ಕೋವಿಡ್ ಕೇಸ್‌ನಲ್ಲಿ ಅಮೆರಿಕ ಕೋರ್ಟ್‌ನಲ್ಲಿ ಚೀನಾ ಸೋಲು, 21 ಲಕ್ಷ ಕೋಟಿ ರೂ. ದಂಡ!
ಕೋವಿಡ್-19 ಸಂಬಂಧಿತ ಕೇಸಲ್ಲಿ ಅಮೆರಿಕ ಮತ್ತೆ ಚೀನಾ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ.. ತಪ್ಪಾಗಿ ಲೆಕ್ಕಾಚಾರ ಮಾಡಿದ ಚೀನಾಗೆ ಮುಖಭಂಗ ಆಗಿದೆ.

ಕೋವಿಡ್ ಕೇಸ್
ಕೋವಿಡ್-19 ಸಂಬಂಧಿತ ಕೇಸಲ್ಲಿ ಅಮೆರಿಕ ಮತ್ತೆ ಚೀನಾ ಲೆಕ್ಕಾಚಾರ ಉಲ್ಟಾ ಮಾಡ್ಬಿಟ್ಟಿದೆ.. ತಪ್ಪಾಗಿ ಲೆಕ್ಕಾಚಾರ ಮಾಡಿದ ಚೀನಾಗೆ ಮುಖಭಂಗ ಆಗಿದೆ.
ಭಾರಿ ಜಯ
ಅಮೆರಿಕ ಕೋರ್ಟ್‌ನಲ್ಲಿ ಚೀನಾ ವಿರುದ್ಧ ಮಿಸೌರಿ ಆಡಳಿತಕ್ಕೆ ಭಾರಿ ಜಯ ಸಿಕ್ಕಿದೆ. ಈ ಮೂಲಕ ಚೀನಾ ವಿರುದ್ಧ ಈ ಸಂಗತಿಯಲ್ಲಿ ಜಯ ಪಡೆದಂತಾಗಿದೆ.
ದೊಡ್ಡ ಮೊತ್ತದ ಪರಿಹಾರ
ಚೀನಾ ಸೋತಿದ್ದಕ್ಕೆ ಕೋಟ್ಯಂತರ ರೂಪಾಯಿ ದಂಡ ಕಟ್ಟಬೇಕಾಗುತ್ತೆ. ಇದು ಅಮೆರಿಕಾದ ಪಾಲಿಗೆ ಮಹಾ ವರದಾನವಾಗಿದೆ. ಆದರೆ, ಈ ಬಗ್ಗೆ ಚೀನಾಗೆ ಸ್ವಲ್ಪ ಅರಿವಿತ್ತು ಎನ್ನಲಾಗುತ್ತಿದೆ.
ದಂಡದ ಮೊತ್ತ
ಅಮೆರಿಕ ಕೋರ್ಟ್ ಚೀನಾಗೆ 2400 ಕೋಟಿ ಡಾಲರ್ ಪರಿಹಾರ ಕೊಡೋಕೆ ಹೇಳಿದೆ. ಇಂಡಿಯನ್ ರುಪೀಸ್‌ನಲ್ಲಿ 21 ಲಕ್ಷ ಕೋಟಿ ಆಗುತ್ತೆ!
ಕೇಸಿನ ವಿಷಯ
ಚೀನಾ ಸರ್ಕಾರ ಕೊರೊನಾ ಟೈಮಲ್ಲಿ ಪಿಪಿಇ ಕಿಟ್ ಸೇರಿ ಇಂಪಾರ್ಟೆಂಟ್ ಮೆಡಿಕಲ್ ವಸ್ತುಗಳ ಉತ್ಪಾದನೆ, ಖರೀದಿ, ರಫ್ತಿಗೆ ತಡೆಯೊಡ್ಡಿ, ಸ್ಟಾಕ್ ಮಾಡಿದ್ರು ಅಂತ ಕೇಸ್ ಹಾಕಿದ್ರು.
ತೀರ್ಪು ಪ್ರಕಟ
ಕೊರೊನಾ ಟೈಮಲ್ಲೇ ಕೇಸ್ ಹಾಕಿದ್ದು. ಸುಮಾರು 5 ವರ್ಷ ಆದ್ಮೇಲೆ ಅಮೆರಿಕದ ಫೆಡರಲ್ ಜಡ್ಜ್ ತೀರ್ಪು ಹೇಳಿದ್ದಾರೆ. ಈ ಮೂಲಕ ಹಳೆಯ ಕೇಸ್‌ನಿಂದ ಅಮೆರಿಕಾಕ್ಕೆ ಭಾರೀ ಲಾಭ ಅಗಿದೆ.
ಜಡ್ಜ್ ಹೇಳಿಕೆ
ಮಿಸೌರಿ ಅಟಾರ್ನಿ ಜನರಲ್ ಆಂಡ್ರ್ಯೂ ಬೈಲಿ ಒಂದು ಸ್ಟೇಟ್‌ಮೆಂಟ್‌ನಲ್ಲಿ, ಜಗತ್ತಿಗೆ ಕೋವಿಡ್-19 ಹಬ್ಬಿಸಿದ್ದಕ್ಕೆ ಚೀನಾ ವಿರುದ್ಧದ ಹೋರಾಟದಲ್ಲಿ ಇದು ಮಿಸೌರಿ ಮತ್ತೆ ಅಮೆರಿಕಗೆ ಸಿಕ್ಕ ಜಯ ಅಂದಿದ್ದಾರೆ.
ಕೋರ್ಟ್‌ಗೆ ಚೀನಾ ಗೈರು
ಈ ಕೇಸಲ್ಲಿ ಚೀನಾ ಕಡೆಯಿಂದ ಯಾರೂ ಕೋರ್ಟ್‌ಗೆ ಬಂದಿರಲಿಲ್ಲ. ಆದ್ರೂ ಒಂದೇ ಕಡೆಯಿಂದ ಕೇಸ್ ವಿಚಾರಣೆ ನಡೆಯಿತು. ಅಚ್ಚರಿ ಎಂಬಂತೆ, ಅಮೆರಿಕಾ ಗೆಲವಿನ ನಗೆ ಬೀರಿದೆ.
ಚೀನಾಗೆ ಎಚ್ಚರಿಕೆ
ಜಡ್ಜ್ ಚೀನಾಗೆ ವಾರ್ನಿಂಗ್ ಕೊಟ್ಟು, ಚೀನಾ ಕಡೆಯಿಂದ ಯಾರೂ ಕೋರ್ಟ್‌ಗೆ ಬರಲು ರೆಡಿ ಇರ್ಲಿಲ್ಲ. ಆದ್ರೆ ಅದ್ರಿಂದ ಅವರು ಕಷ್ಟ ಮತ್ತೆ ಎಕನಾಮಿಕ್ ನಷ್ಟದಿಂದ ಪಾರಾಗಲ್ಲ. ಚೀನಾ ಆಸ್ತಿ ಮುಟ್ಟುಗೋಲು ಹಾಕಿ ಪ್ರತಿ ಪೈಸಾನು ವಸೂಲಿ ಮಾಡ್ತೀವಿ ಅಂದಿದ್ರು.'
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್
ಜಡ್ಜ್ ಸೋಶಿಯಲ್ ಮೀಡಿಯಾದಲ್ಲಿ, 'ಓ ಚೀನಾ, ಮಿಸೌರಿಗೆ ನೀನು 2400 ಕೋಟಿ ಡಾಲರ್ ಕೊಡಬೇಕು. ನಾವು ಕೋರ್ಟ್‌ನಲ್ಲಿ ಗೆದ್ದಿದ್ದೀವಿ. ದುಡ್ಡು ಕೊಡು, ಇಲ್ಲಾಂದ್ರೆ ಮಿಸೌರಿಯಲ್ಲಿದ ನಿನ್ನ ಆಸ್ತಿ ಜಪ್ತಿ ಮಾಡ್ತೀವಿ' ಅಂದಿದ್ರು.