ಈ ಕ್ರಮಗಳಿಂದ ಕುಬೇರನನ್ನು ಸಂತೋಷಪಡಿಸಿ, ಖಂಡಿತವಾಗಿಯೂ ಸಂಪತ್ತು ಹೆಚ್ಚುತ್ತೆ
ಆರಾಮವಾಗಿ ಬದುಕಲು ಹಣ ಬೇಕು. ವಾಸ್ತು ಪ್ರಕಾರ, ಮನೆಯಲ್ಲಿ ಕೆಲವು ಕ್ರಮಗಳನ್ನು ಮಾಡೋದರಿಂದ, ಸಕಾರಾತ್ಮಕ ಶಕ್ತಿ ಬರುತ್ತೆ, ಜೊತೆಗೆ ಸಂಪತ್ತು ಮತ್ತು ವೈಭವದ ಕೊರತೆ ಇರೋದಿಲ್ಲ. ಈ ಬಗ್ಗೆ ಹೆಚ್ಚು ತಿಳಿಯಲು ಈ ಸ್ಟೋರಿ ಓದಿ.
ಹಿಂದೂ ನಂಬಿಕೆಗಳ ಪ್ರಕಾರ, ಕುಬೇರ ಸಂಪತ್ತು ಮತ್ತು ಸಮೃದ್ಧಿಯ ದೇವರು. ಆಲದ ಮರವನ್ನು ಕುಬೇರನ(Kuber) ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಕುಬೇರನಿಂದ ಆಶೀರ್ವದಿಸಲ್ಪಟ್ಟ ವ್ಯಕ್ತಿಯು ತನ್ನ ಮನೆಯಲ್ಲಿ ಎಂದಿಗೂ ಹಣಕಾಸಿನ ಸಮಸ್ಯೆಗಳನ್ನು ಎದುರಿಸೋದಿಲ್ಲ ಎಂದು ಹೇಳಲಾಗುತ್ತೆ.
ನೀವು ಸಂಪತ್ತಿನ(Wealth) ದೇವತೆಯಾದ ಕುಬೇರನನ್ನು ಮೆಚ್ಚಿಸಲು ಬಯಸೋದಾದ್ರೆ, ಕೆಲವು ಸುಲಭ ಕ್ರಮಗಳನ್ನು ಮಾಡುವ ಮೂಲಕ, ಕುಬೇರ ದೇವರ ಕರುಣೆ ನಿಮ್ಮ ಮೇಲೆ ಉಳಿಯಲಿದೆ. ಅವುಗಳ ಬಗ್ಗೆ ಇಲ್ಲಿ ತಿಳಿಯಿರಿ.
ಸೇಫ್ ಲಾಕರ್ ನ(Locker) ಬಾಗಿಲನ್ನು ಈ ದಿಕ್ಕಿನಲ್ಲಿ ಇರಿಸಿ
ವಾಸ್ತು ವಿದ್ವಾಂಸರ ಪ್ರಕಾರ, ಉತ್ತರ ದಿಕ್ಕು ಕುಬೇರನ ದಿಕ್ಕು. ಆದ್ದರಿಂದ, ಮನೆಯ ಸೇಫ್ ಲಾಕರ್ ನ ಬಾಗಿಲು ಯಾವಾಗಲೂ ಉತ್ತರ ದಿಕ್ಕಿನಲ್ಲಿ ತೆರೆದಿರಬೇಕು. ಈ ಪರಿಹಾರವನ್ನು ಮಾಡೋದರಿಂದ, ತಾಯಿ ಲಕ್ಷ್ಮಿಯ ಕರುಣೆಯೂ ನಿಮ್ಮ ಮೇಲೆ ಉಳಿಯಲಿದೆ.
ಲಕ್ಷ್ಮಿ ದೇವಿಯು(Goddess Lakshmi) ಈ ಸ್ಥಳದಲ್ಲಿ ನೆಲೆಸಿರುತ್ತಾಳೆ
ವಾಸ್ತು ಶಾಸ್ತ್ರದ ಪ್ರಕಾರ, ತೆಂಗಿನಕಾಯಿಯನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತೆ. ಅದಿಲ್ಲದೆ, ಯಾವುದೇ ಪೂಜೆ ಪೂರ್ಣವಾಗೋದಿಲ್ಲ. ತೆಂಗಿನಕಾಯಿಯನ್ನು ಮನೆಯ ದೇವರ ಕೊನೆಯಲ್ಲಿ ಇಡುವುದರಿಂದ, ಮನೆಯಲ್ಲಿ ಎಂದಿಗೂ ಹಣದ ಕೊರತೆ ಇರೋದಿಲ್ಲ. ಇದು ಯಾವಾಗಲೂ ಲಕ್ಷ್ಮಿ ದೇವಿಯ ವಾಸಸ್ಥಾನವನ್ನು ಕಾಪಾಡುತ್ತೆ.
ಮನೆಯ ದೇವಾಲಯದಲ್ಲಿ ಶ್ರೀ ಯಂತ್ರ ಮತ್ತು ಮಹಾಲಕ್ಷ್ಮಿ ಯಂತ್ರವನ್ನು ಸ್ಥಾಪಿಸುವ ಮೂಲಕ, ತಾಯಿ ಲಕ್ಷ್ಮಿ ಮತ್ತು ಕುಬೇರ ದೇವರ ಅನುಗ್ರಹವು ನಿಮ್ಮ ಮೇಲೆ ಉಳಿಯುತ್ತೆ. ಹಾಗೆಯೇ, ಮನೆಯಲ್ಲಿ ಶಾಂತಿ(Peace)ಮತ್ತು ಸಂತೋಷ ನೆಲೆಸುತ್ತೆ. ಇದರಿಂದ ನೀವು ಹಣಕಾಸಿನ ಸಮಸ್ಯೆ ಇಲ್ಲದೇ ಆರಾಮವಾಗಿ ಜೀವಿಸಬಹುದು.
ಮಂಗಳಕರ ಲೋಹದ ಆಮೆ(Tortoise)
ಆಮೆ ವಿಷ್ಣುವಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಹಾಗಾಗಿ, ಮನೆಯಲ್ಲಿ ಲೋಹದ ಆಮೆಯನ್ನು ಇಟ್ಟುಕೊಳ್ಳುವುದು ಕುಟುಂಬ ಸದಸ್ಯರ ಆದಾಯವನ್ನು ಹೆಚ್ಚಿಸುತ್ತೆ. ಆಮೆಯನ್ನು ಯಾವಾಗಲೂ ಉತ್ತರ ದಿಕ್ಕಿನಲ್ಲಿ ಇಡಬೇಕು. ಈ ಪರಿಹಾರವು ವಾಸ್ತು ದೋಷವನ್ನು ಸಹ ತೊಡೆದುಹಾಕುತ್ತೆ ಎಂದು ನಂಬಲಾಗಿದೆ.
ನಕಾರಾತ್ಮಕ ಶಕ್ತಿಯು(Negative energy) ದೂರ ಉಳಿಯುತ್ತೆ
ಗೋಮತಿ ಚಕ್ರವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿ ಇಟ್ಟರೆ, ಅದು ಶುಭ ಫಲಿತಾಂಶಗಳನ್ನು ನೀಡುತ್ತೆ. ವಾಸ್ತು ಶಾಸ್ತ್ರದಲ್ಲಿ ಗೋಮತಿ ಚಕ್ರವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಗೋಮತಿ ಚಕ್ರವನ್ನು ಇಡೋದರಿಂದ ಮನೆಯ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕುತ್ತೆ ಎಂದು ನಂಬಲಾಗಿದೆ. ಹಾಗೆಯೇ, ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಲಿದೆ.