ಅಡುಗೆಮನೆಯ ಈ ದಿಕ್ಕಿನಲ್ಲಿ ಗ್ಯಾಸ್-ಸ್ಟೌವ್ ಇರಿಸಿದ್ರೆ ಹಣದ ಸಮಸ್ಯೆಗೆ ಸಿಗುತ್ತೆ ಮುಕ್ತಿ!
ಅಡುಮೆ ಮನೆಯು ಮನೆಯ ಸೌಂದರ್ಯ ಹೆಚ್ಚಿಸೋ ಸರ್ವರನ್ನು ಸಾಕು ಅಡು ಮನೆ ವಾಸ್ತು ಟಿಪ್ಸ್ ಹಿಗಿ
ವಾಸ್ತು (Vastu) ಶಾಸ್ತ್ರದ ಪ್ರಕಾರ, ಅಡುಗೆಮನೆ ಯಾವುದೇ ಮನೆಯ ಪ್ರಮುಖ ಸ್ಥಳವಾಗಿದೆ. ವಾಸ್ತು ಪ್ರಕಾರ, ಅಡುಗೆಮನೆಯನ್ನು ನಿರ್ಮಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡಬೇಕು. ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ತಾಯಿ ಅನ್ನಪೂರ್ಣ ಅಡುಗೆಮನೆಯಲ್ಲಿ ವಾಸಿಸುತ್ತಾಳೆ. ಆದ್ದರಿಂದ, ಇಲ್ಲಿ ವಾಸ್ತುಗೆ ಸಂಬಂಧಿಸಿದ ತಪ್ಪುಗಳು ಜೀವನದಲ್ಲಿ ನಕಾರಾತ್ಮಕ ಫಲಿತಾಂಶಗಳನ್ನು ತರಬಹುದು.
ಅಡುಗೆಮನೆಗೆ (Kitchen) ಸಂಬಂಧಿಸಿದ ಕೆಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ, ಇವುಗಳನ್ನು ಅಳವಡಿಸಿಕೊಳ್ಳುವ ಮೂಲಕ, ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ಹೇಳಲಾಗುತ್ತೆ. ಅಡುಗೆಮನೆಗೆ ಸಂಬಂಧಿಸಿದ ವಾಸ್ತು ನಿಯಮಗಳನ್ನು ಇಲ್ಲಿ ತಿಳಿಯಿರಿ-
ಆಗ್ನೇಯ ವಲಯದಲ್ಲಿ ಅಡುಗೆಮನೆಯನ್ನು ನಿರ್ಮಿಸಬೇಕು. ಗ್ಯಾಸನ್ನು(Gas) ಪೂರ್ವ ದಿಕ್ಕಿನಲ್ಲಿ ಇರಿಸಿ. ಅಡುಗೆ ಮಾಡುವವರು ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು. ಹೀಗೆ ಮಾಡೋದರಿಂದ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿರೋದಿಲ್ಲ ಎಂದು ನಂಬಲಾಗಿದೆ.
ಕುಡಿಯುವ ನೀರು(Drinking water), ಆರ್ ಒ ಇತ್ಯಾದಿಗಳನ್ನು ಅಡುಗೆಮನೆಯ ಈಶಾನ್ಯ ವಲಯದಲ್ಲಿ ಇಡಬೇಕು. ಅಡುಗೆಮನೆಯ ಸಿಂಕ್ ನ ಸ್ಥಳವನ್ನು ಅಡುಗೆಮನೆಯ ಈಶಾನ್ಯ ಅಥವಾ ವಾಯುವ್ಯ ದಿಕ್ಕಿದಲ್ಲಿ ಮಾಡಬೇಕು.
ಅಡುಗೆಮನೆಯಲ್ಲಿನ ವಿದ್ಯುತ್ ಉಪಕರಣಗಳನ್ನು ದಕ್ಷಿಣ / ನೈಋತ್ಯ ವಲಯದಲ್ಲಿ ಇಡಬಹುದು. ನೀರು ಮತ್ತು ಬೆಂಕಿಯನ್ನು(Fire) ಒಂದೇ ರೇಖೆಯಲ್ಲಿ ಇಡಬಾರದು.ಅಡುಗೆಮನೆಯಲ್ಲಿ ಬೆಂಕಿ ಮತ್ತು ನೀರು ಒಂದೇ ರೇಖೆಯಲ್ಲಿದ್ದರೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗುತ್ತೆ. ಸಣ್ಣ ವಿಷಯಗಳ ಬಗ್ಗೆ ವಿವಾದವಾಗಬಹುದು.
ಬೆಂಕಿ ಮತ್ತು ನೀರು ಒಂದೇ ರೇಖೆಯಲ್ಲಿದ್ದರೆ, ಆರೋಗ್ಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಹೆಚ್ಚು. ಅದನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ, ನೀವು ಅವುಗಳ ನಡುವೆ ಕೆಂಪು ರೇಖೆಯನ್ನು ಮಾಡಬಹುದು. ಇಲ್ಲದಿದ್ದರೆ ಅವುಗಳ ಮಧ್ಯದಲ್ಲಿ ಹಸಿರು ಸಸ್ಯವನ್ನು(Plant) ಇಡಬಹುದು.
ಕಪ್ಪು(Black), ನೀಲಿ ಮತ್ತು ಬೂದು ಬಣ್ಣಗಳನ್ನು ಅಡುಗೆಮನೆಯಲ್ಲಿ ಬಳಸಬಾರದು. ಮನೆಯ ಆಗ್ನೇಯ ಕೋನವು ಅಡುಗೆಮನೆಯ ಆದರ್ಶ ಸ್ಥಾನವಾಗಿದೆ. ಈ ದಿಕ್ಕಿನಲ್ಲಿ ನಿರ್ಮಿಸಲಾದ ಅಡುಗೆಮನೆ ಮಂಗಳಕರವಾಗಿದೆ ಎಂದು ನಂಬಲಾಗಿದೆ.