ಹೊಸ ವರುಷಕ್ಕೆ ಹರುಷ ತರುವ ಕನ್ನಡ ಪ್ರಭ ಯುಗಾದಿ ವಿಶೇಷಾಂಕ
ಯುಗಾದಿ ಎಂದರೆ ಹೊಸ ವರುಷದ ಸಂಭ್ರಮ. ಈ ಸಂಭ್ರಮದಲ್ಲಿ ನಿಮ್ಮ ಖುಷಿಯನ್ನು ಮತ್ತಷ್ಟು ಹೆಚ್ಚಿಸಲು ಕನ್ನಡಪ್ರಭ ಯುಗಾದಿ ವಿಶೇಷಾಂಕ ಮಾರುಕಟ್ಟೆಯಲ್ಲಿ ಲಭ್ಯ. ಏನಿದೆ ವಿಶೇಷ ಇದರಲ್ಲಿ?
110

ನಲ್ಲತಂಬಿ ಹೊಸ ಬಗೆಯ ಕಥೆ ಪಿಂಕ್ ಆಂಡ್ ಬ್ಲ್ಯೂ. ಇದರ ನಿರೂಪಣೆಯೂ ಡಿಫರೆಂಟಾಗಿದೆ. ನದಿ, ರೆಸ್ಟೊರೆಂಟ್, ಮರ, ಪಿಂಕ್ ಆಂಡ್ ಬ್ಲ್ಯೂ ಎನ್ವೆಲಪ್‌ಗಳ ಮೂಲಕ, ಪಾತ್ರಗಳ ಮೂಲಕ ಕಥೆ ಬೇರೆ ಬೇರೆ ಆ್ಯಂಗಲ್ ಪಡೆಯೋದೇ ವಿಶೇಷ.

210
ಜ.ನಾ ತೇಜಶ್ರೀ ಹಂಬಲಿಸುವುದೊಂದು, ಆಗುವುದು ಇನ್ನೊಂದು. ಅದನ್ನು ವಿಭಿನ್ನವಾಗಿ ಹೇಳುವುದು ‘ಕಾಣುವ ಕಣ್ಕಟ್ಟಿಲ್ಲ’ ಕಥೆ. ಕವಯತ್ರಿಯಾಗಿ ಸುಪರಿಚಿತವಾಗಿರುವ ಜ.ನಾ ತೇಜಶ್ರೀ ಕಥಾ ಜಗತ್ತಿನಲ್ಲೂ ಸಂವೇದನಾಶೀಲರಾಗಿ ಗುರುತಿಸಿಕೊಂಡವರು. ಇಲ್ಲಿ ಮಗುವಿಗಾಗಿ ಹಂಬಲಿಸುವ ಹೆಣ್ಣಿನ ಚಿತ್ರಣವನ್ನು ಗಾಢವಾಗಿ ಕಟ್ಟಿಕೊಟ್ಟಿದ್ದಾರೆ.

310
ಟಿ.ಎಂ ಸುಬ್ಬರಾಯ ವ್ಯವಹಾರ ಎಂಬುದು ಸಂಬಂಧಗಳ ನಡುವೆಯೇ ಹೇಗೆ ಆಟವಾಡುತ್ತೆ ಎಂಬುದನ್ನು ಪರಿಣಾಮಕಾರಿಯಾಗಿ ವಿವರಿಸುವ ಕತೆ ಒತ್ತುವರಿ. ಸಾಮಾನ್ಯವಾಗಿ ಒತ್ತುವರಿ ಅನ್ನುವುದು ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದಕ್ಕೆ ಅನ್ವಯಿಸುವ ಶಬ್ದ. ಆದರೆ ಇಲ್ಲಿ ಒತ್ತುವರಿಯ ಅರ್ಥವ್ಯಾಪ್ತಿ ಹಿಗ್ಗುತ್ತದೆ. ಅದು ಹೇಗೆ ಅನ್ನುವುದನ್ನ ತಿಳಿಯಲು ಈ ಕಥೆ ಓದಬೇಕು.

410
ಶ್ರೀಧರ ಬಳಗಾರ ನಚ್ಚಣ್ಣ ಎಂಬ ಪಾತ್ರದ ಮೂಲಕ ಒಂದು ಕಾಲಘಟ್ಟವನ್ನು, ಮಲೆನಾಡಿನ ಘಮಲನ್ನು ಕಥೆಯಲ್ಲಿ ಹಿಡಿದಿಟ್ಟಿದ್ದಾರೆ ಬಳಗಾರ. ನುಚ್ಚಣ್ಣನ ವ್ಯಕ್ತಿತ್ವವನ್ನು ಹಲವು ಅವಸ್ಥಾಂತರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಮನುಷ್ಯನ ವ್ಯಕ್ತಿತ್ವ ನಿವಾರಿಸುವಲ್ಲಿ, ಆತನನ್ನು ಟ್ರೀಟ್ ಮಾಡುವುದರಲ್ಲಿ ಹಣ ಹೇಗೆ ಮುಖ್ಯವಾಗುತ್ತೆ ಎಂಬುದನ್ನು ಹೇಳುತ್ತೆ ಈ ಕಥೆ.

510
ಡಾ.ಎಚ್.ಎಸ್ ಅನುಪಮಾ ಲೈಂಗಿಕ ಅಸಮಾನತೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ತೃತೀಯ ಲಿಂಗಿಗಳ ಬದುಕು ದುಸ್ತರವಾಗುತ್ತಿದೆ. ಅವರ ತಳಮಟ್ಟದ ಬದುಕು, ಸಮಾಜ ಅವರನ್ನು ನೋಡುವ ರೀತಿ, ನೋವು, ಅವಮಾನಗಳನ್ನು ಒಂದು ಹೆಣಿಗೆಯಲ್ಲಿ ನೇಯ್ದಿದ್ದಾರೆ ಅನುಪಮಾ.

610
ಟಿ.ಎಸ್ ಗೊರವರ ತಮ್ಮ ಅನುಭವಕ್ಕೆ ದಕ್ಕಿದ ತಳಮಟ್ಟದ ಸಮುದಾಯದ ಬದುಕನ್ನು ಕಥೆಗಳಲ್ಲಿ ಪರಿಚಯಿಸಿದವರು ಟಿ.ಎಸ್ ಗೊರವರ. ಅವರ ಕುರಿಮಂದೆ ಕಥೆ ಮೂಕನೊಬ್ಬನ ಜಗತ್ತಿನ ಸುತ್ತ ಸುತ್ತುತ್ತದೆ. ಕುರಿ ಮೇಯಿಸುವ ಬಾಯಿ ಬಾರದ ಮೂಕ ಒಂದು ಹಂತದಲ್ಲಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಲಾಗದೇ ಅಸಹಾಯಕತೆಯಿಂದ ಒದ್ದಾಡುತ್ತಾನೆ. ತಾನು ಮೇಯಿಸುವ ಕುರಿಗೂ ತನಗೂ ಹೆಚ್ಚಿನ ವ್ಯತ್ಯಾಸವಿಲ್ಲ ಎಂಬ ಕಹಿ ವಾಸ್ತವ ಅವನನ್ನು ಅಲ್ಲಾಡಿಸಿಬಿಡುತ್ತದೆ.

710
ನಾಗರಾಜ ವಸ್ತಾರೆ ಪ್ರಖ್ಯಾತ ಮಾಡೆಲ್ ಒಬ್ಬ ತನ್ನ ಜನಪ್ರಿಯತೆಯ ತುತ್ತ ತುದಿಯಲ್ಲಿ ಎಲ್ಲದರಿಂದಲೂ ಕಳಚಿಕೊಂಡು ಅಜ್ಞಾತವಾಸಿಯಾಗಲು ಬಯಸುತ್ತಾನೆ. ಒಂದು ಹಳ್ಳಿಯಲ್ಲಿ ಹೆಸರು, ಊರಿನ ಹಂಗಿಲ್ಲದೇ ಬದುಕಲಾರಂಭಿಸುತ್ತಾನೆ. ಒಂದು ಹಂತದಲ್ಲಿ ಅವನಿಷ್ಟದ ಅಂಗಡಿಯಲ್ಲಿ ಕಾಣಸಿಗುವ ಹುಡುಗಿ ಆತನನ್ನು ಗುರುತಿಸುತ್ತಾಳೆ. ಆಮೇಲೆ ಏನಾಗುತ್ತೆ ಅನ್ನೋದನ್ನು ಯುಗಾದಿ ವಿಶೇಷಾಂಕದಲ್ಲಿ ಓದಿ.

810
ಎಂ.ಎಸ್.ಶ್ರೀರಾಮ್ ಸಂವೇದನಾಶೀಲ ಕಥೆಗಾರ ಎಂ.ಎಸ್ ಶ್ರೀರಾಮ್ ಈ ಕಾಲದ ಮಹತ್ವದ ಕತೆಗಾರರಲ್ಲಿ ಒಬ್ಬರು. ಬಹುತ್ವದ ಪರಿಕಲ್ಪನೆ ಮಾಯವಾಗುತ್ತಿರುವ ಇಂದಿನ ದಿನಮಾನದಲ್ಲಿ ಅವರ ‘ಆಗಂತುಕ’ ಕಥೆ ಬಹಳ ಮಹತ್ವ ಪಡೆಯುತ್ತದೆ. ಭಾರತೀಯ ಮೂಲದ ಕೀನ್ಯಾದಲ್ಲಿ ಬೆಳೆಯುವ ಅಖ್ತರ್‌ಗೆ ಭಾರತ ಪರಿಚಯವಾದದ್ದು ವಿದ್ಯಾಭ್ಯಾಸಕ್ಕೆ ಆತ ಇಲ್ಲಿಗೆ ಬಂದಾಗ. ಆತ ಮತ್ತೊಮ್ಮೆ ಭಾರತಕ್ಕೆ ಬರಬೇಕಾಗುತ್ತದೆ. ಆದರೆ ಈಗ ಕಾಣುವ ಭಾರತ ಆತನಿಗೆ ಅಪರಿಚಿತ ಎನಿಸಲು ತೊಡಗುತ್ತದೆ. ಅದಕ್ಕೇನು ಕಾರಣ?

910
ಡಾ. ಮೊಗಳ್ಳಿ ಗಣೇಶ್ ಪ್ರಯೋಗಶೀಲ ಕತೆಗಾರ ಮೊಗಳ್ಳಿ ಗಣೇಶ್ ಪ್ರಯೋಗಶೀಲ ಕತೆಗಳ ಮೂಲಕ ಗುರುತಿಸಿಕೊಂಡವರು. ಅವರ ಆಕಾಶದ ಮುದುಕರು ಕಥೆಯೂ ಅಂಥದ್ದೊಂದು ಪ್ರಯೋಗಶೀಲ ಗುಣ ಹೊಂದಿದೆ. ಇಬ್ಬರು ಮುದುಕರ ಕನಸು, ವಾಸ್ತವಗಳ ವಿಚಿತ್ರ ಲೋಕ ಇಲ್ಲಿ ತೆರೆದುಕೊಳ್ಳುತ್ತೆ. ಭೂಮಂಡಲ, ಸೌರಮಂಡಲದ ವ್ಯಾಪ್ತಿಗೂ ವಿಸ್ತರಿಸುವ ಈ ಕಥೆ, ಸಾಮಾನ್ಯ ಕಥೆಯ ಚೌಕಟ್ಟನ್ನು ಮೀರುವ ಪ್ರಯತ್ನ ಮಾಡುತ್ತದೆ.

1010
ಲೋಕೇಶ್ ಅಗಸನಕಟ್ಟೆ ನಮ್ಮ ಸಿದ್ಧಾಂತ, ನಂಬಿಕೆ, ಪದ್ಧತಿಗಳೆಲ್ಲ ಎಲ್ಲಿಯವರೆಗೆ ಅಂದರೆ ಹೊಟ್ಟೆ ತುಂಬಿರುವವರೆಗೆ. ಹಸಿವಿನ ಮುಂದೆ ಇವ್ಯಾವುವೂ ಇರುವುದಿಲ್ಲ. ಬಡತನ ಎಂಬುದು ತಂದೆಯೊಬ್ಬನನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸಬಹುದು, ಮಗುವಿಗೆ ಹಾಲೂಣಿಸುವ ಹೆಣ್ಣುಮಗಳು ಹಸಿದ ಹೊಟ್ಟೆ ತುಂಬಿಸಲು ಯಾವ ಮಟ್ಟಕ್ಕೆ ಇಳಿಯಬಹುದು?

Latest Videos