ಸೆಕ್ಸ್‌ಗೂ ಮುನ್ನ ಕಾಂಡೋಂಗೆ ರಂಧ್ರ ಮಾಡುತ್ತಿದ್ದ ಪ್ರೇಮಿ, ಕೊಟ್ಟ ಕಾರಣ ಕೇಳಿದವರಿಗೆ ಅಚ್ಚರಿ!
ದಂಪತಿ ತಮ್ಮ ನಡುವಿನ ಪ್ರೀತಿ ಹೆಚ್ಚಿಸಿಕೊಳ್ಳಲು ಏನೆಲ್ಲಾ ಕಸರತ್ತು ಮಾಡ್ತಾರೆ. ಹೂವು ನೀಡುವುದರಿಂದ ಹಿಡಿದು ಅವರಿಗಿಷ್ಟದ ತಿಂಡಿ ತಯಾರಿಸುವವರೆಗೆ ಎಲ್ಲವನ್ನೂ ಮಾಡುತ್ತಾರೆ. ಆದರೆ ಲಂಡನ್‌ನ ಯುವಕನೊಬ್ಬ ತನ್ನ ಪ್ರಿಯತಮೆ ಜೊತೆಗಿನ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲು ಕಾಂಡೋಂಗೆ ರಂಧ್ರ ಮಾಡಲು ಆರಂಭಿಸಿದ್ದ. ಈತನ ಪ್ರೇಯಸಿ ಕಾಂಡೋಂ ಇದ್ದರಷ್ಟೇ ದೈಹಿಕ ಸಂಬಂಧ ಬೆಳೆಸಲು ಅನುಮತಿ ನೀಡುತ್ತಿದ್ದಳು. ಆದರೆ ಪ್ರೇಮಿಗೆ ಮಾತ್ರ ಕಾಂಡೋಂ ಬಳಸಿದಾಗೆಲ್ಲಾ ತಮ್ಮ ನಡುವಿನ ಪ್ರೀತಿ ಕಡಿಮೆಯಾಗುತ್ತಿದೆ ಎಂಬ ಭಾವನೆ ಹುಟ್ಟಿಕೊಳ್ಳುತ್ತಿತ್ತು. ಹೀಗಾಗೇ ಆತ ಸೆಕ್ಸ್‌ಗೂ ಮುನ್ನ ರಂಧ್ರಗಳನ್ನು ಮಾಡುತ್ತಿದ್ದ. ಆದರೆ ಈ ವಿಚಾರ ತಿಳಿದ ಪ್ರೇಯಸಿ ದೂರು ದಾಖಲಿಸಿದ್ದಾರೆ. ವಿಚಾರಣೆ ನಡೆಸಿರುವ ಕೋರ್ಟ್ ಆತನಿಗೆ ಅತ್ಯಾಚಾರ ಅಪರಾಧಿ ಎಂದು ಜೈಲು ಶಿಕ್ಷೆ ವಿಧಿಸಿದೆ. ಸದ್ಯ ಈ ವಿಚಿತ್ರ ಪ್ರಕರಣ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.
ಲಂಡನ್‌ನ ವಾರ್‌ಸೆಸ್ಟರ್ ಕೋರ್ಟ್ ಪ್ರಕರಣದ ತೀರ್ಪು ನೀಡುತ್ತಾ ಅತ್ಯಾಚಾರ ನಡೆಸಿರುವ ಆರೋಪದಡಿ ಪ್ರೇಮಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ ಇದು ಅತ್ಯಾಚಾರ ಪ್ರಕರಣವಾಗಿರಲಿಲ್ಲ. ಇದರಲ್ಲಿ ಗಂಡು ಹೆಣ್ಣು ಪರಸ್ಪರ ಸಮ್ಮತಿ ಇದ್ದೇ ಸಂಬಂಧ ಬೆಳೆಸಿದ್ದರು. ಹೀಗಿದ್ದರೂ ಇದು ಅತ್ಯಾಚಾರ ಪ್ರಕರಣದ ತಿರುವು ಪಡೆದುಕೊಂಡಿದೆ.
ಲಂಡನ್‌ನ 47 ವರ್ಷದ ಆಂಡ್ರೂ ಲೆವಿಸ್ ಇನ್ನು ನಾಲ್ಕು ವರ್ಷ ಜೈಲು ಕಂಬಿ ಹಿಂದೆ ಇರಲಿದ್ದಾನೆ. ಅತನ ಮೇಲೆ ಪ್ರೇಯಸಿಯನ್ನು ಅತ್ಯಾಚಾರಗೈದ ಆರೋಪವಿದೆ. ಇನ್ನು ಇಬ್ಬರೂ ಪರಸ್ಪರ ಸಮ್ಮತಿ ಇದ್ದುಕೊಂಡೇ ಸೆಕ್ಸ್ ನಡೆಸುತ್ತಿದ್ದರಾದರೂ ಲೆವಿಸ್ ಮಾತ್ರ ಸೆಕ್ಸ್‌ಗೂ ಮುನ್ನ ಕಾಂಡೋಂ ರಂಧ್ರ ಮಾಡುತ್ತಿದ್ದ.
ವೃತ್ತಿಯಲ್ಲಿ ರೈಲು ಚಾಲಕನಾಗಿರುವ ಲೆವಿಸ್‌ಗೆ ಸೆಕ್ಸ್ ನಡೆಸುವಾಗ ಕಾಂಡೋಂ ಧರಿಸಿದರೆ ಪ್ರೇಯಸಿಯಿಂದ ದೂರವಾಗುತ್ತಿದ್ದೇನೆಂಬ ಅನುಭವವಾಗುತ್ತಿತ್ತು. ಪ್ರೀತಿಯ ಅನುಭವವಾಗುತ್ತಿರಲಿಲ್ಲ. ಹೀಗಾಗೇ ತಾನು ಪಿನ್ ಒಂದರ ಸಹಾಯದಿಂದ ಕಾಂಡೋಂಗೆ ರಂಧ್ರ ಮಾಡುತ್ತಿದ್ದೆ ಎಂದಿದ್ದಾರೆ.
ಮಹಿಳೆಗೆ ಈ ವಿಚಾರವಾಗಿ ಅನುಮಾನ ಮೂಡಿತ್ತು. ಹೀಗಾಗಿ ಒಂದು ದಿನ ಬೆಳಗ್ಗೆ ಕಸದ ಬುಟ್ಟಿ ಪರಿಶೀಲಿಸಿದಾಗ ಆಕೆಗೆ ಬಳಸಿದ ಕಾಂಡೋಗಳಲ್ಲಿ ರಂಧ್ರವಿರುವುದು ಕಂಡು ಬಂದಿದೆ. ಅಲ್ಲದೇ ಡ್ರಾವರ್‌ನಲ್ಲಿ ಪಿನ್‌ಗಳೂ ಸಿಕ್ಕಿವೆ. ಈ ಕುರಿತು ಲೆವಿಸ್ ಬಳಿ ಕೇಳಿದಾಗ ಸಂಬಂಧ ಆಳಗೊಳಿಸಲು ಹೀಗೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.
ಇದಾದ ಬಳಿಕ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೇ ತನಗೆ ಗರ್ಭಿಣಿಯಾಗುವ ಯೋಚನೆ ಇರಲಿಲ್ಲ. ಹೀಗಾಗೇ ಸಂಪೂರ್ಣ ಸುರಕ್ಷತೆಯೊಂದಿಗೆ ಸೆಕ್ಸ್ ಮಾಡಲು ಒಪ್ಪಿಕೊಳ್ಳುತ್ತಿದ್ದೆ. ಆದರೆ ಲೆವಿಸ್ ತನ್ನ ನಂಬಿಕೆ ಮುರಿದಿದ್ದಾನೆ ಎಂದಿದ್ದಾರೆ.
ಕೋರ್ಟ್ ಕೂಡಾ ಪ್ರಕರಣದಲ್ಲಿ ಮಹಿಳೆಯ ಮಾತನ್ನು ಒಪ್ಪಿಕೊಂಡು, ಲೆವಿಸ್ ವಿರುದ್ಧ ಅತ್ಯಾಚಾರ ನಡೆಸಿರುವ ತೀರ್ಪು ನೀಡಿದೆ. ಇದರ ಅನ್ವಯ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ಇದೊಂದು ಕುಕೃತ್ಯ ಎಂದು ತಿಳಿಸಿದೆ.
ಕೋರ್ಟ್ ತೀರ್ಪು ನೀಡಿದ ಬಳಿಕ ಲೆವಿಸ್ ಇದು ತನ್ನ ಜೀವನದ ಈವರೆಗಿನ ಅತ್ಯಂತ ಮೂರ್ಖ ನಿರ್ಧಾರ ಎಂದಿದ್ದಾರೆ. ಕೋರ್ಟ್‌ನಲ್ಲಿ ಅವರು ಕ್ಷಮೆಯನ್ನೂ ಕೋರಿದ್ದಾರೆ. ಆದರೀಗ ಸಮಯ ಮೀರಿದೆ, ಆತ ತನ್ನ ಈ ದುಷ್ಕೃತ್ಯಕ್ಕೆ ಶಿಕ್ಷೆ ಅನುಭವಿಸಲೇಬೇಕಿದೆ.