MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಇರಾನ್‌ನಲ್ಲಿ 1 ಲೀ. ಹಾಲಿನ ಬೆಲೆ 8.2 ಲಕ್ಷ ರಿಯಲ್‌: ದಿನಬಳಕೆಯ ವಸ್ತುಗಳ ದರದಲ್ಲಿ ಭಾರಿ ಏರಿಕೆ

ಇರಾನ್‌ನಲ್ಲಿ 1 ಲೀ. ಹಾಲಿನ ಬೆಲೆ 8.2 ಲಕ್ಷ ರಿಯಲ್‌: ದಿನಬಳಕೆಯ ವಸ್ತುಗಳ ದರದಲ್ಲಿ ಭಾರಿ ಏರಿಕೆ

ಇಸ್ರೇಲ್-ಅಮೆರಿಕಾ ದಾಳಿಯಿಂದಾಗಿ ಇರಾನ್‌ನ ಆರ್ಥಿಕತೆ ಕುಸಿದಿದ್ದು, ಹಣದುಬ್ಬರ ತೀವ್ರಗೊಂಡಿದೆ. ಇದರಿಂದ ಹಾಲು, ಅಕ್ಕಿಯಂತಹ ಅಗತ್ಯ ವಸ್ತುಗಳ ಬೆಲೆ ಲಕ್ಷಗಳನ್ನು ತಲುಪಿದ್ದು, ಇರಾನಿನ ಕರೆನ್ಸಿ ರಿಯಾಲ್ ಮೌಲ್ಯ ಐತಿಹಾಸಿಕ ಕುಸಿತ ಕಂಡಿದೆ. ಇದು ಜನರ ದೈನಂದಿನ ಜೀವನವನ್ನು ಸಂಕಷ್ಟಕ್ಕೆ ದೂಡಿದೆ.

2 Min read
Author : Anusha Kb
| Updated : Mar 11 2026, 09:15 AM IST
Share this Photo Gallery
  • FB
  • TW
  • Linkdin
  • Whatsapp
16
ಇರಾನ್‌ನ ಆರ್ಥಿಕತೆ ಸಂಪೂರ್ಣ ಕುಸಿತ
Image Credit : X

ಇರಾನ್‌ನ ಆರ್ಥಿಕತೆ ಸಂಪೂರ್ಣ ಕುಸಿತ

ಇಸ್ರೇಲ್ ಅಮೆರಿಕಾ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ದಾಳಿಯಿಂದಾಗಿ ಇರಾನ್‌ನ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದ್ದು, ಹಣದುಬ್ಬರ ಗಗನಕ್ಕೇರಿದೆ. ಅಗತ್ಯವಸ್ತುಗಳ ದರದಲ್ಲಿ ಭಾರಿ ಏರಿಕೆ ಆಗುತ್ತಿದ್ದು, ಅಲ್ಲಿನ ಜನ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಯುದ್ಧಪೀಡಿತ ದೇಶದಲ್ಲಿ ಆಹಾರ ಪದಾರ್ಥಗಳು ಹಾಗೂ ಜನ ದಿನನಿತ್ಯ ಬಳಸುವ ವಸ್ತುಗಳ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಯುದ್ಧದ ನಂತರ ಇರಾನಿನ ಕರೆನ್ಸಿ ರಿಯಾಲ್ ಮೌಲ್ಯದಲ್ಲಿ ಸರ್ವಕಾಲಿಕ ಕುಸಿತ ಕಂಡಿರುವುದು ಸಹ ಹಣದುಬ್ಬರದ ತೀವ್ರ ಏರಿಕೆಗೆ ಕಾರಣವಾಗಿದೆ.

26
ದಿನನಿತ್ಯದ ವಸ್ತುಗಳ ದರದಲ್ಲಿ ಭಾರಿ ಏರಿಕೆ
Image Credit : Google

ದಿನನಿತ್ಯದ ವಸ್ತುಗಳ ದರದಲ್ಲಿ ಭಾರಿ ಏರಿಕೆ

ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಇರಾನ್‌ನಲ್ಲಿನ ಕೆಲವು ಪ್ರಮುಖ ಸರಕುಗಳ ಬೆಲೆಗಳ ವಿವರ ಇಲ್ಲಿದೆ. ಹಾಲು: ಇರಾನಿನ ಕರೆನ್ಸಿಯಲ್ಲಿ ಒಂದು ಲೀಟರ್ ಹಾಲಿನ ಬೆಲೆ 8.2 ಲಕ್ಷ ಇರಾನಿನ ರಿಯಾಲ್ ತಲುಪಿದೆ. ಹಾಲಿನ ಬೆಲೆ ಹೀಗೆ ಬಿಸಿಯಾಗಿ ಕುದಿಯಲಾರಂಭಿಸಿದ್ದರೆ ಇತ್ತ ಬೆಣ್ಣೆ ಮತ್ತು ಚೀಸ್‌ನಂತಹ ಹಾಲಿಗೆ ಸಂಬಂಧಿಸಿದ ಉತ್ಪನ್ನಗಳ ಬೆಲೆಗಳು ಸಹ ಗಗನಕ್ಕೇರಿವೆ.

Related Articles

Related image1
ಖಮೇನಿ ಹತ್ಯೆ ಬಳಿಕ ಇಸ್ರೇಲ್ ದಾಳಿಯಲ್ಲಿ ನೂತನ ನಾಯಕ ಮಜ್ತೊಬಾಗೆ ಗಾಯ, ಇರಾನ್ ಟಿವಿ ವರದಿ
Related image2
ಇರಾನ್ ಮೇಲೆ ಅಮೆರಿಕಾ ಇಸ್ರೇಲ್ ದಾಳಿಯಿಂದ ಜಗತ್ತಿನ ಬೇರೆ ದೇಶಗಳು ಅನುಭವಿಸುತ್ತಿರುವ ಹಾನಿ ಎಷ್ಟು?
36
500 ಗ್ರಾಂ ಬ್ರೆಡ್ ಬೆಲೆ 6.6 ಲಕ್ಷ ರಿಯಾಲ್
Image Credit : Google

500 ಗ್ರಾಂ ಬ್ರೆಡ್ ಬೆಲೆ 6.6 ಲಕ್ಷ ರಿಯಾಲ್

ಬ್ರೆಡ್: ಇರಾನ್‌ನಲ್ಲಿ 500 ಗ್ರಾಂ ತಾಜಾ ಬಿಳಿ ಬ್ರೆಡ್‌ನ ಬೆಲೆ 6.6 ಲಕ್ಷ ಇರಾನಿಯನ್ ರಿಯಾಲ್.

ಅಕ್ಕಿ: 1 ಕೆಜಿ ಬಿಳಿ ಅಕ್ಕಿಯ ಪ್ರಸ್ತುತ ಬೆಲೆ 32 ಲಕ್ಷ ರಿಯಾಲ್.

ಮೊಟ್ಟೆಗಳು: 12 ದೊಡ್ಡ ಗಾತ್ರದ ಮೊಟ್ಟೆಗಳ ಬೆಲೆ 14.54 ಲಕ್ಷ ರಿಯಾಲ್.

ಚೀಸ್: 1 ಕೆಜಿ ಸ್ಥಳೀಯ ಚೀಸ್ ಬೆಲೆ 52 ಲಕ್ಷ ಇರಾನಿನ ರಿಯಾಲ್.

ಈ ದರ ನೋಡಿಯೇ ನೀವು ಯುದ್ಧಪೀಡಿತ ದೇಶ ಇರಾನ್‌ನಲ್ಲಿ ಬಡವರ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಬಹುದಾಗಿದೆ.

46
ಯುದ್ಧ ಆರಂಭವಾಗುವುದಕ್ಕೂ ಮೊದಲಿನಿಂದಲೂ ಹಣದುಬ್ಬರ ಸಮಸ್ಯೆ
Image Credit : Google

ಯುದ್ಧ ಆರಂಭವಾಗುವುದಕ್ಕೂ ಮೊದಲಿನಿಂದಲೂ ಹಣದುಬ್ಬರ ಸಮಸ್ಯೆ

ಯುದ್ಧ ಆರಂಭವಾಗುವುದಕ್ಕೂ ಮೊದಲಿನಿಂದಲೂ ಇರಾನ್ ಹಣದುಬ್ಬರದ ಸಮಸ್ಯೆ ಎದುರಿಸುತ್ತಿತ್ತು. ಕಳೆದ 10 ತಿಂಗಳುಗಳಲ್ಲಿ ಇಲ್ಲಿ ಸರಕುಗಳ ಬೆಲೆಯಲ್ಲಿ ನಿರಂತರ ಏರಿಕೆಯಾಗಿದೆ. ಇದು ಡಿಸೆಂಬರ್ 2025 ರವರೆಗೆ ಮುಂದುವರೆದಿದೆ. ದೇಶದ ಕೇಂದ್ರ ಬ್ಯಾಂಕ್, ಬ್ಯಾಂಕ್ ಮಾರ್ಕಾಜಿ ಪ್ರಕಾರ ಡಿಸೆಂಬರ್ 2025 ರ ಹಣದುಬ್ಬರ ಮುದ್ರಣವು 42.4% ರಷ್ಟಿತ್ತು.

56
ಕರೆನ್ಸಿ ಕುಸಿತ ತಡೆಯಲು ಇರಾನ್ ಸರ್ಕಾರ ಇತ್ತೀಚೆಗೆ ಕೈಗೊಂಡ ಕ್ರಮಗಳು:
Image Credit : Getty

ಕರೆನ್ಸಿ ಕುಸಿತ ತಡೆಯಲು ಇರಾನ್ ಸರ್ಕಾರ ಇತ್ತೀಚೆಗೆ ಕೈಗೊಂಡ ಕ್ರಮಗಳು:

ಫೆಬ್ರವರಿ 28 ರ ದಾಳಿಗೆ ಮುನ್ನ, ಇರಾನಿನ ಸರ್ಕಾರವು ರಾಷ್ಟ್ರೀಯ ಕರೆನ್ಸಿಯಿಂದ ನಾಲ್ಕು ಸೊನ್ನೆಗಳನ್ನು ತೆಗೆದು ಹಾಕುವುದಾಗಿ ಹೇಳಿತ್ತು. ಸರಳವಾಗಿ ಹೇಳುವುದಾದರೆ, ಇದರಿಂದ 10,000 ರಿಯಾಲ್‌ಗಳ ಮೌಲ್ಯ ಕೇವಲ 1 ರಿಯಾಲ್‌ಗೆ ಸಮಾನವಾಗಿರುತ್ತದೆ. ಇದನ್ನು ದೇಶದ ಸಂಸತ್ತು ಸಹ ಅನುಮೋದಿಸಿತ್ತು. ದೀರ್ಘಕಾಲದ ಹಣದುಬ್ಬರವು ಇರಾನ್ ಕರೆನ್ಸಿ ರಿಯಾಲ್ ಅನ್ನು ಗಮನಾರ್ಹವಾಗಿ ಅಪಮೌಲ್ಯಗೊಳಿಸಿದೆ.

ಇದನ್ನೂ ಓದಿ:  ಮೆಜೆಸ್ಟಿಕ್‌ನಲ್ಲಿ ಸಿಂಗಾಪುರ ಮೀರಿಸುವಂಥ ನಿಲ್ದಾಣ : ಪ್ರಾಜೆಕ್ಟ್ ಮೆಜೆಸ್ಟಿಕ್ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ

66
 ಇರಾನಿನ ರಿಯಾಲ್ ಮೌಲ್ಯ ಪ್ರತಿ ಅಮೆರಿಕನ್ ಡಾಲರ್‌ ಮುಂದೆ 13.50 ಲಕ್ಷ ರೂ.
Image Credit : Google

ಇರಾನಿನ ರಿಯಾಲ್ ಮೌಲ್ಯ ಪ್ರತಿ ಅಮೆರಿಕನ್ ಡಾಲರ್‌ ಮುಂದೆ 13.50 ಲಕ್ಷ ರೂ.

ಪ್ರಸ್ತುತ, ಮುಕ್ತ ಮಾರುಕಟ್ಟೆಯಲ್ಲಿ ಇರಾನಿನ ರಿಯಾಲ್ ಮೌಲ್ಯ ಪ್ರತಿ ಅಮೆರಿಕನ್ ಡಾಲರ್‌ಗೆ ಸುಮಾರು 13.50 ಲಕ್ಷ ರೂಪಾಯಿಗಳನ್ನು ತಲುಪಿದೆ. ಹಾಗೆಯೇ ಇರಾನ್ ರಿಯಾಲ್ ಮುಂದೆ 1 ಭಾರತೀಯ ರೂಪಾಯಿ ಮೌಲ್ಯ 14,000 ರಿಯಾಲ್‌ಗಳಿಗಿಂತಲೂ ಹೆಚ್ಚು.

ಇರಾನ್‌ನ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆ ದರವು ಕಳೆದ ಕೆಲವು ವರ್ಷಗಳಲ್ಲಿ ಕುಸಿಯುತ್ತಲೇ ಇದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಪ್ರಕಾರ, ದೇಶದ ಆರ್ಥಿಕತೆಯು 2025 ರಲ್ಲಿ ಕೇವಲ 0.6% ದರದಲ್ಲಿ ವಿಸ್ತರಿಸಿದೆ. 2023 ರಲ್ಲಿ 5.3% ರಷ್ಟಿದ್ದ ಈ ಮೆಟ್ರಿಕ್ 2024 ರಲ್ಲಿ 3.7% ಕ್ಕೆ ಇಳಿದಿದೆ. ಕಳೆದ ಕೆಲವು ವರ್ಷಗಳಲ್ಲಿ GDP ಏಕ ಅಂಕೆಗಳ ನಿಧಾನಗತಿಯಲ್ಲಿ ಸಾಗುತ್ತಿದ್ದು, ಹಣದುಬ್ಬರ ಎರಡಂಕಿಗಳಲ್ಲಿ ಬೆಳೆದಿದೆ.

ಇದನ್ನೂ ಓದಿ: ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್ ₹4000ವರೆಗೂ ಬಿಕರಿ: ಇಂದು ಬೆಂಗಳೂರಿನ 30% ಹೋಟೆಲ್ ಬಂದ್‌ ಸಂಭವ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಇರಾನ್
ಕೊಲ್ಲಿ ಯುದ್ಧ
ಅಮೇರಿಕಾ
Latest Videos
Recommended Stories
Recommended image1
Iran War: ಸೌದಿ ವಾಯುನೆಲೆ ಮೇಲೆ 6 ಕ್ಷಿಪಣಿಗಳ ದಾಳಿ, ಹೊಡೆದುರುಳಿಸಿದ ಸೇನೆ
Recommended image2
Warship: ಸೈಪ್ರಸ್ ರಕ್ಷಣೆಗೆ ಹೊರಟ ಬ್ರಿಟನ್ ಯುದ್ಧನೌಕೆ; ರಾಯಲ್ ನೇವಿ ವಾರ್‌ಶಿಪ್ ಶಕ್ತಿಗೆ ಬೆಚ್ಚಿಬಿದ್ದ ಜಗತ್ತು!!
Recommended image3
ಚೆನ್ನೈನ ಅಮೆರಿಕ ಕಾನ್ಸಲ್ ಜನರಲ್ ಆಗಿ ಮರಿಯಾನಾ ಅಧಿಕಾರ ಸ್ವೀಕಾರ
Related Stories
Recommended image1
ಖಮೇನಿ ಹತ್ಯೆ ಬಳಿಕ ಇಸ್ರೇಲ್ ದಾಳಿಯಲ್ಲಿ ನೂತನ ನಾಯಕ ಮಜ್ತೊಬಾಗೆ ಗಾಯ, ಇರಾನ್ ಟಿವಿ ವರದಿ
Recommended image2
ಇರಾನ್ ಮೇಲೆ ಅಮೆರಿಕಾ ಇಸ್ರೇಲ್ ದಾಳಿಯಿಂದ ಜಗತ್ತಿನ ಬೇರೆ ದೇಶಗಳು ಅನುಭವಿಸುತ್ತಿರುವ ಹಾನಿ ಎಷ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved