ಸಾವಿನ ಸಂಖ್ಯೆ 10 ಸಾವಿರದಿಂದ 1 ಲಕ್ಷಕ್ಕೆ ಏರಿಕೆ ಸಾಧ್ಯತೆ, ವೆನಿಜುವೆಲಾ ಭೀಕರ ಭೂಕಂಪದ ಚಿತ್ರಣ
ವೆನಿಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಸಾವಿನ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿದೆ. ಮೃತರ ಸಂಖ್ಯೆ 10 ಸಾವಿರಿಂದ 1 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ವೆನಿಜುವೆಲಾದ ಭೀಕರ ಭೂಕಂಪದ ಚಿತ್ರಗಳು ಇಲ್ಲಿವೆ.

ವೆನಿಜುವೆಲಾದಲ್ಲಿ 39 ಸೆಕೆಂಡ್ ಅಂತರದಲ್ಲಿ 2 ಭಾರಿ ಭೂಕಂಪ
ವೆನಿಜುವೆಲಾ ಅತೀ ದೊಡ್ಡ ಭೂಕಂಪಕ್ಕೆ ನಲುಗಿ ಹೋಗಿದೆ. ಕೇವಲ 39 ಸೆಕೆಂಡ್ ಅಂತರಗಳಲ್ಲಿ 2 ಬಾರಿ ಭೂಕಂಪವಾಗಿದೆ. ಪರಿಣಾಮ ವೆನಿಜುವೆಲಾ ರಾಜಧಾನಿ ಕಾರಕಸ್ ಸೇರಿದಂತೆ ಹಲವು ನಗರಗಳು, ಪಟ್ಟಣ, ಗ್ರಾಮಗಳು ತತ್ತರಿಸಿದೆ. 22 ಅಂತಸ್ತಿನ ಕಟ್ಟಡ ಸೇರಿದಂತೆ ಹಲವು ಮನೆಗಳು ಕುಸಿದು ಬಿದ್ದಿದೆ.
ಸಾವಿನ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ
7.2 ಹಾಗೂ 7.5 ತೀವ್ರತೆಯ ಭೂಕಂಪನದಿಂದ ಸಾವು ನೋವಿನ ಪ್ರಮಾಣ ಹೆಚ್ಚಾಗಿದೆ. ಅಮೆರಿಕ USGS ಸಂಸ್ಥೆ ಸಾವಿನ ಸಂಖ್ಯೆ 10 ಸಾವಿರದಿಂದ 1 ಲಕ್ಷದವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದಿದೆ. ಭೀಕರ ಭೂಕಂಪ ಇದಾಗಿದ್ದು, ರಕ್ಷಣ ಕಾರ್ಯಗಳು ಭರದಿಂದ ಸಾಗಿದೆ. ಹಲವರು ಅವಶೇಷಗಳಡಿ ಸಿಲುಕಿದ್ದಾರೆ. ಇವರನ್ನು ಹೊರತೆಗೆದು ಆಸ್ಪತ್ರೆ ದಾಖಲಿಸುವ ಕಾರ್ಯ ನಡೆಯುತ್ತಿದೆ.
ಈವರೆಗಿನ ಅಧಿಕೃತ ಸಾವಿನ ಸಂಖ್ಯೆ
ವೆನಿಜುವೆಲಾದಲ್ಲಿ ಸಂಭವಿಸಿದ ಭೂಕಂಪಕ್ಕೆ ಸದ್ಯ ಮೃತಪಟ್ಟವರ ಸಂಖ್ಯೆ 32. ಇದು ವೆನಿಜುವೆಲಾ ಸರ್ಕಾರ ಬಹಿರಂಗಪಡಿಸಿದ ಅಧಿಕೃತ ಮಾಹಿತಿ. 700 ಮಂದಿ ಗಾಯಗೊಂಡಿದ್ದಾರೆ ಎಂದಿದೆ ಆದರೆ ಇನ್ನು ಹಲೆವೆಡೆ ಕಟ್ಟಡಗಳ ಅವಶೇಷಗಳಡಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹೀಗಾಗಿ ಸದ್ಯದ ಮಟ್ಟಿಗೆ ಒಟ್ಟು ಸಾವು ನೋವಿನ ಸಂಖ್ಯೆ ಅಧಿಕೃತವಾಗಿ ಬಹಿರಂಗವಾಗಿಲ್ಲ.
ಪ್ರಧಾನಿ ಮೋದಿ ಸಂತಾಪ
ವೆನಿಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮಡಿದವರ ಆತ್ಮಕ್ಕೆ ಶಾಂತಿಕೋರಿದರೆ, ಗಾಯಾಳುಗಳು ಶೀಘ್ರದಲ್ಲೇ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಇದೇ ವೇಳೆ ವೆನಿಜುವೆಲಾ ಜೊತೆ ಭಾರತ ಇದೆ ಎಂದಿದ್ದಾರೆ. ಭಾರತದಿಂದ ಸಾಧ್ಯವಾದ ಎಲ್ಲಾ ಸಹಾಯ ನೀಡುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

