆಳೆಸಿದೆ. ಲೇಸನ್ ಕಡಲುಕೋಳಿಗಳ ಸರಾಸರಿ ಜೀವಿತಾವಧಿ 68 ವರ್ಷಗಳು, ಅದರ ಸಾಯುವವರೆಗಿನ ನಿರಂತರ ಸಂತಾನೋತ್ಪತ್ತಿ ಜೀವಶಾಸ್ತ್ರದ ಒಂದು ಅದ್ಭುತವಾಗಿದೆ.