ಇಂತಹ ಕೆಲಸ ಮಾಡುವವರ ಮನೆಗೆ ಎಂದಿಗೂ ಸಂಪತ್ತಿನ ಒಡತಿ ಲಕ್ಷ್ಮೀ ಬರೋಲ್ಲ!
ಕೆಲವು ಅಭ್ಯಾಸಗಳನ್ನು ಹೊಂದಿರುವ ಮನುಷ್ಯನ ಮೇಲೆ ಮಾತಾ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಅಂತಹ ಜನರು ಸಂತೋಷದ ಜೀವನವನ್ನು ನಡೆಸುವುದು ಕಷ್ಟವಾಗುತ್ತದೆ. ಅಂತಹ ಕೆಲವು ಅಭ್ಯಾಸಗಳ ಬಗ್ಗೆ ಇಂದು ನಾವು ನಿಮಗೆ ಹೇಳೋಣ.
ಲಕ್ಷ್ಮೀ ದೇವಿಯ (Goddess Lakshmi) ಆಶೀರ್ವಾದ ಎಂದಿಗೂ ನಮ್ಮ ಮೇಲೆ ಇರಬೇಕು ಎಂದು ನೀವು ಬಯಸಿದ್ರೆ, ಕೆಲವೊಂದು ತಪ್ಪುಗಳನ್ನು ಮಾಡೋದನ್ನು ನೀವು ಬಿಡಬೇಕು. ಯಾಕಂದ್ರೆ ಕೆಲವೊಂದು ತಪ್ಪುಗಳು ಅಥವಾ ನೀವು ಮಾಡುವ ಕೆಲಸಗಳು ಲಕ್ಷ್ಮೀ ದೇವಿಗೆ ಎಷ್ಟೊಂದು ಕೋಪ ತರುತ್ತೆ ಅಂದ್ರೆ, ನಿಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಆಗೋದೇ ಇಲ್ಲ.
ಪೂಜೆ ಮಾಡದಿರುವವರು
ಯಾರು ಪೂಜೆ ಮಾಡುವುದಿಲ್ಲವೋ, ಅವರ ಮನೆ ಮತ್ತು ಮನಸ್ಸಿನಲ್ಲಿ ಕೇವಲ ನಕಾರಾತ್ಮಕತೆ (Negativity) ಮಾತ್ರ ಇರುತ್ತದೆ. ಯಾರ ಮನದಲ್ಲಿ ಮತ್ತು ಮನಸ್ಸಿನಲ್ಲಿ ನಕಾರಾತ್ಮಕತೆ (negativity) ಇರುತ್ತದೆಯೋ, ಅಲ್ಲಿ ಮಾತಾ ಲಕ್ಷ್ಮಿ ವಾಸಿಸುವುದಿಲ್ಲ.
ಅಶುದ್ಧವಾಗಿ ಇರೋದು
ಎಲ್ಲಿ ಶುಚಿತ್ವ (Cleanliness) ಇರುತ್ತದೆಯೋ ಅಲ್ಲಿ ಲಕ್ಷ್ಮಿ ದೇವಿಯು ವಾಸಿಸುತ್ತಾಳೆ ಎಂದು ನಂಬಲಾಗಿದೆ. ಕೊಳಕು ಬಟ್ಟೆಗಳನ್ನು (dirty people) ಧರಿಸುವವರು, ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳದವರು, ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳದ ಜನರ ಮನೆಯಲ್ಲಿ ಎಂದಿಗೂ ಲಕ್ಷ್ಮೀ ವಾಸಿಸೋದಿಲ್ಲ.
ಜಗಳ ನಡೆಯುವ ಮನೆ
ಯಾರ ಮನೆಯಲ್ಲಿ ಯಾವಾಗಲೂ ಜಗಳದ (fighting) ವಾತಾವರಣ ಇರುತ್ತದೆಯೋ ಅಲ್ಲಿ ಮಾತಾ ಲಕ್ಷ್ಮಿ ಸಂತೋಷದಿಂದ ಇರಲು ಸಾಧ್ಯವೇ ಇಲ್ಲಾ. ಅಂತಹ ಜನರ ಮನೆಯ ಮೇಲೆ ಲಕ್ಷ್ಮಿ ದೇವಿಯ ಕೃಪೆ ಎಂದಿಗೂ ಬೀಳುವುದಿಲ್ಲ.
ವಯಸ್ಸಾದವರಿಗೆ ಕಿರುಕುಳ ನೀಡುವವರು
ವಯಸ್ಸಾದವರನ್ನು ಅವಮಾನಿಸುವ, ಅಸಹಾಯಕ ಜನರಿಗೆ ಕಿರುಕುಳ ನೀಡುವವರ ಮೇಲೆ ಮಾತಾ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಅಂತಹ ಮನೆಯಲ್ಲಿ ಎಂದಿಗೂ ಸಂತೋಷ ಮತ್ತು ಸಮೃದ್ಧಿ ಇರುವುದಿಲ್ಲ.
ವಂಚಕರೊಂದಿಗೆ
ಕಠಿಣ ಪರಿಶ್ರಮವಿಲ್ಲದೆ ಇತರರ ಸಂಪತ್ತನ್ನು ಮೋಸದಿಂದ ಪಡೆಯಲು ಪ್ರಯತ್ನಿಸುವ ವ್ಯಕ್ತಿಯ ಬಗ್ಗೆ ಲಕ್ಷ್ಮಿ ಎಂದಿಗೂ ಸಂತೋಷವಾಗಿರುವುದಿಲ್ಲ. ಅವರ ಬಳಿ ಲಕ್ಷ್ಮೀ ಎಂದಿಗೂ ಹೋಗೋದೆ ಇಲ್ಲ.
ಮೂರ್ಖರ ಮನೆ
ಮೂರ್ಖರಾಗಿದ್ದಾಗಲೂ (Foolish) ಜ್ಞಾನಿಗಳಂತೆ ನಟಿಸುವ ಜನರ ಮನೆಯಲ್ಲಿ ತಾಯಿ ಲಕ್ಷ್ಮಿ ಅಂತಹ ಎಂದಿಗೂ ವಾಸಿಸುವುದಿಲ್ಲ. ಯಾಕೆಂದರೆ ಅವರು ತಮ್ಮ ಮೂರ್ಖತನದಿಂದ ಏನಾದರೊಂದು ಕೆಟ್ಟಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ.
ಆಹಾರಕ್ಕೆ ಅವಮಾನ ಮಾಡುವವರು
ಆಹಾರವನ್ನು ಅವಮಾನಿಸುವ ವ್ಯಕ್ತಿಯ ಮೇಲೆ ಮಾತಾ ಲಕ್ಷ್ಮಿ ಯಾವಾಗಲೂ ಕೋಪಗೊಳ್ಳುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ತಾಯಿ ಎಂದಿಗೂ ಮನೆಯಲ್ಲಿ ವಾಸಿಸುವುದಿಲ್ಲ. ಹಾಗಾಗಿ ಪ್ರತಿಯೊಬ್ಬರು ಆಹಾರಕ್ಕೆ ಗೌರವ ಕೊಡೋದನ್ನು ಕಲಿಯಬೇಕು.