- Home
- Astrology
- Vaastu
- Married Women Mistakes: ಸುಮಂಗಲಿ ಸ್ತ್ರೀಯರು ತವರು ಮನೆಯಲ್ಲಾಗಲಿ, ಅತ್ತೆ ಮನೆಯಲ್ಲಾಗಲಿ ಈ ಕೆಲಸ ಮಾಡ್ಲೇಬಾರದು
Married Women Mistakes: ಸುಮಂಗಲಿ ಸ್ತ್ರೀಯರು ತವರು ಮನೆಯಲ್ಲಾಗಲಿ, ಅತ್ತೆ ಮನೆಯಲ್ಲಾಗಲಿ ಈ ಕೆಲಸ ಮಾಡ್ಲೇಬಾರದು
ಸುಮಂಗಲಿ ಮಹಿಳೆಯರು ಅಥವಾ ವಿವಾಹಿತ ಮಹಿಳೆಯರು ತಮ್ಮ ಗಂಡನ ಮನೆಯಲ್ಲಾಗಲಿ ಅಥವಾ ತವರು ಮನೆಯಲ್ಲಾಗಲಿ ಕೆಲವು ತಪ್ಪುಗಳನ್ನು ಮಾಡಬಾರದು ಎನ್ನುತ್ತೆ ಶಾಸ್ತ್ರ.

ವಿವಾಹಿತ ಮಹಿಳೆಯರಿಗೆ (married women) ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಈ ನಿಯಮಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಒಂದು ವೇಳೆ ನೀವು ಈ ನಿಯಮಗಳನ್ನು ಉಲ್ಲಂಘಿಸಿದ್ದೇ ಆದರೆ ನೀವು ಸಮಸ್ಯೆ ಎದುರಿಸಬೇಕಾಗಿ ಬರುತ್ತೆ.
ಮೊದಲನೇಯದಾಗಿ ವಿವಾಹಿತ ಮಹಿಳೆಯರು ತಮ್ಮ ಅತ್ತೆಯ ಮನೆಗೆ ಹೋಗುವಾಗ ಅಥವಾ ಅತ್ತೆಯ ಮನೆಯಿಂದ ಪೋಷಕರ ಮನೆಗೆ ಬರುವಾಗ ಎಂದಿಗೂ ಬರಿ ಕೈಯಲ್ಲಿ ಬರಲೇಬಾರದು. ಮೆಹೆಂದಿಯನ್ನು(mehndi) ಎರಡೂ ಕೈಗಳಿಗೆ ಹಚ್ಚಿಕೊಂಡು ಬರಬೇಕು ಎನ್ನುತ್ತೆ ಶಾಸ್ತ್ರ.
ವಿವಾಹಿತ ಮಹಿಳೆಯರು ಎಂದಿಗೂ ಸಣ್ಣ ಲೋಟೆಯಲ್ಲಿ ನೀರನ್ನು ಬಳಸಿ ಚಪಾತಿ ಹಿಟ್ಟನ್ನು ಕಲೆಸಬಾರದಂತೆ. ಹಾಗೆ ಮಾಡುವುದು ಕೂಡ ಶಾಸ್ತ್ರದ ಪ್ರಕಾರ ಸರಿಯಲ್ಲ .
ವಿವಾಹಿತ ಮಹಿಳೆಯರು ತಮ್ಮ ಅತ್ತೆಯ ಮನೆಯಿಂದ ಪೋಷಕರ ಮನೆಗೆ ಹೋಗುವಾಗ ಅಥವಾ ಪೋಷಕರ ಮನೆಯಿಂದ ಅತ್ತೆಯ ಮನೆಗೆ ಬರುವಾಗ ಮಧ್ಯಾಹ್ನ 1:45 ಕ್ಕೆ ಮನೆಯಿಂದ ಹೊರಗೆ ಹೋಗಬಾರದು. ಸಾಧ್ಯವಾದರೆ ಬೆಳಗ್ಗೆನೆ ಹೊರಡಿ.
ವಿವಾಹಿತ ಮಹಿಳೆಯರು ಮದುವೆಯ ಸಮಯದಲ್ಲಿ ಧರಿಸಿದಂತಹ ಶೂಗಳು ಅಥವಾ ಚಪ್ಪಲಿಗಳು ಮದುವೆಯಾದ ಒಂದು ವರ್ಷದೊಳಗೆ ಮುರಿದುಹೋದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಚಪ್ಪಲ್ ಮುರಿದು ಹೋಗಿದ್ರೆ ಬೇಸರ ಮಾಡ್ಕೋಬೇಡಿ.
ವಿವಾಹಿತ ಮಹಿಳೆಯರು ಎಂದಿಗೂ ಮಾಂಗಲ್ಯ ಸರ (mangalsutra), ಮೂಗುತಿ, ಕಿವಿಯೋಲೆ ತೆಗೆದು ಇಡಬಾರದು. ಇದರಿಂದ ಕೆಟ್ಟದಾಗುತ್ತೆ. ಯಾವಾಗಲೂ ಈ ಸುಮಂಗಲಿಯ ಶೃಂಗಾರಗಳನ್ನು ಬಳಸೋದನ್ನು ಮರಿಬೇಡಿ.