ಬಾಡಿಗೆ ಮನೆ ಬಿಟ್ಟು ಸ್ವಂತ ಮನೆಗೆ ಹೋಗ ಬಯಸಿದ್ರೆ ಈ ವಾಸ್ತು ಟಿಪ್ಸ್ ಟ್ರೈ ಮಾಡಿ
ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಸ್ವಂತ ಸೂರೊಂದನ್ನು ನಿರ್ಮಿಸಲು ಬಯಸುತ್ತಾನೆ ಮತ್ತು ಅದಕ್ಕಾಗಿ ಶ್ರಮಿಸುತ್ತಾನೆ, ಆದರೆ ಮೆಟ್ರೋ ನಗರಗಳಲ್ಲಿ ತನ್ನದೇ ಆದ ಮನೆಯನ್ನು ಹೊಂದುವ ಬಯಕೆ ತುಂಬಾ ದುಬಾರಿಯಾಗುತ್ತಿದೆ. ನಗರಗಳಲ್ಲಿ ಮನೆ ಮತ್ತು ಭೂಮಿಯ ಬೆಲೆಗಳು ಎಷ್ಟು ಹೆಚ್ಚಾಗಿದೆಯೆಂದ್ರೆ, ಅವರ ಬಯಕೆ ಕೇವಲ ಆಸೆಯಾಗಿ ಉಳಿದಿ ಬಿಡುವಷ್ಟು, ಆದರೆ ವಾಸ್ತುವಿನ ಈ ಕ್ರಮಗಳನ್ನು ಅಳವಡಿಸಿಕೊಂಡ್ರೆ ನಿಮ್ಮ ಬಯಕೆ ಪೂರೈಸಬಹುದು. ನಿಮ್ಮ ಸ್ವಂತ ಮನೆ ಮತ್ತು ಆಸ್ತಿಯನ್ನು ಪಡೆಯಲು ವಾಸ್ತು ಮಾರ್ಗಗಳನ್ನು ತಿಳಿದುಕೊಳ್ಳೋಣ.
ಪ್ರತಿಯೊಬ್ಬರೂ ತಮ್ಮದೇ ಆದ ಮನೆಯನ್ನು(House) ಹೊಂದುವ ಕನಸನ್ನು ಹೊಂದಿರುತ್ತಾರೆ, ಆದರೆ ಕಠಿಣ ಪರಿಶ್ರಮ ಮತ್ತು ಜೀವಮಾನದ ಯೋಜನೆಗಳನ್ನು ಮಾಡಿದ ನಂತರವೂ, ಹೆಚ್ಚಿನವರಿಗೆ ಮನೆಯನ್ನು ಹೊಂದಲು ಸಾಧ್ಯವಾಗೋದಿಲ್ಲ. ಆದ್ದರಿಂದ, ಹೆಚ್ಚಿನ ಜನರು ಬಾಡಿಗೆ ಮನೆಗಳಲ್ಲಿಯೇ ತಮ್ಮ ಜೀವನವನ್ನು ಕಳೆಯುತ್ತಾರೆ ಮತ್ತು ಮೆಟ್ರೋಗಳಲ್ಲಿ ಬಾಡಿಗೆಗೆ ವಾಸಿಸುವ ಜನರ ಸಂಖ್ಯೆ ತುಂಬಾ ಹೆಚ್ಚಾಗಿದೆ.
ದೊಡ್ಡ ನಗರಗಳಲ್ಲಿ, ಮನೆಗಳು ಮತ್ತು ಭೂಮಿಯ ಬೆಲೆ ತುಂಬಾ ಹೆಚ್ಚಾಗಿದೆ, ಎಲ್ಲರಿಗೂ ಮನೆ ಖರೀದಿಸಲು ಸಾಧ್ಯವಾಗೋದಿಲ್ಲ. ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಕೆಲವು ಪರಿಹಾರಗಳಿವೆ, ಇದರ ಮೂಲಕ ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ನಿಮ್ಮ ಸ್ವಂತ ಮನೆಯನ್ನು ನಿರ್ಮಿಸಬಹುದು. ಈ ವಾಸ್ತು ಪರಿಹಾರಗಳು(Vaastu remedies) ನಿಮ್ಮ ಜೀವನದಲ್ಲಿ ಶಕ್ತಿ ತರುತ್ತವೆ ಮತ್ತು ನಿಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡುತ್ತವೆ. ಬಾಡಿಗೆ ಮನೆಯಿಂದ ನಿಮ್ಮ ಸ್ವಂತ ಮನೆಗೆ ತೆರಳಲು ಈ ವಾಸ್ತು ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ...
ಈ ಪರಿಹಾರದಿಂದ, ನೀವು ಶನಿ(Shani) ದೇವರ ಅನುಗ್ರಹವನ್ನು ಪಡೆಯುತ್ತೀರಿ.
ವಾಸ್ತು ಶಾಸ್ತ್ರದ ಪ್ರಕಾರ, ನೀವು ನಿಮ್ಮ ಸ್ವಂತ ಮನೆಯನ್ನು ಬಯಸೋದಾದ್ರೆ, ಖಂಡಿತವಾಗಿಯೂ ಶನಿ ದೇವರನ್ನು ಮೆಚ್ಚಿಸಬೇಕು. ಪಶ್ಚಿಮ ದಿಕ್ಕನ್ನು ಶನಿ ದೇವರ ದಿಕ್ಕು ಎಂದು ಪರಿಗಣಿಸಲಾಗುತ್ತೆ, ಆದ್ದರಿಂದ ಈ ದಿಕ್ಕಿನಲ್ಲಿ, ಪ್ರತಿದಿನ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ ಮತ್ತು ಶನಿ ಸ್ತೋತ್ರವನ್ನು ನಿಯಮಿತವಾಗಿ ಪಠಿಸಿ. ಇದರ ನಂತರ, ನಿಮ್ಮ ಮನಸ್ಸಿನಲ್ಲಿ ನಿಮ್ಮ ಸ್ವಂತ ಮನೆಯನ್ನು ಹೊಂದುವ ಬಗ್ಗೆಯೂ ಯೋಚಿಸಿ. ಶನಿ ದೇವರ ಅನುಗ್ರಹದಿಂದ, ಕೆಲವು ದಿನಗಳ ನಂತರ ನೀವು ನಿಮ್ಮ ಮನೆಯ ಮಾಲೀಕರಾಗಬಹುದು.
ಈ ಪರಿಹಾರವು ಶೀಘ್ರದಲ್ಲೇ ಕನಸನ್ನು ಈಡೇರಿಸುತ್ತೆ
ನೀವು ಬಹಳ ಸಮಯದಿಂದ ಮನೆ ನಿರ್ಮಿಸಲು ಮತ್ತು ಮನೆ ಖರೀದಿಸಲು ಯೋಚಿಸುತ್ತಿದ್ದರೆ, ವಾಸ್ತುವಿನ ಈ ಪರಿಹಾರ ನಿಮಗೆ ಸಹಾಯ ಮಾಡುತ್ತೆ. ಇದಕ್ಕಾಗಿ, ನೀವು ಬೇವಿನ ಮರದಿಂದ(Neem tree)ಸಣ್ಣ ಮನೆಯನ್ನು ನಿರ್ಮಿಸಬೇಕು ಮತ್ತು ಅದನ್ನು ಬಡ ಮತ್ತು ಅಗತ್ಯವಿರುವ ಮಗುವಿಗೆ ದಾನ ಮಾಡಬಹುದು ಅಥವಾ ಮನೆಯ ದೇವರ ಕೋಣೆಯಲ್ಲಿ ಮರದ ಮನೆಯನ್ನು ಇಟ್ಟುಕೊಳ್ಳಬಹುದು. ಇದನ್ನು ಮಾಡೋದರಿಂದ, ನಿಮ್ಮ ಸ್ವಂತ ಮನೆಯನ್ನು ಹೊಂದುವ ಬಯಕೆ ಈಡೇರುತ್ತೆ ಮತ್ತು ಭೂಮಾಲೀಕರಾಗುವ ಕನಸು ಸಹ ಶೀಘ್ರದಲ್ಲೇ ಈಡೇರುತ್ತೆ.
ಈ ಪರಿಹಾರದಿಂದ, ತಾಯಿ ಲಕ್ಷ್ಮಿಯ(Goddess Lakshmi) ಅನುಗ್ರಹ ಸಿಗುತ್ತೆ.
ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಮತ್ತು ನಿಮ್ಮ ಸ್ವಂತ ಮನೆಯನ್ನು ಬಯಸುತ್ತಿದ್ರೆ, ಶ್ರೀ ಯಂತ್ರವನ್ನು ಸ್ಥಾಪಿಸಿ ಮತ್ತು ನಿಯಮಿತವಾಗಿ ಪೂಜೆ ಮಾಡಿ. ಇದನ್ನು ಮಾಡೋದರಿಂದ, ತಾಯಿ ಲಕ್ಷ್ಮಿಯ ಕೃಪೆಯಿಂದ ಮನೆಯನ್ನು ನಿರ್ಮಿಸುವ ಅಥವಾ ಖರೀದಿಸುವ ಸಾಧ್ಯತೆಗಳಿವೆ. ಹಾಗೇ, ಪ್ರತಿ ಮಂಗಳವಾರ ಬಿಳಿ ಹಸು ಮತ್ತು ಅದರ ಕರುವಿಗೆ ಮಸೂರ್ ದಾಲ್ ಮತ್ತು ಬೆಲ್ಲವನ್ನು ನೀಡಿ. ಇದನ್ನು ಮಾಡೋದರಿಂದ, ನಿಮ್ಮ ಸ್ವಂತ ಮನೆಯನ್ನು ಹೊಂದುವ ಕನಸು ಶೀಘ್ರದಲ್ಲೇ ಈಡೇರುತ್ತೆ.
ಈ ಪರಿಹಾರ ಆಸ್ತಿ ಸಂಪಾದಿಸಲು ಉಪಯುಕ್ತ
ಬಾಡಿಗೆ ಮನೆಯ ಪಶ್ಚಿಮ ದಿಕ್ಕಿನಲ್ಲಿ ತಾಮ್ರದ ಶೋಪೀಸ್ ಇರಿಸಿ. ನೀವು ಶೋಪೀಸ್ ಇಟ್ಟುಕೊಳ್ಳಲು ಸಾಧ್ಯವಾಗದಿದ್ದರೆ, ತಾಮ್ರದ ಲೋಟ ಅಥವಾ ಇತರ ಯಾವುದೇ ತಾಮ್ರದ ವಸ್ತುವನ್ನು ಶೋಪೀಸ್ ಆಗಿ ಅಲಂಕರಿಸಿ. ಇದನ್ನು ಮಾಡೋದ್ರಿಂದ, ಶನಿ ದೇವರ ಕೃಪೆಯಿಂದ, ನಿಮ್ಮ ಸ್ವಂತ ಆಸ್ತಿಯನ್ನು ಹೊಂದುವ ಸಾಧ್ಯತೆಗಳಿವೆ. ಇದರೊಂದಿಗೆ, ಮನೆಯ ಬಳಿ ಹಕ್ಕಿಯ ಗೂಡನ್ನು(Nest) ಮಾಡಿ ಮತ್ತು ಪಕ್ಷಿ ವಾಸಿಸಲು ಬಂದಾಗ, ಧಾನ್ಯ ಮತ್ತು ನೀರನ್ನು ಸೇರಿಸಿ, ಇದನ್ನು ಮಾಡುವ ಮೂಲಕ, ಸ್ವಂತ ಮನೆಯನ್ನು ಹೊಂದುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಈ ಪರಿಹಾರದಿಂದ ಹಣ ಬರುವ ಯೋಗ ಹೆಚ್ಚಾಗುತ್ತೆ
ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, ಪೂಜಾ ಸ್ಥಳವು(Pooja room) ಈಶಾನ್ಯ ದಿಕ್ಕಿನಲ್ಲಿರಬೇಕು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ ಮತ್ತು ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ಪೂಜಿಸಿ. ಜೊತೆಗೆ ನೀರನ್ನು ಈ ದಿಕ್ಕಿನಲ್ಲಿ ಇರಿಸಿ. ಹೀಗೆ ಮಾಡೋದರಿಂದ, ಹಣ ಬರುವ ಮತ್ತು ಶೀಘ್ರದಲ್ಲೇ ಬಾಡಿಗೆ ಮನೆಯನ್ನು ತೊರೆದು ನಿಮ್ಮ ಸ್ವಂತ ಮನೆಗೆ ಹೋಗುವ ಸಾಧ್ಯತೆಗಳಿವೆ.
ಈ ವಿಧಾನದಿಂದ, ಮನೆ ನಿಮ್ಮದೇ ಆಗಲಿದೆ.
ನೀವು ಬಾಡಿಗೆ ಮನೆಯಿಂದ ಭೂಮಾಲೀಕರಾಗಲು ಬಯಸೋದಾದ್ರೆ, ಈ ನವರಾತ್ರಿಯಲ್ಲಿ ಈ ಕ್ರಮಗಳನ್ನು ಮಾಡಿ. ಇದಕ್ಕಾಗಿ, ಹಾಲು, ಸಕ್ಕರೆ, ಕರ್ಪೂರ, ತುಪ್ಪ, ಜೇನುತುಪ್ಪ ಮತ್ತು ಮೊಸರನ್ನು ಮಣ್ಣಿನ ಮಡಕೆಯಲ್ಲಿ ಹಾಕಿ. ನಂತರ ಈ ಮಡಿಕೆಯನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು ದುರ್ಗಾ ಮಾತೆಯ(Goddess Durga) ಮಂತ್ರ ಪಠಿಸಿ ಮತ್ತು ತಾಯಿಯನ್ನು ಪ್ರಾರ್ಥಿಸಿ. ಇದರ ನಂತರ, ಮಡಕೆಯನ್ನು ಸದ್ದಿಲ್ಲದೆ ನದಿ ಅಥವಾ ಕೊಳದ ಭೂಮಿಯಲ್ಲಿ ಹೂಳಿರಿ, ಇದನ್ನು ಮಾಡುವಾಗ ಯಾರೂ ನಿಮ್ಮನ್ನು ನೋಡಬಾರದು ಎಂಬುದನ್ನು ನೆನಪಿನಲ್ಲಿಡಿ. ಹಾಗೆ ಮಾಡೋದರಿಂದ ನಿಮ್ಮ ಸ್ವಂತ ಮನೆಯನ್ನು ಹೊಂದುವ ಸಾಧ್ಯತೆಗಳನ್ನು ಹೆಚ್ಚಿಸುತ್ತೆ.