ಆರ್ಥಿಕ ಸಮಸ್ಯೆ ಇದ್ರೆ ಮನೆಯ ಈ ದಿಕ್ಕಿನಲ್ಲಿಡಿ Money Bowl… ಹಣದ ಹೊಳೆ ಹರಿಯುತ್ತೆ!
Feng Shui: ಕೆಲವೊಮ್ಮೆ, ಕಷ್ಟಪಟ್ಟು ದುಡಿದರೂ ಹಣ ಮನೆಯಲ್ಲಿ ಉಳಿಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಫೆಂಗ್ ಶೂಯಿ ಪರಿಹಾರಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಬಹುದು. ಅದರಲ್ಲೂ ಈ ಮನಿ ಬೌಲ್ ಮನೆಯಲ್ಲಿದ್ದರೆ ಸಾಕು, ಯಾವತ್ತಿಗೂ ಹಣದ ಕೊರತೆ ಆಗೋದೆ ಇಲ್ಲ.

ಫೆಂಗ್ ಶೂಯಿ ಆರ್ಥಿಕ ಸಂಕಷ್ಟವನ್ನು ನಿವಾರಿಸುತ್ತದೆ
ಫೆಂಗ್ ಶುಯಿ ಮನೆಯ ವಾಸ್ತುವಿಗೆ ಸಂಬಂಧಿಸಿದ್ದು ಮಾತ್ರವಲ್ಲ, ಆರ್ಥಿಕ ಸಮಸ್ಯೆಗಳನ್ನು ನಿವಾರಿಸುವ ಉಪಾಯದ ಕುರಿತು ಸಹ ಮಾಹಿತಿ ನೀಡುತ್ತೆ. ಆರ್ಥಿಕ ಸಮಸ್ಯೆ ಅನುಭವಿಸುವವರು ಫೆಂಗ್ ಶುಯಿ ಪ್ರಕಾರ ಕೆಲವೊಂದು ವಸ್ತುಗಳನ್ನು ಮನೆಯಲ್ಲಿಟ್ಟರೆ, ಅವರಿಗೆ ಆರ್ಥಿಕ ಪ್ರಗತಿ ಉಂಟಾಗುವುದು ಖಚಿತಾ.
ಸಂಪತ್ತು ವೃದ್ಧಿಸಲು Money Bowl
ಫೆಂಗ್ ಶುಯಿಯ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡೋದ್ರಿಂದ, ಲಕ್ಷ್ಮಿ ದೇವಿಯನ್ನು ಮೆಚ್ಚಿಸಬಹುದು. ಜೊತೆಗೆ ಇದರಿಂದ ಸಂಪತ್ತಿನ ಬಾಗಿಲು ತೆರೆಯುತ್ತದೆ. ಈ ವಸ್ತುಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಪರಿವರ್ತಿಸಬಹುದು ಮತ್ತು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ಇವುಗಳಲ್ಲಿ ಒಂದು ಮನಿ ಬೌಲ್ (Money Bowl), ಇದು ಸಮೃದ್ಧಿ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ.
ಫೆಂಗ್ ಶೂಯಿ Money Bowl ಎಂದರೇನು?
ಫೆಂಗ್ ಶೂಯಿ ಮನಿ ಬೌಲ್ ಎನ್ನುವುದು ಸಾಮಾನ್ಯವಾಗಿ ಮನೆ ಅಲಂಕಾರಕ್ಕಾಗಿ ಬಳಸುವ ಅಲಂಕಾರಿಕ ಬಟ್ಟಲು. ಫೆಂಗ್ ಶೂಯಿಯಲ್ಲಿ, ಇದನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮನೆ ಅಥವಾ ಕಚೇರಿಯಲ್ಲಿ ಇದನ್ನು ಇರಿಸಲಾಗುತ್ತದೆ. ಹಣದ ಬಟ್ಟಲು ಸಂಪತ್ತನ್ನು ಆಕರ್ಷಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಹರಡುತ್ತದೆ.
Money Bowl ಎಲ್ಲಿ ಇಡಬೇಕು?
ಮನೆಯಲ್ಲಿ Money Bowlನ್ನು ಇಡುವುದರಿಂದ ಸಂಪತ್ತು ಚುಂಬಕದಂತೆ ಆಕರ್ಷಿತವಾಗುತ್ತದೆ. ಫೆಂಗ್ ಶೂಯಿ ಪ್ರಕಾರ, ಅದನ್ನು ಖಾಲಿ ಇಡವಾರದು, ಬದಲಾಗಿ, ನಾಣ್ಯಗಳು, ಕೆಂಪು ದಾರದಿಂದ ಕಟ್ಟಲಾದ ಚೀನೀ ನಾಣ್ಯಗಳು, ಹರಳುಗಳು, ಬೇ ಎಲೆಗಳು ಅಥವಾ ದಾಲ್ಚಿನ್ನಿ ತುಂಡುಗಳಂತಹ ವಸ್ತುಗಳನ್ನು ಅದರಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಈ ವಸ್ತುಗಳಿಂದ ತುಂಬಿದ Money Bowl ನಿಮ್ಮ ಖಜಾನೆಯನ್ನು ಎಂದಿಗೂ ಖಾಲಿ ಮಾಡಲು ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ.
Money Bowl ಯಾವ ದಿಕ್ಕಿನಲ್ಲಿ ಇಡುವುದು ಶುಭ?
ಫೆಂಗ್ ಶೂಯಿ Money Bowlನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಪ್ರಯೋಜನಕಾರಿ. ಫೆಂಗ್ ಶೂಯಿ ಪ್ರಕಾರ, Money Bowlನ್ನು ಯಾವಾಗಲೂ ಮನೆಯ ಮುಖ್ಯ ದ್ವಾರದಲ್ಲಿ ಇಡಬೇಕು. ಇದು ಸಂಪತ್ತಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಇದಲ್ಲದೇ ಈ ಮನಿ ಬೌಲನ್ನು ಲಿವಿಂಗ್ ರೂಮಲ್ಲೂ ಇಡಬಹುದು, ಆದರೆ ಅದನ್ನು ಗೋಚರಿಸುವ ಸ್ಥಳದಲ್ಲಿ ಇಡಬೇಕು. ಮನೆಯಲ್ಲಿ ಮಾತ್ರವಲ್ಲದೆ ಕಚೇರಿಯಲ್ಲಿಯೂ ಮನಿ ಬೌಲ್ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಕಚೇರಿ ಮೇಜಿನ ಮೇಲೆ ಮನಿ ಬೌಲ್ ಇಡುವುದು ಪ್ರಗತಿಗೆ ದಾರಿ ಮಾಡಿಕೊಡುತ್ತದೆ.
ಯಾವ ತಪ್ಪುಗಳನ್ನು ಮಾಡಬಾರದು?
Money Bowl ಇಡುವಾಗ, ಅದನ್ನು ಪ್ರತಿದಿನ ಸ್ವಚ್ಛಗೊಳಿಸಲು ಮರೆಯದಿರಿ. ಹಣದ ಬಟ್ಟಲನ್ನು ಸ್ನಾನಗೃಹ ಅಥವಾ ಚರಂಡಿಯ ಬಳಿ ಎಂದಿಗೂ ಇಡಬಾರದು. ಅಷ್ಟೇ ಅಲ್ಲ ಈ Money Bowl ಎಂದಿಗೂ ಖಾಲಿ ಮಾಡಬಾರದು, ಜೊತೆಗೆ ತುಂಡಾಗದಂತೆ ನೋಡಿಕೊಳ್ಳಬೇಕು.

