ವಾಸ್ತು ವಿಜ್ಞಾನದ ಪ್ರಕಾರ, ಮನೆಯಲ್ಲಿ ಟಿವಿ, ಫ್ರಿಡ್ಜ್, ಎಲ್ಲಿಡಬೇಕು?
ನಮ್ಮ ಮನೆಯ ಪ್ರತಿಯೊಂದು ವಸ್ತುವು ವಾಸ್ತವದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ ಮತ್ತು ಎಲ್ಲವನ್ನೂ ಇಡಲು ವಿಶೇಷ ಸ್ಥಳ ಮತ್ತು ದಿಕ್ಕು ಇದೆ. ಎಲ್ಲವನ್ನೂ ಸರಿಯಾದ ದಿಕ್ಕಿನಲ್ಲಿ ಇರಿಸೋದ್ರಿಂದ ಮನೆಯ ವಾಸ್ತು ಸರಿಯಾಗಿ ಉಳಿಯುತ್ತೆ, ಇಲ್ಲದಿದ್ರೆ ಯಾವುದೇ ವಸ್ತುವನ್ನು ತಪ್ಪು ದಿಕ್ಕಿನಲ್ಲಿ ಇಡೋದು ವಾಸ್ತು ದೋಷಗಳನ್ನು ಸೃಷ್ಟಿಸುತ್ತೆ.ಅದರ ಬಗ್ಗೆ ಹೆಚ್ಚು ತಿಳಿಯಲು ಮುಂದೆ ಓದಿ.
ಜ್ಯೋತಿಷ್ಯದ ಪ್ರಕಾರ, ರಾಹು ಮತ್ತು ಶನಿ ಮನೆಯ ಎಲ್ಲಾ ಎಲೆಕ್ಟ್ರಾನಿಕ್ (Electronic) ವಸ್ತುಗಳ ಮೇಲೆ ಪ್ರಭಾವ ಬೀರುತ್ತಾರೆ. ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸದಿದ್ದರೆ, ಅವು ಒಂದು ರೀತಿಯ ನಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತವೆ, ಇದು ಮನೆಯಲ್ಲಿ ವಾಸ್ತು ದೋಷ ಸೃಷ್ಟಿಸುತ್ತೆ . ಈ ವಸ್ತುಗಳನ್ನು ಇಡುವ ಸರಿಯಾದ ದಿಕ್ಕನ್ನು ತಿಳಿದುಕೊಳ್ಳೋಣ ...
ಕೂಲರ್(Cooler) ಎಸಿ ಇಡುವ ದಿಕ್ಕು ಯಾವುದು?
ವಾಯುವ್ಯ ಕೋನವನ್ನು ಗಾಳಿಯ ದಿಕ್ಕು ಎಂದು ಪರಿಗಣಿಸಲಾಗುತ್ತೆ. ಅಂದರೆ, ಉತ್ತರ ಮತ್ತು ಪಶ್ಚಿಮದ ಮಧ್ಯದಲ್ಲಿರುವ ವಾಯುವ್ಯ ದಿಕ್ಕನ್ನು ವಾಯುವ್ಯ ಕೋನವೆಂದು ಪರಿಗಣಿಸಲಾಗುತ್ತೆ. ಹಾಗಿದ್ರೆ ಈ ಸ್ಥಳದಲ್ಲಿ ಕೂಲರ್ ಅಥವಾ ಏಸಿ ಇರಿಸೋದು ಒಳ್ಳೆಯದೇ?
ವಾಯುವ್ಯ ದಿಕ್ಕಿನಲ್ಲಿ ಕೂಲರ್ ಮತ್ತು ಎಸಿಗಳನ್ನು(Air conditioner) ಸ್ಥಾಪಿಸುವ ಮೂಲಕ, ಅದರ ಪರಿಣಾಮ ಮತ್ತು ಅವುಗಳ ಜೀವಿತಾವಧಿ ಹೆಚ್ಚಾಗುತ್ತೆ. ಇದು ಸಾಧ್ಯವಾಗದಿದ್ದರೆ, ಅವುಗಳನ್ನು ಉತ್ತರ ದಿಕ್ಕಿನಲ್ಲಿ ಇರಿಸಿ, ಇದರಿಂದ ನೀವು ಉತ್ತಮ ಸಂತೋಷವನ್ನು ಪಡೆಯಲು ಸಾಧ್ಯವಾಗುತ್ತೆ.
ವಾಟರ್ ಫಿಲ್ಟರ್ ನ(Water filter)ದಿಕ್ಕು
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಡುಗೆಮನೆಯಲ್ಲಿಯೇ ನೀರಿನ ಫಿಲ್ಟರ್ ಗಳನ್ನು ಇಡಲು ಬಯಸುತ್ತಾರೆ. ನೀವು ಸಹ ಹಾಗೆ ಮಾಡಬಹುದು, ಆದರೆ ಇದನ್ನು ಅಡುಗೆಮನೆಯ ಉತ್ತರ ಬದಿಯ ಗೋಡೆಯ ಮೇಲೆ ಇಡಬೇಕು ಎಂಬುದನ್ನು ನೆನಪಿನಲ್ಲಿಡಿ.
ಉತ್ತರ ಬದಿಯ ದಿಕ್ಕನ್ನು ನೀರಿನ(Water) ದಿಕ್ಕು ಎಂದು ಕರೆಯಲಾಗುತ್ತೆ. ಮನೆಯ ಉತ್ತರ ಭಾಗದಲ್ಲಿ ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಹೊಂದಿರೋದು ಮಂಗಳಕರ. ಆದ್ದರಿಂದ, ಮನೆಯ ಉತ್ತರ ದಿಕ್ಕಿನಲ್ಲಿ ಫಿಲ್ಟರ್ ಅಳವಡಿಸಬೇಕು. ಇದು ಮನೆಯಲ್ಲಿ ವಾಸಿಸುವವರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಅನುಕೂಲಕರ ಪರಿಣಾಮ ಬೀರುತ್ತೆ.
ಮನೆಯಲ್ಲಿ ಟಿವಿಯ(TV) ದಿಕ್ಕು
ಹೆಚ್ಚಿನ ಜನರು ತಮ್ಮ ಮನೆಯ ಲಿವಿಂಗ್ ಏರಿಯಾದಲ್ಲಿ ಟಿವಿಗಳನ್ನು ಇಡುತ್ತಾರೆ. ಟಿವಿಯನ್ನು ಲಿವಿಂಗ್ ರೂಮಿನಲ್ಲಿ ಪೂರ್ವ ದಿಕ್ಕಿನ ಗೋಡೆಯಲ್ಲಿ ಇರಿಸಿ. ಇದು ಟಿವಿ ನೋಡುವಾಗ ನಿಮ್ಮ ಮುಖವನ್ನು ಪೂರ್ವ ದಿಕ್ಕಿನಲ್ಲಿ ಇರಿಸುತ್ತೆ. ಇದು ನಿಮ್ಮೊಳಗೆ ಸಕಾರಾತ್ಮಕ ಭಾವನೆ ತುಂಬುತ್ತೆ. ಇದು ಸಾಧ್ಯವಾಗದಿದ್ದರೆ,ಟಿವಿಯನ್ನು ಉತ್ತರ ಭಾಗದ ಗೋಡೆಯ ಮೇಲೆ ಹಾಕಬಹುದು.
ಫ್ರಿಜ್ (Fridge)ಎಲ್ಲಿ ಇಡಬೇಕು
ಫ್ರಿಜ್ ಅನ್ನು ಪಶ್ಚಿಮ ಗೋಡೆಯ ಮೇಲೆ ಇರಿಸಿ. ಈ ದಿಕ್ಕನ್ನು ವಿದ್ಯುತ್ ಉಪಕರಣಗಳಿಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಫ್ರಿಡ್ಜ್ ಈ ದಿಕ್ಕಿನಲ್ಲಿ ಇರಿಸುವ ಮೂಲಕ, ಅದರ ಜೀವಿತಾವಧಿ ದೀರ್ಘವಾಗಿರುತ್ತೆ ಮತ್ತು ಫ್ರಿಡ್ಜ್ ನ ಉತ್ತಮ ಸರ್ವಿಸ್ ಲಾಭವನ್ನು ಪಡೆಯಬಹುದು. ನೀವು ಬಾಗಿಲು ತೆರೆದಾಗಲೆಲ್ಲಾ, ಅದರ ಬಾಯಿ ಪೂರ್ವ ದಿಕ್ಕಿನ ಕಡೆಗೆ ತೆರೆಯುತ್ತೆ, ಇದು ಅವುಗಳಲ್ಲಿ ಇರಿಸಲಾದ ಸರಕುಗಳಿಗೆ ಸಕಾರಾತ್ಮಕತೆಯನ್ನು ತರುತ್ತೆ.