Asianet Suvarna News Asianet Suvarna News

Astrology Tips: ಧನಲಾಭವಾಗಬೇಕಂದ್ರೆ ಈ ಉಂಗುರ ಧರಿಸಿ

ಬರೀ ಫ್ಯಾಷನ್ ಗೆ ಮಾತ್ರವಲ್ಲ ಆರೋಗ್ಯ, ಆರ್ಥಿಕ ವೃದ್ಧಿಗೆ ಅಂತಾ ನೀವು ಉಂಗುರ ಧರಿಸುವ ಪ್ಲಾನ್ ನಲ್ಲಿದ್ದರೆ ಅದ್ರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಒಂದೊಂದು ಉಂಗುರದಿಂದ ಬರುವ ಲಾಭ ಬೇರೆ ಬೇರೆ. ನಿಮಗೆ ಯಾವ ಲಾಭಬೇಕು ಎಂಬುದನ್ನು ತಿಳಿದು ನಂತ್ರ ಉಂಗುರ ಧರಿಸಿ.
 

According To Jyotish Shastra These Rings Will Give You Good Wealth
Author
First Published Apr 11, 2023, 3:05 PM IST

ಬೆರಳಿನ ಅಂದ ಹೆಚ್ಚಿಸುವಲ್ಲಿ ಉಂಗುರದ ಪಾತ್ರ ಬಹಳ ದೊಡ್ಡದು. ಇದಕ್ಕೆ ಗಂಡು ಹೆಣ್ಣೆಂಬುದರ ಭೇದವಿಲ್ಲ. ಹೆಣ್ಣಾಗಾಗಲೀ ಗಂಡಾಗಲಿ ಇದು ಚೆಂದವೇ.. ಈ ಆಭರಣ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಕೆಲವರು ಇದನ್ನು ಆರೋಗ್ಯ ದೃಷ್ಟಿಯಿಂದ ಧರಿಸಿದರೆ ಕೆಲವರು ಇದನ್ನು ಫ್ಯಾಷನ್ ಗಾಗಿ ಧರಿಸುತ್ತಾರೆ. ಇದು ಭಾರತೀಯ ಸಂಪ್ರದಾಯ ಕೂಡ ಹೌದು. ಹಿಂದೂ ಧರ್ಮದ ಅನೇಕ ಪೂಜೆ ಪುನಸ್ಕಾರಗಳಲ್ಲಿ ಉಂಗುರ ಮಹತ್ವದ ಸ್ಥಾನವನ್ನು ಪಡೆದಿದೆ.

ಉಂಗುರ (Ring) ಗಳನ್ನು ನವರತ್ನ, ಬಂಗಾರ, ಬೆಳ್ಳಿ, ಲೋಹ, ಕಟ್ಟಿಗೆ, ಮೂಳೆ, ಮುತ್ತುಗಳನ್ನು ಬಳಸಿ ಮಾಡಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡ ಉಂಗುರಕ್ಕೆ ವಿಶೇಷ ಸ್ಥಾನ ನೀಡಲಾಗಿದೆ. ಭವಿಷ್ಯದ ಆಗುಹೋಗುಗಗಳನ್ನು, ಅನಾಹುತಗಳನ್ನು ದೂರವಿಡಲು ಜ್ಯೋತಿಷ್ಯ (Astrology) ದಲ್ಲಿ ಹಲವು ಆಯ್ಕೆಗಳಿವೆ. ಅವುಗಳಲ್ಲಿ ಉಂಗುರ ಧರಿಸುವುದು ಕೂಡ ಒಂದು. ಧನಲಾಭದ ವಿಷಯದಲ್ಲಿ ಕೂಡ ಉಂಗುರ ಪ್ರಯೋಜನಕಾರಿಯಾಗಿದೆ. ಧನಲಾಭ ಉಂಟುಮಾಡುವ ಅಂತಹ ಉಂಗುರಗಳು ಯಾವುದೆಂದು ನೋಡೋಣ.

ದಾಂಪತ್ಯ ಜೀವನ ಸಾಮರಸ್ಯದಿಂದ ಕೂಡಿರಲು ಅಕ್ಷಯ ತೃತೀಯದಂದು ಈ ಕೆಲಸ ಮಾಡಿ

ಆಮೆ (Turtle) ಯ ಆಕಾರದ ಉಂಗುರ : ಇತ್ತೀಚೆಗೆ ಹಲವರ ಕೈಯಲ್ಲಿ ಆಮೆಯ ಉಂಗುರವಿರುವುದನ್ನು ನೀವು ನೋಡಿರಬಹುದು. ಇದು ನಿಮ್ಮ ಕೈಗೆ ಫ್ಯಾಷನ್ ಲುಕ್ ನೀಡುವುದರ ಜೊತೆಗೆ ನಿಮ್ಮ ಜಾತಕದಲ್ಲಿರುವ ದೋಷಗಳನ್ನು ಕೂಡ ನಿವಾರಿಸುತ್ತದೆ. ಆತ್ಮವಿಶ್ವಾಸ ಕಡಿಮೆ ಇರುವವರು ಈ ಉಂಗುರವನ್ನು ಧರಿಸಬೇಕು. ಕೂರ್ಮದ ಈ ಉಂಗುರದಿಂದ ನಿಮ್ಮ ಕಾನ್ಫಿಡೆನ್ಸ್  ಹೆಚ್ಚಾಗುತ್ತದೆ. ಇದ್ರಿಂದ ಧನಲಾಭ ಉಂಟಾಗುತ್ತದೆ. ಬೆಳ್ಳಿ, ಹರಳು ಅಥವಾ ಆರ್ಟಿಫಿಶಿಯಲ್ ಉಂಗುರಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ನಿಮ್ಮ ರಾಶಿಗೆ ಅನುಗುಣವಾದ ಉಂಗುರವನ್ನು ಧರಿಸುವುದು ಉತ್ತಮ.

ಹಾವಿನ ಉಂಗುರ : ಹಾವು ಅಥವಾ ನಾಗಕ್ಕೆ ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನವಿದೆ. ಹಿಂದುಗಳು ಪೂಜಿಸುವ ಶಿವನ ಕುತ್ತಿಗೆಯಲ್ಲಿ ಕೂಡ ಹಾವು ಇದೆ. ನಾಗರ ಪಂಚಮಿಯಂದು ಎಲ್ಲೆಡೆ ಹಾವಿಗೆ ವಿಶೇಷ ಪೂಜೆ, ನೈವೇದ್ಯಗಳು ನಡೆಯುತ್ತವೆ. ಆದ್ದರಿಂದಲೇ ಹಾವಿನ ಉಂಗುರ ಕೂಡ ಶುಭ ಎಂದು ಹೇಳಲಾಗುತ್ತೆ. ನಿಮ್ಮ ಜಾತಕದಲ್ಲಿ ಸರ್ಪ ದೋಷ, ಪಿತೃ ದೋಷ, ಗ್ರಹಣ ದೋಷಗಳಿದ್ದರೆ ಹಾವಿನ ಆಕಾರದ ಉಂಗುರವನ್ನು ಧರಿಸಬೇಕು. ಮಾರುಕಟ್ಟೆಯಲ್ಲಿ ಇದು ಅನೇಕ ರೀತಿಯ ಲೋಹಗಳಲ್ಲಿ ದೊರಕುತ್ತದೆ. ನೀವು ಸುಖ, ಸಂತೋಷದಿಂದ ಜೀವನವನ್ನು ನಡೆಸಬೇಕೆಂದರೆ ಹಾವಿನ ಉಂಗುರವನ್ನು ಹಾಕಿಕೊಳ್ಳುವುದು ಒಳ್ಳೆಯದು. ಇದು ನಿಮ್ಮ ಐಶ್ವರ್ಯವನ್ನು ಕೂಡ ವೃದ್ಧಿ ಮಾಡುತ್ತದೆ.

Ramayan: ಪ್ರಿಯ ಭಂಟ ಹನುಮನ ಮೇಲೆಯೇ ಬ್ರಹ್ಮಾಸ್ತ್ರ ಪ್ರಯೋಗಿಸಿದ ಶ್ರೀರಾಮ! ಕಾರಣ ಏನ್ ಗೊತ್ತಾ?

ತಾಮ್ರದ ಉಂಗುರ : ತಾಮ್ರ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ತಾಮ್ರ ನಮ್ಮ ಚರ್ಮಕ್ಕೆ ಸ್ಪರ್ಶವಾದರೆ ಸಾಕು ಅದರಿಂದ ನಮಗೆ ಅನೇಕ ಲಾಭಗಳಾಗುತ್ತದೆ. ತಾಮ್ರ ನಮ್ಮ ಆರೋಗ್ಯದ ಹೊರತಾಗಿ ಇನ್ನೂ ಅನೇಕ ವಿಷಯಗಳಲ್ಲಿ ಲಾಭಕಾರಿಯಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜಾತಕದಲ್ಲಿರುವ ಸೂರ್ಯದೋಷ ತಾಮ್ರದ ಉಂಗುರವನ್ನು ಧರಿಸುವುದರಿಂದ ದೂರವಾಗುತ್ತದೆ. ಇದರಿಂದ ಸಮಾಜದಲ್ಲಿ ಗೌರವವೂ ಹೆಚ್ಚುತ್ತದೆ. ಇದರಿಂದ ಆತ್ಮವಿಶ್ವಾಸ, ಧೈರ್ಯ ಬರುತ್ತದೆ.

ನವಗ್ರಹದ ಉಂಗುರ : ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲು ನವಗ್ರಹದ ಉಂಗುರ ಧರಿಸಬೇಕು. ನವಗ್ರಹದ ಉಂಗುರದಿಂದ ಸಕಾರಾತ್ಮಕ ಶಕ್ತಿ ಕೂಡ ಹೆಚ್ಚುತ್ತದೆ ಮತ್ತು ಖಿನ್ನತೆ ಕೂಡ ದೂರವಾಗುತ್ತದೆ.

ಕುದುರೆ ಲಾಳದ ಉಂಗುರ : ಕುದುರೆಯ ಲಾಳದಿಂದಲೂ ಉಂಗುರವನ್ನು ತಯಾರಿಸಲಾಗುತ್ತದೆ. ಇದನ್ನು ಧರಿಸುವುದು ಬಹಳ ಶುಭ ಎಂದು ಕೂಡ ಹೇಳಲಾಗುತ್ತದೆ. ಕಪ್ಪು ಕುದುರೆಯ ಲಾಳದಿಂದ  ಮಾಡಿದ ಉಂಗುರ ಧರಿಸಿದರೆ ಶನಿದೇವರ ಕೋಪದಿಂದ ಹಾಗೂ ಸಾಡೇ ಸಾತ್ ದೋಷದಿಂದ ಕೂಡ ದೂರವಿರಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಆನೆಯ ಉಂಗುರ : ಪ್ರಥಮ ಪೂಜಿತ ಗಣೇಶನ ಪ್ರತೀಕವಾದ ಆನೆ ಗಣೇಶನ ಅವತಾರವೇ ಆಗಿದೆ. ಆನೆಯ ಮುಖವಿರುವ ಉಂಗುರವನ್ನು ಧರಿಸಿದರೆ ಆರ್ಥಿಕ ಸಂಕಟ ದೂರವಾಗುತ್ತದೆ. ಈ ಉಂಗುರದಿಂದ ಧನದ ಅಧಿಪತಿಯಾದ ಕುಬೇರ ಕೂಡ ಪ್ರಸನ್ನನಾಗುತ್ತಾನೆ.
 

Follow Us:
Download App:
  • android
  • ios