Rough Sex ವೇಳೆ ಮಹಿಳೆ ಸಾವು: ಶಿಕ್ಷೆ ಪ್ರಕಟಿಸಿದ ಕೋರ್ಟ್, ಭುಗಿಲೆದ್ದ ವಿವಾದ!
ಡರ್ಲಿಂಗ್ಟನ್, ಕೌಂಟಿ ಡರ್ಹಾಮ್‌ನಲ್ಲಿ Rough sex ಬಗ್ಗೆ ವಿವಾದ ಭುಗಿಲೆದ್ದಿದೆ. ರಫ್ ಸೆಕ್ಸ್ ವೆಳೆ ದಂಪತಿ ಕೂದಲನ್ನು ಎಳೆಯುವುದು, ಹೊಡೆಯುವುದು ನಡೆಯುತ್ತದೆ. ಆದರೀಗ ಡಾರ್ಲಿಂಗ್ಟನ್‌ನಲ್ಲಿ ಈ ರಫ್ ಸೆಕ್ಸ್ ವಿಚಾರ ವಿವಾದ ಸೃಷ್ಟಿಸಿರುವುದೇಕೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ವಾಸ್ತವವಾಗಿ, ಈ ವಿಷಯವು ಕೊಲೆಗೆ ಸಂಬಂಧಿಸಿದೆ. ಇದೇ ವರ್ಷದ ಜನವರಿಯಲ್ಲಿ, ಒಬ್ಬ ಮಹಿಳೆ ಸೆಕ್ಸ್ ಹೊಂದಿದ್ದಾಗ ಸಾವನ್ನಪ್ಪಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನ್ಯಾಯಾಲಯದ ಮೆಟ್ಟಿಲೇರಿದ ಈ ಪ್ರಕರಣದಲ್ಲಿ ಅಪರಾಧ ಸಾಬೀತಾಗಿ ದೋಷಿಗೆ ಶಿಕ್ಷೆ ವಿಧಿಸಲಾಗಿದೆ. ಆದರೀಗ ಅನೇಕ ಸಾಮಾಜಿಕ ಸಂಘಟನೆಗಳು ಮತ್ತು ಮಹಿಳೆಯರು ಆರೋಪಿಗೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಏತನ್ಮಧ್ಯೆ, ಅಟಾರ್ನಿ ಜನರಲ್ ಶಿಕ್ಷೆಯನ್ನು ಮರು ನಿರ್ಧರಿಸಲು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಸೆಕ್ಸ್ ಮಾಡುವಾಗ ಸೋಫಿ ಕತ್ತು ಹಿಸುಕಲು ಪ್ರೋತ್ಸಾಹಿಸಿದ್ದಾಲೆಂದೇ ಭಾಸವಾಗುತ್ತದೆ ಎಂದು ಹೇಳಲಾಗಿದೆ. ಹಿಗಾಗಿ ಮೃತಳದ್ದೇ ತಪ್ಪು ಎಂದು ತೋರುತ್ತದೆ ಎನ್ನಲಾಗಿದೆ. ಅದೇ ಸಮಯದಲ್ಲಿ, ಆರೋಪಿಯ ಪತ್ನಿ ಪೈಬಸ್ ಹೇಳುವಂತೆ, ಆರೋಪಿ ಸೋಫಿಗೆ ಡಬಲ್ ಸ್ಟ್ಯಾಂಡರ್ಡ್‌ನೊಂದಿಗೆ ವರ್ತಿಸಿದ್ದಾನೆ. ಪೈಬಸ್ ತನಗೆ ತಿಳಿಯದಂತೆ, ಬೆನ್ನ ಹಿಂದೆ ಮೂರು ವರ್ಷಗಳ ಕಾಲ ಸೋಫಿಯೊಂದಿಗೆ ಸಂಬಂಧ ಹೊಂದಿದ್ದ ಎಂದಿದ್ದಾಳೆ.
ಲೂಯಿಸ್ ಪೈಬಸ್ ಈಗ ತನ್ನ ಗಂಡನಿಂದ ಪ್ರತ್ಯೇಕವಾಗಿ ವಾಸಿಸುತ್ತಾಳೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ. ಆತನ ಶಿಕ್ಷೆ ಇತರರಿಗೆ ಉದಾಹರಣೆಯಾಗಬೇಕು ಎಂದಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಆರೋಪಿ ಸ್ಯಾಮ್ ಪೈಬಸ್ ಈ ವರ್ಷದ ಫೆಬ್ರವರಿಯಲ್ಲಿ 33 ವರ್ಷದ ಸೋಫಿಯನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ. ಕೊಲೆ ಮಾಡುವ ಮೊದಲು ಆತ 24 ಬಾಟಲ್ ಬಿಯರ್ ಕುಡಿದಿದ್ದ. ಕೊಲೆ ನಂತರ ಆರೋಪಿಯನ್ನು ಬಂಧಿಸಲಾಗಿದೆ.
ವಿಷಯ ನ್ಯಾಯಾಲಯಕ್ಕೆ ತಲುಪಿದಾಗ, ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ ಸಾಕ್ಷ್ಯದ ಕೊರತೆಯಿಂದಾಗಿ ಕೊಲೆ ಆರೋಪವನ್ನು ಕೈಬಿಟ್ಟಿದೆ. ಬಳಿಕ ಆತ ಮಹಿಳೆಗೆ ಗಂಭೀರವಾಗಿ ಹಾನಿಯುಂಟು ಮಾಡಲು ಯತ್ನಿಸಿದ್ದಾನೆ ಎಂಬ ವಿಚಾರವಾಗಿ ಪ್ರಕರಣ ಮುಂದುವರರೆದಿದೆ. ಈ ಸಮಯದಲ್ಲಿ, ರಫ್ ಸೆಕ್ಸ್ ವಿಚಾರವೂ ಮುನ್ನೆಲೆಗೆ ಬಂದಿದ್ದು, ಇಂತಹ ಸಂದರ್ಭದಲ್ಲಿ ಯಾರೂ ಕೂಡಾ ಸಾವನ್ನಪ್ಪಬಹುದೆಂದು ಹೇಳಲಾಗಿದೆ.
ಈ ಪ್ರಕರಣ ಸಂಬಂಧ ವುಮನ್ ಏಡ್ ನ ತೆರೇಸಾ ಪಾರ್ಕರ್ ಮಾತನಾಡುತ್ತಾ "45 ಶೇಕಡಾ ಪ್ರಕರಣಗಳಲ್ಲಿ ಪುರುಷನು ಸೆಕ್ಸ್ ವೇಳೆ ಮಹಿಳೆಗೆ ಹೊಡೆದಾಗ ಮತ್ತು ಆಕೆ ತನ್ನ ಒಪ್ಪಿಗೆ ಇತ್ತು ಎಂದೇ ವಾದಿಸುತ್ತಾರೆ. ಈ ಮೂಲಕ ದೋಷಿ ಪಾರಾಗುತ್ತಾನೆ' ಎಂದಿದ್ದಾರೆ.