- Home
- Astrology
- Vaastu
- Vastu Shastra: ಬಿಪಿ, ಡಯಾಬಿಟೀಸ್ ನಿಂದ ಬಚಾವಾಗಲು ಔಷಧಿ ಮಾತ್ರವಲ್ಲ… ವಾಸ್ತು ದಿಕ್ಕಿನ ಕಡೆಗೂ ಇರಲಿ ಗಮನ
Vastu Shastra: ಬಿಪಿ, ಡಯಾಬಿಟೀಸ್ ನಿಂದ ಬಚಾವಾಗಲು ಔಷಧಿ ಮಾತ್ರವಲ್ಲ… ವಾಸ್ತು ದಿಕ್ಕಿನ ಕಡೆಗೂ ಇರಲಿ ಗಮನ
ನೀವು ನಿಮ್ಮ ಮನೆಯನ್ನು ವಾಸ್ತು ಪ್ರಕಾರ ನಿರ್ಮಾಣ ಮಾಡಿದ್ದೀರಾ? ಅಥವಾ ಅಲ್ಲಿನ ವಸ್ತುಗಳನ್ನು ವಾಸ್ತು ಪ್ರಕಾರ ಇಟ್ಟಿದ್ದೀರಾ? ಇಲ್ಲಾ ಅಂದ್ರೆ ಬಿಪಿ, ಶುಗರ್ ನಂತಹ ಸಮಸ್ಯೆಗಳು ಕಾಡುತ್ತೆ ಹುಷಾರ್.

ವಾಸ್ತು ಶಾಸ್ತ್ರದ (Vastu shastra) ಪ್ರಕಾರ, ಮನೆಯ ರಚನೆ, ಬಣ್ಣ ಮತ್ತು ದಿಕ್ಕು ನಮ್ಮ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಅನೇಕ ಬಾರಿ, ನಮ್ಮ ಆರೋಗ್ಯ ಹದಗೆಟ್ಟಾಗ, ನಾವು ವೈದ್ಯರನ್ನು ಭೇಟಿ ಮಾಡುತ್ತಲೇ ಇರುತ್ತೇವೆ ಆದರೆ ವಾಸ್ತು ದೋಷಗಳನ್ನು ನಿರ್ಲಕ್ಷಿಸುತ್ತೇವೆ. ಉತ್ತಮ ಆರೋಗ್ಯಕ್ಕಾಗಿ, ಉತ್ತಮ ಆಹಾರ ಮತ್ತು ವ್ಯಾಯಾಮದ ಜೊತೆಗೆ, ವಾಸ್ತು ಶಾಸ್ತ್ರದಲ್ಲಿ ತಿಳಿಸಲಾದ ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಸಹ ಮುಖ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ, ಪ್ರತಿಯೊಂದು ಮನೆಯಲ್ಲಿಯೂ, ಯಾರೋ ಒಬ್ಬರು ಬಿಪಿ ಮತ್ತು ಮಧುಮೇಹ ಸಮಸ್ಯೆಯಿಂದ (health issues) ಬಳಲುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಹಲವು ಬಾರಿ ತಪ್ಪಾದ ದಿಕ್ಕಿನಲ್ಲಿ ತಪ್ಪಾದ ವಸ್ತುಗಳನ್ನು ಇಡೋದು ಸಹ ಸಮಸ್ಯೆಗಳಿಗೆ ಕಾರಣವಾಗುತ್ತವೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಉತ್ತರ, ಪೂರ್ವ ಮತ್ತು ಈಶಾನ್ಯ ದಿಕ್ಕುಗಳು ಬಹಳ ವಿಶೇಷವಾದವು. ಈ ದಿಕ್ಕುಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ದಿಕ್ಕುಗಳಲ್ಲಿ ಕೆಂಪು ಬಣ್ಣವನ್ನು ಬಳಸಬಾರದು ಎಂಬುದನ್ನು ನೆನಪಿನಲ್ಲಿಡಿ. ಇದರ ಹೊರತಾಗಿ, ಈ ದಿಕ್ಕುಗಳಲ್ಲಿ ನೀರಿನ ಟ್ಯಾಂಕ್‌ಗಳು ಅಥವಾ ನೀರು ಸಂಗ್ರಹಣೆಯನ್ನು ಮಾಡುವುದನ್ನು ಸಹ ತಪ್ಪಿಸಬೇಕು. ಏಕೆಂದರೆ ಈ ದಿಕ್ಕುಗಳಲ್ಲಿ ಇರಿಸಲಾಗಿರುವ ವಸ್ತುಗಳು ದೇಹದಲ್ಲಿ ಶಕ್ತಿಯನ್ನು (power in body) ಪ್ರವಹಿಸುತ್ತವೆ.
ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ ಮತ್ತು ಆಗ್ನೇಯ ದಿಕ್ಕಿನ ಮಧ್ಯ ಭಾಗವನ್ನು ಆಗ್ನೇಯದ ಪೂರ್ವ ಎಂದು ಕರೆಯಲಾಗುತ್ತದೆ. ಈ ದಿಕ್ಕನ್ನು ವಾಸ್ತು ಶಾಸ್ತ್ರದಲ್ಲಿ ಬಿಪಿ (blood pressure) ಮತ್ತು ಮಧುಮೇಹದಂತಹ ಸಮಸ್ಯೆಗಳಿಗೆ ಕಾರಣವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಈ ದಿಕ್ಕು ಆಲೋಚನೆಗಳು ಮತ್ತು ಭಾವನೆಗಳಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯನ್ನು ಪೂರ್ವ-ಆಗ್ನೇಯ ದಿಕ್ಕಿನಲ್ಲಿ ನಿರ್ಮಿಸಿದರೆ, ಪುರುಷರಲ್ಲಿ ಮಧುಮೇಹ (diabetes) ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಜೊತೆಗೆ, ಮಹಿಳೆಯರು ಸಹ ಮಧುಮೇಹಕ್ಕೆ ಬಲಿಯಾಗುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಒಲೆಯನ್ನು ಈ ದಿಕ್ಕಿನಲ್ಲಿ ಇಡೋದ್ರಿಂದ ದೇಹದಲ್ಲಿ ಹಾರ್ಮೋನುಗಳ ಅಸಮತೋಲನ ಉಂಟಾಗುತ್ತದೆ. ಇದರಿಂದಾಗಿ ಬಿಪಿ ಮತ್ತು ಸಕ್ಕರೆ ಹೆಚ್ಚಾಗಲು ಪ್ರಾರಂಭಿಸುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆ ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಿದರೆ, ಅದು ಆರೋಗ್ಯಕ್ಕೆ ಒಳ್ಳೆಯದು. ಮಲಗುವ ಕೋಣೆ (bed room)ಈ ದಿಕ್ಕುಗಳಲ್ಲಿ ಇಲ್ಲದಿದ್ದರೆ, ನಿದ್ರೆ ಪೂರ್ಣವಾಗಿರುವುದಿಲ್ಲ, ಇದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಈ ಒತ್ತಡವು ಬಿಪಿ ಮತ್ತು ಸಕ್ಕರೆ ಕಾಯಿಲೆಗೆ ಕಾರಣವಾಗುತ್ತದೆ.