ದೇವರ ರೂಮಲ್ಲಿ ಕಸ ತುಂಬಿದ ಹಾಗೆ ವಿಗ್ರಹ ತುಂಬೋದು ಒಳ್ಳೇದಲ್ಲ, ಏನಾಗುತ್ತೆ?
ನಿಮ್ಮ ಮನೆಯ ದೇವರಕೋಣೆಯಲ್ಲಿ ಒಂದೇ ದೇವರ ಹೆಚ್ಚಿನ ವಿಗ್ರಹಗಳಿದ್ದರೆ, ವಿಶೇಷವಾಗಿ ವಾಸ್ತು ಸಲಹೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇದರಿಂದ ಯಾವುದೇ ನಕಾರಾತ್ಮಕತೆ ನಿಮ್ಮ ಮನೆಯನ್ನು ಪ್ರವೇಶಿಸೋದಿಲ್ಲ ಎಂದು ಪರೀಕ್ಷಿಸಿಕೊಳ್ಳಿ.
ಮನೆಯ ಅತ್ಯಂತ ಪವಿತ್ರ ಸ್ಥಳ ಪೂಜಾ ಮನೆ(Pooja room). ಇಲ್ಲಿ ಯಾವಾಗಲೂ ಸಕಾರಾತ್ಮಕತೆ ಇರುತ್ತೆ. ಇತ್ತೀಚಿಗೆ ಜನರು ನಿರ್ಮಿಸಿದ ದೇವರ ಮಂಟಪಗಳನ್ನು ತಮ್ಮ ಮನೆಯಲ್ಲಿ ಇಟ್ಟು ಕೊಳ್ಳುತ್ತಾರೆ. ಇವುಗಳಲ್ಲಿ, ಅವರು ತಮ್ಮ ದೇವರ ವಿಗ್ರಹಗಳನ್ನು ಅಲಂಕರಿಸುತ್ತಾರೆ, ಇದರಿಂದ ದೇವರ ಆಶೀರ್ವಾದವು ಯಾವಾಗಲೂ ಅವರ ಮೇಲೆ ಉಳಿಯುತ್ತೆ ಅನ್ನೋ ನಂಬಿಕೆ.
ಆದರೆ ನಾವು ವಿಶೇಷ ಕಾಳಜಿ ವಹಿಸಬೇಕಾದ ಅನೇಕ ವಿಷಯಗಳಿವೆ. ಇವುಗಳಲ್ಲಿ ಪ್ರಮುಖವಾದುದು ವಿಗ್ರಹಗಳನ್ನು(Idols) ಇಡುವ ವಿಧಾನ ಮತ್ತು ಸ್ಥಳ. ಇದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ, ಆಗ ಮಾತ್ರ ನಿಮ್ಮ ದೇವರ ಕೋಣೆಯನ್ನು ಸರಿಯಾಗಿ ಅಲಂಕರಿಸಲು ಸಾಧ್ಯ.
ನಿಮ್ಮ ದೇವರಕೋಣೆಯಲ್ಲಿ ಒಂದೇ ದೇವರ ಹೆಚ್ಚಿನ ವಿಗ್ರಹಗಳಿದ್ದರೆ, ಅವುಗಳನ್ನು ಎಂದಿಗೂ ಮುಖಾಮುಖಿಯಾಗಿ ಇಡಬಾರದು. ಏಕೆಂದರೆ ಇದು ನಕಾರಾತ್ಮಕ ಶಕ್ತಿಯನ್ನು(Negative energy) ಸೃಷ್ಟಿಸುತ್ತೆ ಮತ್ತು ಅವುಗಳ ಪರಿಣಾಮವನ್ನು ಕಡಿಮೆ ಮಾಡುತ್ತೆ. ಹಾಗಾಗಿ ಅವುಗಳನ್ನು ತೆಗೆದು ಹಾಕಲು ಅಥವಾ ಅದರ ದಿಕ್ಕನ್ನು ಬದಲಾಯಿಸಲು ಯತ್ನಿಸಿ. ಇದರಿಂದ ಅವರಿಬ್ಬರ ಪ್ರತಿಬಿಂಬವು ಪರಸ್ಪರರ ಮೇಲೆ ಬೀಳೋದಿಲ್ಲ. ಇದು ನಕಾರಾತ್ಮಕ ಪರಿಣಾಮ ಬೀರೋದಿಲ್ಲ.
ಸಲಹೆ: ನೀವು ಬಯಸೋದಾದ್ರೆ, ಅವುಗಳನ್ನು ಮನೆಯ ವಿವಿಧ ಸ್ಥಳಗಳಲ್ಲಿ ಇಡಬಹುದು.
ವಿಗ್ರಹಗಳನ್ನು ಜೋಡಿಗಳೊಂದಿಗೆ ಇರಿಸಿಕೊಳ್ಳಿ
ಅನೇಕ ಬಾರಿ ಒಂದು ಅಥವಾ ಹೆಚ್ಚು ವಿಗ್ರಹಗಳು ನಮ್ಮ ಪೂಜಾ ಮನೆಯಲ್ಲಿ ಇರುತ್ತವೆ. ಈ ಕಾರಣದಿಂದ ಅದು ತುಂಬಿದೆ ಎಂದು ತೋರುತ್ತೆ. ಆದರೆ ಹಾಗೆ ಮಾಡಬಾರದು. ಒಂದು ದೇವರ ಒಂದೇ ಒಂದು ವಿಗ್ರಹವನ್ನು ನಿಮ್ಮ ಪೂಜಾ ಮನೆಯಲ್ಲಿರಿಸಿ. ಇಲ್ಲದಿದ್ದರೆ ಅವನ್ನು ಜೋಡಿಗಳೊಂದಿಗೆ ಸ್ಥಾಪಿಸಿ. ಇದು ಯಾವಾಗಲೂ ನಿಮ್ಮ ದೇವಾಲಯದಲ್ಲಿ ಸಕಾರಾತ್ಮಕತೆಯನ್ನು (Positive Vibes) ಕಾಪಾಡುತ್ತೆ.
ಸಲಹೆ: ವಿಗ್ರಹವನ್ನು ಇಡುವಾಗ ಎಂದಿಗೂ ನಿಮ್ಮ ಬೆನ್ನನ್ನು ಅವರಿಗೆ ತೋರಿಸಬೇಡಿ
ಹೆಚ್ಚಿನ ಪ್ರತಿಮೆಗಳನ್ನು ತೆಗೆದುಹಾಕಿ
ಒಂದೇ ದೇವರ ಹೆಚ್ಚಿನ ವಿಗ್ರಹಗಳನ್ನು ಪೂಜಾ ಗೃಹದಲ್ಲಿ ಇಡಬಾರದು ಎಂದು ಹೇಳಲಾಗುತ್ತೆ. ಗಣೇಶನ(Lord Ganesh) ಎರಡು ವಿಗ್ರಹಗಳಿದ್ದರೆ, ಅವುಗಳನ್ನು ಮನೆಯ ವಿವಿಧ ಸ್ಥಳಗಳಲ್ಲಿ ಇಡಬಹುದು. ಇದರೊಂದಿಗೆ, ನೀವು ಯಾವುದೇ ವಿಗ್ರಹ ಇಟ್ಟುಕೊಂಡರೂ, ವಿಗ್ರಹವು ಕ್ರೋಧ ತುಂಬಿದ ರೂಪದಲ್ಲಿ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಇದು ಮನೆಯಲ್ಲಿ ಸಂಘರ್ಷವನ್ನು ಹೆಚ್ಚಿಸುತ್ತೆ. ಇದರಿಂದಾಗಿ ಕುಟುಂಬದಲ್ಲಿ ಸಮಸ್ಯೆಗಳು ಉಂಟಾಗುತ್ತೆ.
ವಿಗ್ರಹಗಳು ಛಿದ್ರವಾಗಲು ಪ್ರಾರಂಭಿಸಿದ್ದರೆ ತಕ್ಷಣ ಅವುಗಳನ್ನು ಪೂಜಾ ಸ್ಥಳದಿಂದ ತೆಗೆದು ಹಾಕಿ. ಇಲ್ಲದಿದ್ದರೆ, ಅವು ಮನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ದೇವರ ಕೋಣೆಯಲ್ಲಿ ವಾಸ್ತು ನಿಯಮ ಪ್ರಕಾರ ವಿಗ್ರಹಗಳನ್ನು ಸ್ಥಾಪಿಸಿದ್ರೆ, ಮನೆಯಲ್ಲಿ ಯಾವಾಗಲೂ ಸಂತೋಷ (Happiness) ಮತ್ತು ಸಮೃದ್ಧಿ (Prosperity) ಇರುತ್ತೆ.