ನಿಮ್ಮ ಜೀವನ ಚೆನ್ನಾಗಿರಬೇಕು ಅಂದ್ರೆ ಈ ವಾಸ್ತು ಟಿಫ್ಸ್ ಫಾಲೋ ಮಾಡಿ
ವಾಸ್ತುವಿನಲ್ಲಿ ಎಲ್ಲವೂ ಅಡಗಿದೆ ಅನ್ನೋದು ನಿಮಗೆ ಗೊತ್ತು. ಸರಿಯಾದ ರೀತಿಯಲ್ಲಿ ವಾಸ್ತುವನ್ನು ನಮ್ಮ ಜೀವನದಲ್ಲಿ ಅಳವಡಿಸೋದ್ರಿಂದ ಜೀವನದಲ್ಲಿ ಉತ್ತಮ ರೀತಿಯ ಬೆಳವಣಿಗೆ ಆಗೋದು ಖಂಡಿತಾ. ಅದಕ್ಕಾಗಿ ಏನೇನು ಮಾಡಬೇಕು ಅನ್ನೋದನ್ನು ನೋಡೋಣ.
ಪ್ರತಿಯೊಬ್ಬರ ಜೀವನದಲ್ಲಿ ವಾಸ್ತು ಪ್ರಮುಖ ಪಾತ್ರ ವಹಿಸುತ್ತೆ. ಕೆಲವರು ಅದನ್ನ ನಂಬಿದ್ರೆ, ಮತ್ತೆ ಕೆಲವರು ಅದನ್ನ ನಂಬಲ್ಲ ಅಷ್ಟೇ. ಮನೆ, ಕಚೇರಿ ಹೀಗೆ ಎಲ್ಲಾ ಕಡೆ ವಾಸ್ತು ಮುಖ್ಯವಾಗಿದೆ. ಅದೇ ರೀತಿ ನಮ್ಮ ಜೀವನದಲ್ಲೂ ವಾಸ್ತು ಮುಖ್ಯವಾಗಿದೆ. ಜೀವನ ಚೆನ್ನಾಗಿರಬೇಕು ಅಂದ್ರೆ, ಈ ವಾಸ್ತು ಟಿಪ್ಸ್ (vastu tips) ಫಾಲೋ ಮಾಡಿ.
ಗೋಧೂಳಿ ಮುಹೂರ್ತ: ಯಾವತ್ತೂ ಗೋಧೂಳಿ ಮುಹೂರ್ತದಲ್ಲಿ ಅಥವಾ ಸೂರ್ಯ ಅಸ್ತಮಾನದ (sun setting time) ಸಮಯದಲ್ಲಿ ಬಟ್ಟೆ ವಾಶ್ ಮಾಡೋದು, ಉಗುರು ಕಟ್ ಮಾಡೋದು ಅಥವಾ ಹೇರ್ ಕಟ್ ಮಾಡೋದನ್ನು ಮಾಡಬೇಡಿ.
ಹೇರ್ ಕಟ್: ನಿಮ್ಮ ಬಳಿ ತುಂಡಾದ ಬಾಚಣಿಕೆ ಇದ್ರೆ ಅದನ್ನು ಕೂಡಲೇ ಬಿಸಾಕಿ. ಯಾವತ್ತೂ ಸಹ ತುಂಡಾದ ಬಾಚಣಿಕೆ ಬಳಸಿ ತಲೆ ಬಾಚೋದು, ಹೇರ್ ಗ್ರೂಮ್ ಮಾಡೋದು, ಕತ್ತರಿಸೋದನ್ನು ಮಾಡಬೇಡಿ.
ರಾತ್ರಿ ಬಟ್ಟೆ ಒಣಗಲು ಬಿಡಬೇಡಿ: ಕೆಲವರು ಬಟ್ಟೆಗಳನ್ನು ರಾತ್ರಿಯಾದರೂ ಒಣಗಲು ಹಾಕಿರುತ್ತಾರೆ. ಆದರೆ ಸಂಜೆಯೊಳಗೆ ಬಟ್ಟೆಗಳನ್ನು ಮಡಚಿ ಇಡೋದು ಉತ್ತಮ. ಯಾಕಂದ್ರೆ ಬಟ್ಟೆಗಳು ಬೇಗನೆ ನೆಗೆಟಿವ್ ಎನರ್ಜಿಗಳನ್ನು ಹೀರಿಕೊಳ್ಳುತ್ತದೆ.
ಅತಿಥಿಗಳ ಸ್ವಾಗತ: ಅತಿಥಿಗಳು ಮನೆಗೆ ಬಂದಾಗ ಅವರನ್ನು ಬಾಗಿಲ ಬಳಿ ನಿಂತುಕೊಂಡು (inside the door) ಸ್ವಾಗತಿಸಬೇಕು. ಅದೆ ರೀತಿ ಅತಿಥಿಗಳು ಮನೆಯಿಂದ ಹೊರಡುವಾಗ ಬಾಗಿಲಿನ ಹೊರಗೆ ನಿಂತು ಅವರನ್ನು ಬಿಳ್ಕೊಡೋದು ಸರಿಯಾದ ವಿಧಾನ.
ತುಂಡಾದ ಕನ್ನಡಿ: ಯಾವತ್ತೂ ಮನೆಯೊಳಗೆ ಅದರಲ್ಲೂ ಬಾತ್ ರೂಮ್ ನಲ್ಲಿ ತುಂಡಾದ ಕನ್ನಡಿಯನ್ನು ಇಡಬೇಡಿ. ಇದು ನೆಗೆಟಿವಿಟಿಯನ್ನು ಆಹ್ವಾನಿಸುತ್ತದೆ. ಅಲ್ಲದೇ ಹಣದ ಸಮಸ್ಯೆ (financial problem) ಕೂಡ ಎದುರಿಸಬೇಕಾಗಿ ಬರಬಹುದು. ಆದುದರಿಂದ ತುಂಡಾದ ಕನ್ನಡಿಯನ್ನು ಕೂಡಲೇ ಬದಲಾಯಿಸಿ.
ಬೆಡ್ ರೂಮ್: ಯಾವತ್ತೂ ಬೆಡ್ ರೂಮ್ ನಲ್ಲಿ ದೇವರಕೋಣೆ ಅಥವಾ ಪೂಜೆ, ಧ್ಯಾನ ಮಾಡುವ ಮಂದಿರ ನಿರ್ಮಿಸಬೇಡಿ. ಅದು ಒಳ್ಳೆಯದಲ್ಲ. ಇದರಿಂದ ಜೋಡಿಗಳಿಗೆ ಒಳ್ಳೆಯದಾಗೋದಿಲ್ಲ. ಈ ಬಗ್ಗೆ ಗಮನ ಹರಿಸೋದು ಮುಖ್ಯ.
ಮಲಗುವ ಪೊಸಿಶನ್: ನಿಮ್ಮ ಜೀವನ ಚೆನ್ನಾಗಿರಬೇಕು ಅಂದ್ರೆ, ಮಲಗುವ ಪೊಜಿಶನ್ (sleeping position) ಸಹ ಸರಿಯಾಗಿರಬೇಕು. ನೀವು ಯಾವಾಗಲೂ ಮಲಗುವಾಗ ನಿಮ್ಮ ತಲೆ ಪೂರ್ವ ಮತ್ತು ದಕ್ಷಿಣ ದಿಕ್ಕಿನ ಕಡೆಗೆ ಇರಬೇಕು.