ಏಯ್, ಎಲ್ಲಿ ಮುಟ್ಟತ್ತಿದೀಯಾ ನೀನು? ವೇದಿಕೆಯಲ್ಲೇ ಯುವಕನಿಗೆ ಕಪಾಳಮೋಕ್ಷ; ವಿಡಿಯೋ
ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ಕಲಾವಿದೆಯೊಂದಿಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಕೋಪಗೊಂಡ ಡ್ಯಾನ್ಸರ್, ಯುವಕನ ಕಪಾಳಕ್ಕೆ ಹೊಡೆದು ವೇದಿಕೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್
ಸಾರ್ವಜನಿಕ ಕಾರ್ಯಕ್ರಮಗಳಿಗೆ ಆಗಮಿಸುವ ಕಲಾವಿದರ ಬಗ್ಗೆ ಇನ್ನು ಎಷ್ಟೋ ಜನರು ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ. ವೇದಿಕೆ ಮೇಲಿರುವಾಗ, ಮಾರ್ಗಮಧ್ಯೆ ಮಹಿಳಾ ಕಲಾವಿದರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ. ಇದೀಗ ಇಂತಹುವುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
ಡ್ಯಾನ್ಸರ್ ಜೊತೆ ಅಸಭ್ಯ ವರ್ತನೆ
ಜೂನ್ 3ರ ರಾತ್ರಿ ಈ ಘಟನೆ ನಡೆದಿದ್ದು, ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ನೃತ್ಯ ಮಾಡಲು ಡ್ಯಾನ್ಸರ್ ಅವರನ್ನು ಕರೆಸಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆ ಮೇಲೆ ಬಂದ ಯುವಕನೋರ್ವ, ಕಲಾವಿದೆ ಬಳಿ ಬರುತ್ತಾನೆ. ಬರುತ್ತಿದ್ದಂತೆ ಕಲಾವಿದೆಯ ಸೊಂಟಕ್ಕೆ ಕೈ ಹಾಕಿ ತಬ್ಬಿಕೊಳ್ಳಲು ಮುಂದಾಗುತ್ತಾನೆ. ಇದಕ್ಕೆ ಕಲಾವಿದೆ ವಿರೋಧಿಸಿದ್ದಾರೆ.
ಯುವಕನ ಕೆನ್ನೆಗೆ ಏಟು
ಕಲಾವಿದೆಯ ವಿರೋಧದ ನಡುವೆಯೂ ಯುವಕ ಮಾತ್ರ ಅಸಹ್ಯ ಸನ್ನೆಯೊಂದನ್ನು ಮಾಡುತ್ತಾನೆ. ಇದರಿಂದ ಕೋಪಗೊಂಡ ಡ್ಯಾನ್ಸರ್, ಯುವಕನ್ನು ದೂರಕ್ಕೆ ತಳ್ಳಿ ಆತನ ಕಪಾಳಕ್ಕೆ ಹೊಡೆಯುವ ಮೂಲಕ ಘಟನೆಯನ್ನು ತೀವ್ರವಾಗಿ ಖಂಡಿಸುತ್ತಾರೆ. ಈ ವೇಳೆ ಮಧ್ಯೆ ಪ್ರವೇಶಿಸುವ ವ್ಯಕ್ತಿ, ಯುವಕನನ್ನು ದೂರ ಕಳುಹಿಸುತ್ತಾರೆ. ನಂತರ ಕಲಾವಿದೆಯನ್ನು ಸಮಾಧಾನ ಮಾಡಲು ಮುಂದಾಗುತ್ತಾರೆ.
ಯುವಕನಿಗೆ ಕ್ಲಾಸ್
ಡ್ಯಾನ್ಸರ್ ಮಾತ್ರ ಕೋಪದಿಂದ ಮ್ಯೂಸಿಕ್ ನಿಲ್ಲಿಸುವಂತೆ ಹೇಳಿ, ಮೈಕ್ ಹಿಡಿದುಕೊಂಡು ಯುವಕನ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಾರೆ. ವೇದಿಕೆ ಮೇಲೆಯೇ ಕುಳಿತಿದ್ದ ಯುವಕ, ಸ್ಪಷ್ಟನೆ ನೀಡಲು ಮುಂದಾಗುತ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದು. ಆದ್ರೆ ಈ ಘಟನೆ ಎಲ್ಲಿಯದ್ದು ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ತಾಯಿ-ಅಕ್ಕ-ತಂಗಿಯರು ಇಲ್ಲವಾ
Dimpal Choudhary ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು, ನಿನ್ನ ಮನೆಯಲ್ಲಿ ತಾಯಿ-ಅಕ್ಕ-ತಂಗಿಯರು ಇಲ್ಲವಾ ಎಂಬ ಶೀರ್ಷಿಕೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇದೇ ವಿಡಿಯೋವನ್ನು ಬೇರೆ ಬೇರೆ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ಕಲಾವಿದರನ್ನು ನೋಡುವ ಭಾವನೆ ಬದಲಾಗಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

