ದುಬೈನ ಐಕಾನಿಕ್ ಬುರ್ಜ್ ಅಲ್ ಅರಬ್ ಕಟ್ಟಡ 25 ವರ್ಷಗಳ ಬಳಿಕ ಕ್ಲೋಸ್, ಕಾರಣವೇನು?
ದುಬೈನ ಐಕಾನಿಕ್ ಬುರ್ಜ್ ಅಲ್ ಅರಬ್ ಕಟ್ಟಡ 25 ವರ್ಷಗಳ ಬಳಿಕ ಕ್ಲೋಸ್, ಕಾರಣವೇನು?, ದುಬೈ ಎಂದಾಗ ತಕ್ಷಣ ನೆನಪಿಗೆ ಬರುವ ಕಟ್ಟಡಗಳ ಪೈಕಿ ಬುರ್ಜ್ ಅಲ್ ಅರಬ್. ವಿಶ್ವದ ಏಕೈಕ 7 ಸ್ಟಾರ್ ಹೊಟೆಲ್ ಇರುವ ಈ ಕಟ್ಟದ ಬಂದ್ ಆಗುತ್ತಿದೆ.

ದುಬೈನ ಐಕಾನಿಕ್ ಕಟ್ಟಡ
ದುಬೈನಲ್ಲಿ ಗಗನ ಚುಂಬಿ ಕಟ್ಟಗಳೇ ರಾರಾಜಿಸುತ್ತದೆ. ದುಬೈ ಕುರಿತು ಹೇಳುವಾಗ, ನೆನಪಿಸಿಕೊಳ್ಳುವಾಗ ಹಲವು ಐಕಾನಿಕ್ ಕಟ್ಟಡಗಳು ಕಣ್ಣಮುಂದೆ ಬರುತ್ತದೆ. ವಿಶ್ವದ ಅತೀ ಎತ್ತರದ ಬುರ್ಜ್ ಖಲೀಫಾ, ಬುರ್ಜ್ ಅಲ್ ಅರಬ್ ಸೇರಿದಂತೆ ಹಲವು ವಿಶೇಷ ವಿನ್ಯಾಸದ ಕಟ್ಟಡಗಳು ಗಮನ ಸೆಳೆಯುತ್ತದೆ. ಈ ಪೈಕಿ 7 ಸ್ಟಾರ್ ಹೊಟೆಲ್ ಇರುವ ಐಕಾನಿಕ್ ಬುರ್ಜ್ ಅಲ್ ಅರಬ್ ಕಟ್ಟಡ ಇದೀಗ ಬಂದ್ ಆಗುತ್ತಿದೆ.
25 ವರ್ಷದ ಬಳಿಕ ಬುರ್ಜ್ ಅಲ್ ಅರಬ್ ಕ್ಲೋಸ್
ಬುರ್ಜ್ ಅಲ್ ಅರಬ್ ಕಟ್ಟಡ ದುಬೈನ ಅತ್ಯಂತ ಆಕರ್ಷಕ ಕಟ್ಟಡ. ಬೋಟ್ ರೀತಿಯಲ್ಲಿರುವ ಈ ಕಟ್ಟಡ ಪ್ರವಾಸಿಗರ ಕಣ್ಮನ ಸೆಳೆಯುವ ಕಟ್ಟಡ. ಕಳೆದ 25 ವರ್ಷಗಳಿಂದ ಈ ಐಕಾನಿಕ್ ಕಟ್ಟಡ ದುಬೈನಲ್ಲಿ ತಲೆ ಎತ್ತಿ ನಿಂತಿದೆ. ಆದರೆ ಇದೀಗ ಈ ಕಟ್ಟಡವನ್ನು ಮುಚ್ಚಲಾಗುತ್ತಿದೆ.
ಬುರ್ಜ್ ಅಲ್ ಅರಬ್ ಕಟ್ಟಡ ಮುಚ್ಚುತ್ತಿರುವುದೇಕೆ
ಐಕಾನಿಕ್ ಕಟ್ಟಡ ಮುಚ್ಚಲು ಪ್ರಮುಖ ಕಾರಣ ನವೀಕರಣ. ಬರೋಬ್ಬರಿ 18 ತಿಂಗಳ ಕಾಲ ಈ ಕಟ್ಟಡ ಮುಚ್ಚಲಾಗುತ್ತಿದೆ. ಕಟ್ಟಡ ಇಂಟಿರೀಯರ್ ಸೇರಿದಂತೆ ಹಲವು ಕಾಮಗಾರಿಗಳು ನಡೆಸಲು ಒಂದೂವರೆ ವರ್ಷಗಳ ಕಾಲ ಕಟ್ಟಡ ಮುಚ್ಚಲಾಗುತ್ತಿದೆ. ಇದು ಹಲವರ ಬೇಸರಕ್ಕೂ ಕಾರಣವಾಗಿದೆ.
ಏಕೈಕ 7 ಸ್ಟಾರ್ ಹೊಟೆಲ್
ಬುರ್ಜ್ ಅಲ್ ಅರಬ್ ವಿಶ್ವದ ಏಕೈಕ 7 ಸ್ಟಾರ್ ಹೊಟೆಲ್. ಅತ್ಯಂತ ಐಷಾರಾಮಿ ಹೊಟೆಲ್ ಇದಾಗಿದೆ. ಈ ಹೊಟೆಲ್‌ನಲ್ಲಿ ಒಂದು ದಿನ ತಂಗಲು ಆರಂಭಿಕ ಬೆಲೆ 1600 ಯುಎಸ್ ಡಾಲರ್. ಅಂದರೆ 1.35 ಲಕ್ಷ ರೂನಿಂದ 1.40 ಲಕ್ಷ ರೂಪಾಯಿ. ಇನ್ನು ಹೈ ಸ್ಯೂಟ್ ಕೊಠಡಿ ಬೆಲೆ 3000 ಯುಎಸ್ ಡಾಲರ್‌ನಿಂದ 5000 ಯುಎಸ್ ಡಾಲರ್ ವರೆಗಿದೆ.
1999ರಲ್ಲಿ ಉದ್ಘಾಟನೆಗೊಂಡ ಬುರ್ಜ್ ಅಲ್ ಅರಬ್
1900ರಲ್ಲಿ ಶೇಕ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ಟೊಮ್ ಸೂಚನೆಯಂತೆ ಬುರ್ಜ್ ಅಲ್ ಅರಬ್ ಕಟ್ಟಡ ನಿರ್ಮಾಣ ತಯಾರಿ ಆರಂಭಗೊಂಡಿತ್ತು. ಐಫೆಲ್ ಟವರ್, ಒಪೆರಾ ಹೌಸ್ ರೀತಿ ವಿಶ್ವವನ್ನೇ ಸೆಳೆಯುವ ಕಟ್ಟಡವಾಗಬೇಕು ಅನ್ನೋ ನಿರ್ದೇಶನ ನೀಡಿದ್ದರು. ಇದರಂತೆ ಈ ಕಟ್ಟಡ ಕಾಮಗಾರಿ ಪೂರ್ಣಗೊಂಡು 1999ರಲ್ಲಿ ಉದ್ಘಾಟನೆಗೊಂಡಿತ್ತು.
1999ರಲ್ಲಿ ಉದ್ಘಾಟನೆಗೊಂಡ ಬುರ್ಜ್ ಅಲ್ ಅರಬ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

