MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಈಗ ಚೀನಾ ಅಲ್ಲ; ಜಪಾನ್‌ ಅಥವಾ ಭಾರತನಾ?

ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಈಗ ಚೀನಾ ಅಲ್ಲ; ಜಪಾನ್‌ ಅಥವಾ ಭಾರತನಾ?

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಮೊದಲ ಸ್ಥಾನದಲ್ಲಿದ್ದ ಚೀನಾ ದಾಖಲೆಯ ಕಡಿಮೆ ಜನನ ಪ್ರಮಾಣದಿಂದಾಗಿ ಕೆಳಗಿನ ಸ್ಥಾನಕ್ಕಿಳಿದಿದೆ. ಈಗ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರೋದು ಯಾವ ದೇಶ, ಭಾರತನಾ ಅಥವಾ ಜಪಾನಾ?

2 Min read
Author : Vinutha Perla
| Updated : Jan 17 2024, 03:34 PM IST
Share this Photo Gallery
  • FB
  • TW
  • Linkdin
  • Whatsapp
18

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಮೊದಲ ಸ್ಥಾನದಲ್ಲಿದ್ದ ಚೀನಾ ದಾಖಲೆಯ ಕಡಿಮೆ ಜನನ ಪ್ರಮಾಣದಿಂದಾಗಿ ಕೆಳಗಿನ ಸ್ಥಾನಕ್ಕಿಳಿದಿದೆ.  ಕಟ್ಟುನಿಟ್ಟಾದ ಲಾಕ್‌ಡೌನ್‌ಗಳು ಕೊನೆಗೊಂಡ ನಂತರ ಚೀನಾದಲ್ಲಿ ಕಡಿಮೆ ಜನನ ದರವಿದೆ. COVID-19 ಸಾವುಗಳಿಂದಾಗಿ ಚೀನಾದ ಜನಸಂಖ್ಯೆಯು 2023ರಲ್ಲಿ ಸತತ ಎರಡನೇ ವರ್ಷಕ್ಕೆ ಕುಸಿದಿದೆ. 

28

2023ರಲ್ಲಿ ಚೀನಾದಲ್ಲಿ ಒಟ್ಟು ಜನರ ಸಂಖ್ಯೆ 2.08 ಮಿಲಿಯನ್ ಅಥವಾ 0.15% 1.409 ಶತಕೋಟಿಗೆ ಇಳಿದಿದೆ ಎಂದು ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಹೇಳಿದೆ.  2022ರಲ್ಲಿ ಜನಸಂಖ್ಯೆ 850,000 ಕುಸಿತ ಕಂಡಿತು. ಆ ನಂತರದ ಜನಸಂಖ್ಯೆಯಲ್ಲಾದ ಅತೀ ಕಡಿಮೆ ಇಳಿಕೆ ಇದಾಗಿದೆ. ಇದು 1961ರಿಂದ ಮಾವೋ ಝೆಡಾಂಗ್ ಯುಗದ ಮಹಾ ಕ್ಷಾಮದ ಸಮಯದಲ್ಲಿ ಕಂಡು ಬಂದಿರುವುದಕ್ಕಿಂತಲೂ ಕಡಿಮೆ ಜನಸಂಖ್ಯೆಯಾಗಿದೆ. 

38

ಕೋವಿಡ್‌ನಿಂದಾಗಿ ಚೀನಾದಲ್ಲಿ ಕಳೆದ ವರ್ಷ ಒಟ್ಟು ಸಾವುಗಳು 6.6% ದಿಂದ 11.1 ಮಿಲಿಯನ್‌ಗೆ ಏರಿತು. ಇದು ಜನಸಂಖ್ಯೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಹೊಸ ಜನನಗಳು 5.7% ರಷ್ಟು ಕುಸಿದು 9.02 ಮಿಲಿಯನ್‌ನಷ್ಟಿದ ಜನನ ಪ್ರಮಾಣವು 6.39ರಷ್ಟು ಕಡಿಮೆಯಾಗಿದೆ.

48

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ, ಚೀನಾ ನಂತರದ ಸ್ಥಾನದಲ್ಲಿದೆ. ಸಮೀಕ್ಷೆಯ ಪ್ರಕಾರ ಚೀನಾ ಜನಸಂಖ್ಯೆ 1,453, 356, 401 ಮತ್ತು ಭಾರತದ ಜನಸಂಖ್ಯೆ 1, 414, 273, 827 ರಷ್ಟಿದೆ . ಚೀನಾದ ಜನಸಂಖ್ಯೆಯು ಪ್ರಪಂಚದ ಒಟ್ಟು ಜನಸಂಖ್ಯೆಯ ಸುಮಾರು 18.09% ರಷ್ಟಿದೆ

58

1980ರಿಂದ 2015ರ ವರೆಗೆ ಜಾರಿಗೆ ತಂದ ಒಂದು ಮಗು ನೀತಿ ಮತ್ತು ಆ ಅವಧಿಯಲ್ಲಿ ಅದರ ತ್ವರಿತ ನಗರೀಕರಣದ ಪರಿಣಾಮವಾಗಿ ಚೀನಾ ದೇಶದಲ್ಲಿ ಜನನಗಳು ದಶಕಗಳಿಂದ ಕುಸಿಯುತ್ತಿವೆ. ಜಪಾನ್‌ನ ಜನನ ಪ್ರಮಾಣವು 2022 ರಲ್ಲಿ 1,000 ಜನರಿಗೆ 6.3 ಆಗಿದ್ದರೆ, ದಕ್ಷಿಣ ಕೊರಿಯಾದ ದರವು 4.9 ಆಗಿತ್ತು

68

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಭಾರತವು ಕಳೆದ ವರ್ಷ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಚೀನಾವನ್ನು ಮೀರಿಸಿದೆ.
ದೀರ್ಘಾವಧಿಯ, U.N. ತಜ್ಞರು ಚೀನಾದ ಜನಸಂಖ್ಯೆಯು 2050 ರ ವೇಳೆಗೆ 109 ಮಿಲಿಯನ್‌ಗಳಷ್ಟು ಕುಗ್ಗುತ್ತದೆ ಎಂದು ಹೇಳುತ್ತಾರೆ. 

78

ಹೆಚ್ಚಾಗಿರುವ ಶಿಶುಪಾಲನಾ ಮತ್ತು ಶಿಕ್ಷಣದ ವೆಚ್ಚಗಳು ಅನೇಕ ಚೀನೀ ದಂಪತಿಗಳಿಗೆ ಮಕ್ಕಳನ್ನು ಹೊಂದುವುದನ್ನು ಮುಂದೂಡುವಂತೆ ಮಾಡಿದೆ. ನಿರುದ್ಯೋಗದ ಸಮಸ್ಯೆ ಯುವಕರು ಅವಿವಾಹಿತರಿಗೆ ಉಳಿಯಲು ಕಾರಣವಾಗಿದೆ. ಲಿಂಗ ತಾರತಮ್ಯ ಮತ್ತು ಮಹಿಳೆಯರು ಕುಟುಂಬದಲ್ಲಿ ಉಸ್ತುವಾರಿ ನೋಡಿಕೊಳ್ಳಬೇಕು ಅನ್ನೋ ಸಾಂಪ್ರದಾಯಿಕ ನಿರೀಕ್ಷೆಗಳು ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ ಎಂದು ಜನಸಂಖ್ಯಾಶಾಸ್ತ್ರಜ್ಞರು ಹೇಳುತ್ತಾರೆ. 

88

ಚೀನಾ ಸರ್ಕಾರ ಮಕ್ಕಳು ಮಹಿಳೆಯರನ್ನು ಮಾಡಿಕೊಳ್ಳಲು ಹಲವು ಯೋಜನೆಗಳನ್ನು ಘೋಷಿಸಿತ್ತು. ತೆರಿಗೆ ವಿನಾಯಿತಿಗಳು, ದೀರ್ಘಾವಧಿಯ ಹೆರಿಗೆ ರಜೆ ಮತ್ತು ವಸತಿ ಸಬ್ಸಿಡಿಗಳು ಸೇರಿದಂತೆ ಹೆರಿಗೆಯನ್ನು ಉತ್ತೇಜಿಸಲು ಸ್ಥಳೀಯ ಸರ್ಕಾರಗಳು ವಿವಿಧ ಕ್ರಮಗಳನ್ನು ಪ್ರಕಟಿಸಿದ್ದವು. ಹೀಗಿದ್ದೂ ಚೀನಾದಲ್ಲಿ ಜನಸಂಖ್ಯೆ ಗಣನೀಯವಾಗಿ ಕುಸಿದಿದೆ. 
 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

VP
Vinutha Perla
ಚೀನಾ
ಭಾರತ
ಕೋವಿಡ್

Latest Videos
Recommended Stories
Recommended image1
ಮೃತ ಮಹಿಳೆಯ ಗರ್ಭದಲ್ಲಿ ಅರಳಿದ ಜೀವ: ಗರ್ಭಕೋಶದ ಕಸಿ ಬಳಿಕ ಗಂಡು ಮಗುವಿಗೆ ಜನ್ಮನೀಡಿದ ಮಹಿಳೆ
Recommended image2
ಮೋದಿ ಜೇಬಲ್ಲಿರೋ ಕೇಸರಿ ಬಣ್ಣದ ಜತೆ ನೆತನ್ಯಾಹು ಹೆಂಡತಿ ಡ್ರೆಸ್ ಮ್ಯಾಚ್ ಎಂದು ಇಸ್ರೇಲ್ ಪ್ರಧಾನಿ! ವಿಡಿಯೋ ವೈರಲ್
Recommended image3
ಕೀನ್ಯಾ ಅಸೆಂಬ್ಲಿಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಯುವ ನಾಯಕ ಕೆಲ್ಲಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved