ವಾಸ್ತು ಪ್ರಕಾರ, ಮನೆಯಲ್ಲಿ ಟಿವಿ, ಫ್ರಿಡ್ಜ್, ಎಸಿ ಎಲ್ಲಿಡಬೇಕು?
ನಮ್ಮ ಮನೆಯ ಪ್ರತಿಯೊಂದು ವಸ್ತುವು ವಾಸ್ತು ಪ್ರಕಾರ ವಿಶೇಷ ಮಹತ್ವವನ್ನು ಹೊಂದಿದೆ ಮತ್ತು ಎಲ್ಲವನ್ನೂ ಇಡಲು ವಿಶೇಷ ಸ್ಥಳ ಮತ್ತು ದಿಕ್ಕು ಇದೆ. ಎಲ್ಲವನ್ನೂ ಸರಿಯಾದ ದಿಕ್ಕಿನಲ್ಲಿ ಇರಿಸೋದ್ರಿಂದ, ಮನೆಯ ವಾಸ್ತು ಸರಿಯಾಗಿಯೇ ಉಳಿಯುತ್ತೆ, ಆದರೆ ಯಾವುದೇ ವಸ್ತುವನ್ನು ತಪ್ಪು ದಿಕ್ಕಿನಲ್ಲಿ ಇಡೋದರಿಂದ ವಾಸ್ತು ದೋಷಗಳು ಉಂಟಾಗುತ್ತವೆ. ಹಾಗಿದ್ರೆ ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿಡಬೇಕು ನೋಡೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹು ಮತ್ತು ಶನಿ ಮನೆಯ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳ(Electronic gadgets) ಮೇಲೆ ಪ್ರಭಾವ ಬೀರುತ್ತಾರೆ. ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸದಿದ್ದರೆ, ಅವು ಒಂದು ರೀತಿಯ ನಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತೆ, ಅದು ಮನೆಯ ಕ್ಷೇತ್ರದಲ್ಲಿ ನ್ಯೂನತೆಗಳನ್ನು ಸೃಷ್ಟಿಸುತ್ತೆ. ಹಾಗಿದ್ರೆ ಬನ್ನಿ ಈ ವಸ್ತುಗಳನ್ನು ಇಡಲು ಸರಿಯಾದ ದಿಕ್ಕನ್ನು ತಿಳಿಯೋಣ
ಕೂಲರ್(Cooler), ಎಸಿಯನ್ನು ಇರಿಸುವ ದಿಕ್ಕು
ವಾಯುವ್ಯ ಕೋನವನ್ನು ಗಾಳಿಯ ದಿಕ್ಕು ಎಂದು ಪರಿಗಣಿಸಲಾಗುತ್ತೆ. ಅಂದರೆ, ಉತ್ತರ ಮತ್ತು ಪಶ್ಚಿಮದ ನಡುವೆ ಇರುವ ವಾಯುವ್ಯ ದಿಕ್ಕನ್ನು ವಾಯುವ್ಯ ಕೋನವೆಂದು ಪರಿಗಣಿಸಲಾಗುತ್ತೆ. ಈ ದಿಕ್ಕಿನಲ್ಲಿ ಕೂಲರ್ ಮತ್ತು ಎಸಿಗಳನ್ನು ಇಡೋದ್ರಿಂದ, ಅದರ ಪರಿಣಾಮ ಮತ್ತು ಅವುಗಳ ಆಯಸ್ಸು ಹೆಚ್ಚಾಗುತ್ತೆ. ಇದು ಸಾಧ್ಯವಾಗದಿದ್ದರೆ, ಅವುಗಳನ್ನು ಉತ್ತರ ದಿಕ್ಕಿನಲ್ಲಿ ಇರಿಸಿ, ಇದರಿಂದ ಸಹ ಮನೆಯಲ್ಲಿ ಸಂತೋಷ ಹೆಚ್ಚಾಗುತ್ತೆ.
ವಾಟರ್ ಫಿಲ್ಟರ್ ನ (Water filter)ದಿಕ್ಕು
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರು ಅಡುಗೆಮನೆಯಲ್ಲಿ ವಾಟರ್ ಫಿಲ್ಟರ್ ಗಳನ್ನು ಇಡಲು ಬಯಸುತ್ತಾರೆ. ನೀವು ಸಹ ಇದನ್ನು ಉಪಯೋಗಿಸಬಹುದು, ಆದರೆ ಅದನ್ನು ಅಡುಗೆಮನೆಯ ಉತ್ತರ ಗೋಡೆಯ ಮೇಲೆ ಫಿಕ್ಸ್ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.
ಅಡುಗೆ ಕೋಣೆಯ(Kitchen) ಉತ್ತರ ದಿಕ್ಕನ್ನು ನೀರಿನ ದಿಕ್ಕು ಎಂದು ಕರೆಯಲಾಗುತ್ತೆ. ಮನೆಯ ಉತ್ತರ ಭಾಗದಲ್ಲಿ ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಹೊಂದಿರುವುದು ಶುಭಕರ. ಆದ್ದರಿಂದ, ಮನೆಯಲ್ಲಿ ಫಿಲ್ಟರ್ ಉತ್ತರ ದಿಕ್ಕಿನಲ್ಲಿ ಸ್ಥಾಪಿಸಬೇಕು. ಇದು ಮನೆಯಲ್ಲಿ ವಾಸಿಸುವವರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಅನುಕೂಲಕರ ಪರಿಣಾಮ ಬೀರುತ್ತೆ.
ಮನೆಯಲ್ಲಿ ಟಿವಿ(TV) ಇಡಲು ಸೂಕ್ತ ದಿಕ್ಕು ಯಾವುದು
ಹೆಚ್ಚಿನ ಜನರು ತಮ್ಮ ಮನೆಯ ಲಿವಿಂಗ್ ಏರಿಯಾದಲ್ಲಿ ಟಿವಿಯನ್ನು ಇಡುತ್ತಾರೆ. ಟಿವಿಯನ್ನು ಲಿವಿಂಗ್ ರೂಮಿನಲ್ಲಿ ಪೂರ್ವದ ಗೋಡೆಗೆ ತಾಗಿಸಿಡಿ. ಇದು ಟಿವಿ ನೋಡುವಾಗ ನಿಮ್ಮ ಮುಖವನ್ನು ಪೂರ್ವ ದಿಕ್ಕಿನಲ್ಲಿರಿಸುತ್ತೆ. ಅಲ್ಲದೇ ಇದು ನಿಮ್ಮಲ್ಲಿ ಸಕಾರಾತ್ಮಕ ಭಾವನೆಯನ್ನು ತುಂಬುತ್ತೆ. ಕೆಲವು ಕಾರಣಗಳಿಂದ ಇದು ಸಾಧ್ಯವಾಗದಿದ್ದರೆ, ನೀವು ಉತ್ತರ ಬದಿಯ ಗೋಡೆಗೆ ಟಿವಿಯನ್ನು ಹಾಕಬಹುದು.
ಫ್ರಿಡ್ಜ್(Fridge) ಎಲ್ಲಿ ಇಡಬೇಕು
ಫ್ರಿಡ್ಜ್ ಪಶ್ಚಿಮ ಬದಿಯ ಗೋಡೆಯ ಮೇಲೆ ಇರಿಸಿ. ಈ ದಿಕ್ಕನ್ನು ವಿದ್ಯುತ್ ಉಪಕರಣಗಳಿಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ಫ್ರಿಡ್ಜ್ ಇರಿಸೋದರಿಂದ ಅದರ ಆಯಸ್ಸು ಹೆಚ್ಚುತ್ತೆ ಮತ್ತು ಫ್ರಿಡ್ಜ್ ನ ಉತ್ತಮ ಸೇವೆಯ ಲಾಭವನ್ನು ಪಡೆಯಲು ಸಹಾಯವಾಗುತ್ತೆ.
ನೀವು ಬಾಗಿಲನ್ನು ತೆರೆದಾಗಲೆಲ್ಲಾ, ಫ್ರಿಡ್ಜ್ ನ ಬಾಯಿ ಪೂರ್ವ ದಿಕ್ಕಿಗೆ ತೆರೆದುಕೊಳ್ಳುವುದು ಉತ್ತಮ ಎಂದು ನಂಬಲಾಗಿದೆ, ಹೀಗೆ ಆದರೆ ಇದು ಅವುಗಳಲ್ಲಿ ಇರಿಸಲಾದ ಸರಕುಗಳಲ್ಲಿ ಸಕಾರಾತ್ಮಕತೆಯನ್ನು(Positivity) ತರುತ್ತೆ. ಹೀಗೆ ಕೆಲವು ವಾಸ್ತು ನಿಯಮಗಳನ್ನು ಪಾಲಿಸಿ ಸಂತೋಷದ ಜೀವನ ನಿಮ್ಮದಾಗಿಸಿಕೊಳ್ಳಿ.