ತುಳಸಿ ಗಿಡದಲ್ಲಿನ ಈ ಬದಲಾವಣೆ ಮುಂಬರುವ ಅಪಾಯದ ಸೂಚನೆ
ಹಿಂದೂ ಧರ್ಮದಲ್ಲಿ ತುಳಸಿಗೆ ಅತ್ಯುನ್ನತ ಪ್ರಾಮುಖ್ಯತೆ ಇದೆ. ತುಳಸಿಯ ಹಸಿರು ಮನೆಯ ಸಂತೋಷ (Happiness), ಶಾಂತಿ (Peace) ಮತ್ತು ಸಮೃದ್ಧಿ(Prosperity)ಯನ್ನು ಸೂಚಿಸುತ್ತದೆ. ತುಳಸಿ ಗಿಡ ಬೆಳೆಸಿ ಪೂಜಿಸುವ ಮೂಲಕ, ನೀವು ತಾಯಿ ಲಕ್ಷ್ಮಿಯ ಅನುಗ್ರಹವನ್ನು ಪಡೆಯುವಿರಿ. ಜೊತೆಗೆ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತೆ.
ತುಳಸಿ ಸಸ್ಯದ ಹಸಿರನ್ನು (tulsi plant) ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡ ಹಸಿರಾಗಿರುವ ಮನೆಗಳಲ್ಲಿ, ತಾಯಿ ಲಕ್ಷ್ಮಿಯ ಆಶೀರ್ವಾದ ಎಂದಿಗೂ ಇರುತ್ತೆ ಎನ್ನಲಾಗುತ್ತದೆ, ಜೊತೆಗೆ ಅಂತಹ ಮನೆಗಳಲ್ಲಿ, ಪ್ರೀತಿ ಮತ್ತು ವಾತ್ಸಲ್ಯ, ಸಂತೋಷ, ಶಾಂತಿ ಸದಾ ಇರುತ್ತೆ ಎಂದು ನಂಬಲಾಗಿದೆ.
ತುಳಸಿಯನ್ನು ನಿಯಮಿತವಾಗಿ ಪೂಜಿಸುವವರು ಮತ್ತು ನೀರನ್ನು ಅರ್ಪಿಸುವವರು ಜೀವನದಲ್ಲಿ ಯಶಸ್ಸನ್ನು (success in life) ಪಡೆಯುತ್ತಾರೆ ಮತ್ತು ಹೆಸರು, ಹಣ ಮತ್ತು ಖ್ಯಾತಿ ಪಡೆಯುತ್ತಾರೆ. ನಿಮಗೆ ಗೊತ್ತಾ? ಮನೆಯಲ್ಲಿ ನೆಡಲಾದ ತುಳಸಿ ಸಸ್ಯವು ನಿಮ್ಮ ಮುಂಬರುವ ಜೀವನದ ಬಗ್ಗೆ ಕೆಲವು ಸುಳಿವುಗಳನ್ನು ನೀಡುತ್ತದೆ. ಅವುಗಳ ಬಗ್ಗೆ ತಿಳಿಯೋಣ.
ತುಳಸಿಯೊಂದಿಗೆ ಸಣ್ಣ ಸಸ್ಯಗಳು ಬೆಳೆದರೆ
ನಿಮ್ಮ ಮನೆಯಲ್ಲಿ ತುಳಸಿ ಗಿಡದ ಸುತ್ತಲೂ ಇತರ ಸಣ್ಣ ಸಸ್ಯಗಳು ಬೆಳೆಯಲು ಪ್ರಾರಂಭಿಸಿದರೆ, ಅದನ್ನು ತುಂಬಾ ಶುಭ ಸಂಕೇತವೆನ್ನಲಾಗುತ್ತೆ. ಇದರರ್ಥ ನಿಮ್ಮ ಗಳಿಕೆ ಹೆಚ್ಚಾಗಲಿದೆ. ಇದು ನಿಮ್ಮ ಮುಂಬರುವ ಜೀವನದ ಪ್ರಗತಿಯನ್ನು (progress in life) ಸೂಚಿಸುತ್ತದೆ. ಈ ಸಣ್ಣ ಸಸ್ಯಗಳು ತುಳಸಿಯದ್ದಾಗಿದ್ದರೆ ಅದು ಇನ್ನೂ ಉತ್ತಮವಾಗಿದೆ. ಇದರರ್ಥ ನೀವು ಶೀಘ್ರದಲ್ಲೇ ಹಣವನ್ನು ಗಳಿಸಲಿದ್ದೀರಿ.
ತುಳಸಿ ಗಿಡದಲ್ಲಿ ತುಂಬಾ ಹೂವುಗಳಾದರೆ
ತುಳಸಿ ಗಿಡವು ಹಸಿರು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ ಜೊತೆಗೆ ಹೂವು ಮತ್ತು ಮಂಜರಿ ಬರಲು ಪ್ರಾರಂಭಿಸಿದರೆ, ತಾಯಿ ಲಕ್ಷ್ಮಿ ನಿಮ್ಮಿಂದ ಸಂತುಷ್ಟಳಾಗಿದ್ದಾಳೆ ಎಂದರ್ಥ. ಹೀಗಿರುವಾಗ ನೀವು ನಿಯಮಿತವಾಗಿ ತಾಯಿ ಲಕ್ಷ್ಮಿಯನ್ನು (Goddess Lakshmi) ಧ್ಯಾನಿಸಬೇಕು. ಲಕ್ಷ್ಮೀ ಪೂಜೆ ಮಾಡಬೇಕು.
ತುಳಸಿ ಗಿಡ ಇದ್ದಕ್ಕಿದ್ದಂತೆ ಒಣಗಲು ಪ್ರಾರಂಭಿಸಿದರೆ
ಮನೆಯಲ್ಲಿರುವ ತುಳಸಿ ಗಿಡವು ಇದ್ದಕ್ಕಿದ್ದಂತೆ ಒಣಗಲು ಪ್ರಾರಂಭಿಸಿದರೆ, ಅದು ಮುಂಬರುವ ವಿಪತ್ತನ್ನು ಸೂಚಿಸುತ್ತದೆ. ತುಳಸಿ ಸಸ್ಯದ ಒಣಗುವಿಕೆಯು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು (negative power) ಹೆಚ್ಚಾಗುತ್ತಿವೆ ಎಂದು ಸೂಚಿಸುತ್ತದೆ. ಇದರಿಂದ ನಿಮ್ಮ ಕುಟುಂಬದ ಸಂತೋಷ ಮತ್ತು ಶಾಂತಿ ಕಳೆದುಹೋಗುತ್ತದೆ. ತಮ್ಮೊಳಗೆ ಸಂಘರ್ಷ ಮತ್ತು ಜಗಳ ಹೆಚ್ಚಾಗುತ್ತದೆ. ಆದ್ದರಿಂದ, ತುಳಸಿ ಸಸ್ಯ ಬೆಳೆಸುವಾಗ ಸರಿಯಾಗಿ ಕಾಳಜಿ ವಹಿಸಬೇಕು.
ತುಳಸಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದರೆ
ತುಳಸಿಯ ಹಸಿರು ಎಲೆಗಳು ಇದ್ದಕ್ಕಿದ್ದಂತೆ ಹಳದಿ ಬಣ್ಣಕ್ಕೆ ತಿರುಗಿ ಬೀಳಲು ಪ್ರಾರಂಭಿಸಿದರೆ, ಅದನ್ನು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ಮುಂಬರುವ ಸಮಯದಲ್ಲಿ ನೀವು ಆರ್ಥಿಕ ಬಿಕ್ಕಟ್ಟನ್ನು (financial problem) ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನೀವು ಜಾಗರೂಕರಾಗಿರಬೇಕು ಮತ್ತು ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು. ಈ ಸಮಸ್ಯೆಯನ್ನು ತೊಡೆದುಹಾಕಲು, ತುಳಸಿ ಗಿಡದ ಕೆಳಗೆ ಪ್ರತಿದಿನ ತುಪ್ಪದ ದೀಪವನ್ನು ಬೆಳಗಿಸಿ.
ತುಳಸಿ ಬಳಿ ಇರುವೆಗಳು ಸಂಗ್ರಹವಾಗಲು ಪ್ರಾರಂಭಿಸಿದ್ರೆ
ಅನೇಕ ಬಾರಿ ತುಳಸಿ ಸಸ್ಯದ ಬಳಿ ಇರುವೆಗಳು (ants) ಸಂಗ್ರಹವಾಗಲು ಪ್ರಾರಂಭಿಸುತ್ತವೆ. ಇವು ಮಣ್ಣಿನಲ್ಲಿ ತಮ್ಮ ಮನೆಯನ್ನು ಮಾಡುತ್ತವೆ ಅಥವಾ ಇತರ ಕೀಟಗಳು ಬೆಳೆಯಲು ಪ್ರಾರಂಭಿಸುತ್ತವೆ. ಇದನ್ನು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ಇದರರ್ಥ ನಿಮ್ಮ ಕುಟುಂಬದಲ್ಲಿ ಯಾರಾದರೂ ಶೀಘ್ರದಲ್ಲೇ ಗಂಭೀರ ಅನಾರೋಗ್ಯಕ್ಕೆ ಒಳಗಾಗಬಹುದು ಮತ್ತು ಚಿಕಿತ್ಸೆ ಪಡೆಯುವಲ್ಲಿ ಹೆಚ್ಚಿನ ಹಣದ ನಷ್ಟವಾಗಬಹುದು. ಹಾಗಾಗಿ ತುಳಸಿ ಗಿಡದ ಬಳಿ ಇರುವೆಗಳು ಬಾರದಂತೆ ಜಾಗೃತೆ ವಹಿಸಿ.