Feng Shui Tips: ಇವು ಮನೆಲಿದ್ರೆ ಮನೆಯಲ್ಲಿ ಹಣದ ಕೊರತೇನೆ ಆಗಲ್ಲ
ಭಾರತೀಯ ವಾಸ್ತು ಶಾಸ್ತ್ರದಂತೆಯೇ, ಫೆಂಗ್ ಶುಯಿ ಕೂಡ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕುವ ಮೂಲಕ ಸಕಾರಾತ್ಮಕ ಶಕ್ತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಫೆಂಗ್ ಶುಯಿ ಚೀನೀ ವಾಸ್ತು ಶಾಸ್ತ್ರವಾಗಿದ್ದರೂ, ಭಾರತೀಯರು ಇದನ್ನು ಮನೆಯ ಸಂತೋಷ ಮತ್ತು ಸಮೃದ್ಧಿಗಾಗಿ ಬಳಸುತ್ತಾರೆ. ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜೀವನದಲ್ಲಿ ಸಂತೋಷ, ಸಮೃದ್ಧಿ ತರಲು ಚೀನೀ ವಾಸ್ತುವಿನಲ್ಲಿ ಫೆಂಗ್ ಶುಯಿ ಚಿಹ್ನೆಗಳನ್ನು ಬಳಸಲಾಗುತ್ತದೆ. ಫೆಂಗ್ ಶುಯಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಇಂದಿನ ದಿನಗಳಲ್ಲಿ ಸಂತೋಷ ಮತ್ತು ಆರಾಮದಾಯಕ ಜೀವನ ನಡೆಸಲು ಹಣವು(Money) ಮುಖ್ಯ ಅಂಶವಾಗಿದೆ. ಆದ್ದರಿಂದ, ಪ್ರತಿಯೊಬ್ಬ ವ್ಯಕ್ತಿಯು ಸಂತೋಷ ಮತ್ತು ಶಾಂತಿಗಾಗಿ ಸಂಪತ್ತಿನ ಅನ್ವೇಷಣೆಯಲ್ಲಿ ತೊಡಗಿದ್ದಾನೆ. ನೀವೂ ಸಹ ಆರ್ಥಿಕ ತೊಂದರೆಯಲ್ಲಿದ್ದರೆ (ಮತ್ತು ಹಣವನ್ನು ಪಡೆಯಲು ಒಂದು ಮಾರ್ಗವನ್ನು ಬಯಸಿದರೆ, ಈ ಫೆಂಗ್ ಶುಯಿ ನಿಯಮಗಳನ್ನು ಅನುಸರಿಸಿ.
ಬಿದಿರಿನ ಸಸ್ಯ (lucky bamboo)
ನೀವು ಜೀವನದಲ್ಲಿ ಹಣದ ಕೊರತೆ ಅನುಭವಿಸುತ್ತಿದ್ದರೆ, ಅದನ್ನು ನಿವಾರಿಸಲು, ಮನೆಯಲ್ಲಿ 6 ಬಿದಿರಿನ ಸಸ್ಯಗಳನ್ನು ನೆಡಬೇಕು. ಫೆಂಗ್ ಶುಯಿ ಪ್ರಕಾರ, ಆರು ಬಿದಿರಿನ ಸಸ್ಯವು ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ. ಇದರಿಂದ, ನಿಮಗೆ ಬರಬೇಕಾದ ಹಣ ಬೇಗನೆ ಬರುತ್ತೆ ಮತ್ತು ನೀವು ಆರ್ಥಿಕ ಒತ್ತಡದಿಂದ ಬಳಲುತ್ತಿದ್ದರೆ, ಆ ಸಮಸ್ಯೆ ಸಹ ದೂರವಾಗುತ್ತೆ.
ವಿಂಡ್ ಚೈಮ್ (wind chime)
ಫೆಂಗ್ ಶುಯಿ ಪ್ರಕಾರ, ಮನೆಯ ಈಶಾನ್ಯ ಮೂಲೆಯಲ್ಲಿ ದೋಷವಿದ್ದರೆ, ವ್ಯಕ್ತಿಯ ಅತಿಯಾದ ಪ್ರಯತ್ನಗಳ ನಂತರವೂ, ಅವನ ವ್ಯವಹಾರವು ಪ್ರಗತಿಯಾಗುವುದಿಲ್ಲ. ಹಾಗಾಗಿ ನೀವು ಮನೆಯ ಈ ಸ್ಥಳದಲ್ಲಿ ಸುಂದರವಾದ ವಿಂಡ್ ಚೈಮ್ ಹಾಕಬೇಕು. ಇದನ್ನು ಮಾಡೋದ್ರಿಂದ, ನಿಮ್ಮ ವ್ಯವಹಾರವು ಹೆಚ್ಚಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿಯು ಎಲ್ಲಾ ಕಡೆಯಿಂದಲೂ ಬರುತ್ತದೆ. ಇಷ್ಟೇ ಅಲ್ಲ, ನೀವು ಮುಖ್ಯವಾಗಿ ಹಣವನ್ನು ಸಹ ಪಡೆಯುತ್ತೀರಿ.
ಒಂದು ಜೋಡಿ ಮೀನನ್ನು ತನ್ನಿ
ಹಲವಾರು ಬಾರಿ ನಮ್ಮ ಹಣ ವಿನಾಕಾರಣ ಖರ್ಚಾಗುತ್ತದೆ, ಯಾಕೆ ಹೀಗಾಗುತ್ತೆ ಅನ್ನೋದು ಸಹ ಗೊತ್ತಾಗಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮನೆಯ ಯಾವುದೇ ಸ್ಥಳದಲ್ಲಿ ಸುಂದರವಾದ ಜೋಡಿ ಮೀನಿನ ಹ್ಯಾಂಗಿಂಗ್ ನ್ನು ನೇತುಹಾಕಿ. ನೀವು ಅದನ್ನು ಮುಖ್ಯ ದ್ವಾರದ ಬಳಿ ನೇತುಹಾಕಬಹುದು. ಇದನ್ನು ಮಾಡುವುದರಿಂದ, ಸಂಪತ್ತು ಹೆಚ್ಚಾಗುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಏಕೆಂದರೆ ಮೀನುಗಳನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಕೈಗಳನ್ನು ಮೇಲೆತ್ತಿರುವ ಲಾಫಿಂಗ್ ಬುದ್ಧ (laughing buddha)
ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತಿಲ್ಲ ಮತ್ತು ಎಲ್ಲಾ ಕೆಲಸಗಳು ಹದಗೆಡುತ್ತಿವೆ ಎಂದು ನೀವು ಭಾವಿಸಿದರೆ, ನೀವು ನಿಮ್ಮ ಮನೆಯ ಉತ್ತರ ಭಾಗದಲ್ಲಿ ಎರಡೂ ಕೈಗಳನ್ನು ಮೇಲಕ್ಕೆತ್ತಿರುವ ಲಾಫಿಂಗ್ ಬುದ್ಧನನ್ನು (ಸಂತೋಷ ಮತ್ತು ಸಮೃದ್ಧಿಗಾಗಿ ಲಾಫಿಂಗ್ ಬುದ್ಧ) ,ಮನೆಗೆ ತನ್ನಿ. ಇದನ್ನು ಮಾಡೋದ್ರಿಂದ, ನಿಮ್ಮ ಅದೃಷ್ಟವು ಹೆಚ್ಚಾಗುತ್ತದೆ ಮತ್ತು ಮನೆಯಲ್ಲಿ ಹಣದ ಕೊರತೆ ಇರೋದಿಲ್ಲ.
ಮನೆಯಲ್ಲಿ ಕಾರಂಜಿಯನ್ನು(Fountain) ಇರಿಸಿ
ಮನೆಯ ಈಶಾನ್ಯ ದಿಕ್ಕಿನಲ್ಲಿ ಕಾರಂಜಿಯನ್ನು ನಿರ್ಮಿಸುವುದು, ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಫೆಂಗ್ ಶುಯಿ ಪ್ರಕಾರ, ಮನೆಯ ಕಡೆಗೆ ಕಾರಂಜಿಯ ನೀರು ಹರಿಯುವುದರಿಂದ, ಮಾತಾ ಲಕ್ಷ್ಮಿಯ ಆಶೀರ್ವಾದವು ಯಾವಾಗಲೂ ಮನೆಯ ಉಳಿಯುತ್ತದೆ.
ವೆಲ್ತ್ ಶಿಪ್ (wealth ship)
ಫೆಂಗ್ ಶುಯಿಯಲ್ಲಿ ವೆಲ್ತ್ ಶಿಪ್ ಬಹಳ ಪ್ರಾಮುಖ್ಯತೆಯನ್ನು ಹೊಂದಿವೆ. ಆರ್ಥಿಕ ಲಾಭಗಳು ಮತ್ತು ಸಮೃದ್ಧಿಗಾಗಿ, ನೀವು ಸಂಪತ್ತಿನ ಹಡಗನ್ನು ನಿಮ್ಮ ಮನೆ ಅಥವಾ ಕೆಲಸದ ಸ್ಥಳದ ವಾಯುವ್ಯ ದಿಕ್ಕಿನಲ್ಲಿ ಇಡಬೇಕು. ಇದನ್ನು ಮಾಡುವುದರಿಂದ, ಸಂಪತ್ತು ಹೆಚ್ಚಾಗುತ್ತದೆ.
ಫೆಂಗ್ ಶುಯಿ ಕಪ್ಪೆ (feng shui frog)
ನೀವು ನಿಮ್ಮ ಕಡೆಗೆ ಹೆಚ್ಚಿನ ಹಣವನ್ನು ಆಕರ್ಷಿಸಲು ಬಯಸಿದರೆ ಮತ್ತು ನಿಮ್ಮ ಜೀವನದಲ್ಲಿ ಆರ್ಥಿಕ ಪ್ರಗತಿಯನ್ನು ಬಯಸಿದರೆ ಫೆಂಗ್ ಶೂಯಿ ಕಪ್ಪೆಯನ್ನು ಇಟ್ಟುಕೊಳ್ಳುವುದು ಅತ್ಯುತ್ತಮವಾಗಿರುತ್ತದೆ. ನೀವು ಅದನ್ನು ಮನೆಯ ಲಿವಿಂಗ್ ರೂಮಿನಲ್ಲಿ ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ, ಅದು ಅದೃಷ್ಟವನ್ನು ಹೊತ್ತು ತರುತ್ತೆ.