ಚಿನ್ನ ಕರಗಿಸಿ ಹಣ ನೀಡುವ ಎಟಿಎಂ: ಮಾರುಕಟ್ಟೆಯಲ್ಲಿ ಹೊಸ ಸಂಚಲನ
ಶಾಂಘೈನಲ್ಲಿ ಚಿನ್ನ ಕರಗಿಸಿ ಹಣ ನೀಡುವ ಹೊಸ ಎಟಿಎಂ ಸಂಚಲನ ಮೂಡಿಸಿದೆ. ಈ ಎಟಿಎಂ ಚಿನ್ನದ ಆಭರಣವನ್ನು ಕರಗಿಸಿ, ಅದರ ತೂಕಕ್ಕೆ ಅನುಗುಣವಾಗಿ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ.
14

ಚೀನೀಯರು ಏನೇನೋ ಆವಿಷ್ಕರಿಸುತ್ತಿರುತ್ತಾರೆ. ಇದೀಗ ಅದಕ್ಕೆ ಹೊಸ ಸೇರ್ಪಡೆ ಚಿನ್ನ ಕರಗಿಸಿ ಹಣ ನೀಡುವ ಎಟಿಎಂ. ಈ ಕುರಿತ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
24
ಹೌದು. ಶಾಂಘೈನಲ್ಲಿರುವ ಹೊಸ ಎಟಿಎಂ ಜಗತ್ತಿನ ಗಮನ ಸೆಳೆಯುತ್ತಿದೆ. ಈ ಯಂತ್ರವನ್ನು ಮೊದಲು ಅಂತಾರಾಷ್ಟ್ರೀಯ ಗಮನಕ್ಕೆ ತಂದವರು ಟರ್ಕಿಶ್ ತಂತ್ರಜ್ಞಾನ ಪ್ರಭಾವಿ ತನ್ಸು ಯೆಗೆನ್. ಇದೀಗ ಈ ಹೊಸ ಎಂಟಿಎಂ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿದೆ.
34
‘ಶಾಂಘೈನಲ್ಲಿರುವ ಚಿನ್ನದ ಎಟಿಎಂ ಚಿನ್ನವನ್ನು ಕರಗಿಸುತ್ತದೆ ಮತ್ತು ಅದರ ತೂಕಕ್ಕೆ ಅನುಗುಣವಾದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ. ಈ ಎಟಿಎಂಗೆ ನಿಮ್ಮಲ್ಲಿರುವ ಚಿನ್ನ ಜಮೆ ಮಾಡಿ, ಹಣ ಪಡೆದುಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ.
44
ಕಾರ್ಯನಿರ್ವಹಣೆ ಹೇಗೆ?:
ಈ ಎಟಿಎಂನಲ್ಲಿ ಚಿನ್ನದ ಆಭರಣ ಹಾಕಬೇಕು. ಆಗ 1,200 ಡಿಗ್ರಿ ತಾಪಮಾನದಲ್ಲಿ ಚಿನ್ನ ಎಟಿಎಂ ಯಂತ್ರದಲ್ಲೇ ಕರಗುತ್ತದೆ. ಚಿನ್ನದ ಶುದ್ಧತೆಯನ್ನು ತಕ್ಷಣವೇ ಹೇಳುತ್ತದೆ, ನೇರ ಬೆಲೆಯನ್ನು ಸಹ ತೋರಿಸುತ್ತದೆ. ಬ್ಯಾಂಕ್ ಖಾತೆ ವಿವರ ನಮೂದಿಸಿದಾಗ ಅದಕ್ಕೆ ಅನುಗುಣವಾದ ಮೌಲ್ಯದ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ. ಈ ಎಟಿಎಂನ ಈ ವೈಶಿಷ್ಟ್ಯಗಳನ್ನು ಗ್ರಾಹಕರು ತುಂಬಾ ಇಷ್ಟಪಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ
Latest Videos