Calendar vastu: ಮನೆಯಲ್ಲಿ ಕ್ಯಾಲೆಂಡರ್ ಹಾಕೋ ಮುನ್ನ ಈ ವಿಷ್ಯ ತಿಳಿದಿರಲಿ
ನೀವು 2023ರ ವರ್ಷದ ಕ್ಯಾಲೆಂಡರ್ ಮನೆಯಲ್ಲಿ ಇಡಲು ಹೊರಟಿದ್ದರೆ, ವಾಸ್ತುವಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ನೆನಪಿನಲ್ಲಿಡಬೇಕು. ವಾಸ್ತು ವಿಜ್ಞಾನದ ಪ್ರಕಾರ, ಸರಿಯಾದ ದಿಕ್ಕು ಮತ್ತು ಸ್ಥಳದಲ್ಲಿ ಕ್ಯಾಲೆಂಡರ್ ಇರಿಸುವ ಮೂಲಕ ನೀವು ಅದೃಷ್ಟವಂತರಾಗಬಹುದು.
ನೀವು 2023 ರ ಕ್ಯಾಲೆಂಡರ್ (Calender) ಮನೆಯಲ್ಲಿ ಹಾಕುತ್ತಿದ್ದರೆ, ವಾಸ್ತುವಿನ ಕೆಲವು ನಿಯಮಗಳನ್ನು ನೋಡಿಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಹೊಸ ವರ್ಷದ ಕ್ಯಾಲೆಂಡರನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದ್ರೆ, ಅದು ತುಂಬಾ ಪ್ರಯೋಜನಕಾರಿ. ವಾಸ್ತು ವಿಜ್ಞಾನದ ಪ್ರಕಾರ, ಕ್ಯಾಲೆಂಡರನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದ್ರೆ, ಅದು ಅದೃಷ್ಟವನ್ನು ಜಾಗೃತಗೊಳಿಸುವುದಲ್ಲದೆ, ವರ್ಷವಿಡೀ ಸಮಸ್ಯೆಗಳನ್ನು ದೂರವಿಡುತ್ತೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕ್ಯಾಲೆಂಡರನ್ನು ಎಲ್ಲಿ ಮತ್ತು ಹೇಗೆ ಇಡೋದು ಪ್ರಯೋಜನಕಾರಿ ಎಂದು ತಿಳಿಯೋಣ.
ಮೊದಲು ಈ ಕೆಲಸವನ್ನು ಮಾಡಿ
ವಾಸ್ತು ಶಾಸ್ತ್ರದ (Vaastu) ಪ್ರಕಾರ, ಆತುರ ಅಥವಾ ಕೆಲವು ಕಾರಣಗಳಿಂದಾಗಿ ಹೊಸ ಕ್ಯಾಲೆಂಡರನ್ನು ಹಳೆಯ ಕ್ಯಾಲೆಂಡರ್ ಮೇಲೆ ಇರಿಸೋದನ್ನು ಹೆಚ್ಚಾಗಿ ಕಾಣಬಹುದು. ಈ ಕಾರಣದಿಂದಾಗಿ, ಹಳೆಯ ಕ್ಯಾಲೆಂಡರ್ ಗಳು ಅನೇಕ ದಿನಗಳವರೆಗೆ ಮನೆ ಗೋಡೆಗಳ ಮೇಲೆ ನೇತಾಡುತ್ತವೆ. ಹಳೆಯ ಕ್ಯಾಲೆಂಡರನ್ನು ವಾಸ್ತು ಪ್ರಕಾರ ತೂಗು ಹಾಕೋದು ಒಳ್ಳೆಯದಲ್ಲ, ಇದು ಜೀವನದಲ್ಲಿ ಪ್ರಗತಿಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತೆ .
ವಾಸ್ತು ಪ್ರಕಾರ ಹಳೆಯ ಕ್ಯಾಲೆಂಡರ್ ತೂಗು ಹಾಕೋದು ಭವಿಷ್ಯದ ಮೇಲೂ ಪರಿಣಾಮ ಬೀರುತ್ತೆ. ಹೊಸ ವರ್ಷದಲ್ಲಿ ಹೊಸ ಕೆಲಸ ಮಾಡಲು ಶಕ್ತಿಯ ಕೊರತೆ ಉಂಟಾಗುತ್ತೆ. ಆದ್ದರಿಂದ, ಹಳೆಯ ಕ್ಯಾಲೆಂಡರನ್ನು ಗೋಡೆಯಿಂದ(Wall) ತೆಗೆದು ಹಾಕಬೇಕು ಮತ್ತು ಹೊಸ ವರ್ಷದ ಹೊಸ ಕ್ಯಾಲೆಂಡರನ್ನು ಮನೆಯಲ್ಲಿ ಇಡಬೇಕು.
2023 ರ ಹೊಸ ವರ್ಷದ ಕ್ಯಾಲೆಂಡರನ್ನು ಈ ದಿಕ್ಕಿನಲ್ಲಿ ಇರಿಸಿ
ವಾಸ್ತು ಪ್ರಕಾರ, ಮನೆಯ ಉತ್ತರ, ಪಶ್ಚಿಮ ಅಥವಾ ಪೂರ್ವದ ಗೋಡೆಯ(Wall) ಮೇಲೆ 2023 ರ ಹೊಸ ವರ್ಷದ ಕ್ಯಾಲೆಂಡರ್ ಹಾಕೋದು ಯಾವಾಗಲೂ ಸರಿ ಎಂದು ಪರಿಗಣಿಸಲಾಗುತ್ತೆ. ಹೊಸ ವರ್ಷದ ಕ್ಯಾಲೆಂಡರನ್ನು ಮನೆ, ಕಚೇರಿ ಅಥವಾ ಅಂಗಡಿ ಮುಂತಾದ ಸ್ಥಳಗಳಲ್ಲಿ ಈ ದಿಕ್ಕಿನಲ್ಲಿ ಇರಿಸಿದ್ರೆ, ಜೀವನದಲ್ಲಿ ಪ್ರಗತಿ ಸಾಧಿಸಬಹುದು. ವರ್ಷವಿಡೀ ಸಮಸ್ಯೆಗಳನ್ನು ಸಹ ತೆಗೆದುಹಾಕಲಾಗುತ್ತೆ. ಕ್ಯಾಲೆಂಡರನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು, ಇದನ್ನು ಮಾಡೋದರಿಂದ, ಆರೋಗ್ಯ ಉತ್ತಮವಾಗಿರೋದಿಲ್ಲ ಮತ್ತು ಅದು ಪ್ರಗತಿಗೆ ಅಡ್ಡಿಯಾಗುತ್ತೆ.
ಯಾವ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕೋದು ಉತ್ತಮ ಅವಕಾಶಗಳನ್ನು ಒದಗಿಸುತ್ತೆ
ಸೂರ್ಯೋದಯದ ದಿಕ್ಕು ಪೂರ್ವದಲ್ಲಿದೆ, ಆದ್ದರಿಂದ ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಿರುವ ಸೂರ್ಯನ (Sun) ಚಿತ್ರವಿರುವ ಕ್ಯಾಲೆಂಡರ್ ಇರಿಸಿದ್ರೆ, ಈ ದಿಕ್ಕು ಉತ್ತಮ ಅವಕಾಶಗಳನ್ನು ತರುತ್ತೆ. ಪ್ರಗತಿಗೆ ದಾರಿ ಮಾಡಿಕೊಡುತ್ತೆ.ಹಾಗಾಗಿ, ಪೂರ್ವದಲ್ಲಿ ಇರಿಸಲಾದ ಕ್ಯಾಲೆಂಡರ್ ಸಹ ಮಗುವಿನ ಜೀವನದಲ್ಲಿ ಪ್ರಗತಿಯ ಬಾಗಿಲುಗಳನ್ನು ತೆರೆಯುತ್ತೆ.
2023 ರ ಹೊಸ ವರ್ಷದ ಕ್ಯಾಲೆಂಡರ್ ಹೇಗಿರಬೇಕು
ಕ್ಯಾಲೆಂಡರ್ ಪುಟ ಯಾವಾಗಲೂ ಉದಯಿಸುವ ಸೂರ್ಯ ಅಥವಾ ಸಂತೋಷಕ್ಕೆ ಸಂಬಂಧಿಸಿದಂತಿರಬೇಕು. ಹಿಂಸಾತ್ಮಕ ಪ್ರಾಣಿ (Cruel animal), ಅಸಂತುಷ್ಟ ಮುಖಗಳ ಚಿತ್ರ ಮುಂತಾದ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರ್ ಎಂದಿಗೂ ಹಾಕಬೇಡಿ. ಇದು ಮನೆಗೆ ನಕಾರಾತ್ಮಕ ಶಕ್ತಿ ತರುತ್ತೆ, ಆದ್ದರಿಂದ ಅಂತಹ ಕ್ಯಾಲೆಂಡರ್ ಮನೆಯಲ್ಲಿ ಸ್ಥಾಪಿಸಬಾರದು. ಹೊಸ ವರ್ಷದ ಕ್ಯಾಲೆಂಡರ್ ಹಸಿರು, ನೀಲಿ, ಬಿಳಿ, ಗುಲಾಬಿ ಮತ್ತು ಕೆಂಪು ಬಣ್ಣದ್ದಾಗಿರಬೇಕು. ಅಂತಹ ಬಣ್ಣದ ಕ್ಯಾಲೆಂಡರ್ ಗಳನ್ನು ಹಾಕೋದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತೆ.
ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಇಡೋದು ಹಣ ತರುತ್ತೆ
ವಾಸ್ತುವಿನಲ್ಲಿ, ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಪರಿಗಣಿಸಲಾಗಿದೆ. ಆದ್ದರಿಂದ, 2023 ರ ಹೊಸ ವರ್ಷದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತಿಗಾಗಿ ಉತ್ತರ ದಿಕ್ಕಿನಲ್ಲಿ ಹಸಿರು, ಕಾರಂಜಿ, ಮದುವೆಯ (Marriage) ಫೋಟೋ, ಯುವ ಜೀವನದ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರ್ ಇಡುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಹಸಿರು ಮತ್ತು ಬಿಳಿ ಬಣ್ಣದ ಕ್ಯಾಲೆಂಡರ್ ಉತ್ತರ ದಿಕ್ಕಿನಲ್ಲಿ ಇರಿಸೋದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತೆ.
ಮನೆಯಲ್ಲಿ ಕ್ಯಾಲೆಂಡರ್ ಎಲ್ಲಿ ಇಡಬಾರದು ?
ವಾಸ್ತು ಶಾಸ್ತ್ರದ ಪ್ರಕಾರ, ಕ್ಯಾಲೆಂಡರನ್ನು ಮುಖ್ಯ ಬಾಗಿಲಿನಲ್ಲಿ ಅಥವಾ ಬಾಗಿಲಿನ ಮುಂದೆ ಎಂದಿಗೂ ಇಡಬಾರದು. ಮನೆ ದಕ್ಷಿಣಾಭಿಮುಖವಾಗಿದ್ದರೆ, ಕ್ಯಾಲೆಂಡರನ್ನು ಮುಖ್ಯ ಬಾಗಿಲಿನ (Main door) ಮೇಲೆ ಇಡದಂತೆ ವಿಶೇಷ ಕಾಳಜಿ ವಹಿಸಿ. ಕ್ಯಾಲೆಂಡರನ್ನು ತಪ್ಪು ದಿಕ್ಕಿನಲ್ಲಿ ಇಡೋದು ಸಹ ನಿಮ್ಮ ಪ್ರಗತಿಯನ್ನು ನಿಲ್ಲಿಸಬಹುದು. ಹಾಗಾಗಿ ಎಂದಿಗೂ ಕ್ಯಾಲೆಂಡರನ್ನು ಬಾಗಿಲಿನ ಹಿಂದೆ ನೇತು ಹಾಕಬಾರದು, ಇದನ್ನು ಮಾಡಿದರೆ ಅದು ಕುಟುಂಬ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಮತ್ತು ವಯಸ್ಸನ್ನು ಕಡಿಮೆ ಮಾಡುತ್ತೆ .