MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಕೊರೋನಾ ರೀತಿ ಮಹಾಮಾರಿ ‘ಹಂಟು ವೈರಸ್‌’ ಪತ್ತೆ: ವಿಶ್ವಾದ್ಯಂತ ಆತಂಕ, ಸೋಂಕಿತರಿಗಾಗಿ WHO ಹುಡುಕಾಟ

ಕೊರೋನಾ ರೀತಿ ಮಹಾಮಾರಿ ‘ಹಂಟು ವೈರಸ್‌’ ಪತ್ತೆ: ವಿಶ್ವಾದ್ಯಂತ ಆತಂಕ, ಸೋಂಕಿತರಿಗಾಗಿ WHO ಹುಡುಕಾಟ

ಹಡಗೊಂದರಲ್ಲಿ 'ಹಂಟು ವೈರಸ್‌' ಪತ್ತೆಯಾಗಿದ್ದು, 8 ಜನರಿಗೆ ಸೋಂಕು ತಗುಲಿ ಮೂವರು ಮೃತಪಟ್ಟಿದ್ದಾರೆ. ಇಲಿಗಳಿಂದ ಹರಡುವ ಈ ವೈರಸ್ ತೀವ್ರ ಉಸಿರಾಟದ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದ್ದು, ಸೋಂಕಿತರ ಸಂಪರ್ಕಿತರ ಮೇಲೆ ನಿಗಾ ಇರಿಸಿದೆ.

1 Min read
Author : Kannadaprabha News
Published : May 07 2026, 09:27 AM IST
Share this Photo Gallery
  • FB
  • TW
  • Linkdin
  • Whatsapp
14
ಹಂಟು ವೈರಸ್‌
Image Credit : Gemini

ಹಂಟು ವೈರಸ್‌

ಇಡೀ ಜಗತ್ತು ಕೊರೋನಾ ನೀಡಿದ ಆಘಾತದಿಂದ ಚೇತರಿಸಿಕೊಳ್ಳಲು ಇನ್ನೂ ಹೆಣಗಾಡುತ್ತಿರುವ ಹೊತ್ತಿನಲ್ಲೇ, ಅರ್ಜೆಂಟೀನಾದಿಂದ ಪಶ್ಚಿಮ ಆಫ್ರಿಕಾದತ್ತ ಹೊರಟಿರುವ ಹಡಗೊಂದರಲ್ಲಿ ‘ಹಂಟು ವೈರಸ್‌’ ಎಂಬ ಇದೇ ರೀತಿಯ ವೈರಸ್‌ ಒಂದು ಪತ್ತೆಯಾಗಿದೆ. ಇದು ಈಗಾಗಲೇ 8 ಜನರಲ್ಲಿ ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರೀ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹಡಗಿನ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಮೇಲ್ವಿಚಾರಣೆ ನಡೆಸುತ್ತಿದೆ.

24
ಹಡಗಿನಲ್ಲಿ ಹಬ್ಬಿದ ಹಂಟು
Image Credit : Gemini

ಹಡಗಿನಲ್ಲಿ ಹಬ್ಬಿದ ಹಂಟು

ಎಂವಿ ಹೊಂಡಿಯಸ್‌ ಎಂಬ ಕ್ರೂಸ್‌ ಹಡಗು ಸುಮಾರು 150 ಜನರನ್ನು ಹೊತ್ತು ಅರ್ಜೆಂಟೀನಾದಿಂದ ಪಶ್ಚಿಮ ಆಫ್ರಿಕಾದತ್ತ ಹೊರಟಿತ್ತು. ಇದರಲ್ಲಿದ್ದ 8 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ 3 ಪ್ರಕರಣಗಳು ಲ್ಯಾಬ್ ಪರೀಕ್ಷೆಯಲ್ಲಿ ಖಚಿತವಾಗಿವೆ. ಹಡಗಿನಲ್ಲಿದ್ದ ಮೂವರು ಸೋಂಕಿನಿಂದ ಮೃತಪಟ್ಟಿದ್ದರೆ, ನಾಲ್ಕಕ್ಕೂ ಅಧಿಕ ಜನ ಅಸ್ವಸ್ಥರಾಗಿದ್ದಾರೆ.

Related Articles

Related image1
ಮಹಾಮಾರಿ ಕಾಯಿಲೆ ಬಂತು, ಆರು ತಿಂಗಳಿಗೆ ಮದುವೆ ಮುರಿತು: ಗೂಳಿ ಸಿನಿಮಾ ನಟಿ ಮಮತಾ ಹೆಗಲೇರಿದ ಶನಿ! ಪಾಪ..!
Related image2
ಮಹಾಮಾರಿ ಡೆಂಘೀ ಜ್ವರಕ್ಕೆ ಶಿವಮೊಗ್ಗದ ಮಹಿಳೆ ಬಲಿ
34
ಎಲ್ಲಾ ಪ್ರಯಾಣಿಕರ ಮೇಲ್ವಿಚಾರಣೆ
Image Credit : Gemini

ಎಲ್ಲಾ ಪ್ರಯಾಣಿಕರ ಮೇಲ್ವಿಚಾರಣೆ

ಈಗ ಹಡಗು ಕೇಪ್ ವರ್ಡೆ ತೀರದ ಬಳಿ ನಿಂತಿದೆ. ಸ್ಥಳೀಯ ಅಧಿಕಾರಿಗಳು ಎಲ್ಲಾ ಪ್ರಯಾಣಿಕರ ಮೇಲ್ವಿಚಾರಣೆ ಮಾಡುತ್ತಿದ್ದು, ಹೆಚ್ಚಿನ ಹರಡುವಿಕೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಡಬ್ಲ್ಯುಎಚ್‌ಒ ಇದನ್ನು ಗಂಭೀರವಾಗಿ ಪರಿಗಣಿಸಿ ವಿಶ್ವದಾದ್ಯಂತ ಸೋಂಕಿತರ ಸಂಪರ್ಕವನ್ನು ಜಾಲಾಡುತ್ತಿದೆ.

44
ಏನಿದು ವೈರಸ್? ಹೇಗೆ ಹರಡುತ್ತದೆ?
Image Credit : Gemini And AI Meta

ಏನಿದು ವೈರಸ್? ಹೇಗೆ ಹರಡುತ್ತದೆ?

ಹಂಟು ವೈರಸ್‌ ಸಾಮಾನ್ಯವಾಗಿ ಇಲಿ, ಹೆಗ್ಗಣ ಮತ್ತು ಇತರ ದಂಶಕಗಳಲ್ಲಿ ಕಂಡುಬರುತ್ತದೆ. ಮನುಷ್ಯರಿಗೆ ಈ ಸೋಂಕು ತಗುಲಿದರೆ ಜ್ವರ, ತಲೆನೋವು, ಮೈಕೈ ನೋವು, ಜೀರ್ಣಕೋಶದ ಸಮಸ್ಯೆ, ನಂತರ ತೀವ್ರ ಉಸಿರಾಟದ ಸಮಸ್ಯೆ ಉಂಟುಮಾಡುತ್ತದೆ. ಅಲ್ಲದೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. 

ಈಗಿನ ಹಡಗಿನಲ್ಲಿ ಕಂಡುಬಂದಿರುವುದು ಆ್ಯಂಡಿಸ್ ತಳಿ ಎಂದು ಡಬ್ಲ್ಯುಎಚ್‌ಒ ದೃಢಪಡಿಸಿದೆ. ಇದು ದಕ್ಷಿಣ ಅಮೆರಿಕ (ಅರ್ಜೆಂಟೀನಾ, ಚಿಲಿ) ಪ್ರದೇಶದಲ್ಲಿ ಕಂಡುಬರುತ್ತದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಅಂತರರಾಷ್ಟ್ರೀಯ ಸುದ್ದಿ
ಆರೋಗ್ಯ

Latest Videos
Recommended Stories
Recommended image1
ಪಾಕಿಸ್ತಾನದಲ್ಲಿ ಮೆಡಿಕಲ್ ಎಮರ್ಜೆನ್ಸಿ! ಇರಾನ್-ಹಾರ್ಮುಜ್ ಬಿಕ್ಕಟ್ಟಿನ ಎಫೆಕ್ಟ್: ಜೀವ ಉಳಿಸುವ ಔಷಧಗಳಿಗಾಗಿ ಜನರ ಪರದಾಟ
Recommended image2
Met Gala: 1800 ಕ್ಯಾರಟ್​ ವಜ್ರದಲ್ಲಿ ಮಿಂಚಿದ ಇಶಾ ಅಂಬಾನಿ- ರಾಜ ಮನೆತನದ ಆಭರಣ: ಕ್ಯೂಟ್​ ಫೋಟೋಸ್​ ಇಲ್ಲಿವೆ
Recommended image3
ಅಮೆರಿಕದ ಹಾರುವ ಗ್ಯಾಸ್‌ ಸ್ಟೇಷನ್‌ ನಾಪತ್ತೆ ; ಎಮರ್ಜೆನ್ಸಿ ಸಂದೇಶ ರವಾನಿಸಿ ಕಾಣೆ
Related Stories
Recommended image1
ಮಹಾಮಾರಿ ಕಾಯಿಲೆ ಬಂತು, ಆರು ತಿಂಗಳಿಗೆ ಮದುವೆ ಮುರಿತು: ಗೂಳಿ ಸಿನಿಮಾ ನಟಿ ಮಮತಾ ಹೆಗಲೇರಿದ ಶನಿ! ಪಾಪ..!
Recommended image2
ಮಹಾಮಾರಿ ಡೆಂಘೀ ಜ್ವರಕ್ಕೆ ಶಿವಮೊಗ್ಗದ ಮಹಿಳೆ ಬಲಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved