Vaastu: ಮನೆಯಲ್ಲಿ ಗಾಜು ಒಡೆಯುವುದು ಶುಭವೋ? ಅಶುಭವೋ?
ಇತ್ತೀಚಿನ ದಿನಗಳಲ್ಲಿ ಮನೆಯನ್ನು ಅಲಂಕರಿಸಲು ಹೆಚ್ಚಾಗಿ ಗ್ಲಾಸ್ ಅಥವಾ ಗಾಜಿನ ವಸ್ತುಗಳನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲ ಗಾಜಿನ ಪಾತ್ರೆಗಳು, ಗ್ಯಾಜೆಟ್‌ಗಳು-ಎಲೆಕ್ಟ್ರಾನಿಕ್ಸ್ ಸರಕುಗಳವರೆಗೂ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇವುಗಳನ್ನು ಹಾಳಾಗದಂತೆ ಕಾಪಾಡುವುಫ಼ು ತುಂಬಾ ಕಷ್ಟದ ಕೆಲಸ. ಯಾಕೆಂದರೆ ಗಾಜು ತುಂಬಾ ನಾಜುಕಾದ ವಸ್ತು. ಬಿದ್ದರೆ ಒಡೆದು ಹೋಗುತ್ತದೆ. ಜೊತೆಗೆ ಗಾಜು ಒಡೆಯುವುದು ಅಶುಭ ಎನ್ನಲಾಗುತ್ತದೆ.
ಮನೆಯಲ್ಲಿ ಗಾಜಿನ ಅಲಂಕಾರಿಕ ವಸ್ತು ಅಥವಾ ಕನ್ನಡಿಯನ್ನು ಹೆಚ್ಚಾಗಿ ಹೊಂದಿರುವವರಿಗೆ ಗಾಜು ಒಡೆದರೆ, ಎಂಬ ಭಯವೂ ಇರುತ್ತದೆ. ಗಾಜು ಒಡೆದರೆ ಪ್ರೀತಿಯಿಂದ ತಂದ ವಸ್ತು ಹಾಳಾಯಿತು ಎಂಬುವುದು ಒಂದು ಕಾರಣವಾದರೆ, ಮನೆಯಲ್ಲಿ ಗಾಜು ಒಡೆಯುವುದು ಅಶುಭ ಎಂಬ ಕಾರಣಕ್ಕೂ ಕೆಲವರು ಗಾಜಿನ ವಸ್ತುಗಳನ್ನು ಬಳಸಲು ಹಿಂದು-ಮುಂದು ನೋಡುತ್ತಾರೆ.
ವಾಸ್ತವವಾಗಿ, ಹಿಂದಿನ ಕಾಲದಲ್ಲಿ ಜನರು ಗಾಜು ಒಡೆಯುವುದನ್ನು ಅಶುಭವೆಂದು ಪರಿಗಣಿಸಿದ್ದರು ಮತ್ತು ಇಂದಿಗೂ ಸಹ ಈ ನಂಬಿಕೆ ಅನೇಕ ಜನರಲ್ಲಿದೆ. ಆದರೆ ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಆಕಸ್ಮಿಕವಾಗಿ ಗಾಜು ಒಡೆಯುವುದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.
ಗಾಜು ಒಡೆಯುವುದು ಏಕೆ ಶುಭಕರ?
ವಾಸ್ತು ಶಾಸ್ತ್ರದ ಪ್ರಕಾರ, ಗಾಜಿನ ವಸ್ತುವು ಇದ್ದಕ್ಕಿದ್ದಂತೆ ಒಡೆದರೆ ಅದು ಅಶುಭವಲ್ಲ. ಹೌದು ನೀವು ಇಷ್ಟು ದಿನ ನಂಬಿ ಬಂದದ್ದು ನಿಜವಲ್ಲ. ಯಾಕೆಂದರೆ ಗಾಜು ಒಡೆಯುವುದು ಶುಭಕರ ಸಂಗತಿ. ಇದು ಮನೆಯಲ್ಲಿನ ಬಿಕ್ಕಟ್ಟು ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬುದರ ಸಂಕೇತ.
ಮನೆಯಲ್ಲಿ ಗಾಜು ಒಡೆದರೆ ಮನೆಯಲ್ಲಿ ಎಂತಹದ್ದೇ ಬಿಕ್ಕಟ್ಟು ಸೃಷ್ಟಿಯಾಗಿದ್ದರೂ, ಅದು ಮುಗಿಯುವ ಕಾಲ ಬಂದಿದೆ ಎಂದರ್ಥ. ಅದೇ ಸಮಯದಲ್ಲಿ, ಮತ್ತೊಂದು ಸಂತಸದ ವಿಷಯ ಏನೆಂದರೆ ಹಲವೆಡೆ ಗಾಜು ಒಡೆಯುವುದು ಕುಟುಂಬದ ಸದಸ್ಯರ ಆರೋಗ್ಯ ಸುಧಾರಣೆಯ ಸೂಚನೆ ಎಂದೂ ಕೂಡ ಹೇಳಲಾಗುತ್ತದೆ.
ಒಡೆದ ಗಾಜನ್ನು ಮನೆಯಲ್ಲಿಡುವುದು ಅಶುಭ: ಹೌದು ಆಕಸ್ಮಿಕವಾಗಿ ಗಾಜು ಒಡೆಯುವುದು ಶುಭ. ಆದರೆ ಒಡೆದ ಗಾಜನ್ನು ಮನೆಯಲ್ಲಿ ಇಡುವುದು ಅಶುಭ. ಮುರಿದ/ಒಡೆದ ಗಾಜು ಬಿಕ್ಕಟ್ಟನ್ನು ತಪ್ಪಿಸುವ ಸಂಕೇತವಾಗಿರಬಹುದು, ಆದರೆ ಮನೆಯಲ್ಲಿ ಒಡೆದ ಗಾಜನ್ನು ಇಟ್ಟುಕೊಳ್ಳುವುದು ತುಂಬಾ ಅಶುಭಕರ.
ಒಡೆದ ಗಾಜು ಅದು ಕನ್ನಡಿ ಆಗಿರಬಹುದು ಅಥವಾ ಯಾವುದೇ ಶೋ ಪೀಸ್ ಆಗಿರಬಹುದು, ಇದನ್ನು ಮನೆಯಲ್ಲಿ ಇಟ್ಟರೆ ಇದು ಮನೆಯಲ್ಲಿ ತೊಂದರೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಒಡೆದ ಗಾಜು, ಸೆರಾಮಿಕ್ ಅಥವಾ ಒಡೆದ ವಸ್ತುಗಳನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಈ ವಸ್ತುಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತವೆ ಎಂಬ ನಂಬಿಕೆ ಇದೆ.