ಡುಮ್ಮಗಿನ ಹೊಟ್ಟೆಯಿಂದ ಬಾವಿಯಲ್ಲಿ ಸಿಕ್ಕಾಕೊಂಡ ಭೂಪ!
ಸ್ಥೂಲಕಾಯ ಅನೇಕ ರೋಗಗಳಿಗೆ ಆಹ್ವಾನ ಕೊಟ್ಟಂತೆ ಎಂಬ ಮಾತಿದೆ. ಧಡೂತಿ ದೇಹದಿಂದ ವ್ಯಕ್ತಿಯೊಬ್ಬ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ತಕ್ಕ ಉದಾಹರಣೆ ಎಂಬಂತಿದೆ ಈ ಚೀನಾದ ವ್ಯಕ್ತಿಯ ಪ್ರಕರಣ. ಈ ಮಹಾಶಯ ತನ್ನ ಮನೆ ಹೊರ ಭಾಗದಲ್ಲಿದ್ದ ಒಣಗಿದ ಬಾವಿ ಮುಚ್ಚುವ ಕೆಲಸ ಮಾಡುತ್ತಿದ್ದರು. ಆದರೆ ಆತನಿಗೇನು ಗೊತ್ತಿತ್ತು ಮುಂದಿನ ಕ್ಷಣ ತಾನೇ ಈ ಬಾವಿಯೊಳಗಿಂದ ಹೊರ ಬರಲಾಗದೆ ಸಿಲುಕಿಕೊಳ್ತೀನಿ ಅಂತ? ಈ ವ್ಯಕ್ತಿ ತನ್ನ ದಪ್ಪಗಿನ ದೇಹದಿಂದಾಗಿ ಸಿಕ್ಕಾಕೊಂಡಿದ್ದು, ಬಳಿಕ ಆತನನ್ನು ರಕ್ಷಿಸಲು ಅಗ್ನಿಶಾಮಕ ದಳದ ತಂಡವೇ ಬಂದಿದೆ. ಬಳಿಕ ಆತನ ಹೊಟ್ಟೆ ಭಾಗಕ್ಕೆ ಹಗ್ಗವನ್ನು ಕಟ್ಟಿ ಹೊರಗೆಳಡಯುವ ಯತ್ನ ಮಾಡಿದ್ದಾರೆ. ಆದರೆ ಇದ್ಯಾವುದೂ ಪರಿಣಾಮ ಬೀರಿಲ್ಲ. 125 ಕೆ. ಜಿ. ತೂಕದ ಈ ವ್ಯಕ್ತಿಯನ್ನು ಹೊರಗೆಳೆಯಲು ಉಪಾಯ ಹೂಡಿ ರಕ್ಷಣಾ ಕಾರ್ಯ ನಡೆಸಲಾಗಿದೆ. ಇಲ್ಲಿದೆ ನೋಡಿ ಕೆಲ ಚಿತ್ರಗಳು.

ಚೀನಾದಲ್ಲಿ ಈ ಘಟನೆ ನಡೆದಿದ್ದು, ಇಲ್ಲೊಬ್ಬ ವ್ಯಕ್ತಿ ತನ್ನ ಮನೆಯ ಹಿಂಬಾಗದಲ್ಲಿದ್ದ ಒಣಗಿದ ಬಾವಿಯನ್ನು ಮುಚ್ಚಲು ಬಾವಿಗಿಳಿದಿದ್ದಾನೆ. ಆದರೆ ಹೊರ ಬರುವ ವೇಳೆ ಆತನ ಹೊಟ್ಟೆ ಸಿಕ್ಕಾಕೊಂಡಿದೆ.

125 ಕೆ. ಜಿ. ತೂಕವಿರುವ ಈ ವ್ಯಕ್ತಿಯನ್ನು ಲಿವು ಎಂದು ಗುರುತಿಸಲಾಗಿದೆ. ಬಾವಿಯಲ್ಲಿ ಸಿಕ್ಕಾಕೊಂಡ ಈತ ಹೊರ ಬರಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದಾನೆ.

28 ವರ್ಷದ ಲಿವುನನ್ನು ಬಾವಿಯಿಂದ ಹೊರ ತೆಗೆಯಲು 12 ಮಂದಿಯ ರಕ್ಷಣಾ ಪಡೆ ಸ್ಥಳಕ್ಕಾಗಮಿಸಿದೆ. ಆದರೆ ಹಗ್ಗ ಕಟ್ಟಿ ಲಿವುನನ್ನು ಹೊರಗೆಳೆಯಲು ಇವರು ವಿಫಲಗೊಂಡಿದ್ದಾರೆ.

ಸೋಶಿಯಲ್ ಮೀಡಿಯಾ ಪೋಸ್ಟ್ ಅನ್ವಯ ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿದಾಗ ಲಿವು ಅರ್ಧ ದೇಹ ಬಾವಿಯೊಳಗಿದ್ದರೆ, ಇನನ್ರ್ಧ ಹೊರಗೆ ಕಾಣಿಸುತ್ತಿತ್ತು. ಬಟ್ಟೆ ಧರಿಸಿರದ ಆತ ಕೈಗಳನ್ನು ಕಟ್ಟಿಕೊಂಡು ಸಿಬ್ಬಂದಿಗೆ ಕಾಯುತ್ತಿದ್ದ.

ಇನ್ನು ಬಾವಿಯೊಳಗೆ ಕಸ ಕಡ್ಡಿಗಳನ್ನು ತುಂಬಿಸುವಾಗ ಈ ಘಟನೆ ಸಂಭವಿಸಿದೆ. ಅಚಾನಕ್ಕಾಗಿ ನಿಯಂತ್ರಣ ಕಳೆದುಕೊಂಡ ಆತ ಬಾವಿಯೊಳಗೆ ಬಿದ್ದಿದ್ದಾನೆ.

ಕೊನೆಗೂ ಹನ್ನೆರಡು ಸಿಬ್ಬಂದಿಯ ತಂಡ ಇತರ ಕೆಲ ಗ್ರಾಮಸ್ಥರ ಸಹಾಯ ಪಡೆದು ಬಾವಿಯ ಒಂದು ಭಾಗವನ್ನು ಮುರಿದಿದೆ. ಈ ಮೂಲಕ ಲಿವುನನ್ನು ಹೊರಗೆಳೆದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ