ದೇವಾಲಯದಿಂದ ತುಳಸಿ ಎಲೆಗಳನ್ನು ಮನೆಗೆ ತರೋದು ಶುಭವಂತೆ!
ತುಳಸಿ ಮನೆಯಲ್ಲಿದ್ದರೆ ಲಕ್ಷ್ಮೀ ದೇವಿ ನೆಲೆಸುತ್ತಾಳೆ. ಆದರೆ ದೇವಾಲಯದಿಂದ ತಂದ ತುಳಸಿ ಒಳ್ಳೆಯದಂತೆ. ಜ್ಯೋತಿಷ್ಯ ತಜ್ಞರಿಂದ, ದೇವಾಲಯದ ತುಳಸಿಯನ್ನು ಮನೆಗೆ ತರುವುದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
ತುಳಸಿ (Tulasi) ಸಸ್ಯವನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತೆ. ತುಳಸಿಯನ್ನು ಮನೆಯಲ್ಲಿ ಇಡೋದರಿಂದ ತಾಯಿ ಲಕ್ಷ್ಮೀ ಮನೆಯಲ್ಲಿ ವಾಸಿಸುತ್ತಾಳೆ ಎನ್ನಲಾಗುತ್ತೆ. ಹಾಗೆಯೇ, ತುಳಸಿಯನ್ನು ದೇವಾಲಯಗಳಲ್ಲಿಯೂ ಕಾಣಬಹುದು. ಆದ್ದರಿಂದ, ದೇವಾಲಯದ ತುಳಸಿಯನ್ನು ಮನೆಗೆ ತರಬೇಕು ಎಂದು ನಂಬಲಾಗಿದೆ. ಇದು ಮಂಗಳಕರ ಮತ್ತು ಪ್ರಯೋಜನಕಾರಿ. ಈ ಬಗ್ಗೆ ತಿಳಿಯೋಣ.
ದೇವಾಲಯದಲ್ಲಿ (Temple) ತುಳಸಿಯನ್ನು ಏಕೆ ನೆಡುತ್ತೇವೆ?
ನಿಮ್ಮಲ್ಲಿ ಅನೇಕರು ನಿಯಮಿತ ಪೂಜೆಗಾಗಿ ದೇವಾಲಯಕ್ಕೆ ಹೋಗಿರಬಹುದು. ನೀವು ದೇವಾಲಯದಲ್ಲಿ ದೇವರ ದರ್ಶನ ಮಾಡಿರಬಹುದು. ದೇವಾಲಯದಲ್ಲಿ ಏನಾದರೂ ಕಂಡುಬಂದರೆ, ಅದನ್ನು ಮನೆಗೆ ತರಬೇಕು ಎಂದು ನಂಬಲಾಗಿದೆ. ಇದು ಮನೆಯನ್ನು ಸಮೃದ್ಧಗೊಳಿಸುತ್ತೆ. ಹಾಗಾಗಿ ದೇಗುಲದಲ್ಲಿರುವ ತುಳಸಿಯನ್ನು ಮನೆಗೆ ತರೋದು ಸಹ ತುಂಬಾ ಫಲಪ್ರದ ಮತ್ತು ಮಂಗಳಕರ ಸಂಕೇತವೆಂದು ಪರಿಗಣಿಸಲಾಗಿದೆ.
ದೇವಾಲಯವನ್ನು ನಿರ್ಮಿಸಿದಾಗಲೆಲ್ಲಾ, ಮೊದಲು ತುಳಸಿ ಸಸ್ಯವನ್ನು ಸ್ಥಾಪಿಸಲಾಗುತ್ತೆ. ಆದ್ದರಿಂದ ದೇವಾಲಯದ ನಿರ್ಮಾಣದಲ್ಲಿ ಯಾವುದೇ ಅಡೆತಡೆಗಳಿಲ್ಲದೇ ದೇವರು ದೇವಸ್ಥಾನದಲ್ಲಿ ವಾಸಿಸುತ್ತಾರೆ ಎಂದು ನಂಬಲಾಗಿದೆ. ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ತುಳಸಿ ಸಸ್ಯವು ಮನೆಯಲ್ಲಿ ನೆಡಲಾದ ತುಳಸಿಗಿಂತ ಹೆಚ್ಚು ದೈವಿಕ ಮತ್ತು ಪವಿತ್ರವಾಗಿದೆ(Pure).
ದೇವಾಲಯದ ತುಳಸಿಯನ್ನು ಮನೆಗೆ ಏಕೆ ತರಬೇಕು?
ದೇವಾಲಯದಲ್ಲಿ ದೇವರ ಪ್ರಾಣ ಪ್ರತಿಷ್ಠೆಯಾದ ನಂತರ, ತುಳಸಿಯ ಶಕ್ತಿ ಲಕ್ಷಾಂತರ ಪಟ್ಟು ಹೆಚ್ಚಾಗುತ್ತೆ. ಹಾಗಾಗಿ, ದೇವಾಲಯದಲ್ಲಿ ಸ್ಥಾಪಿಸಲಾದ ತುಳಸಿ ಕೇವಲ ಸಸ್ಯವಲ್ಲ ಆದರೆ ದೈವಿಕ ಶಕ್ತಿಯನ್ನು(Shakti) ನೀಡುವ ದೇವಿಯ ಪ್ರತಿರೂಪವಾಗಿ ನಿಲ್ಲುತ್ತೆ.
ಧರ್ಮಗ್ರಂಥಗಳಲ್ಲಿ, ದೇವಾಲಯದ ತುಳಸಿಯನ್ನು ಮನೆಗೆ (Home) ತರಬೇಕೆಂದು ಹೇಳಲಾಗಿದೆ, ಇದರಿಂದ ಮನೆಯ ದೋಷವನ್ನು ನಿವಾರಿಸಬಹುದು. ಧರ್ಮಗ್ರಂಥಗಳ ಪ್ರಕಾರ, ದೇವಾಲಯದಿಂದ ಹಿಂದಿರುಗುವಾಗ, ಕೆಲವು ತುಳಸಿ ಎಲೆಗಳನ್ನು ನಿಮ್ಮೊಂದಿಗೆ ಮನೆಗೆ ತರಬೇಕು.
ದೇವಾಲಯದಿಂದ ತುಳಸಿಯನ್ನು ತಂದ ನಂತರ ಏನು ಮಾಡಬೇಕು?
ದೇವಾಲಯದಲ್ಲಿ ಕೆಲವು ತುಳಸಿ ಎಲೆಗಳನ್ನು ತೆಗೆದು ನಂತರ ಅವುಗಳನ್ನು ದೇವಾಲಯದಲ್ಲಿರುವ ದೇವರಿಗೆ ಅರ್ಪಿಸಿ. ಇದರ ನಂತರ, ಆ ಎಲೆಗಳನ್ನು ಸ್ವಚ್ಛವಾದ ಕೈಗಳಲ್ಲಿ ತಂದು ಮನೆಗೆ ಬಂದು ಒಂದು ಬಟ್ಟಲಿನಲ್ಲಿ ಗಂಗಾಜಲದಿಂದ(Ganga jala) ತೊಳೆಯಿರಿ.
ತೊಳೆದ ಎಲೆಗಳನ್ನು ಕೆಂಪು ಬಟ್ಟೆಯಲ್ಲಿ (Red cloth) ಕಟ್ಟಿ ಸುರಕ್ಷಿತವಾಗಿ ಇರಿಸಿ ಮತ್ತು ಮುಂದಿನ ಬಾರಿ ಅವುಗಳನ್ನು ಹೊಸ ಎಲೆಗಳಿಂದ ಬದಲಿಸಿ. ಇದಲ್ಲದೆ, ಆ ಎಲೆಗಳನ್ನು ಮನೆಯ ತುಳಸಿ ಸಸ್ಯದ ಮಣ್ಣಿನಲ್ಲಿಯೂ ಇಡಬಹುದು. ಇದು ತುಂಬಾ ಮಂಗಳಕರವಾಗಿರುತ್ತೆ .
ದೇವಾಲಯದ ತುಳಸಿಯನ್ನು ತರುವುದರ ಪ್ರಯೋಜನಗಳು ಯಾವುವು?
ದೇವಾಲಯದ ತುಳಸಿಯನ್ನು ಮನೆಗೆ ತರುವುದು ಮನೆಯನ್ನು ಶುದ್ಧ ಮತ್ತು ಪರಿಶುದ್ಧವಾಗಿಸುತ್ತೆ. ಮನೆಯಲ್ಲಿ ಸಕಾರಾತ್ಮಕತೆಯ(Positivity) ಮಟ್ಟ ಹೆಚ್ಚಾಗುತ್ತೆ.
ಮನೆಯಲ್ಲಿರುವ ದೋಷವನ್ನು ತೆಗೆದುಹಾಕಲಾಗುತ್ತೆ. ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತೆ.
ದೇವಾಲಯದ ತುಳಸಿ ಎಲೆಗಳನ್ನು ಮನೆಯ ತುಳಸಿಯೊಂದಿಗೆ ಇಡೋದ್ರಿಂದ ಅದರ ಪರಿಶುದ್ಧತೆಯನ್ನು ಹೆಚ್ಚಿಸುತ್ತೆ.
ಮನೆಯ ತುಳಸಿಯಲ್ಲಿ ಯಾವುದೇ ದೋಷವಿದ್ದರೆ, ಅದು ಈ ಎಲೆಗಳಿಂದ ದೂರವಾಗುತ್ತೆ. ಹಾಗಾಗಿ ನೀವು ಪ್ರತಿದಿನ ದೇವಸ್ಥಾನಕ್ಕೆ ಹೋದರೆ, ದೇವಾಲಯದಲ್ಲಿ ತುಳಸಿಯ ಕೆಲವು ಎಲೆಗಳನ್ನು ಮನೆಗೆ ತರೋದು ಒಳ್ಳೆಯದು ಎಂದು ಹೇಳಲಾಗುತ್ತೆ.