ಈ 3 ಹಕ್ಕಿಗಳು ಮನೆಗೆ ಬಂದ್ರೆ ಅದೃಷ್ಟ ಖುಲಾಯಿಸುತ್ತೆ!
Vaastu Tips for Birds Visiting: ಈ ಲೇಖನದಲ್ಲಿ ಹೇಳಿರುವ ಮೂರು ಹಕ್ಕಿಗಳು ನಿಮ್ಮ ಮನೆಯ ಮಾಡಿಗೆ ಅಥವಾ ಮುಖ್ಯದ್ವಾರಕ್ಕೆ ಬಂದರೆ, ಅದು ತುಂಬಾ ಶುಭಕರವೆಂದು ಪರಿಗಣಿಸಲಾಗುತ್ತದೆ.

Vastu Tips 3 Birds That Bring Good Luck : ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ವಾಸ್ತು ನಿಯಮಗಳನ್ನು ಪಾಲಿಸಿದರೆ ಜೀವನದಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಜೊತೆಗೆ ಇದು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ ಸಕಾರಾತ್ಮಕ ಶಕ್ತಿಯನ್ನು ಹರಡಲು ಸಹಾಯ ಮಾಡುತ್ತದೆ. ಆ ರೀತಿಯಲ್ಲಿ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೆಲವು ಹಕ್ಕಿಗಳು ನಿಮ್ಮ ಮನೆಯ ಅಂಗಳದಲ್ಲಿ ಅಥವಾ ಮಾಡಿನಲ್ಲಿ ಕುಳಿತರೆ ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ನಿಮ್ಮ ಮನೆಯ ಮೇಲ್ಭಾಗದಲ್ಲಿ ಅಥವಾ ಟೆರೇಸ್ ಮೇಲೆ ಕುಳಿತಿರುವ ಹಕ್ಕಿಗೆ ಆಹಾರ ನೀಡಿದರೆ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಲೇಖನದಲ್ಲಿ ಕೊಡಲಾಗಿರುವ ಮೂರು ಹಕ್ಕಿಗಳು ನಿಮ್ಮ ಮನೆಯಲ್ಲಿ ಕುಳಿತುಕೊಳ್ಳುವುದು ವಾಸ್ತು ಪ್ರಕಾರ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದು ಯಾವೆಲ್ಲಾ ಹಕ್ಕಿಗಳು ಎಂದು ಇಲ್ಲಿ ತಿಳಿದುಕೊಳ್ಳಬಹುದು.
ಗೂಬೆ
ಗೂಬೆ ತುಂಬಾ ಅಶುಭವಾದ ಹಕ್ಕಿಯೆಂದು ಪರಿಗಣಿಸಲ್ಪಟ್ಟರೂ, ವಾಸ್ತು ಶಾಸ್ತ್ರದ ಪ್ರಕಾರ ಗೂಬೆ ನಿಮ್ಮ ಮನೆಗೆ ಬರುವುದು ತುಂಬಾ ಮಂಗಳಕರವೆಂದು ಹೇಳಲಾಗುತ್ತದೆ. ಏಕೆಂದರೆ ವಾಸ್ತು ಶಾಸ್ತ್ರದಲ್ಲಿ ಗೂಬೆ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಯಾವ ಮನೆಗೆ ಒಂದು ಗೂಬೆ ಬರುತ್ತದೆಯೋ ಆ ಮನೆಯಲ್ಲಿ ಸಂಪತ್ತಿನ ಮಳೆ ಸುರಿಯುತ್ತದೆ ಎಂದು ಹೇಳಲಾಗುತ್ತದೆ.
ಕಾಗೆ
ವಾಸ್ತು ಶಾಸ್ತ್ರದ ಪ್ರಕಾರ, ಒಂದು ಕಾಗೆ ನಿಮ್ಮ ಮನೆಯ ಮಾಳಿಗೆ ಅಥವಾ ಅಂಗಳಕ್ಕೆ ಬಂದರೆ ನಿಮ್ಮ ಮನೆಗೆ ಹೊಸ ಅತಿಥಿಗಳು ಬರುತ್ತಾರೆ ಎಂಬುದಕ್ಕೆ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಕಾಗೆ ಮನೆಗೆ ಬರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಕಾಗೆ ಪೂರ್ವಜರೊಂದಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ.
ಗಿಳಿ
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯಲ್ಲಿ ಒಂದು ಗಿಳಿ ಕುಳಿತುಕೊಳ್ಳುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಮನೆಗೆ ಸಂಪತ್ತನ್ನು ತರುವುದಕ್ಕೆ ಸೂಚನೆಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮನೆಯಲ್ಲಿ ಮತ್ತು ಜೀವನದಲ್ಲಿ ಶಾಶ್ವತವಾಗಿ ಇರುತ್ತದೆ ಎಂದು ನಂಬಲಾಗುತ್ತದೆ. ಹಿಂದೂ ಧರ್ಮದಲ್ಲಿ ಗಿಳಿ ಕುಬೇರನೊಂದಿಗೆ ಸಂಬಂಧಿಸಿದೆ ಆದ್ದರಿಂದ, ಯಾವ ಮನೆಗೆ ಗಿಳಿ ಬರುತ್ತದೆಯೋ ಆ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.