Career: ಯಶಸ್ಸು ಗಳಿಸಿ ಕೈ ತುಂಬಾ ಹಣ ಸಂಪಾದಿಸಲು ಆಫೀಸಲ್ಲಿ ಇದನ್ನಿಡಿ
ನೀವು ನಿಮ್ಮ ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಶ್ರಮ ಪಡುತ್ತಿದ್ದೀರಾ? ಈ ಶ್ರಮದ ಜೊತೆಗೆ ಕಚೇರಿಯಲ್ಲಿ ಈ ವಾಸ್ತು ನಿಯಮಗಳನ್ನು ಅಳವಡಿಸಿಕೊಂಡ್ರೆ, ಅದು ನಿಮ್ಮ ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿಯನ್ನು ಉಳಿಸಿಕೊಳ್ಳುತ್ತೆ. ಜೊತೆಗೆ, ನಿಮ್ಮ ವ್ಯವಹಾರವು ಆಕಾಶದ ಎತ್ತರವನ್ನು ಮುಟ್ಟುತ್ತೆ.
ವಾಸ್ತು (Vaastu) ಶಾಸ್ತ್ರ ಹಿಂದೂ ವ್ಯವಸ್ಥೆಯ ಅತ್ಯಂತ ಹಳೆಯ ವಿಜ್ಞಾನಗಳಲ್ಲಿ ಒಂದು. ವ್ಯವಹಾರಕ್ಕಾಗಿ ಕೆಲವು ವಾಸ್ತು ಸಲಹೆಗಳನ್ನು ಬಳಸುವ ಮೂಲಕ, ನೀವು ನಿಮ್ಮ ವ್ಯವಹಾರದಲ್ಲಿ ಪ್ರಗತಿ ಸಾಧಿಸಬಹುದು. ವಾಸ್ತು ಶಾಸ್ತ್ರ ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಆಫೀಸ್ ಟೇಬಲ್ (Office Table) ಮೇಲೆ ಏನೆಲ್ಲಾ ಇಡಬಹುದೆಂದು ಹೇಳಿದೆ. ಅವುಗಳ ಬಗ್ಗೆ ಇಲ್ಲಿ ತಿಳಿಯಿರಿ.
ಈ ಸಸ್ಯವನ್ನು ಆಫೀಸ್ ಡೆಸ್ಕ್(Office desk) ಮೇಲೆ ಇರಿಸಿ
ವಾಸ್ತು ಶಾಸ್ತ್ರದ ಪ್ರಕಾರ, ಕಚೇರಿ ಮೇಜಿನ ಮೇಲೆ ಬಿದಿರಿನ ಸಸ್ಯವನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಅದನ್ನು ಇಟ್ಟುಕೊಳ್ಳುವುದು ಅದೃಷ್ಟ ತರುತ್ತೆ.
ಬಿದಿರಿನ ಸಸ್ಯ ನಿಮ್ಮ ಸುತ್ತ ಪರಿಸರದಲ್ಲಿ ಶಾಂತಿ (Peace) ಮತ್ತು ಸಕಾರಾತ್ಮಕತೆ (Positivity) ಇರುವಂತೆ ನೋಡಿಕೊಳ್ಳುತ್ತೆ. ಬಿದಿರಿನ ಸಸ್ಯವನ್ನು ಇಟ್ಟುಕೊಳ್ಳುವುದು ಜೀವನದಲ್ಲಿ ಅದೃಷ್ಟ ಮತ್ತು ಸಮೃದ್ಧಿಯನ್ನು (Prosperity) ತರುತ್ತೆ.
ಕ್ರಿಸ್ಟಲ್ ಗಳ(Crystals)
ಅನೇಕ ಜನರು ತಮ್ಮ ಕಚೇರಿ ಮೇಜಿನ ಮೇಲೆ ಕ್ರಿಸ್ಟಲ್ ಬಾಲ್ (Crystal Ball) ಇಡೋದನ್ನು ನೀವು ನೋಡಿರಬಹುದು. ವಾಸ್ತವವಾಗಿ, ಕಚೇರಿ ಮೇಜಿನ ಮೇಲೆ ಕ್ರಿಸ್ಟಲ್ಗಳಿಂದ ಮಾಡಿದ ವಸ್ತುಗಳನ್ನು ಇಡುವುದು ತುಂಬಾ ಪ್ರಯೋಜನಕಾರಿ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ.
ಆಫೀಸ್ ಡೆಸ್ಕ್ ಮೇಲೆ ಕ್ರಿಸ್ಟಲ್ ಬಾಲ್ ಇಡೋದ್ರಿಂದ ವಾತಾವರಣದಲ್ಲಿ ಸಕಾರಾತ್ಮಕ ಶಕ್ತಿಯನ್ನು (Positivity) ಇರುವಂತೆ ಮಾಡುತ್ತೆ. ಹಾಗೆಯೇ, ಅದನ್ನು ಇಟ್ಟುಕೊಳ್ಳುವುದು ಸ್ಥಗಿತಗೊಂಡ ಕೆಲಸ ಶುರುವಾಗುವಂತೆ ಮಾಡುತ್ತದೆ.
ವೃತ್ತಿ ಜೀವನದಲ್ಲಿ ಬೆಳವಣಿಗೆ
ವಾಸ್ತು ಶಾಸ್ತ್ರದ ಪ್ರಕಾರ, ಚಿನ್ನದ ನಾಣ್ಯಗಳಿಂದ (Gold coins) ತುಂಬಿದ ಹಡಗು ಬಹಳ ಮಹತ್ವದ್ದು. ಇದನ್ನು ಆಫೀಸ್ ಡೆಸ್ಕ್ ಮೇಲೆ ಇಡುವುದು ವ್ಯವಹಾರದಲ್ಲಿ ಪ್ರಗತಿ ಹೆಚ್ಚಿಸುತ್ತೆ. ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು, ನಿಮ್ಮ ಮೇಜಿನ ಮೇಲೆ ಹೂಗುಚ್ಛ ಅಥವಾ ನೀರಿನ ಬಾಟಲಿಯನ್ನು ಸಹ ಇಡಬಹುದು.
ಈ ವಿಷಯಗಳನ್ನು ನೆನಪಿನಲ್ಲಿಡಿ
ಲಕ್ಷ್ಮಿ ದೇವಿ(Goddess Lakshmi) ಕೊಳಕು ಸ್ಥಳದಲ್ಲಿ ವಾಸಿಸೋದಿಲ್ಲ, ಇದರಿಂದ ಹಣದ ನಷ್ಟ ಎದುರಿಸಬೇಕಾಗುತ್ತೆ. ಆದ್ದರಿಂದ, ಕಚೇರಿಯಲ್ಲಿ ಸ್ವಚ್ಛತೆ ಬಗ್ಗೆ ವಿಶೇಷ ಕಾಳಜಿ ವಹಿಸಿ. ಪ್ರತಿದಿನ ಆಫೀಸ್ ಮತ್ತು ಡೆಸ್ಕ್ ಕ್ಲೀನ್ ಆಗಿರುವಂತೆ ನೋಡಿಕೊಳ್ಳೋದು ಮುಖ್ಯ.
ಕಚೇರಿಯಲ್ಲಿ ನೀವು ಕುಳಿತುಕೊಳ್ಳುವ ಪ್ರದೇಶ ಸಾಕಷ್ಟು ಬೆಳಕು(Sunlight) ಇರುವಂತೆ ನೋಡಿಕೊಳ್ಳಬೇಕು. ಇದು ನಿಮ್ಮ ಆರೋಗ್ಯ ಮತ್ತು ವೃತ್ತಿಜೀವನ ಎರಡಕ್ಕೂ ಪ್ರಯೋಜನಕಾರಿಯಾಗಲಿದೆ. ಕತ್ತಲೆ ಇರುವ ಕಡೆಗಳಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತೆ. ಆದುದರಿಂದ ಬೆಳಕು ಇರುವಂತೆ ಕಾಪಾಡಿ.