Asianet Suvarna News Asianet Suvarna News

Feng Shui: ಮನೆ ಮತ್ತು ಕಚೇರಿಯಲ್ಲಿ ಇಂಥ ಹರಳಿನ ಮರವಿಟ್ರೆ ಹಣದ ಹರಿವು ಹೆಚ್ಚುತ್ತೆ..

ಮನೆಯಲ್ಲಿ ಹರಳಿನ ಮರವನ್ನು ಇಟ್ಟುಕೊಳ್ಳುವುದರಿಂದ, ವ್ಯಕ್ತಿಯ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಸ್ಫಟಿಕದ ಮರವು ವಿವಿಧ ವರ್ಣರಂಜಿತ ರತ್ನಗಳು ಮತ್ತು ರೈನ್ ಸ್ಟೋನ್ಸ್‌ನಿಂದ ಮಾಡಲ್ಪಟ್ಟಿದೆ.

Keep crystal tree in home-office like this the inflow of money will increase rapidly skr
Author
Bangalore, First Published Aug 18, 2022, 1:34 PM IST

'ಬೇಕಾಬಿಟ್ಟಿ ಖರ್ಚು ಮಾಡೋಕೆ, ನೀ ಕೇಳ್ದಾಗೆಲ್ಲ ಕೊಡೋಕೆ ಹಣವೇನ್ ಮರದ್ ಮೇಲೆ ಬೆಳೆಯೋಲ್ಲ'- ಈ ವಾಕ್ಯವನ್ನು ನಾವು ನಮ್ಮ ಹಿರಿಯರಿಂದ ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ನಾವು ಕೂಡಾ ಕಿರಿಯರಿಗೆ ಇದನ್ನು ಪರಂಪರೆಯಂತೆ ಬಳಸುತ್ತಿರುತ್ತೇವೆ. ಆದರೆ ಅಂಥದೊಂದು ಮರವಿದೆ, ಅದನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇಟ್ಟುಕೊಂಡರೆ ಹಣದ ಸುರಿಮಳೆಯಾಗುತ್ತದೆ ಎಂಬುದು ನಿಮಗೆ ಗೊತ್ತೇ? ಅಷ್ಟೇ ಅಲ್ಲ, ಹಲವಾರು ಸಮಸ್ಯೆಗಳು ನೀಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬುತ್ತದೆ. ಇದೇನು ಯಾವುದೋ ಫ್ಯಾಂಟಸಿ ಕತೆಯಲ್ಲ. ಇಂಥ ಅನೇಕ ವಿಷಯಗಳನ್ನು ಫೆಂಗ್ ಶೂಯಿಯಲ್ಲಿ ಹೇಳಲಾಗಿದೆ. ಇದನ್ನು ಮನೆಯಲ್ಲಿ ಇಡುವುದರಿಂದ ಹಣದ ಸಮಸ್ಯೆಗಳು ದೂರವಾಗುತ್ತವೆ. ಹಣ ಹರಿದು ಬರುತ್ತದೆ. ಮನೆಯಲ್ಲಿ ಹರಳಿನ ಮರವನ್ನು ಇಟ್ಟುಕೊಳ್ಳುವುದು ವ್ಯಕ್ತಿಯ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಸ್ಫಟಿಕದ ಮರವು ವಿವಿಧ ವರ್ಣರಂಜಿತ ರತ್ನಗಳು ಮತ್ತು ರೈನ್ ಸ್ಟೋನ್ಸ್‌ನಿಂದ ಮಾಡಲ್ಪಟ್ಟಿರುತ್ತದೆ. ಅದನ್ನು ಎಲ್ಲಿ ಇಟ್ಟರೆ ಅದ್ಭುತ ಲಾಭಗಳು ದೊರೆಯುತ್ತವೆ ಎಂದು ತಿಳಿಯೋಣ.

ಮಲಗುವ ಕೋಣೆ
ಲಿವಿಂಗ್ ರೂಮ್ ಅಥವಾ ಮಲಗುವ ಕೋಣೆಯ ನೈಋತ್ಯ ದಿಕ್ಕಿನಲ್ಲಿ ಹರಳಿನ ಮರ(crystal tree)ವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ, ದಾಂಪತ್ಯ ಜೀವನವು ಮಧುರವಾಗಿರುತ್ತದೆ. ಮನೆಯ ಸುಖ-ಶಾಂತಿಗೆ ಭಂಗ ಬರುವುದಿಲ್ಲ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತದೆ.

ಅಧ್ಯಯನ ಕೋಣೆ(study room)
ಫೆಂಗ್ ಶೂಯಿ ಪ್ರಕಾರ, ವಿದ್ಯಾರ್ಥಿಗಳು ತಮ್ಮ ಅಧ್ಯಯನ ಕೊಠಡಿ ಅಥವಾ ಸ್ಟಡಿ ಟೇಬಲ್‌ನ ಈಶಾನ್ಯ ಮೂಲೆಯಲ್ಲಿ ಹರಳಿನ ಮರವನ್ನು ಇಡಬೇಕು. ಇದರಿಂದಾಗಿ ಅಧ್ಯಯನದಲ್ಲಿ ಏಕಾಗ್ರತೆ ಉಳಿಯುತ್ತದೆ, ಮನಸ್ಸು ವಿಚಲಿತವಾಗುವುದಿಲ್ಲ ಮತ್ತು ಸಕಾರಾತ್ಮಕ ಫಲಿತಾಂಶಗಳು ಕಂಡುಬರುತ್ತವೆ.

ಜನ್ಮಾಷ್ಟಮಿ 2022: ಕೃಷ್ಣ ನವಿಲುಗರಿಯನ್ನು ಕಿರೀಟದಲ್ಲಿ ಧರಿಸುವುದೇಕೆ?

ಈ ದಿಕ್ಕಿನಲ್ಲಿ ಫಲಪ್ರದ(Direction)
ಹಣದ ಕೊರತೆ, ಸಾಲದ ಸಮಸ್ಯೆ ಇದ್ದರೆ ಮನೆಯ ವಾಯುವ್ಯ ದಿಕ್ಕಿನಲ್ಲಿ ಸ್ಪಟಿಕದ ಮರವನ್ನು ಇಡುವುದು ಶುಭ. ಇದು ಆರ್ಥಿಕ ಸಮಸ್ಯೆಗಳನ್ನು ನಿವಾರಿಸುವುದಲ್ಲದೆ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ನೀಡುತ್ತದೆ.

ಆರೋಗ್ಯಕ್ಕಾಗಿ
ನೀವು ರೋಗಗಳನ್ನು ತೊಡೆದುಹಾಕಲು ಬಯಸಿದರೆ, ಮನೆ ಅಥವಾ ಕಚೇರಿಯ ಪೂರ್ವ ದಿಕ್ಕಿನಲ್ಲಿ ಸ್ಫಟಿಕ ಮರವನ್ನು ಇಡುವುದು ಒಳ್ಳೆಯದು. ಈ ಕಾರಣದಿಂದಾಗಿ, ವ್ಯಕ್ತಿಯ ಆರೋಗ್ಯವು ಉತ್ತಮವಾಗಿರುತ್ತದೆ. ಏಕೆಂದರೆ ಮನೆಯ ಪೂರ್ವ ಭಾಗವು ಆರೋಗ್ಯಕ್ಕೆ ಸಂಬಂಧಿಸಿದೆ.

ವೈವಾಹಿಕ ಮಾಧುರ್ಯಕ್ಕಾಗಿ
ಫೆಂಗ್ ಶೂಯಿ ಶಾಸ್ತ್ರದ ಪ್ರಕಾರ, ಮನೆಯ ಅದೃಷ್ಟವನ್ನು ಜಾಗೃತಗೊಳಿಸಲು ಮತ್ತು ವೈವಾಹಿಕ ಜೀವನದಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ಲಿವಿಂಗ್ ರೂಮ್ ಅಥವಾ ಮಲಗುವ ಕೋಣೆಯ ನೈಋತ್ಯ ದಿಕ್ಕಿನಲ್ಲಿ ಹರಳಿನ ಮರವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯ ಭೂಮಿಯ ಮಧ್ಯಭಾಗದಲ್ಲಿ ಹರಳಿನ ಮರವನ್ನು ಇಡುವುದರಿಂದ ಸಂಬಂಧಗಳಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚುತ್ತದೆ.

ಸರ್ವರಿಗೂ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು

ಸಿಟ್ರಿನ್ ಹರಳುಗಳು
ಸಂಪತ್ತನ್ನು ಆಕರ್ಷಿಸಲು ಫೆಂಗ್ ಶೂಯಿಯಲ್ಲಿ ಸಿಟ್ರಿನ್ ಸ್ಫಟಿಕವನ್ನು ಬಳಸಲಾಗುತ್ತದೆ. ನೀವು ಅದನ್ನು ಪ್ರದರ್ಶನದಲ್ಲಿ ಇರಿಸಿದರೆ ಸ್ಫಟಿಕವು ನಿಮಗೆ ಹಣ ಮತ್ತು ಸಮೃದ್ಧಿಯನ್ನು ತರುತ್ತದೆ. ರತ್ನವನ್ನು ಆತ್ಮವಿಶ್ವಾಸ ಹೆಚ್ಚಿಸಲು ಸಹ ಬಳಸಬಹುದು. ಪೈರೈಟ್ ಮತ್ತೊಂದು ಶ್ರೀಮಂತ ಕಲ್ಲು. ಈ ಹರಳುಗಳನ್ನು ರತ್ನದ ಮರದಂತೆ ನಿಮ್ಮ ಮನೆಯ ಹಣವಿಟ್ಟ ಸ್ಥಳದಲ್ಲಿ ಇರಿಸಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios