19ರ ಯುವಕ 36ರ ಮಹಿಳೆ ಮದುವೆಯಲ್ಲಿ ಟ್ವಿಸ್ಟ್, ಐದು ಮಕ್ಕಳ ತಾಯಿಗೆ ಕೈಕೊಟ್ನ ಹುಡುಗ?
19ರ ಹುಡುಗ, 40ರ ಮಹಿಳೆ ಲವ್ ಸ್ಟೋರಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮದುವೆ ಆಗಿ ಎರಡು ತಿಂಗಳು ಜೊತೆಯಲ್ಲಿದ್ದ ಹುಡುಗ ಈಗ ಕೈಕೊಟ್ಟಂತೆ ಕಾಣ್ತಿದೆ. ಇಬ್ಬರೂ ಬೇರೆಯಾಗ್ತಿದ್ದಾರೆ ಎನ್ನುವ ಸುದ್ದಿ ಮೀಡಿಯಾದಲ್ಲಿ ಹರಿದಾಡ್ತಿದೆ.

ಪ್ರೀತಿ ಕುರುಡು
ಬಿಹಾರದ ಜಮುಯಿಯಲ್ಲಿ ನಡೆದ ಲವ್ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡಿತ್ತು. 36 ವರ್ಷದ ಮಹಿಳೆ 19 ವರ್ಷದ ಹುಡುಗನನ್ನು ಮದುವೆ ಆಗಿದ್ದಳು. ಮಿಸ್ಡ್ ಕಾಲ್ ನಿಂದ ಶುರುವಾದ ಸ್ನೇಹ ಮದುವೆಗೆ ಬಂದು ನಿಂತಿತ್ತು. ಇಬ್ಬರ ಪ್ರೀತಿ ನೋಡಿ ಜನರು ಪ್ರೀತಿ ಕುರುಡು ಅನ್ನೋದು ನೂರಕ್ಕೆ ನೂರು ಸತ್ಯ ಎಂದಿದ್ದರು. ಇದೇ ವಿಷ್ಯಕ್ಕೆ ಹುಡುಗನ ಊರಿನವರು ಹಾಗೆ ಮಹಿಳೆ ಊರಿನವರ ಮಧ್ಯೆ ಗಲಾಟೆ ಕೂಡ ಶುರುವಾಗಿತ್ತು. ಮಹಿಳೆ, ಮೋಸ ಮಾಡಿ ಹುಡುಗನನ್ನು ಮದುವೆ ಆಗಿದ್ದಾಳೆ ಎನ್ನುವ ಆರೋಪ ಕೂಡ ಕೇಳಿ ಬಂದಿತ್ತು.
ಲವ್ ಸ್ಟೋರಿಗೆ ಟ್ವಿಸ್ಟ್
ಸೀಮಾ ಪರ್ವಿನ್ ಅಲಿಯಾಸ್ ಬಿಂದು ಐದು ಮಕ್ಕಳ ತಾಯಿ. ಹುಡುಗನ ಹೆಸರು ಮಹಾವೀರ್ ಠಾಕೂರ್. ಮನೆಯಿಂದ ಓಡಿ ಹೋಗಿದ್ದ ಇಬ್ಬರೂ ಎರಡು ತಿಂಗಳು ಒಟ್ಟಿಗೆ ಬಾಳ್ವೆ ಮಾಡಿದ್ದಾರಂತೆ. ಈಗ ಹುಡುಗನ ಮನೆಗೆ ವಾಪಸ್ ಆಗಿದ್ದಾರೆ. ವಾಪಸ್ ಬಂದ್ಮೇಲೆ ಇಬ್ಬರ ಮಧ್ಯೆ ಗಲಾಟೆ ಶುರುವಾಗಿದೆ. ಮಹಾವೀರ್ ಠಾಕೂರ್, ಸೀಮಾ ಪರ್ವಿನ್ ಮೇಲೆ ಆರೋಪ ಮಾಡಿದ್ದಾನೆ. ಸೀಮಾ ಸುಳ್ಳು ಹೇಳಿದ್ದಾಳೆ ಅಂತ ಮಾಧ್ಯಮಗಳ ಮುಂದೆ ಹೇಳಿದ್ದಾನೆ. ಅಷ್ಟೇ ಅಲ್ಲ, ಅವಳ ಜೊತೆ ಬಾಳ್ವೆ ಮಾಡೋದಿಲ್ಲ ಎಂದಿದ್ದಾನೆ.
ವಯಸ್ಸು ಮರೆಮಾಚಿದ ಸೀಮಾ?
ಆರಂಭದಲ್ಲಿ ಇಬ್ಬರ ಮಧ್ಯೆ ಫೋನ್ ನಲ್ಲಿ ಮಾತುಕತೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸೀಮಾ ತನ್ನ ವಯಸ್ಸನ್ನು ಮುಚ್ಚಿಟ್ಟಿದ್ದಳು. ತನ್ನ ವಯಸ್ಸು 20 ವರ್ಷ ಎಂದಿದ್ದಳಂತೆ. ಅದನ್ನೇ ನಂಬಿ ಮಹಾವೀರ್ ಠಾಕೂರ್ ಪ್ರೀತಿಗೆ ಬಿದ್ದಿದ್ದ. ಇನ್ನು ಮದುವೆ ಟೈಂನಲ್ಲೂ ಸೀಮಾ ಮುಖ ಮುಚ್ಚಿಕೊಂಡಿದ್ರಿಂದ ಅವಳ ಮುಖ ಸರಿಯಾಗಿ ನೋಡೋಕೆ ಆಗಿರಲಿಲ್ಲ ಎಂದಿದ್ದಾನೆ. ಇನ್ನೂ19ರ ಹರೆಯದ ಹುಡುಗನಿಗೆ ಯಾವ್ದು ಪ್ರೀತಿ, ಯಾವುದು ಮದುವೆ ಎಂಬುದು ಸರಿಯಾಗಿ ಅರ್ಥವಾದಂತಿಲ್ಲ. ಮೀಡಿಯಾ, ಮೈಕ್ ಕಾಣ್ತಿದ್ದಂತೆ ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡ್ತಿದ್ದಾನೆ. ಮಾಧ್ಯಮದ ಮುಂದೆಯೂ ಸರಿಯಾದ ನಿರ್ಧಾರ ಹೇಳದೆ ನಗ್ತಿದ್ದಾನೆ.
ಕಣ್ಣೀರಿಟ್ಟ ಮಹಿಳೆ
ಸೀಮಾ ಮೂರ್ಖತನಕ್ಕೆ ಈಗ ಶಿಕ್ಷೆ ಆಗ್ತಿದೆ. ಎಳೆ ಹುಡುಗನನ್ನು ನಂಬಿ ಸೀಮಾ ಪರ್ವಿನ್ ಆತನ ಮನೆಗೆ ಬಂದಿದ್ದಾಳೆ. ಆದ್ರೀಗ, ಸೀಮಾ ಜೊತೆ ಇರೋದಿಲ್ಲ ಅಂತ ಠಾಕೂರ್ ಹೇಳ್ತಿದ್ದಾನೆ. ಅವನಿಗೆ ದುಡಿಮೆ ಇಲ್ಲ, ಇದ್ರೂ ಸೀಮಾ ಸಾಕೋದು ಸುಲಭ ಅಲ್ಲ. ಠಾಕೂರ್, ಅಪ್ಪ- ಅಮ್ಮನ ದುಡಿಮೆಯಲ್ಲೇ ಜೀವನ ಸಾಗ್ತಿದೆ. ಮಗ, ಸೀಮಾ ಪರ್ವಿನ್ ಮನೆಗೆ ಕರೆತಂದ್ರೆ ತಾನು ಮನೆಯಿಂದ ಹೊರಗೆ ಹೋಗ್ತೇನೆ ಎಂದಿದ್ದಾಳೆ. ಮೀಡಿಯಾಗಳು ಒಂದಾದ್ಮೇಲೆ ಒಂದು ಪ್ರಶ್ನೆ ಕೇಳ್ತಿವೆ, ಶೀಘ್ರದಲ್ಲೇ ಠಾಕೂರ್ ಸೀಮಾ ಬಿಡ್ತಾನೆ ಅಂತಿವೆ. ಅದನ್ನೆಲ್ಲ ಕೇಳಿ ಠಾಕೂರ್ ನನ್ನನ್ನು ಬಿಡ್ತಿದ್ದಾನೆ ಅಂತ ಸೀಮಾ ಆರೋಪ ಮಾಡಿದ್ದಾಳೆ. ಠಾಕೂರ್, ಸೀಮಾ ಜೊತೆ ಇರಲ್ಲ ಅಂತ ಹೇಳ್ತಿದ್ದಂತೆ ಗೋಳೋ ಅಂತ ಅಳಲು ಶುರು ಮಾಡಿದ್ದಾಳೆ. ಠಾಕೂರ್ ಮನೆಯಲ್ಲೇ ಇರ್ತಾಳಾ ಇಲ್ಲ ವಾಪಸ್ ಹಳೆ ಗಂಡನ ಮನೆಗೆ ಹೋಗ್ತಾಳಾ ನೋಡ್ಬೇಕಿದೆ.
